"ಆರೋಗ್ಯ ವರ್ಧಕ ನೇರಳೆ"

2.5

ಈ ನೇರಳೆ ಹಣ್ಣನ್ನು ತಿನ್ನುವುದರಿಂದ ಅನೇಕ ಕಾಯಿಲೆಗಳು ನಿವಾರಣೆಯಾಗುತ್ತವೆ. ತೊಗಟೆಯ ಚೂರ್ಣವನ್ನು ಸೇವಿಸುವುದರಿಂದ ಅತಿ ಋತುಸ್ರಾವ ನಿಲ್ಲುತ್ತದೆ.

ತೊಗಟೆಯ ಕಷಾಯದಿಂದ ಬಾಯಿ ಮುಕ್ಕಳಿಸಿದರೆ ಬಾಯಿ ಹುಣ್ಣು ಮಾಯವಾಗುತ್ತದೆ ಅಲ್ಲದೆ ಬಾಯಿ ದುರ್ಗಂಧ ನಿವಾರಣೆಯಾಗುತ್ತದೆ.ಇದರಿಂದ ಗಂಟಲು ನೋವು, ಗೊರಲು, ಉಬ್ಬಸ ಮುಂತಾದ ನೋವುಗಳು ನಿವಾರಣೆಯಾಗುತ್ತವೆ. ಬೀಜಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಸಿಹಿಮೂತ್ರ ಕಾಯಿಲೆ ಕಡಿಮೆಯಾಗುತ್ತದೆ. ನೇರಳೆ ಹಣ್ಣಿನ ರಸ ಒಂದು ಮಧುರ ಮತ್ತು ಶುಧ್ದವಾದ ತಂಪು ಪಾನೀಯ. ಇದರ ಬಳಕೆಯಿಂದ ಮುಖದ ಕಾಂತಿಮತ್ತು ಮೈ ಅಂದ ಹೆಚ್ಚುತ್ತದೆ. ಜೇನು ತುಪ್ಪ ಮತ್ತು ನೇರಳೆ ರಸ ಸೇವನೆಯಿಂದ ಮೂಲವ್ಯಾದಿ ಮಾಯವಾಗುತ್ತದೆ. ಎಲೆಗಳನ್ನು ಜಿಗಿವುದರಿಂದ ಹಲ್ಲುಗಳು ಹೊಳೆಯುತ್ತವೆ. ಆದರ ಹಣ್ಣನ್ನು ಹೆಚ್ಚು ತಿನ್ನುವಂತಿಲ್ಲ. ಏಕೆಂದರೆ ಇದ್ಲೀಸ್ (ಅಪಾಯಕಾರಿಯಲ್ಲದ ಹೊಟ್ಟೆ ನೋವು)ಬರುತ್ತದೆ. ಅಲ್ಲದೆ ಔಷಧಿಯಾಗಿ ಬಳಸುವಾಗ ತಜ್ಞ ನಾಟಿ ವೈಧ್ಯರ ಸಲಹೆ ಅಗತ್ಯ.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

ನೇರಳೆಗೆ ನಗರಗಳಲ್ಲಿ ತುಂಬಾ ಡಿಮಾಂಡ್ ಏಕಪ್ಪ ಅಂದರೆ,ಇದನ್ನು ತಿಂದರೆ ಸಕ್ಕರೆ ಕಾಯಿಲೆ ಗುಣವಾಗುತ್ತದೆಂಬ ಪ್ರಚಾರವಿದೆ. ನೇರಳೆಯನ್ನು ಜಾಮುನ್ ಎಂಬ ಹೆಸರಿನಲ್ಲಿ ಡಬ್ಬಿಯಲ್ಲಿ ಹಾಕಿ ಮಾರುವ ಕಂಪನಿಯೂ ಹುಟ್ಟಿಕೊಂಡಿದೆ. ಬೆಂಗಳೂರಿನಲ್ಲಿ ನೇರಳೆ ಹಣ್ಣಿಗೆ ಕಿಲೊ. ರೂ.೧೦೦ ಬೆಲೆ ಇರುವ ವಿಚಾರ ಕಂಡು ಮೊದಲಿಗೆ ನನಗೆ ಅಚ್ಚರಿಯಾಯ್ತು.(ಹೆಚ್ಚು ಕಮ್ಮಿ ಸೇಬು ಹಣ್ಣಿನ ಬೆಲೆ). ನಗರದ ಮಂದಿ ಆ ಬೆಲೆ ಕೊಟ್ಟು ಬಿರುಸಿನಿಂದ ಖರೀದಿಸುತ್ತಿದ್ದುದು , ಅದರಲ್ಲಿರುವ ಔಷಧೀಯ ಗುಣಗಳಿಗಾಗಿ ಎಂಬುದುಖಚಿತ .-ಶಶಿಧರ ಹಾಲಾಡಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಒಳ್ಳೆಯ ಮಾಹಿತಿ ನೀಡಿದ್ದೀರಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಿಮ್ಮ ಲೇಖನ ಓದಿದಾಗ ನನಗೆ ತಕ್ಷಣ ನೆನಪಾದದ್ದು, ಗೊರೂರು ರಾಮಸ್ವಾಮಿ ಅಯ್ಯಂಗಾರರ ಬಾಲ್ಯದ ಆತ್ಮಕಥೆ. ಅದರಲ್ಲಿ ನೇರಳೆ ಹಣ್ಣಿನ ಬಗ್ಗೆ ಬಹಳ ಸೊಗಸಾಗಿ ಬರೆದಿದ್ದಾರೆ. ( ಐ ಬಿ ಎಚ್‌ ಪ್ರಕಾಶನ, ಪುಟ ಸಂಖ್ಯೆ 43, 2011 ರಲ್ಲಿ ಪುನರ್‌ಮುದ್ರಿತವಾಗಿದೆ)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಅರುಣ್‍ರವರೇ, ಒಳ್ಳೆಯ ಫೋಟೊಗಳಿಂದ ಕೂಡಿದ ಮಾಹಿತಿಗೆ ಧನ್ಯವಾದಗಳು. ನೇರಳೆ ಹಣ್ಣನ್ನು ಮೂರರಿಂದ ನಾಲ್ಕು ತಾಸು ಉಪ್ಪು ಹಾಕಿದ ಮಜ್ಜಿಗೆಯಲ್ಲಿ ನೆನೆಸಿಟ್ಟು ತಿನ್ನುವ ರೂಡಿ ನಮ್ಮಲ್ಲಿದೆ. ಅದನ್ನು ನೀವು ಒಮ್ಮೆ ಪ್ರಯತ್ನಿಸಿ ನೋಡಿ ಅದರ ಮಜವೇ ಬೇರೆ. ನೀವು ಇದೇ ರೀತಿ ಅಪರೂಪವಾಗಿರುವ ಕಾರೆಹಣ್ಣು, ಕವಳೆಹಣ್ಣು, ಬಿಕ್ಕೆಹಣ್ಣು,ಗುಳಮಾವು ಇಂಥವುಗಳ ಬಗ್ಗೆ ಕೂಡ ಬರೆಯಿರಿ. ಬಯಲು ಸೀಮೆಯಲ್ಲಂತೂ ಈ ಗಿಡಗಳು ಕಾಣಿಸುತ್ತಿಲ್ಲ; ನಿಮ್ಮ ಮಲೆನಾಡಿನಲ್ಲೇನಾದರೂ ಇದ್ದರೆ ಕಡೇ ಪಕ್ಷ ಅವುಗಳ ಛಾಯಾಚಿತ್ರಗಳನ್ನಾದರೂ ನೋಡಿ ಆನಂದಿಸೋಣ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಶ್ರೀಧರ್ ಬಂಡ್ರಿ ಯವರೆ ತಮ್ಮ ಪ್ರತಿಕ್ರಯೆಗೆ ಧನ್ಯವಾದಗಳು. ತಮ್ಮ ಸಲಹೆಯಂತೆ ನಮ್ಮಲ್ಲಿ ಸಿಗುವ ಇತರೆ ಹಣ್ಣಿನ ಗಿಡಗಳು ಮತ್ತು ಹಣ್ಣಿನ ಬಗ್ಗೆ ಮಾಹಿತಿಗಳನ್ನು ಖಂಡಿತವಾಗಿಯೂ ನೀಡುತ್ತೇನೆ. ಕವಳಿ ಹಣ್ಣಿನ ಸಂಪೂರ್ಣ ಮಾಹಿತಿಯ ನನ್ನ ಲೇಖನ ತಾ-25-04-2010 "ಕರ್ಮವೀರ" ವಾರಪತ್ರಕೆಯಲ್ಲಿ ಬಂದಿದೆ ಸಾಧ್ಯವಾದರೆ ನೋಡಿ.

ಅರುಣ್, ನೇರಳೆ ಹಣ್ಣಿನ ಬಗ್ಗೆ ಮಾಹಿತಿ ಹಾಗೂ ಚಿತ್ರಗಳು ಚೆನ್ನಾಗಿವೆ. ಚಿತ್ರಗಳನ್ನು ನೋಡುವಾಗ ಬಾಲ್ಯ ನೆನಪಾಯಿತು.ಮರಹತ್ತಿ ಅಲುಗಾಡಿಸಿ/ಕೊಯಿದು, ಆ ಮಕ್ಕಳ ಹಾಗೇ ನೇರಳೆ ಹಣ್ಣನ್ನು ಎಲೆಯಲ್ಲಿ ಸಂಗ್ರಹಿಸುತ್ತಿದ್ದೆವು. >>>ಕವಳಿ ಹಣ್ಣಿನ ಸಂಪೂರ್ಣ ಮಾಹಿತಿಯ ನನ್ನ ಲೇಖನ ತಾ-25-04-2010 "ಕರ್ಮವೀರ" ವಾರಪತ್ರಿಕೆಯಲ್ಲಿ......-ಸಂಪದದಲ್ಲೂ ಹಾಕಿ. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಶ್ರೀಧರ್ ಬಂಡ್ರಿ ಯವರೆ, ನನ್ನ ಬ್ಲಾಗ್ ನಲ್ಲಿ " ಅರೆಮಲೆನಾಡಿನ ಗುಡ್ಡೇ ಗೇರು " ಚಿತ್ತ ಲೇಖನವಿದೆ. ದಯಮಾಡಿ ಓದಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಅರುಣ್‍ರವರೇ, ಬೇರೆ ಹಣ್ಣುಗಳ ಬರೆಯುವೆನೆಂದು ನೀವು ಕೊಟ್ಟಿರುವ ಭರವಸೆಯಿಂದ ಸಂತೋಷವಾಯಿತು.ನಾನೀಗ ಹೈದರಾಬಾದಿನಲ್ಲಿ ವಾಸ್ತವ್ಯ ಹೂಡಿರುವುದರಿಂದ ಏಪ್ರಿಲ್ ತಿಂಗಳ ಕರ್ಮವೀರ ಪತ್ರಿಕೆ ಸಿಗುವ ಸಂಭವ ಕಡಿಮೆ; ಆದ್ದರಿಂದ ಪ್ರತ್ಯೇಕ ಲೇಖನವೊಂದನ್ನು ಬರೆದು ಸಂಪದಿಗರಿಗೆಲ್ಲರೊಂದಿಗೆ ಹಂಚಿಕೊಳ್ಳುವಿರೆಂದು ಆಶಿಸುತ್ತೇನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.