ಆನೆ ಬಂತು ಆನೆ

4

~~"ಏ ಇ ನಡು ರಾತ್ರಿಲ್ಲಿ ಅದು ಇ ಹುಣ್ಣಿಮೆ ಚಂದ್ರನ ಬೆಳಕಿನಲ್ಲಿ ಇ ತಂಗಾಳಿಯಲ್ಲಿ ಇ ತೋಟ್ಟಗಳ ಪಕ್ಕದಲಿ  ನಡೆಯೋ ಭಾಗ್ಯ ಎಷ್ಟು ಜನರಿಗೆ ಸಿಗುತೋ , ಒಂದು ಬೀಡಿ ಇದ್ದಾರೆ ತತ್ಹಾರಲ್ಲ " ಎಂದು ಮಂಜ ಸಿದ್ದಯ್ಯನಿಗೆ ತನ್ನ ಹೆಗಲ ಮೇಲೆ ಏರಿಕೊಂಡು ಇದ್ದ ಕೊಡಲಿ ಕೆಳೆಗೆ ಇಳಿಸುತ್ತಾ ಕೇಳಿದ .  ಮಂಜ ಬೀಡಿ ಕೇಳಿದಕ್ಕೆ ತನ್ನ ಹೆಗಲ ಮೇಲೆ ಹಿಡಿದುಕೊಂದು ಇದ್ದ ಗಡಾರಿ ಇಳಿಸುತ್ತಾ ತನ್ನ ಅಂಗಿ ಜೇಬಿನಿಂದ ಬೀಡಿ ತೆಗೆಯಲು ಕೈ ಹಾಕಿದ ಅಷ್ಟರಲ್ಲಿ ತನ್ನ ಎದುರು  ಕಾಲು ದಾರಿಯ ಬದಿಯಲ್ಲಿ ಇದ ತೋಟ್ಟದ ಗಿಡ ಸಂದುಗಳಲ್ಲಿ ಯಾವುದು ಆಕೃತಿ ಓಡಿದ ಹಾಗೆ ಕಂಡಿತು ಸಿದ್ದಯ್ಯನಿಗೆ.
" ಲೇ ಮಂಜ , ಆ ಶೇಷಪ್ಪನ ತೋಟ್ಟದಲ್ಲಿ ಏನೋ ಓಡಿದಂಗೆ ಕಾಣ್ತಾದೆ ನೋಡಲ ವಸಿ ಆ ಕಡಿಕೆ ". ಮಂಜಣ್ಣ ತಲೆ ಎತ್ತಿ ಶೇಷಪ್ಪನ ತೋಟ್ಟದ ಕಡೆ ನೋಡಿದ , ಅವನಿಗೂ ಗಿಡ ಸಂದಿಗಳಲ್ಲಿ ಏನೋ ಇದೆ ಅಂತ ಗೋಚರವಾಗುತ್ತ ಇತ್ತು. ಮಂಜಣ್ಣ " ಲೇ ಸಿದ್ದ ಹೌದು ಕಣ್ಣಲ್ಲ ಏನೋ ಅದೇ ಅಲ್ಲಿ ಬಾರಲ್ಲ ನೋಡೋಣ , ಯಾವನಾದರೂ ತೋವಟಕ್ಕೆ ನುಗಿದಾನೋ ಹೆಂಗೋ ಅಂತ " ಎಂದು ಹೇಳಿ ಎರಡು ಹೆಜ್ಜೆ ಮುಂದೆ ನಡೆದನು . ಶೇಷಪ್ಪನ ತೋಟ್ಟದಲ್ಲಿ ಇದ್ದ ಆಕೃತ್ತಿ ತನ್ನ ದೊಡ್ಡ ಗಂಟಲ್ಲಿನ ಶಬ್ದ ಮಾಡಿತು. ಆ ಶಬ್ದಕ್ಕೆ ಮಂಜ ಸಿದ್ದ ಇಬ್ಬರು ಬೆಚ್ಚಿ ಬಿದ್ದರು.

 

 

" ಲೇ ಮಂಜ ಆನೆ ಕಣ್ಣಲ್ಲ ನುಗಿರೋದು , ಸುತ್ತ ಮುತ್ತ ಕಣ್ಣು ಹಾಯಿಸಲ್ಲ ಯಾವುದಾದರು ನಮ್ಮ ಹಿಂದೆ ಬಂದು ಬಿಟ್ಟರೆ ಕಷ್ಟ , ಎಷ್ಟು ಅವೋ ಅಲ್ಲಿ ಗೊತ್ತಿಲ್ಲ " . " ಲೋ ಸಿದ್ದ ಬಾರೋ ಆನೆ ಓಡಿಸೋಣ ಇಲ್ಲ ಅಂದರೆ ಶೇಷಪ್ಪ ಕಷ್ಟ ಪಟ್ಟು ಬೆಳೆದಿರೋ ಬಾಳೇ , ಸಪ್ಪೊಟ್ಟ ಎಲ್ಲ ಹಾಳು ಮಾಡಿ ಬಿಡುತ್ತೆ , ಪಾಪ್ಪ" .

" ಲೇ ಮಂಜ ದಡ್ಡನ ಹಾಗೆ ಹೇಳುತ್ತಿಯಲ್ಲೋ , ನಾವು ಹೋಗಿ ಓಡಿಸೋಕ್ಕೆ ಅದೇನು ನಾಯಿ ಮಾರಿ ಮಾಡಿದ್ದಿ , ಲೇ ತಮ್ಮ ಅದು ಆನೆ ಅಯಿತ್ತಿ ಆನೆ , ಇಬ್ಬರನು  ಹಾಕಿ ಅಪ್ಪಚ್ಚಿ ಮಾಡಿ ಬಿಡುತ್ತೆ ಅಷ್ಟೇ ಅಮ್ಯಾಕ್ಕೆ " . " ಆಗ್ ಅನುತ್ತೀಯ , ಸರಿ ಆ ಶೇಷಪ್ಪ ಅಣ್ಣನ ಪೋನ್ ನಂಬರ್ ಇದ್ದಾರೆ ಕೊಡು ಕಾಲ್ ಆದರು ಮಾಡಿ ಹೇಳೋಣ ". " ಆ ದೊಡ್ಡ ಕೇರಿ ಜನಗಳ ನಂಬರ್ ನನ್ನ ಅಂತ ನಿನಂಥ ಜನರಿಗೆ ಎಲ್ಲಿ ಸಿಗಬೇಕ್ಕೋ ಬೆಪ್ಪ " .
ಮತ್ತೆ ಆನೆ ತನ್ನ ದೊಡ್ಡ ಗಂಟಲಿನ ಶಬ್ದ ಮಾಡಿತು . " ಲೇ ಮಂಜ ನಾವು ಇರೋದು ಆನೆಗೆ ಕಾಣಿಸಿರಬೇಕು , ಬಾರಲ್ಲ ಬೇಗ ಇಲ್ಲಿಂದ ಹೊಗೊನೋ ". ಮಂಜ ಏನನ್ನೋ ನೋಡುತಿರುವದನ ಗಮನಿಸಿದ ಸಿದ್ದಣ್ಣ "ಏನಲ್ಲ ಅದು ಯಾವುದು ಪ್ರಾಣಿ ಕಣ್ಣುಗಳು ಇದ್ದ ಹಾಗೆ ಕಾಣಿಸುತ ಇದೆ , ಪಳ ಪಳ ಅಂತ ಒಳ್ಳಿತ ಇದೆ , ನಡೀಲ ಮೊದಲು , ಯಾವುದೊ ಕರಡಿ ನೋ ಇಲ್ಲ ಚಿರತೆ ನೋ ಹಾಗಿದ್ರೆ ಕಷ್ಟ , ಜೀವ ಉಳಿಸಿಕೊಳೋಣ " ಎಂದು ಹೇಳುತ ಮಂಜನ ಬಲಗೈ ಹಿಡಿದು ಎಳೆದನು. ಇಬ್ಬರು ಬೇರೆ ದಾರಿ ಇಡಿದು ಮನೆಗೆ ಹೋದರು.
ಗೇಣಿ ಕೊಪ್ಪಲು ನಾಗರಹೊಳೆ ಕಾಡು ಪಕ್ಕದಲ್ಲಿ ಇರೋ ಒಂದು ಸಣ್ಣ ಹಳ್ಳಿ. ಸುಮಾರು ೩೦ ರಿಂದ ೪೦ ಜನ ಇರೋ ಹಳ್ಳಿ . ಅದರಲ್ಲಿ ಮೇಲಿನ ಕೇರಿಯಾ ೧೦ ರಿಂದ ೧೫ ಜನ , ಮತ್ತೆ ಕೆಳಿಗಿನ ಹಟ್ಟಿ ೨೫ ಜನ ಇರೋ ಹಳ್ಳಿ. ಗೇಣಿ ಕೊಪ್ಪಲು ಸುತ್ತ ಮುತ್ತ ಗೋರವಾದ ದಟ್ಟ ಕಾಡು. ಅಲ್ಲಿಯ ಜನರಿಗೆ ಕಾಡಿನ ನಂಟು ಹೊಸದೇನು ಅಲ್ಲ. ಕೆಳಗಿನ ಹಟ್ಟಿ ಜನರಿಗೆ ಹೇಳಿ ಕೊಳುವಂತ ಜಮೀನು ಇಲ್ಲ. ಅವೆಲ್ಲ ಏನೇ ಇದ್ದರು  ಮೇಲಿನ ಕೇರಿ ಜನಗಳಿಗೆ ಮಾತ್ರ. ಮೇಲಿನ ಕೇರಿಗೆ ಸೇರಿದ ಶೇಷಪ್ಪನ ಜಮೀನು ಕೂಡ ಕಾಡಿನ ಪಕ್ಕದಲ್ಲಿ ಇರೋದು . ಶೇಷಪ್ಪ ಸಾಲನೋ ಸೊಲನೊ ಮಾಡಿ ಬಾಳೇ, ಸಪ್ಪೊಟ್ಟ ಮತ್ತು ಇತ್ತರೆ ತರಕಾರಿ ಹಾಕಿದ. ಇವನ ಪಕ್ಕದಲ್ಲೇ ಆ ಊರಿನ ಹೆಗ್ಡೆ , ರಂಗಯ್ಯ , ಮಾದಪ್ಪನವರ ತೋಟ್ಟ ಗಳು ಇದವು . ಇವರ ತೋಟ್ಟಗಳಲ್ಲಿ  ಕೂಲಿ ನಾಲಿ ಮಾಡಿಕೊಂಡು ಮಂಜಣ್ಣ , ಸಿದ್ದಯ್ಯ , ಬೋರಯ್ಯ ಮತ್ತೆ ಇತ್ತರೆ ಕೆಳಿಗಿನ ಕೇರಿ ಅವರು ತಮ್ಮ ತಮ್ಮ ಉದರ ಬಾದೆ ನೀಗಿಸಿ ಕೊಳುತ್ತ ಇದ್ದರು. ಆವತು ಮಂಜಣ್ಣ , ಸಿದ್ದಯ್ಯ ಪಕ್ಕದ ಊರಿನಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ವಾಪಸು ಆಗುತ್ತಾ ಇದರು .
ಮುಂಜಾನೆಯ ನಿತ್ಯ ಕರ್ಮಗಳನೆಲ್ಲ ಮುಗಿಸಿ ಹೆಂಡತಿ ಕೊಟ್ಟ ಕಾಪಿ ಹೀರುತ್ತ ತಮ್ಮ ರೂಂ ಇಂದ ಹಾಲ್ ಕಡೆಗೆ ಹೆಜ್ಜೆ ಹಾಕುತ್ತ ಗೆಣಿಕೊಪ್ಪಲಿನ ಛೇರ್ಮನ್ ಸಾಹೇಬರು ಬಂದರು. ನೋಡಲು ಕೃಷ್ಣ ಬಣ್ಣದವರು, ಸಾದಾರಣ ಮೈ ಕಟ್ಟು ಹೊಂದಿದವರು ಛೇರ್ಮನ್ ಸಾಹೇಬರು . ಕೈ ಅಲ್ಲಿ ಹಿಡಿದಿದ ಕಾಪಿ ಗ್ಲಾಸ್ನ  ಟಿವಿ ಸ್ಟಾಂಡ್ ಮೇಲೆ ಇಡುತ್ತ , " ಲೇ ಇವಳೇ ಟಿವಿ ರಿಮೋಟ್ ಎಲ್ಲೇ ಹಾಕಿದ್ದೀ , ಸ್ವಲ್ಪ ತಕೊಡ್ ಬಾರ್ ಅಮ್ಮಿ " , "ಅಲ್ಲೇ ಟಿವಿ ಸ್ಟಾಂಡ್ ಪಕ್ಕದಲ್ಲಿ ಇರೋ ರಾಗಿ ಮೂಟೆ ಮೇಲೆ ಇಟ್ಟಿದೀನಿ ನೋಡ್ರಿ ".

ಛೇರ್ಮನ್ ಸಾಹೇಬರು ಟಿವಿ ರಿಮೋಟ್ ಕೈಗೆ ತಗೊಂಡು ಟಿವಿ ಹಾಕಿದರು , ಅವರು ಟಿವಿನಲ್ಲಿ ಕಂಡ ವಾರ್ತೆಯನು ನೋಡುತ್ತಾ ಗಾಬರಿ ಆದವರಂತೆ " ಲೇ ಚೆನ್ನ ಲೇ ಚೆನ್ನ ಬಾರಲ್ಲ ಇಲ್ಲಿ " ಅಂತ ತಮ್ಮ ಮನೆ ಆಳನ ಜೋರಾಗಿ ಕರೆದರೂ , ಚೆನ್ನ ತಾನು ಮಾಡುತ್ತಿದ ಕೆಲಸವನು ಬಿಟ್ಟು ಮನೆ ಒಳ್ಳಗೆ ಬಂದು " ಹೇಳಿ ಒಡೆಯ " ಅಂತ ಮಂಡಿ , ಬೆನ್ನು ಸ್ವಲ್ಪ ಬಾಗಿಸಿ ವಿನಮ್ರತೆ ಇಂದ ಕೇಳಿದನು "ಎನ್ನೋ ಚೆನ್ನ ಊರು ಒಳ್ಳಗೆ ಹೋಗಿದೆನು , ಏನೋ ಇದು ಟಿವಿನಲ್ಲಿ ನಮ್ಮ ಊರಿಗೆ ಆನೆ ಬಂದಿತು ಅಂತ ತೋರಿಸುತಾವರೆ , ಏನೋ ಇದು " , "ಹೌದು ಬುದ್ದಿ , ಹೊತ್ತಾರೆ ನಾನು ಆ ರಂಗಯ್ಯ ನವರ ಮನೆಗೆ ಅಮ್ಮಾವರು ಕೊಟ್ಟರು ಅಂತ ಗಿಣ್ ಹಾಲು ತಗೊಂಡು ಹೋಗೋವಾಗ ಊರಲೆಲ್ಲ ಆ ಶೇಷಪ್ಪ ಅಣ್ಣನ ತೋಟ್ಟಕ್ಕೆ ರಾತ್ರಿ ಆನೆ ಬಂದಿತಂತೆ , ಅದನ ನೋಡೋಕ್ಕೆ ಎಲ್ಲ ಟಿವಿ ಚಾನೆಲ್ನವರು ಅಲ್ಲಿ ಜಮೈಸಿದರೆ ಅಂತ ಗುಸು ಗುಸು ಮಾತು ಹಾಡಿಕೊಳುತ್ತ ಇದ್ದರು " , " ನಾನು ಈ ಊರಿನ ಛೇರ್ಮನ್ ನಂಗೆ ಒಂದು ಮಾತು ಯಾರು ಹೇಳಿಲ , ಇರಲ್ಲಿ , ಸರಿ ನನ್ನ ಚಪ್ಲಿ ತೆಗೆದು ಇಡೋ , ಶರ್ಟ್ ಹಾಕಿಕೊಂಡು ಬರುತ್ತೀನಿ , ಏನು ಅಂತ ಒಸಿ ಹೋಗಿ ನೋಡೋಣ ".

ಛೇರ್ಮನ್ರು , ಮತ್ತು ಅವರಿಗೆ ಛತ್ರಿ ಇಡಿದು ಕೊಳ್ಳೋಕೆ ಚೆನ್ನ ಇಬ್ಬರು ಶೇಷಪ್ಪನವರ ತೊಟ್ಟದ  ಕಡೆ ಹೊರಟ್ಟರು. ಅಲ್ಲಿ ಇವರು ಬರುವ ಮೊದಲೇ ಎಲ್ಲ ಟಿವಿ ಚಾನೆಲ್ ನವರು ತಮ್ಮ ತಮ್ಮ ಕ್ಯಾಮೆರಾ , ರಿಪೋರ್ಟರ್ಗಳೊಂದಿಗೆ ದಾವಿಸಿದರು . ಕಿಕ್ಕಿರಿದು ಸೇರಿತ್ತು ಜನ. ಇದನೆಲ್ಲ್ಲಕಂಡ  ಛೇರ್ಮನ್ರು " ಅಲ್ಲಲೇ ಇದೆನಲ್ಲ ಚೆನ್ನ ಈ ಪಾಟಿ ಜನ ಸೇರವರೆ , ಏನೋ ಆನೆ ನೋಡೋಕೆ ಬಂದವರ ಇಲ್ಲ ಯಾರದಾದರೂ ತಿಥಿ ಮಾಡೋಕ್ಕೆ ಬಂದವರೋ , ಯಾರೋ ಈ ಸುದ್ದಿನ ಇವರಿಗೆ ಹೇಳಿದು , ಈ ಊರಿನ ಛೇರ್ಮನ್ ನಾನು ದಂಡಕೆ , ಒಬ್ಬರನ ಫೋನ್ ಮಾಡಿಲವಲ್ಲೋ " ಅನ್ನುತ್ತಾ ಶೇಷಪ್ಪನ ತೊಟ್ಟದ ಹತ್ತೀರ ಬಂದರು.

ಛೇರ್ಮನ್ರು ಬರುತೀದನ ಗಮನಿಸಿದ ಒಬ್ಬರು ರಿಪೋರ್ಟರ್ ಇವರತ್ತಾ ತಮ್ಮ ಮೈಕ್ ಮತ್ತು ಕ್ಯಾಮರಾಮನ್ ಜೊತೆ ಓಡಿ ಓಡಿ ಬಂದರು. ಇವರು ಬರುವುದನ ಕಂಡ ಛೇರ್ಮನ್ರು ಕ್ಯಾಮೆರಾ ಕಂಡಾಗ ಮಾನವ ಸಹಜ ಕ್ರಿಯೆ ಅಂತೆ ತಮ್ಮ ಹೆಗಲ ಮೇಲಿನ ಟವೆಲ್ ಸರಿಮಾಡಿಕೊಳುತ್ತಾ , ತಮ್ಮ ಹಳದಿ ದಂತ ಪಂಕ್ತೀಗಳ ದರ್ಶನ ಮಾಡಿಸುತ್ತ ಅವರನ ನೋಡಿದರು.

ಸುಂದರ್ ಹುಡುಗಿಯೊಬ್ಬಳು ಮೈಕ್ ಹಿಡಿದು ಕೊಂಡು ಛೇರ್ಮನ್ರ ಹತ್ತಿರ ಬಂದಳು. ಛೇರ್ಮನ್ರನ ಒಮ್ಮೆ ನೋಡಿ ಏನೋ ಅನ್ನಿಸಿದವಳಂತೆ ಸ್ವಲ್ಪ ಹಿಂದಕ್ಕೆ ತಿರುಗಿ "ರೀ ಶಾಮಣ್ಣ , ಛೇರ್ಮನ್ ಸಾಹೇಬರ ಮುಖ ಬಿಸಿಲಿಗೆ ಬಾಡಿದೆ , ಸ್ವಲ್ಪ ಅವರನ ರೆಡಿ ಮಾಡಿ ಪ್ಲೀಸ್" ಅಂತ ಯಾರಿಗೋ ಕೈ ಸನ್ನೆ ಮಾಡುತ್ತಾ ಹೇಳಿದಳು. ಶಾಮಣ್ಣ ತಾನು ತಂದಿದ ದೊಡ್ಡ ಬೇಗ ಇಂದ ಒಂದು ಬಿಳಿ ಬಟ್ಟೆ , ರೋಸ್ ವಾಟರ್ ಇದ ಬಾಟಲಿ ತೆಗೆದು ಕೊಂಡು ಛೇರ್ಮನ್ರತ್ತ ದಾವಿಸಿದ. ಛೇರ್ಮನ್ ಸಾಹೇಬರು ಮುಖವನ ವರಿಸಿ , ರೋಸ್ ವಾಟರ್ ಹಾಕಿ ರೆಡಿ ಮಾಡಿದ, " ಮೇಡಂ , ಛೇರ್ಮನ್ರನ ರೆಡಿ ಮಾಡಿದೀನಿ ನೋಡಿ" ಅಂತ ಹೇಳಿ ಹೊರಟ್ಟು ಹೋದ.

ಮತ್ತೆ ಅ ರಿಪೋರ್ಟರ್ ಹುಡುಗಿ ತನ್ನ ಕ್ಯಾಮರಾಮನ್ಗೆ ಕೈ ಸನ್ನೆ ಮಾಡಿ ಕರೆದಳು. ಲೈಟ್ಸ್ ಆನ್ ಆಯಿತು. "ಛೇರ್ಮನ್ರೆ , ನಿಮ್ಮ ಊರಿಗೆ ಆನೆ ಬಂದಿದು ನಿಮ್ಮಗೆ ಯಾವಾಗ ತಿಳಿಯಿತು " , " ಬೆಳ್ಳಿಗೆ ನಮ್ಮ ಆಳು ಚೆನ್ನ ಹೇಳಿದ, ನಾನು.." , "ಇದರ ಬಗೆ ನೀವು ಏನು ಹೇಳುತ್ತೀರ ಛೇರ್ಮನ್ರೆ " , " ಎಲ್ಲ ನಮ್ಮ ಹಳ್ಳಿಗೆ ಬಂದಿರೋ ಗ್ರಹಚಾರ , ಮೂರು ವರ್ಷದಿಂದ ಸರಿಯಾಗಿ ಮಳೆ ಬೆಳೆ ಹಾಗಿಲ್ಲ , ಈ ಬಾರಿ ಆದರು ಏನೋ ವಸಿ ಮಳೆ ಆಗಿತ್ತು , ಬೆಳೆನು ಕೈ ಸೇರೋ ಟೇಮ್ ಆಗಿತ್ತು , ಅಷ್ಟರಲ್ಲಿ ಹೀಗೆ ಆಗಿ ಹೋಯಿತು , ಏನು ಮಾಡೋಕ್ಕೆ ಆಯಿತದೆ .."

ಹೀಗೆ ಛೇರ್ಮನ್ರ ಇಂಟರ್ವ್ಯೂ ನಡೀತ್ತಾ ಇತ್ತು , ಜನ ಸಂದುಳಿ ಜಾಸ್ತಿ ಆಗಿ ಚೆನ್ನ ಗುಂಪ್ನಿಂದ ಹೊರ ಬಂದ. ಅವನ ಕಣ್ಣಿಗೆ ಯಾರೋ ಒಂದು ದೊಡ್ಡ ಮರದ ಹತ್ತೀರ ಅನ್ಯ ಮನಸ್ಕರಾಗಿ ಕೂತಿರುವಂತೆ ಕಾಣಿಸಿತ್ತು. ಯಾರೋ ನೋಡೋಣ ಅಂತ ಸ್ವಲ್ಪ ಮುಂದೆ ಸಾಗಿದ , ಅವನು ಮರಕ್ಕೆ ಹತ್ತೀರ ಆದಂತೆ ಅವನಿಗೆ ಮರದ ಕೆಳಗೆ ಇರುವ ವ್ಯಕ್ತಿ ಶೇಷಪ್ಪ ಅಣ್ಣ ಅಂತ ಕಾಣಿಸಿತ್ತು. ಶೇಷಪ್ಪ ಯಾವುದೊ ಹೇಳಲಾಗದ ಸಂಕಷ್ಟವನು , ದುಃಖವನು ಅನುಭವಿಸುತಿರುವಂತೆ ಚೆನ್ನನಿಗೆ ಕಂಡಿತು. ಶೇಷಪ್ಪ ಅಣ್ಣನ ಕಷ್ಟ ಚೆನ್ನನಿಗೆ ಅರ್ಥವಾಯಿತು. ಇಂಗ್ಲಿಷ್ನಲ್ಲಿ ಒಂದು ಮಾತು ಇದೆ " ಡೋಂಟ್ ಶೇರ್ ಯುವರ್ ಸರೋಸ್ , ಇಟ್ ಡೋಂಟ್ ಹ್ಯಾವ್ ಎನಿ ಮಾರ್ಕೆಟ್ " ಅಂತ ಹಾಗೆ ಇತ್ತು ಶೇಷಪ್ಪನ ಸ್ಥಿತಿ . ಕೈ ಬಂದ ಬೆಳೆ ಬೇರೆ ಅವರ ಪಾಲಾದಾಗ ಮನಸ್ಸಿಗೆ ಆಗುವ ನೋವು ಹೇಳಲಾಗದನ್ತಹದು. ಶೇಷಪ್ಪನ ದುಃಖ ಯಾರಿಗೂ ಬೇಡವಾದ ವಿಷಯವಾಗಿತು . ಮೀಡಿಯಾದವರಿಗೆ ಆನೆ ಮೇಲೆ ಶೂಟಿಂಗ್ ಮಾಡಿದರೆ trp ಜಾಸ್ತಿ ಆಗುತ್ತೆ ಅನೋ ನಮ್ಭಿಕೆ. ಇನ್ನು ಛೇರ್ಮನ್ ಅವರಿಗೆ ತಮ್ಮ ದೊಡ್ಡ ಅಸ್ತಿಕೆ ಮೆರೆಯೋ ಹಂಬಲ , ಇವೆಲದರ ಮಧ್ಯ ಶೇಷಪ್ಪನ ನೋವಿಗೆ ಮಾರ್ಕೆಟ್ ಇರಲ್ಲಿಲ.

ಚೆನ್ನ ಮರದ ಪಕ್ಕಕೆ ಬಂದನು , ಅಷ್ಟ್ರಲ್ಲಿ ಯಾವುದೊ ಜೀಪಿನ ಶಬ್ದ ಕೇಳಿಸಿತು. ಚೆನ್ನ ಯಾರೆಂದು ಹಿಂದೆ ತಿರುಗಿ ನೋಡಿದನು.
ನೀಲಿ ಬಣ್ಣದ ಜೀಪು ಛೇರ್ಮನ್ರ ಇಂಟರ್ವ್ಯೂ ನಡಿತ್ತಾ ಇದ ಜಾಕ್ಕೆ ಬಂದು ನಿಂತ್ತಿತು. ಅದರಿಂದ ಖಾಕಿ ಬಟ್ಟೆ ದರಿಸಿದ ನಾಲ್ಕು ಜನ ಹಿಳಿದರು. ಅದರಲ್ಲಿ ಒಬ್ಬರ ಸೊಂಟ್ಟದ ಬೆಲ್ಟ್ ಗೆ ಬಂದೂಕು ಸಿಕ್ಕಿಸಿದರು. ಇವರನ ನೋಡುತ್ತಾ ಇದ ಚೆನ್ನ ಪೋಲಿಸ್ ಬಂದರು ಅಂದು ಕೊಳುತ್ತ ಮತ್ತೆ ಶೇಷಪ್ಪನ ಕಡೆಗೆ ತಿರುಗಿದ. ಆದರೆ ಬಂದವರು ಪೋಲಿಸ್ ಅಲ್ಲದೆ ಫಾರೆಸ್ಟ್ ಡಿಪಾರ್ಟ್ಮೆಂಟ್ ನವರು ಆಗಿದರು.

ಆರು ಅಡಿ ಎತ್ತರದ ಸದೃಡ ಕಾಯ ವೊಂದಿದ್ದ ರೇಂಜ್ ಆಫೀಸರ್ ಪ್ರೆಸ್ನವರ ಪ್ರಶ್ನೆಗಳಿಗೆ ಉತ್ತರಿಸದೆ ನೇರವಾಗಿ ಶೇಷಪ್ಪ ಕೂತ್ತಿದ ಮರದ ಹತ್ತಿರಕ್ಕೆ ನಡೆದರೂ. ಮರದ ಕೆಳಗೆ ಕೂತ್ತಿದ ಬಡಕಲು , ಕುಳ್ಳನೆಯ ಗಡ್ದದಾರಿ ಶೇಷಪ್ಪನ ದಿಟ್ಟಿಸಿ ನೋಡುತ್ತಾ ಹಾಗೆ ಮುಂದೆ ಸಾಗಿದರು. ಶೇಷಪ್ಪನ ತೊಟ್ಟದ ಬೇಲಿ ಹತ್ತಿರ ಬಂದು , ಹಿಂದಕ್ಕೆ ತಿರುಗಿ ಕೈ ಸನ್ನೆ ಮಾಡುತ್ತಾ ಚೆನ್ನನ ಕರೆದರೂ. ಅವರ ಹಿಂದೆ ಅವರ ಕಾನ್ಸ್ಟೇಬಲ್ಗಳು ಬಂದರು. ರೇಂಜ್ ಆಫೀಸರ್ ತಮ್ಮ ಕಾನ್ಸ್ಟೇಬಲ್ಗಳಿಗೆ ಪ್ರೆಸ್ನವರನ ಅಲ್ಲಿಂದ ದೂರ ಕಳಿಸುವಂತೆ ಹೇಳಿ ಚೆನ್ನನ ಕಡೆ ನೋಡುತ್ತಾ " ಏನಯ್ಯ ನಿನ್ನ ಹೆಸರು " , " ಚೆನ್ನ ಬುದ್ದಿ " , "ಏನ್ ಕೆಲಸ ಮಾಡಿಕೊಂಡು ಇದಿಯಾ " , " ನಾನ ಬುದ್ದಿ ,  ಈ ಊರಿನ ಛೇರ್ಮನ್ರ ಮನೆ ಅಲ್ಲಿ ಕೂಲಿ ಮಾಡಿಕೊಂಡು ಇದೀನಿ ಬುದ್ದಿ " , " ಸರಿ ಈ ತೊಟ್ಟ ಯಾರಿಗೆ ಸೇರಿದಯ್ಯ " , " ಈ ತೊವಟ್ಟ , ಆ ಮರದ ಕೆಳಗೆ ಕುಂತವರಲ್ಲ ಶೇಷಪ್ಪ  ಅಣ್ಣನವರಿಗೆ ಸೇರಿದು ಸಾಮಿ " ಅಂತ ಶೇಷಪ್ಪನ ಕಡೆ ಕೈ ತೋರಿಸುತ್ತ ಹೇಳಿದನು ಚೆನ್ನ. " ಸರಿ ಆ ತೊಟ್ಟದ ಮುಳ್ಳಿನ ಬಾಗಿಲನ ಸ್ವಲ್ಪ ತೆಗಿಯಪ್ಪ " , ಚೆನ್ನ ನಿಧಾನವಾಗಿ ಮುಳ್ಳಿನ ಬಾಗಿಲನು ತೆಗೆದನು.

ರೇಂಜ್ ಆಫೀಸರ್ ಕಾನ್ಸ್ಟೇಬಲ್ ಗಳಿಗೆ ಕೈ ಸನ್ನೆ ಮಾಡಿ ಕರೆಯುತ್ತ  ತೊಟ್ಟದ ಒಳ್ಳಗೆ ಹೋದರು. ಅವರ ಹಿಂದೆ ಚೆನ್ನ ಕೂಡ ಒಳ್ಳಗೆ ಹೋದನು. ಆಫೀಸರ್ ಸಾಹೇಬರು ತೊಟ್ಟದ ಸುತ್ತ ಮುತ್ತ ನೋಡುತ್ತಾ ನಡೆದರೂ. ಉರುಳಿದ ಬಾಳೇ ಮರ , ಎಲ್ಲೆಂದರಲ್ಲಿ ಚೆಲ್ಲ ಪಿಲ್ಲಿ ಆಗಿದ ಸಪ್ಪೋಟ , ಆನೆಯ ಕಾಲು ತುಳಿತಕ್ಕೆ ಹಾಳಾಗಿದ ತರಕಾರಿ ಗಿಡಗಳು ಎಲ್ಲವನು ಗಮನಿಸುತ್ತ ಆಫೀಸರ್ ಮುಂದೆ ನಡೀತ್ತಾ " ರೀ ಮುರಳಿ ಬನ್ರಿ ಇಲ್ಲಿ " ಅಂತ ಕಾನ್ಸ್ಟೇಬಲ್ ಒಬ್ಬರನ ಕರೆದರೂ. ಅಲ್ಲಿ ನೋಡ್ರಿ ಆನೆ ಪೈಕಾನೆ , ಊರಿನ ಜನ ಹೇಳಿದ ಹಾಗೆ ರಾತ್ರಿ ಆನೆ ಬಂದಿರೋದು ಗ್ಯಾರಂಟೀ , ನೋಡಿ ಆಚ್ಚ್ಚೆ ಕಡೆ ಮರದ ಹತ್ತೀರ ಒಬ್ಬರು ಕೂತ್ತಿದರಲ್ಲ ಅವರೇ ಈ ತೊಟ್ಟದ ಮಾಲೀಕರು , ಅವರ ಹತ್ತೀರ ಹೋಗಿ ತೊಟ್ಟದ ವಿಸ್ತಿರಣ , ಹಾಗೆ ಈ ತೊಟ್ಟ ಬಿಟ್ಟು ಮತ್ತೆ ಅಕ್ಕ ಪಕ್ಕದ ತೊಟ್ಟದಲ್ಲಿ ಹಾನಿ ಆಗಿದ್ರೆ ಅದನ್ನೆಲ್ಲಾ ನೋಟ್ ಮಾಡಿಕೊಂಡು , ತೊಟ್ಟದ ಮಾಲೀಕರ  ಹತ್ತೀರ ಸೈನ್ ತಗೊಂಡು  , ರೆಕಾರ್ಡ್ ಬುಕ್ ಜೊತೆ ಸ್ಟೇಷನ್ ಗೆ ನೇರವಾಗಿ ಬಂದು ಬಿಡಿ ಆಯ್ತಾ " ಅಂತ ಮುರಳಿಗೆ ಹೇಳುತ್ತಾ ತೊಟ್ಟದ ಬಾಗಿಲ ಹತ್ತೀರ ಬಂದು ನಿಂತರು.

ಆಫೀಸರ್ ಶರ್ಟ್ ಜೇಬ್ಬಿನಲ್ಲಿ ಇದ್ದ ವಾಕಿ ಟಾಕಿ ನಲ್ಲಿ " ಗೇಣಿ ಕೊಪ್ಪಲಿಂದ ಆರು ಕಿಲೋಮೀಟರು ದೂರದ ಕಾಡಿನೊಳಗೆ ಆನೆ ಕಾಣಿಸಿಕೊಂಡು ಇದೆ " ಅಂತ ಮೆಸೇಜ್ ಬಂತು. ಇದನ ಕೇಳಿದ ಆಫೀಸರ್ ಮುರಳಿಗೆ ಕೈ ಸನ್ನೆ ಮಾಡಿ ಎಲ್ಲ ಮುಗಿಸಿಕೊಂಡು ಬರುವಂತೆ ತಿಳಿಸುತ್ತ ,  " ಎ ಬಂದರಯ್ಯ ಆನೆ ಕಾಣಿಸಿಕೊಂಡು ಇದೆಯಂತೆ ನಾವು ಅಲ್ಲಿಗೆ ಹೋಗೋಣ " ಅಂತ ಕಾನ್ಸ್ಟೇಬಲ್ ಗಳನ ಕರೆಯುತ್ತ ಜೀಪಿನ ಕಡೆಗೆ ಬಿರು ಬಿರನೆ ಹೆಜ್ಜೆ ಹಾಕಿದರು. ಪ್ರೆಸ್ಸ್ನವರ ಯಾವ ಪ್ರಶ್ನೆ ಗಳಿಗೂ ಉತ್ತರಿಸದೆ ಆಫೀಸರ್ ಮತ್ತು ಉಳಿದ ಇಬ್ಬರು ಕಾನ್ಸ್ಟೇಬಲ್ಗಳು ಜೀಪ್ ಹತ್ತಿ ಹೋರಟು ಹೋದರು.

"ಸ್ನೇಹಿತರೆ ಇಂತಿ ನಿಮ್ಮ ಟಿವಿ ವಿನೋದ್ x ಇಂದ  ಸ್ವಾಗತ ಈ ಆನೆ ಬಂತು ಆನೆ ವಿಶೇಷ ಕಾರ್ಯ ಕ್ರಮಕ್ಕೆ , ಈ ಕಾರ್ಯ ಕ್ರಮಕ್ಕೆ ಅಥಿತಿ ಆಗಿ ಬಂದಿರೋ ಇಕೋಲಾಜಿಕಲ್ ಎಕ್ಸ್ಪರ್ಟ್ ಸುರೇಶ ಕುಮಾರ್ ಮತ್ತು ರಿಟೈರ್ಡ್ ಫಾರೆಸ್ಟ್ ಆಫೀಸರ್ ಶ್ರೀಕಾಂತ್ ಅವರಿಗೆ ನಮ್ಮ ಟಿವಿ x ಚಾನೆಲ್ ಇಂದ ಹೃತ್ಪೂರಕ ಸ್ವಾಗತ ಕೋರುತ್ತ ಈ ಕಾರ್ಯ ಕ್ರಮ ಶುರು ಮಾಡೋಣ " ಅಂತ ಟಿವಿ ಚಾನೆಲ್ x ನಲ್ಲಿ ಕಾರ್ಯ ಕ್ರಮ ಒಂದು ಶುರುವಾಯಿತು.

" ಮೊದಲಿಗೆ ಸುರೇಶ ಅವರಿಗೆ ನನ್ನ ಪ್ರಶ್ನೆ , ಸುರೇಶ ನೀವು ನೋಡುತ್ತಾ ಇದ್ದೀರಾ ಗೇಣಿಕೊಪ್ಪಳಕ್ಕೆ ಆನೆ ಬಂದಿತು ಅಂತ , ಈ ಮನುಷ ಮತ್ತು ಪ್ರಾಣಿಗಳ ನಡುವೆ ನಡೆಯುತ್ತಿರುವ ಸಂಗರ್ಷಕ್ಕೆ ಏನು ಕಾರಣ ಇರಬಹುದು "

"ನೋಡಿ ಮೊದಲನೇದಾಗಿ ಕಾಡು ನಾಶ ಆಗುತ ಇರೋದೇ ಇದಕೆಲ್ಲ ಮುಖ್ಯ ಕಾರಣ , ಆನೆ ಅಂತ ದೊಡ್ಡ ಜೀವಿಗೆ ಸರಿಯಾದ ಪ್ರಮಾಣದಲ್ಲಿ ಆಹಾರ ದೊರೆಯುತ್ತಿಲ್ಲ , ಅದಕ್ಕೆ ಅವು ಆಹಾರ ಹುಡುಕುತ್ತ ಮನುಷ್ಯನ ಕಡೆ ಬರತ್ತಾ ಇವೆ "

"ಕೇವಲ ಆಹಾರ ಮಾತ್ರ ಕಾರಣನೋ ಇಲ್ಲ ಇನ್ನು ಏನಾದರು ಕಾರಣಗಳು ಇರಬಹುದ "

"ನೋಡಿ ಆನೆ ಒಂದು ಗುಂಪಿನೊಂದಿಗೆ ಬದುಕುವ ಪ್ರಾಣಿ , ಮತ್ತೆ ಪ್ರಾಯಕ್ಕೆ ಬಂದ ಅಂತ ಸಲಗಗಳು ತಮ್ಮ ವಂಶವನ ಬೆಳಿಸೋದಕ್ಕೆ ಪಕ್ಕದ ಕಾಡಿಗೆ ಹೋಗುತ್ತವೆ , ಇವು ಬಳಸೋ ದಾರಿನೇ ಆನೆ ಕಾರಿಡಾರ್ ಅಂತ ಕರೆಯಲಾಗುತ್ತೆ , ಆದರೆ ಇವತ್ತಿನ ದಿನಗಳಲ್ಲಿ ಆನೆ ಕಾರಿಡಾರ್ ಜಾಗ ಕೃಷಿ ಭೂಮಿಗಳಾಗಿ ಪರಿವರ್ತನೆ ಆಗಿವೆ , ಹಾಗಾಗಿ ಆನೆಗಳ ದಾಳಿ ನಿರಂತರವಾಗಿ ಮುಂದು ವರೆದಿದೆ "

"ಶ್ರೀಕಾಂತ ಸರ್ , ಆನೆ ಕಾರಿಡಾರ್ಗಳು ಕೃಷಿ ಭೂಮಿಗಳಾಗಿ ಬದಲಾಗಿವೆ ಅಂತ ಸುರೇಶ ಅವರು ಹೇಳುತ್ತಾ ಇದ್ದಾರೆ , ಇದರ ಬಗೆ ಸರಕಾರ ಯಾವ ರೀತಿ ಕ್ರಮ ತೆಗೆದು ಕೊಂಡು ಇದೆ "

"ನೋಡಿ ಸುರೇಶ ಅವರು ಹೇಳಿದ ಹಾಗೆ ಆನೆ ಕಾರಿಡಾರ್ ಅಂತ ಗುರತಿಸಲ್ಪಟ್ಟ ಜಾಗಗಳು ಕೃಷಿ ಭೂಮಿಗಳಾಗಿ ಪರಿವರ್ತನೆ ಆಗಿವೆ ನಿಜ ಆದರೆ ಅವೆಲ್ಲ ಅಕ್ರಮವಾಗಿ ಆಗಿರುವನ್ತಹದು , ಸರಕಾರ ಇದರ ಬಗೆ ತನಿಖೆ ಮಾಡಲು ಕಮಿಟಿ ಮಾಡಿತು , ಕಮಿಟಿಯಾ ವರದಿಯಾ ಆದಾರದ ಮೇಲೆ ಅಕ್ರಮವಾಗಿ ಕೃಷಿ ಮಾಡಿದ ಜನಗಳನ ಅಲ್ಲಿಂದ ವಕಲು ಎಬ್ಬಿಸುವಂತ ಕ್ರಮ ಜಾರಿಗೆ ತಂದಿದೆ "

"ಆದರೆ ಇಲ್ಲಿವರೆಗೂ ಯಾರನು ಅಲ್ಲಿಂದ ವಕಲು ಎಬ್ಬಿಸಿದಂತ ಉದಾರಣೆಗಳೇ ಇಲ್ಲ "

"ನೋಡಿ ಜನರನ ವಕಲು ಎಬ್ಬಿಸುವುದ್ ಅಷ್ಟು ಸುಲಭದ ಕೆಲಸ ಅಲ್ಲ , ಅವರಿಗೆ ಹೊಟ್ಟೆ ಪಾಡಿಗೆ ಬೇರೆಯ ಜಾಗವನ ಕೋಡಬೇಕಾಗುತೆ , ಮತ್ತೆ ಈ ಜನರಿಗೆ ಮೂಲಭೂತ ಸೌಕರ್ಯ ಗಳನ ಸರಕಾರ ಒದಗಿಸಬೇಕಾಗುತ್ತೆ , ಇವೆಲ್ಲ ಒಂದೇ ದಿನದಲ್ಲಿ ಆಗೋ ಕೆಲಸ ಅಲ್ಲ , ಇದರ ಜೊತೆಗೆ ಈ ಆನೆ ಕಾರಿಡಾರ್ ಅಂತ ಗುರುತಿಸಲ್ಪಟ್ಟ ಕೆಲವು ಜಾಗಗಳು ಸ್ಪೆಷಲ್ ಎಕನಾಮಿಕ್ ಜೋನ್ ಎಂದು ಕೂಡ ಗುರುತಿಸಲ್ಪಟ್ಟಿರುತ್ತೆ ಹಾಗಾಗಿ ಕೆಲವಂದು ಸಮಸ್ಯೆ ಬಗೆ ಹರಿಯದೆ ಹಾಗೆ ಉಳಿದಿದೆ , ಮತ್ತೆ ನಿಮ್ಮಗೆ ಒಂದು ಉದಾರಣೆ ಹೇಳುತ್ತೀನಿ ಕೇಳಿ , ನಮ್ಮ ಬನೆರುಗಟ್ಟ ದಿಂದ ತಮಿಳ್ ನಾಡಿನ ಕಾಡಿಗೆ ಒಂದು ಕಿಲೋಮೀಟರು ಉದ್ದದ ಆನೆ ಕಾರಿಡಾರ್ ಮಾಡೋದಕ್ಕೆ ಸರ್ಕಾರ ಡಿಸೈಡ್ ಮಾಡಿದೆ , ಆದರೆ ಅಲ್ಲಿ ಅಕ್ರಮವಾಗಿ ನಡಿತ್ತ ಇರೋ ಗ್ರಾನೈಟ್ ಬುಸ್ಸಿನೆಸ್ಸ್ ಇಂದ ತೀವ್ರ ತೊಂದರೆ ಆಗಿದೆ , ಹೀಗೆ ಅನೇಕ ಸಮಸ್ಯೆಗಳು ಇದೆ "

"ಸ್ಪೆಷಲ್ ಎಕನಾಮಿಕ್ ಜೋನ್ ಇದರಿಂದ ಯಾವ ತರಹ ತೊಂದರೆಗಳು ಆಗಿವೆ , ಮತ್ತೆ ಸರ್ಕಾರ ಈ ಜಾಗಗಳನ ಸ್ಪೆಷಲ್ ಎಕನಾಮಿಕ್ ಜೋನ್ ಅಂತ ಯಾಕೆ ಗುರುತಿಸಿದೆ "

"ಸ್ಪೆಷಲ್ ಎಕನಾಮಿಕ್ ಜೋನ್ ಅಂದರೆ ಪ್ರಗತಿಗೆ ಹೇಳಿ ಮಾಡಿಸಿದ ಜಾಗಗಳು ಅಂತ , ಅಲ್ಲಿಗೆ ರೈಲ್ವೆ ಹಳಿಗಳು ಬರುತ್ತೆ , ಮತ್ತೆ ಎಲೆಕ್ಟ್ರಿಕಲ್ ಕಂಬಗಳು ಅಂದರೆ ಟವರ್ಗಳು ಬರುತ್ತೆ , ಇವೆಲ್ಲ ನಡಿ ಬೇಕ್ಕಾದರೆ ರಸ್ತೆ ಆಗಬೇಕಾಗುತ್ತೆ , ರಸ್ತೆ ಆಗಬೇಕು ಅಂದರೆ ಕಾಡು ನಾಶ ಆಗಬೇಕಾಗುತ್ತೆ , ಕಾಡು ನಾಶ ಆದರೆ ಸುರೇಶ ಅವರು ಹೇಳಿದ ಹಾಗೆ ಪ್ರಾಣಿಗಳಿಗೆ ತೊಂದರೆ ಆಗುತ್ತೆ , ಈ ಬಗೆ ಸರಕಾರ ಒಂದು ಮಹತರವಾದ ನಿರ್ಧಾರ ಕೈ ಗೊಳಬೇಕಾಗುತ್ತೆ "

"ಸುರೇಶ ಸರ್ ಈ ಆನೆ ದಾಳಿಗಳನ ವೈಜ್ಞಾನನಿಕ್ಕವಾಗಿ ತಡಿಯೋದಕ್ಕೆ ಸಾಧ್ಯ ಇದೆಯಾ ಹೆಂಗೆ "

"ನೋಡಿ ಇದ್ದನ ತಡಿಯೋಕ್ಕೆ ಯಾವ ರೀತಿಯ ದಾರಿಗಳು ಇಲ್ಲ , ಆದರೆ ಆನೆ ಅಂತ ಪ್ರಾಣಿ ಕೃಷಿ ಭೂಮಿ ಒಳ್ಳಗೆ ಬರದಂತೆ  ಮಾಡಬೇಕು ಅಷ್ಟೇ "

"ಹೀಗೆ ಚರ್ಚ್ಚೆ ಮುಂದುವರೆಯುತ್ತೆ ಒಂದು ಸಣ್ಣ ಬ್ರೇಕ್ ನಂತರ , ಡೋಂಟ್ ಗೋ ಅವೇ "

ಶೇಷಪ್ಪನ ತೊಟ್ಟ ದಿಂದ ಹೊರಟ್ಟ ಫಾರೆಸ್ಟ್ ಡಿಪಾರ್ಟ್ಮೆಂಟ್ ಜೀಪ್ ಒಂದು ಕಿಲೋಮೀಟರು ಮುಂದೆ ಬಂದಿತು. ಜೀಪ್ನ ಎಡಗಡೆ ಸೀಟ್ಗೆ ಒರಗಿ ಕುಳಿತ್ತಿದ್ದ ರೇಂಜ್ ಆಫೀಸರ್ ತಮ್ಮ ಸೈಡ್ನಲ್ಲಿ ಇದ ಕನ್ನಡಿಯಲ್ಲಿ ತಮ್ಮ ಮುಖ ನೋಡಿಕೊಳುತ್ತ ಜೀಪ್ ಡ್ರೈವ್ ಮಾಡುತ್ತಾ ಇದ ಶಂಕರಪನಿಗೆ "ರೀ ಶಂಕರಪ್ಪ ಸ್ವಲ್ಪ ಹಾಗೆ ಆ ರಹಿಮನ ಮನೆ ಹತ್ತಿರ ನಡೀರಿ , ಅವನಿಗೆ ಬೇಕಾದ ಎಲ್ಲ ಅರೇಂಜ್ಮೆಂಟ್ ಮಾಡಿಕೊಳ್ಳೋಕ್ಕೆ ಹೇಳೋಣ ".

ಜೀಪ್ ಒಂದು ಸಣ್ಣ ಗುಡಿಸಲುಗಳು ಇದ ಜಾಗಕ್ಕೆ ಬಂದು ನಿಂತಿತ್ತು . ಕೆಳಗೆ ಇಳಿದ ಆಫೀಸರ್ ಒಂದು ಗುಡುಸಲಿನ ಮುಂದೆ ಬಂದು ನಿಂತ್ತರು. ಅಲ್ಲೇ ಹಾಕಿದ ಒಂದು ಬೆಂಚ್ ಕಲ್ಲಿನ ಮೇಲೆ ಕೂತ್ತಿಕೊಂಡರು.ಕಣ್ಣಿಗೆ ಹಾಕಿದ ಕೂಲಿಂಗ್ ಗ್ಲಾಸ್ ತೆಗೆಯುತ್ತ ತಲೆ ಮೇಲೆ ಎತ್ತಿ  ಶಂಕರಪ್ಪನ ಕಡೆ ನೋಡುತ್ತಾ "ರೀ ಶಂಕರಪ್ಪ ಆ ಸಾಬಿನ ಕರಿ ರೀ ಆಚೆಗೆ " , ಶಂಕರಪ್ಪ ಮನೆಯ ಬಾಗಿಲ ಹತ್ತಿರ ಹೋಗಿ "ಅಯ್ಯೋ ರಹಿಮಾ ಬಾರೋ ಹೊರಗೆ ಸಾಹೇಬರು ಬಂದವರೇ " ಅಂತ ಕೂಗಿ ಕರೆದನು. ಒಂದು ಕಬ್ಬಿಣದ ಕೊಂಡಿಯೇ ಚಿಲಕವಾಗಿದ ಮರದ ಬಾಗಿಲನ ತೆಗೆಯುತ್ತ " ಯಾರದು " ಅಂತ ಕೆಂಪು ಲುಂಗಿ , ಬಿಳಿ ಬನಿಯನ್ ದರಿಸಿದ ರಹಿಮ್ ಆಚೆ ಬಂದನು . ಬಾಗಿಲ ಬಳಿ ನಿಂತ್ತಿದ ಶಂಕರಪ್ಪನ ನೋಡಿ ನಗೆ ಬಿರಿಯುತ್ತ " ಏನ್ ಶಂಕರಪ್ಪಣ್ಣ " ಅಂತ ಮಾತು ಮುಂದುವರಿಸುವಷ್ಟ್ರಲ್ಲಿ ಶಂಕರಪ್ಪ ಕೈ ಬೆರಳನ ಸಾಹೇಬರ ಕಡೆ ತೋರಿಸುತ್ತ "ಎ ಅಲ್ಲಿ ನೋಡೋ ಸಾಹೇಬರು ಬಂದವರೇ" ಅಂತ ಹೇಳಿದನು.

ರೇಂಜ್ ಆಫೀಸರ್ನ ನೋಡಿ ಮುಗುಳ ನಗೆ ನಗುತ್ತ ರಹಿಮ "ಏನ್ ಸಾಬ್ ಹೆಂಗಿದೀರ , ನಮ್ಮದು ಅಕ್ಕ ನಿಮ್ಮದು ಹೆಂಡತಿ ಹೆಂಗಿದರೆ " , ಕೈ ಅಲ್ಲಿ ಹಿಡಿದಿದ ಕೂಲಿಂಗ್ ಗ್ಲಾಸ್ನ ಕಣ್ಣಿಗೆ ಹಾಕುತ್ತ ರಹಿಮನ ದಿಟ್ಟಿಸಿ ನೋಡುತ್ತಾ ಆಫೀಸರ್ "ಲೇ ರಹಿಮ ನಿನ್ನ ಅಕ್ಕನ ನಾನು ಯಾವಾಗ ಮದುವೆ ಆಗಿದಿನೋ , ಇದನ ನನ್ನ ಹೆಂಡತಿ ಕೇಳಿಸಿಕೊಂಡರೆ ನನ್ನ ಕತೆ ಮುಗಿತ್ತು " ಅಂತ ನಗುತ್ತ ಹೇಳಿದರು. ಇದನ ಕೇಳಿದ ಎಲ್ಲರು ಗೊಳ್ ಎಂದು ನಕ್ಕಿದರು . ರಹಿಮ ಬಲ ಕೈನ ತನ್ನ ತೊಡೆಗೆ ವರೆಸುತ್ತ " ಅರೆ ಸಾಬ್ ನಾನು ಹೇಳಿದು ಹಂಗಲ್ಲ , ನಿಮ್ಮ ಹೆಂಡತಿ ನನಗೆ ಅಕ್ಕ ಇದ ಹಾಗೆ , ಅದಕ್ಕೆ ನಾನು ನಮ್ಮದು ಅಕ್ಕ" ಅಂತ ಮಾತು ಮುಂದು ವರೆಸುವದನ ನಿಲ್ಲಿಸಿ ರೇಂಜ್ ಆಫೀಸರ್ ಕೂತ್ತಿದ ಬೆಂಚ್ ಕಲ್ಲಿನ ಕಡೆ ನಡೆಯುತ್ತಾ " ಅರೆ ಇಸ್ಕಿ ಮಾದರ್ ಚೋದ್ " ಅಂತ ಹೇಳುತ್ತಾ ಬಾಗಿ ಕಲ್ಲನ ಎತ್ತಿ ಕೊಂಡನು . ಇದನ ಗಮನಿಸಿದ ಆಫೀಸರ್ " ಲೇ ರಹಿಮ ಯಾಕೋ ಕಲ್ಲು ಎತ್ತಿ ಕೊಳುತ್ತ ಇದಿಯ" ಅಂತ ಹೇಳುತ್ತಾ ಹಿಂದಕ್ಕೆ ತಿರುಗಿ ನೋಡಿದರು , ಅಲ್ಲಿ ಒಂದು ಹಂದಿ ಏನನೋ ತಿನುತ್ತ ನಿಂತಿತ್ತು . ಮತ್ತೆ ಆಫೀಸರ್ ರಹಿಮನ ಕಡೆ ತಿರುಗಿ " ಲೇ ಸಾಬಿ ಬಿಸಕ್ಕೋ ಕಲ್ಲನ , ಅದರ ಪಾಡಿಗೆ ಅದು ಇದೆ " ಅಂತ ಆಜ್ಞಾ ಧ್ವನಿಲ್ಲಿ ಹೇಳಿದರು . ರಹಿಮ ಕೈ ಅಲ್ಲಿ ಹಿಡಿದಿದ ಕಲ್ಲನ ಬಿಸಾಕುತ್ತ " ನಿಮ್ಮಗೆ ಗೊತ್ತಿಲ ಸಾಬ್ , ನಮ್ಮ ಜಾತಿ ಅವರನ ಕಂಡರೆ ಆಗದ ಆ ಸೂರ್ಯ ನ ಕೆಲಸ ಇದು , ನಮ್ಮ ಜಾತಿ ಹಾಳು ಆಗಲ್ಲಿ ಅಂತ ಅವನೇ ಈ ಸುವರನ ಇಲ್ಲಿ ಸಾಕಿ ಕೊಂಡು ಇರೋದು " ಅಂತ ಹೇಳಿದನು . ಇದನ ಕೇಳಿದ ಆಫೀಸರ್ ಬೆಂಚ್ ಕಲ್ ಇಂದ ಮೇಲೆ ಏಳುತ್ತಾ ಕೋಪದಿಂದ  " ಲೇ ಸಾಬಿ , ಆ ಸೂರ್ಯ ಹಂದಿ ಸಾಕೊಕ್ಕೆ ಲೈಸೆನ್ಸ್ ತಗೊಂಡು ಇದ್ದಾರೆ , ಅವರ ಹೊಟ್ಟೆ ಪಾಡಿಗೆ ಅವರು ಇದನ ಸಾಕುತ್ತಾರೆ ವಿನಃ ನಿನ್ನ ಜಾತಿ ಹಾಳು ಮಾಡೋಕ್ಕೆ ಅಲ್ಲ , ಏನೋ ಅವರು ನಿನ್ನ ಪಕ್ಕದ ಮನೆಯಲ್ಲಿ ಇದ್ದಾರೆ ಅಂದ ಮಾತಿರಕ್ಕೆ ಹೀಗೆಲ್ಲ ಹೇಳೋದು ಸರಿ ಅಲ್ಲ , ಇನ್ನೊದು ಸರಿ ಈ ಜಾತಿ ಗಿತ್ತಿ ಹಾಳು ಮಾಡೋಕ್ಕೆ ಅಂದರೆ ಅಷ್ಟೇ ಜಾಡಿಸಿ ಒದಿ ಬಿಡುತ್ತೀನಿ  ಹುಷಾರು " ಅಂತ ಹೇಳುತ್ತಾ ರಹಿಮನ ಹತ್ತಿರ ಬಂದರು .ರಹಿಮನ ಕಣ್ಣು ಗಳನೆ ನೋಡುತ್ತಾ ಆಫೀಸರ್  " ಸರಿ ನೋಡು ಆ ಜೇನಿನ ಹೊಳೆ ಹತ್ತಿರ ಆನೆ ಬಂದಿದೆ ಅಂತ ನಮ್ಮಗೆ ಮೆಸೇಜ್ ಬಂದಿದೆ , ನಾವು ಇವಾಗ ಅಲ್ಲಿಗೆ ಹೊರಟ್ಟಿದಿವಿ , ನೀನು ಬೇಕಾದ ಎಲ್ಲ ಅರೇಂಜ್ಮೆಂಟ್ ಮಾಡಿಕೊಂಡು ಸ್ವಲ್ಪ ಹೊತ್ತಿನಲ್ಲೇ ರೆಡಿ ಆಗಿ ಅಲ್ಲಿಗೆ ಬಂದು ಬಿಡು , ಅಯಿತ್ತ , ಆಮೇಲೆ ಮತ್ತೆ ನೀನು ಕಾಳ ದಂದೆಗಳ್ಳಲ್ಲಿ ಇನ್ವೊಲ್ವ್ ಆಗಿದಿಯ ಅಂತ ಕಂಪ್ಲೇಂಟ್  ಬಂದಿದೆ , ಅದರ ಬಗೆ ನಿನ್ನ ಹತ್ತಿರ ಮಾತು ಆಡ ಬೇಕು , ಬೇಗ ರೆಡಿ ಆಗಿ ಬಾ " ಅಂತ ಹೇಳಿ ಜೀಪ್ ನಿಂತ ಕಡೆ ಹೆಜ್ಜೆ ಹಾಕಿದರು . ಸಾಹೇಬರು ಜೀಪಿನ ಕಡೆ ಹೋಗುತ್ತಿರುವದನ ನೋಡಿದ ಶಂಕರಪ್ಪ ಮತ್ತೆ ಇತ್ತರೆ ಕಾನ್ಸ್ಟೇಬಲ್ಗಳು ಅವರನೇ ಹಿಂಬಾಲಿಸಿದರು .

ಆಫೀಸರ್ ಮತ್ತು ಇತ್ತರರು ಜೀಪ್ ಹತ್ತಿ ಕೊಂಡರು. ಜೀಪ್ ಜೇನಿನ ಹೊಳೆ ಕಡೆ ಹೊರಟಿತ್ತು. ಜೇನಿನ ಹೊಳೆಗೆ ಹೋಗೋ ರಸ್ತೆ ಸಂಪೂರ್ಣ ಹಾಳು ಆಗಿತು. ರಸ್ತೆ ಅಲ್ಲಿ ಗುಂಡಿ ನೋ ಇಲ್ಲ ಗುಂಡಿಗಳಲ್ಲಿ ರಸ್ತೆ ನೋ ಗೊತ್ತು ಆಗುತ್ತಾ ಇರಲ್ಲಿಲ . ಶಂಕರಪ್ಪ ಜೀಪ್ನ ನಿಧಾನವಾಗಿ ಚಲಾವಣೆ ಮಾಡುತ್ತಾ ಇದ . ಲೆಫ್ಟ್ ಸೈಡ್ ನಲ್ಲಿ ಕೂತ್ತಿದ ಆಫೀಸರ್ ಕಣ್ಣು ಮುಚ್ಚಿ ತೂಕಡಿಸುತ್ತ ಇದ್ದರು . ನಿಶಬ್ದ ವಾಗಿ ಇದ್ದ ಆ ಕಾಡಿನ ಮಧ್ಯೆ ಜೀಪ್ ಸಾಗಿತು . ರಹಿಮನ ಮನೆ ಇಂದ ಜೇನಿನ ಹೊಳೆಗೆ ಸುಮ್ಮರು ನಾಲ್ಕು ಕಿಲೋಮೀಟರು ದೂರ ಇತ್ತು , ಆ ಕೆಟ್ಟ ರಸ್ತೆ ಅಲ್ಲಿ ಅಷ್ಟು ದೂರ ಹೋಗೋಕ್ಕೆ ಸುಮ್ಮಾರು ಅರ್ಧ ಗಂಟೆ ಬೇಕಿತ್ತು . ಜೀಪ್ ಒಂದು ಎರಡು ಕಿಲೋಮೀಟರು ದೂರ ಹೋಗಿತು .

ಶಂಕರಪ್ಪ ದಾರಿಲ್ಲಿ ಎಡ ಬದಿ ಅಲ್ಲಿ ನಿಂತಿದ ಒಂದು ವೈಟ್ ಇನ್ನೋವ ಕಾರ್ ನೋಡಿ " ಸರ್ ಸರ್ , ಅಲ್ಲಿ ನೋಡಿ ಯಾವುದೊ ಒಂದು ಕಾರ್ ನಿಂತಿದೆ " ಅಂತ ಮಲಗಿದ ಆಫೀಸರ್ ನ ಕೂಗಿ ಹೇಳಿದ. ಶಂಕರಪ್ಪನ ಮಾತು ಕೇಳಿ ಆಫೀಸರ್ ಕಣ್ಣು ಬಿಟ್ಟು , ಶಂಕರಪ್ಪನ ಕಡೆ ತಿರುಗಿ ನೋಡಿದರು , ಶಂಕರಪ್ಪ ಬಲ ಕೈ ಅಲ್ಲಿ ಜೀಪಿನ ಸ್ಟೇರಿಂಗ್ ಹಿಡಿದು ತನ್ನ ಎಡ ಕೈ ಅನ್ನು ಕಾರ್ ಕಡೆ ತೋರಿಸುತ್ತ "ಅಲ್ಲಿ ನೋಡಿ ಸಾರ್ ಅಂತ ಹೇಳಿದನು . ಆಫೀಸರ್ ಶಂಕರಪ್ಪ ಕೈ ತೋರಿಸಿದ ಕಡೆ ನೋಡುತ್ತಾ " ರೀ ಗಾಡಿನ ಕಾರ್ ಮುಂದೆ ನಿಲಿಸಿ " ಅಂತ ಹೇಳಿದರು . ಶಂಕರಪ್ಪ ಕಾರ್ ಗಿಂತ ಸ್ವಲ್ಪ ಮುಂದೆ ಹೋಗಿ ಜೀಪ್ ನಿಲಿಸಿದನು. ಆಫೀಸರ್ ಜೀಪಿನ ಹಿಂದೆ ಕೂತ್ತಿದ ಕಾನ್ಸ್ಟೇಬಲ್ ಗಿರಿಶನ ನೋಡುತ್ತಾ " ರೀ ಗಿರಿ ಸ್ವಲ್ಪ ಇಳಿದು ಹೋಗಿ ಆ ಕಾರ್ನಲ್ಲಿ ಯಾರದು ಇದ್ದರ ಅಂತ ನೋಡಿ" ಅಂತ ಆರ್ಡರ್ ಮಾಡಿದರು . ಜೀಪಿನ ಹಿಂದೆ ಇಂದ ಇಳಿದು ಗಿರೀಶ್ ಕಾರ್ ನಿಂತ ಕಡೆ ನಡೆದನು . ಕಾರ್ ಹತ್ತಿರ ಹೋಗಿ ಕಾರನ ಕಿಟ್ಟಕ್ಕಿ ನಲ್ಲಿ ಇಣುಕಿ ನೋಡಿದನು . ಕಾರ್ ಅಲ್ಲಿ ಯಾರು ಇರದನ ಕಂಡು ಸ್ವಲ್ಪ ಜೋರ್ ಆಗಿ ಕೂಗುತ್ತ " ಸಾರ್ ಕಾರ್ ಅಲ್ಲಿ ಯಾರು ಇಲ್ಲ " ಅಂತ ಹೇಳಿದನು. ಇದನ ಕೇಳಿದ ಆಫೀಸರ್ ಜೀಪ್ ಇಂದ ಕೆಳಗೆ ಇಳಿದು ಕಾರ್ ಇದ ಕಡೆ ಹೆಜ್ಜೆ ಹಾಕಿದ್ದರು.

ಕಾರ್  ನಿಂತ ಸ್ವಲ್ಪ ದೂರದ ಯಾವುದೊ ಒಂದು ಪೊದೆ ಇಂದ ರಕ್ತ ಸುರಿಯುತ್ತ ಇದ್ದ ಹಣೆ ಮೇಲೆ ಕೈ ಇಟ್ಟಿಕೊಂಡು ಒಬ್ಬ ಹುಡುಗ ರಸ್ತೆ ಕಡೆ ಓಡಿ ಬಂದನು. ಅವನು ಕಾರ್ ನಿಂತ ಕಡೆಗೆ ಬರ ತೊಡಗಿದನು. ಅವನನ್ನೇ ಹಿಂಬಾಲಿಸಿಕೊಂಡು ಇನ್ನು ಮೂರು ಜನ ಹುಡುಗರು ರಸ್ತೆ ಬಳಿ ಬಂದರು. ಅವರು ಕೂಡ ಕಾರ್ ನಿಂತ ಕಡೆ ಬರ ತೊಡಗಿದರು.

ಕೈ ಅಲ್ಲಿ ಲಾಟಿ ಆಡಿಸುತ್ತ ಹುಡುಗರು ಬರುವದನೆ ನೋಡುತ್ತಾ ನಿಂತರು ಆಫೀಸರ್. ಹುಡುಗರು ಏದು ಉಸಿರು ಬಿಡುತ್ತ ದನಿದವರಂತೆ ಕಾರ್ ಬಳಿ ಬಂದರು. ಖಾಕಿ ದರಿಸಿದ ಆಫೀಸರ್ನ ಕಂಡು ಭಯ ಗೊಂಡರು . ಅಪರಾದಿ ಪೋಲಿಸ್ ನವರನ ಕಂಡಾಗ ಅವನಿಗೆ ಆಗೋ ಭಯ , ನಡುಕ ಎಲ್ಲವು ಆ ಹುಡುಗರು ಕಣ್ಣಿನಲ್ಲಿ ಕಾಣುತ್ತ ಇತ್ತು.

ಕೂಲಿಂಗ್ ಗ್ಲಾಸ್ ಕೆಳೆಗೆ ಇಳಿಸುತ್ತಾ ಆಫೀಸರ್ " ಏ ಯಾರೋ ನೀವು , ಏನೋ ನಿನ್ನ ಹಣೆಗೆ ಗಾಯ ಆಗಿದೆ " ಅಂತ ಗಾಯ ಗೊಂಡ ಹುಡುಗನ ನೋಡುತ್ತಾ ಕೇಳಿದರು . " ಸಾರ್ ನಾವು ... B K ಇಂಜಿನಿಯರಿಂಗ್ ಕಾಲೇಜ್ ಸ್ಟೂಡೆಂಟ್ಸ್ , ಸುಮ್ಮನೆ ಹೀಗೆ ಟ್ರಿಪ್ ಬಂದಿದಿವ್ , ಕಾಡು ಒಳ್ಳಗೆ ಹೋಗಿದಾಗ ಯಾವುದೊ ಸರ್ಪ ಬಂತು ಸಾರ್ , ಅದನ ನೋಡಿ ಭಯ ಆಗಿ ಓಡಿ ಬರುವಾಗ ಕೆಳಗೆ ಬಿದ್ದು ಅವನಿಗೆ ಗಾಯ ಆಯಿತು ಸಾರ್ " ಅಂತ ತಲೆ ಬಾಗಿಸಿ ನೆಲ ನೋಡುತ್ತಾ ಹೇಳಿದ ಒಬ್ಬ ಹುಡುಗ. ಗಿರೀಶನ ಕಡೆ ತಿರುಗಿ " ಗಿರಿ, ನೋಡ್ ರೀ ಈ ಹುಡುಗರನೆಲ್ಲ ಕರೆದು ಕೊಂಡು ಸ್ಟೇಷನ್ಗೆ ಹೋಗಿ , ನಾನು ಬರುವವರೆಗೂ ಇವರನ ಬಿಡ ಬೇಡಿ , ಹಾಗೆ ದಾರಿ ಮಧ್ಯ ಆ ಹುಡುಗನಿಗೆ ಟಿನ್ಚೆರ್ ಹಾಕಿಸಿಕೊಂಡು ಹೋಗಿ ಆಯ್ತಾ " ಅಂತ ಹೇಳಿ ಎರಡು ಹೆಜ್ಜೆ ಮುಂದೆ ಇಟ್ಟರು. ಮತ್ತೆ ಹಿಂದಕ್ಕೆ ತಿರುಗಿ ಒಬ್ಬ ಹುಡುಗನ ನೋಡುತ್ತಾ " ಏ ನೀನು ಗೆಣಿಕೊಪ್ಪಲಿನ ಛೇರ್ಮನ್ ಮಗ ಅಲ್ಲವೇನೋ " , " ಹೌದು ಸಾರ್ " ಅಂತ ಹುಡುಗ ಹೇಳಿದ .

ಆಫೀಸರ್ ಜೀಪ್ ಹತ್ತಿರಕ್ಕೆ ನಡೆದರೂ. ಗಿರೀಶ್ ಬಿಟ್ಟು ಶಂಕರಪ್ಪ ಮತು ಇನ್ನು ಒಬ್ಬ ಕಾನ್ಸ್ಟೇಬಲ್ ಜೀಪ್ ಹತ್ತಿರಕ್ಕೆ ಹೋದರು . ಸಾಹೇಬರು ಮತು ಇತ್ತರರು ಜೀಪ್ ಹತ್ತಿ ಹೊರಟ್ಟರು.

ಜೀಪ್ ಸ್ವಲ್ಪ ದೂರ ಆ ನಿಶಬ್ದದ ಕಾಡಿನ ಮಧ್ಯ ಚಲಿಸುತ್ತ ಇತ್ತು . ಆಫೀಸರ್ ಕೂತಿದ ಸೈಡ್ ನ ಕಿಟ್ಟಕಿ ಇಂದ ತಲೆ ಆಚೆ ಹಾಕಿ ಆಕಾಶವನ ನೋಡಿದರು . ಆಕಾಶದಲ್ಲಿ ಯಾವುದೊ ಪೋದ್ದೆಗಳ ಮೇಲೆ ಎತ್ತರದಲ್ಲಿ ಹದ್ದುಗಳು ಹಾರಾಡುತ್ತ ಇದ್ದವು .  " ರೀ ಶಂಕರಪ್ಪ ಜೀಪ್ ಸೈಡ್ ಗೆ ಹಾಕಿ , ಅಲ್ಲಿ ನೋಡಿ ಅಷ್ಟೊಂದು ಹದ್ದುಗಳು ಹಾರಾಡುತ್ತ ಇದೆ " ಅಂತ ಅದರತ್ತ  ಕೈ ತೋರಿಸುತ್ತ ಹೇಳಿದರು. ಶಂಕರಪ್ಪ ಜೀಪ್ ನಿಲಿಸಿದರು. ಎಲ್ಲರು ಜೀಪ್ ಇಂದ ಕೆಳಗೆ ಇಳಿದರು .

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.