ನಮ್ಮಿಬ್ಬರ ಹಾದಿ ಒಂದಲ್ಲ
ಮುಂದೆಂದೂ ಒಂದಾಗೋಲ್ಲ
ನನ್ನ ಬಾಳ ಪಯಣ ಅವನೊಂದಿಗಿಲ್ಲ
ಆದರೂ,
ಹೃದಯ ಕದ್ದಿಹನಲ್ಲ....
ಅವ ಹಾರುವ ಹಕ್ಕಿ
ನಾ ಈಜುವ ಮೀನು
ಅವ ಸಾಗುವ ಮೋಡ
ನಾ ಕದಲದ ಬೆಟ್ಟ
ಮಿಲನ ಸಾಧ್ಯವಿಲ್ಲ
ಆದರೂ,
ಮನಸು ಕೊಟ್ಟಿಹೆನಲ್ಲ......
ಭರವಸೆಯ ಹೊದಿಕೆ ಹೊದ್ದು
ಮಿಲನಕೆ ಕಾತುರದಿ ಕಾದು
ಕನಸ ಕಂಡಿಹೆನಲ್ಲ
ಆದರೂ,
ನನಗೆ ತಿಳಿದಿದೆಯಲ್ಲ..
ಅವ ನನ್ನವಲ್ಲ......
ಶಮಿತಾ
- Log in or register to post comments
- 213 ಹಿಟ್ಸ್
Printer-friendly version