ಆಕೆ ...!

4.5

ಆಕೆ ಒಲೆಯೂದಿದಳು,
ಕೆಮ್ಮಿದಳು ಆ ದಟ್ಟ ಹೊಗೆಗೆ ..
ಮುಖದ ತುಂಬಾ ಬೆವರು ..
ಒಲಿಯಲಿಲ್ಲ ಅಗ್ನಿದೇವ !!

ತಲೆಯ ತುಂಬಾ ಒಲೆಯ ಬೂದಿ ,
ಮುಖದ ತುಂಬ ದಣಿವು ..
ಮತ್ತೆ ಮರಳಿ ಯತ್ನ ..
ಒಲಿಯಲಿಲ್ಲ ಅಗ್ನಿದೇವ ..!!

ಮತ್ತೆ ಬಿಡದ ಯತ್ನ ..
ಮರಳಿ ಮರಳಿ ಯತ್ನ ...
ಸೋತ ಆಕೆಯ ಮುಖನೋಡಿ ,
ಕೊನೆಗೂ ಒಲಿದ ಅಗ್ನಿದೇವ ..!!

ಹೋರಗೊಡಿದಳವಳು,
ಸುಡುವ ಚಹಾ ಕೈಯಲ್ಲಿ ..
ಮುಖದಲ್ಲಿಲ್ಲ ದಣಿವು ..!!
ಬದಲಿಗೀಗ ಮಧುರ ಮಂದಹಾಸ !!?

ಆಗ ತಿಳಿಯಿತು ಗೆಳತಿ ,
"ತವರು " ಎಂದರೇನೆಂದು ,
ಹೊರಗೆ ಬಂದಿದ್ದವ ನನ್ನ ತಾಯಿಯಣ್ಣ,
ಮರೆಯದಿರು ನೀನೂ ನಿನ್ನ ತವರ !!!

                     -ದೇವೇಂದ್ರ ಭಾಗ್ವತ್

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (8 votes)
To prevent automated spam submissions leave this field empty.