ಅರಿವು ಶಾಲೆ ಮೈಸೂರು ‍ ಶಿಕ್ಷಕರು ಬೇಕು

1

ಅರಿವು ಶಾಲೆ ಮೈಸೂರಿನ ಒಂದು ವಿಶಿಷ್ಟ ಶಾಲೆ. ಪರಿಪೂರ್ಣ ಶಿಕ್ಷಣ ಹಾಗೂ ಎಲ್ಲರಿಗೂ ನಲಿವಿನ ಕಲಿಕೆ ಎಂಬ ಆಶಯದೊಂದಿಗೆ ಈ ಶಾಲೆಯನ್ನು ಆರಂಭಿಸಲಾಗಿದೆ. ಈಗ್ಗೆ ನಾಲ್ಕು ವರ್ಷಗಳಿಂದ ಈ ಶಾಲೆ ಕಾರ್ಯ ನಿರ್ವಹಿಸುತ್ತಿದ್ದು ಒಳ್ಳೆಯ ಪ್ರಾಥಮಿಕ ಶಿಕ್ಷಣ ಕನ್ನಡದಲ್ಲೇ ಇರಬೇಕೆಂಬ ವೈಜ್ಞಾನಿಕ ತಳಹದಿಯ ಮೇಲೆ ಚಟುವಟಿಕೆ ಆಧಾರಿತ, ಮಕ್ಕಳ ನಲಿವು, ಕ್ರಿಯಾಶೀಲತೆಗಳನ್ನು ಉದ್ದೀಪಿಸುವ ಶಿಕ್ಷಣ ನೀಡಲು ಶ್ರಮಿಸುತ್ತಿದೆ.

ಮುಂದಿನ ವರ್ಷ 5 ನೇ ತರಗತಿ ಆರಂಭವಾಗಲಿದೆ. ಶಾಲೆಗೆ ಇನ್ನೂ 3 ಶಿಕ್ಷಕ/ಶಿಕ್ಷಕಿಯರ ಅಗತ್ಯವಿದೆ. ಅರಿವು ನಂಬಿಕೆಗಳಿಗೆ ಹೊಂದುವ, ನಮ್ಮ ಕನಸಿನ ಮುಂದಿನ ಜನಾಂಗಕ್ಕೆ ಮೆಟ್ಟಿಲಾಗುವಂತಹವರು ಬೇಕಾಗಿದ್ದಾರೆ. ಕಲಿಯುವ ಹಾಗೂ ಕಲಿಸುವ ಆಸಕ್ತಿ ಇರುವ, ಶಿಕ್ಷೆ, ಪರೀಕ್ಷೆ, ಪಠ್ಯ ಪುಸ್ತಕ ಇವುಗಳ ಹೊರತಾಗಿ ಕಲಿಕೆಯನ್ನು ನೋಡುವ ಮನಸ್ಥಿತಿಯ - ಶಿಕ್ಷಣದಲ್ಲಿ ಆಸಕ್ತಿ, ಜ್ಞಾನದ ಹರಹು ಚೆನ್ನಾಗಿ ಇರುವವರು ನಮ್ಮೊಡನೆ ತೊಡಗಿಸಿಕೊಳ್ಳಲು ಬೇಕಾಗಿದ್ದಾರೆ. ನಿಮಗೆ ಪರಿಚಯಸ್ಥರು ಯಾರಾದರೂ ಇದ್ದಲ್ಲಿ ತಿಳಿಸಿ.

ನಮ್ಮ ವೆಬ್ ವಿಳಾಸ: http://arivu.org/

ನಮ್ಮ ಸಂಪರ್ಕ : http://arivu.org/contact-us/

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category):