ಅಮ್ಮ....

4.5

              ಅಮ್ಮ....
ಅಪರಿಮಿತ ವಾತ್ಸಲ್ಯವನು ಪ್ರತಿಫಲಾಪೇಕ್ಷೆಯಿಲ್ಲದೆ ಸು— 
ಮ್ಮನೆ ಉಪೇಕ್ಷಿಸದೆ ಕರುಳ ಕುಡಿಗೆ ಅನುಕ್ಷಣವು ನೀಡುವಳು ಅಮ್ಮ
ತಾಳ್ಮೆ ಯಲಿ ನೋವನ್ನು ನಗುತಲಿ ತಳ್ಳಿ ಹಾ—-
ಯಿಸುವಳು ನಲಿವನು ಕೂಸಿಗೆ ತುಸು ಕಾಯಿಸದೆ ತಾಯಿ... ಜನನದಿಂದಲು ಜತನದಿ ಮಗುವಿನ 
ನಗುವನು ನಿದಿರೆಯಲು ಕದಲಿಸದೆ
ನಿಲಿಸುವಳು ಅವನಿ (ಭೂಮಿ)ಗೂ ಮಿಗಿಲಾದ ಜನನಿ....
ಮಾತಿಲ್ಲದೆ ಮೌನದಲಿ ಮಣ ಭರಿತ ಮಮ—-
ತೆಯನು ಮಕ್ಕಳಿಗೆ ಸ್ಫುರಿಸುವ ಕರುಣಾಮಯಿ ಮಾತೆ ....
ಮಗುವಿನ ಮೊಗದಲ್ಲಿ ಸದಾ ನಗುವನ್ನು ಬಯಸುವಳು ...
ಕಂದನ ಪುಟ್ಟ ಕಣ್ಣ ಬೆಳಕಲ್ಲಿ ಜಗವನ್ನು ನೋಡುವಳು ...
ಮಕ್ಕಳ ಸಾಧನೆಯಲ್ಲಿ ತನ್ನ ವೇದನೆಯನ್ನು ಮರೆಯುವಳು ...
ಸ್ವಾರ್ಥರಹಿತ ಪ್ರೀತಿಯ ಅರ್ಥಗರ್ಭಿತೆ...
ಕಣ್ಣಿಗೆ ಕಾಣುವ ಕೈಗೆ ನಿಲುಕುವ ಪ್ರತ್ಯಕ್ಷ ದೇವತೆ...
ಪ್ರತಿ ದಿನವು ಅಮ್ಮನ ದಿನದ ಆದರಣೀಯ ವಂದಿತೆ.
 
——-Rukku 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.