ಅಮ್ಮ

5

ಅಮ್ಮ ಎಂಬುದ ನಾ ಮರೆತರೆ

ನನ್ನೇ ಮರೆತಂತೆ

ಅಮ್ಮ ನಿನ್ನ ನಾ ತೊರೆದರೆ

ನನ್ನುಸಿರೇ ಹೋದಂತೆ ||

 

ಅಮ್ಮ ನಿನ್ನ ಮಡಿಲಲ್ಲಿ

ಮಲಗಿದ್ದ ಕೂಸು ನಾನಮ್ಮ‌

ನಿನ್ನ ಬಿಟ್ಟು ಬೇರೆ ಜಗವ‌

ಅರಿಯದಿದ್ದ ಕೂಸು ನಾನಮ್ಮ‌ ||

 

ಅಮ್ಮ ನಿನ್ನ ತೆಕ್ಕೆಯಲಿ

ಪುಟ್ಟ ಕಂದನು ನಾನಮ್ಮ‌

ಅಮ್ಮ ನಿನ್ನ ಅಕ್ಕರೆಯಲ್ಲಿ

ಬೆಲ್ಲ ಸಕ್ಕರೆ ನಾನಮ್ಮ‌ ||

 

ಅಮ್ಮ ನಿನ್ನ ಕೈಯತುತ್ತು

ಬೆಳದಿಂಗಳ ಇರುಳ ನೆನೆಸುತಿತ್ತು

ಅಮ್ಮ ನಿನ್ನ ಒಂದೆ ಮುತ್ತು

ಸಗ್ಗವನ್ನೇ ತೋರುತಿತ್ತು ||

 

ದೂರದ ಬಾನಿನ ಚುಕ್ಕಿಗಳ‌

ತೋರಿಸಿ ನನ್ನ ನಗಿಸಿದ್ದೆ

ಹಾರುವ ಹಕ್ಕಿಯ ಗುಂಪನ್ನು

ಕರೆದು ನನ್ನೊಡನಾಡಿಸಿದ್ದೆ ||

 

ಅಮ್ಮ ನನ್ನ ನಗುವಿಗಾಗಿ

ನೀನೆಷ್ಟು ಅತ್ತೆ ಎಂಬುದ‌

ಎಲ್ಲಾದರೂ ಲೆಕ್ಕದಲ್ಲಿ

ಇಡಲಾಗುವುದೆ ಹೇಳಮ್ಮ‌ ||

 

ಅಮ್ಮ ನೀನೀಗ ಅತ್ತರೆ

ನನ್ನ ಕಣ್ಣು ತುಂಬುವುದು 

ಅಮ್ಮ ನೀನು ನಕ್ಕರೆ

ನನ್ನ ಕಣ್ಣು ಹೊಳೆಯುವುದು ||

 

ದೇವರೆ ಬಂದು ಇಲ್ಲೀಗೆ 

ವರಗಳ ಕೊಡುವೇನೆಂದಾರು..

ನೀನೇ ಜೊತೆಯಲ್ಲಿರುವಾಗ‌

ಬೇರೇನ ಕೇಳಾಲಿ....||

 

ಅಮ್ಮ ನನ್ನ ಬದುಕಿನಲಿ

ನೀನೆ ದೊಡ್ಡ ದೇವರು

ನಿನ್ನ ಬಿಟ್ಟು ಅಲ್ಲಿಯಾರೂ

ಸು ಳಿ ದಾ ಡ ಲಾ ರಾ ರು ||

 

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.