ಅಮ್ಮ

2
 
ಅಮ್ಮ ನೀನು ಒಂದು ದೀಪ......
ತಾನೆ ಉರಿದು ಜೀವನಕ್ಕೆ ಬೆಳಕು ಕೊಡವ ಹಾಗೆ.

ನಮಗೆ ನೀನು ದೇವರು ಕೊಟ್ಟ ದೊಡ್ಡ ಕೊಡುಗೆ.

ಅಮ್ಮ ನೀನು  ಕರುಣಾಮಯೀ......

ನೋವು ನಿದ್ದೆ ಮರೆತು, ಒಂಬತ್ತು ತಿಂಗಳು ಹೊತ್ತು.
ಆರಂಬದಿಂದಲೂ ಕೊನೆಯವರೆಗೂ ನಮ್ಮನ್ನು ನೋಡಿಕೊಳ್ಳುವ ಮುತ್ತು.

ಅಮ್ಮ ನೀನು ಮೊದಲ ಗುರು......

ಸರಿ ತಪ್ಪು ತಿದ್ದಿ, ನಗು ಅಳು ಅರ್ಥಮಾಡಿಸಿ.

ಕಲಿಸುವೆ ನಮಗೆ ಪ್ರೀತಿ ಪ್ರೇಮ ಅಕ್ಕರೆಯ ಬೆರಿಸಿ.
 
ಅಮ್ಮ ನೀನು ದಯಾಮಯೀ.....
ನಮಗೋಸ್ಕರ ಹರಿಸುವೆ ಪ್ರೋತ್ಸಾಹದ ಮಹಾಪೂರ.
ನೀನು ಮಾಡುವ ತ್ಯಾಗ ನಿಜವಾಗಿಯೂ ಅಮರ.

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಮಾತೆಯ ಬಗ್ಗೆ ಬರೆದ ನಿಮ್ಮ ಪುಟ್ಟ ಬರಹ ಚೆನ್ನಾಗಿದೆ... ಮಾತೆಗೆ -ಅವರ ಕರುಣೆ-ಪ್ರೀತಿ - ಮಮಕಾರ - ತಾಳ್ಮೆ -ಕಾಳಜಿ ಆರೈಕೆಗೆ ಸಾಟಿಯಿಲ್ಲ... ಜಗದ ಸಮಸ್ತ ಮಾತೆಯರೆಲ್ಲರಿಗೆ ಶುಭವಾಗಲೆಂದು ಹಾರೈಸುವೆ.. ಶುಭವಾಗಲಿ.. \|/