ಅಮರ ಪ್ರೇಮಕ್ಕೆ ಪ್ರೀತಿಯ ಸಾಕ್ಷಿ

0

ಪ್ರೀತಿಗೆ ಶಾಶ್ವತ ಸಾಕ್ಷಿ. ಪ್ರೇಮಿಗಳಿಗೆ ಸದಾ ಸ್ಪೂರ್ತಿ. ಅದು ತಾಜ್ ಮಹಲ್. ಪತ್ನಿ ಮುಮ್ ತಾಜ್ ಗೋಸ್ಕರ್ ಶಹಜಾನ್ ಕಟ್ಟಿಸಿದ ಪ್ರೇಮ ಮಂದಿರವದು. ಆದ್ರೆ, ಮೋಸ್ಟ್ಲಿ ಸ್ವತ:ಶಹ ಜಹಾನ್ ಗೂ ಗೊತ್ತಿರಲಿಕಿಲ್ಲ. ಒಂದು ದಿನ ಇದು ಪ್ರೇಮಿಗಳೆಲ್ಲ ಆರಾಧಿಸೋ ಒಂದು ಅಮರ ಸ್ಥಳ ಆಗುತ್ತೇ ಅಂತ. ಅದು ಆಗಿದೆ. ಅದೆಷ್ಟೋ ಹೃದಯದಲ್ಲಿ ತಾಜ್ ಮಹಲ್ ಪ್ರೇಮದ ಸಂಕೇತವಾಗಿ ಉಳಿದಿದೆ. ಮೊಘಲ್  ಸಾಮ್ರಜ್ಯದ ಕೊನೆಯ ರಾಜಾ ಬಹದೂರ ಷಾ ಜಾಫರ್-2 ನ ಗ್ರೇಟ್ ಗ್ರ್ಯಾಂಡ್ ಡಾಟರ್ (ಮರಿಮೊಮ್ಮಗಳು) ಬೇಗಮ್ ಫಕ್ರ ಸುಲ್ತಾನಾಳಿಗೂ ಅವಳ ಪತಿ ಶರೀಫ್ ಒಂದು ಮಹಲ್ ಕಟ್ಟಿಸಿದ್ದಾರೆ. ಅದು ಇದೇ ತಾಜ್ ಮಹಲ್ ನ್ನೇ ಹೋಲುತ್ತದೆ..

ತಾಜ್ ಮಹಲ್ ಪ್ರತಿರೂಪವೇ ಆಗಿರೋ ಆ ಗೋರಿ ಎಲ್ಲಿದೆ ಅನ್ನೋ ಕುತೂಹಲ ಈಗಾಗಲೇ ಹುಟ್ಟಿರಬೇಕು. ಹಾಗೆ ಆ ಒಂದು ಸೆಳೆತದಿಂದ ಹೊರಟರೆ, ಅದು ನಮ್ಮ ಕರ್ನಾಟದ ಬೆಂಗಳೂರಿಗೆ ಕರೆತಂದು ನಿಲ್ಲಿಸುತ್ತದೆ. ರಾಜಾಧಾನಿ ಬೆಂಗಳೂರಿನ ಬನ್ನೇರುಘಟ್ಟ ಉದ್ಯಾನವನದ ರಸ್ತೆಯ ಬಳಿಯ ಬಿಲ್ವಾರ್ದಹಳ್ಳಿಯ  ಸುಂದರ ಪ್ರೇಮ ಸೌದದ ಪರಿಚಯ ಮಾಡಿಸುತ್ತದೆ.

ಪ್ರೇಮವೇ ಹಾಗೋ. ಪತ್ನಿ ನೆನಪು ಎಂದೂ ಸಾಯೋದಿಲ್ಲವೋ. ಇದನ್ನ ಹೇಳೋದು ಕಷ್ಟ. 92 ವರ್ಷದ ಶರೀಫ್ ಅವ್ರು ಸುಮಾರು 8 ಎಕರೆ ಭೂಮಿಯಲ್ಲಿ ಪತ್ನಿ ಬೇಗಮ್ ಫಕ್ರ ಅವ್ರ ನೆನಪನ್ನ ಹಾಗೆ ಉಳಿಸಿಕೊಂಡಿದ್ದಾರೆ. ಬೇಗ ಸತ್ತು ಈಗ ಬಹಳ ವರ್ಷವೇ ಕಳೆದಿವೆ. ಅವರನ್ನ ಈ 8 ಎಕರೆ ಭೂಮಿಯ ಒಂದು ಜಾಗದಲ್ಲಿ ದಫನ್ ಮಾಡಿದ್ದಾರೆ. ಅದರ ಮೇಲೆ  ತಾಜ್ ಮಹಲ್ ಪ್ರತಿರೂಪವಿದೆ. ಪತ್ನಿ ಗೋರಿಯ ಪಕ್ಕವೇ ತಮಗೂ ಜಾಗವನ್ನ  ಖಾಲಿ ಬಿಟ್ಟಿದ್ದಾರೆ. ಇದುವೇ ಅಲ್ಲವೇ ಪ್ರೀತಿ ಪರಿ...

ಇಷ್ಟೇ ಆಗಿದ್ದರೇ ಪ್ರೀತಿಯಲ್ಲಿ ಸ್ವಾರ್ಥವೇ ಜಾಸ್ತಿ ಅನಿಸುತ್ತಿತ್ತು. ಶರೀಫ್ ಸಾಯೇಬರು ತಮ್ಮ ಪತ್ನಿಗಾಗಿ ಕಟ್ಟಿದ ತಾಜ್ ಮಹಲ್ ಸುತ್ತ ಮ್ಯೂಜಿಯಮ್ ಇದೆ. ಮಕ್ಕಳು ಓದಲಿಕ್ಕೆ ಸ್ಕೂಲ್ ಕೂಡ ಕಟ್ಟಲಾಗಿದೆ. ನಮಾಜ್ ಮಾಡೋವರಿಗೆ ಇದು ಸೂಕ್ತ ಮತ್ತು ಆಪ್ತ ಸ್ಥಳ. ದೆಹಲಿಯ ಕೆಂಪು ಕೋಟೆ ನೋಡದೇ ಇರೋರೂ ಇಲ್ಲಿ ಆ ಅನುಭವ ಪಡೆಯಬಹುದು.

ತಾಜ್ ಮಹಲ್ ಹಾಗೂ ಕೆಂಪು ಕೋಟೆ ಒಂದೇ ಕಡೆ ಇರೋದು ಏಕೆ ಎಂಬ ಪ್ರಶ್ನೆ ಸಹಜ. ಇದರ ಹಿಂದೇನೂ ಕತೆ ಇದೆ. ಅದೇ ಶರೀಫ್ ಪತ್ನಿ ಕತೆ ಅದು. ಬಾಲ್ಯದಲ್ಲಿ ದೆಹಲಿಯಲ್ಲಿ ಬೆಳೆದವ್ರು  ಶರೀಫ್ ಪತ್ನಿ. ಕೆಂಪು ಕೋಟೆ ಬಳಿಯೇ ಬಾಲ್ಯದ ದಿನಗಳಲ್ಲಿ ಆಡಿದವ್ರು. ಹಾಗೇನೆ ಪುಟ್ಟ ಫಕ್ರ ಅವ್ರಿಗೆ ಆಗಲೇ ತಾಜ್ ಮಹಲ್ ಅಂದ್ರೆ ತುಂಬಾ ಇಷ್ಟೆ. ಆ ಇಚ್ಚೇಗಳನ್ನೇ ಶರೀಫ್ ಪೂರ್ಣಗೊಳಿಸುತ್ತಿದ್ದಾರೆ. ಸದ್ಯ ತಾಜ್ ಮಹಲ್ ಪ್ರತಿರೂಪ ರೆಡಿಯಾಗಿದೆ. ಕೆಂಪು ಕೋಟೆ ಸಿದ್ದಗೊಳ್ಳುತ್ತಿದೆ.

ಈಗ ಕನ್ನಡದ ಹೊಸಬರ `ಲೂಸ್ ಗಳು '  ಚಿತ್ರವೂ ಇಲ್ಲಿಯೇ ಚಿತ್ರೀಕರಣಗೊಂಡಿದೆ. ಈ ಜಾಗದಲ್ಲಿ ಶೂಟ್ ಆದ ಮೊದಲ ಚಿತ್ರೂ ಇದಾಗಿದೆ. ಒಲವೇ ಮಂದಾರ ಚಿತ್ರದ ನಾಯಕ ಶ್ರೀಕಾಂತ್, ಡೈರೆಕ್ಟರ್ ಓಂ ಪ್ರಕಾಶ್ ರಾವ್ ಪುತ್ರಿ ಶ್ರಾವ್ಯ ಅಭಿನಯದ ಈ ಚಿತ್ರದಲ್ಲಿ ಇನ್ನು ಎರಡು ಜೋಡಿಗಳಿವೆ. ಆದ್ರೆ, ಈ ಜೋಡಿಯ ಒಂದು ಹಾಡನ್ನ ಇಲ್ಲಿಯೇ ಚಿತ್ರೀಕರಿಸಲಾಗಿದೆ. ಯಾಕೆಂದ್ರೆ, ಹುಡುಗಿ ಮುಸ್ಲಿಂ. ಹುಡುಗ ಹಿಂದು. ಇವರ ಮಧ್ಯೆ ಪ್ರೀತಿಗೆ ಸಾಕ್ಷಿಯಾಗೋದು ಇದೇ ಸ್ಥಳ. ಅದಕ್ಕೇನೆ ಇಲ್ಲಿ ಈಗಾಗಲೇ ಮಾತಿನಭಾಗದ ಶೂಟಿಂಗ್ ಆಗಿದೆ. ಹರಿಕೃಷ್ಣ ಅವರ ಪತ್ನಿ ವಾಣಿ ಹರಿಕೃಷ್ಣ ಸಂಗೀತದಲ್ಲಿ ಬಂದ `ಶಬ್ಬಾ ಕೇರ್' ಹಾಡಿನ ಚಿತ್ರೀಕರಣ ಇಲ್ಲಿಯೇ ನಡೆದಿದೆ. ರಿಯಲ್ ಲೈಫ್ ನ ಪ್ರೇಮಿಗಳು ಹಾಗೂ ನೃತ್ಯ ನಿರ್ದೇಶಕರಾದ ಮದನ್-ಹರಿಣಿಯವ್ರೇ ಈ ಗೀತೆಗೆ ಅಮರ ಪ್ರೇಮದ ರೂಪಕೊಟ್ಟಿದ್ದಾರೆ. ಯುವ ನಿರ್ದೇಶಕ ಅರುಣ್ ಕನಸಿನ ಈ ಲೂಸ್ ಗಳು ಸಿನಿಮಾದಲ್ಲಿ ಇನ್ನೂ ಅನೇಕ ಪ್ರಯೋಗಳು ಇವೆ. ಆದ್ರೆ, ಈ ಹಾಡು ಮಾತ್ರ ವಿಶೇಷವಾದ, ಸ್ಪೂರ್ತಿದಾಯಕವಾದ ಹಾಡು..

-ರೇವನ್ ಪಿ.ಜೇವೂರ್

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.