ಅನುದಾನ ರಹಿತ ಶಾಲೆಗಳ "ಶುಲ್ಕ ನೀತಿ" ಕರಡು ರದ್ದು ಪಡಿಸಲು ಎಸ್.ಎಫ್.ಐ ಒತ್ತಾಯ.

5

ಅನುದಾನ ರಹಿತ ಖಾಸಗಿ ಶಾಲೆಗಳನ್ನು ನಿಯಂತ್ರಿಸಿವ ಹೆಸರಲ್ಲಿ ರಾಜ್ಯ ಸರಕಾರ ಶಿಕ್ಷಣದ ಖಾಸಗೀಕರಣವನ್ನು ಕಡ್ಡಾಯ ಮಾಡಲು ಹೋರಟಿದೆ ಎಂದು ಎಸ್.ಎಫ್.ಐ ಆರೋಪಿಸಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಕರಡು ವರದಿ ಪಾಲಕರಿಗೆ ಹೆಚ್ಚಿನ ಹಣದ ಹೊರೆಯನ್ನು ಹಾಕಿದೆ. ಪಾಲಕರ ಮತ್ತು ವಿದ್ಯಾರ್ಥಿ ಸಂಘಟನೆಗಳ ಅಭಿಪ್ರಾಯ ಮತ್ತು ಸಲಹೆಗಳನ್ನು ಪಡೆದು ಶುಲ್ಕ ನಿಗದಿಗೆ ಮುಂದಾಗಬೇಕು ಎಂದು ಹೈ ಕೋರ್ಟ್ ಸರಕಾರಕ್ಕೆ ನಿರ್ದೇಶನ ನೀಡಿತ್ತು. ಆದರೆ ಆಯುಕ್ತರು ಹೈಕೋರ್ಟನ ಆದೇಶವನ್ನು ಉಲ್ಲಂಘಿಸಿ ಪಾಲಕರು ಮತ್ತು ವಿದ್ಯಾರ್ಥಿ ಸಂಘಟನೆಗಳನ್ನು ಈ ಸಮಿತಿಯಿಂದ ದೂರ ಮಾಡಿದ್ದಾರೆ. ಇದು ಸಂವಿಧಾನಕ್ಕೆ ಏಸಗಿದ ಅಪಮಾನವಾಗಿದೆ.

ಸಮಿತಿಯಲ್ಲಿರು ಬಹುತೇಕರು ನಿವೃತ್ತ ಅಧಿಕಾರಿಗಳಿದ್ದಾರೆ. ಇವರು ತಮ್ಮ ಅಧಿಕಾರಾವಧಿಯಲ್ಲಿ ಖಾಸಗಿ ಶಾಲೆಗಳಲ್ಲಿನ ವಂತಿಗೆ ಹಾವಳಿಯನ್ನು ನಿಯಂತ್ರಿಸಿದ ಉದಾಹರಣೆಗಳಿಲ್ಲ. ಇಗಲೂ ಇವರು ಖಾಸಗಿ ಶಾಲೆಗಳ ಮೇಲಿನ ಪ್ರತಿಯಿಂದಲೇ ವ್ಯಾಪಕ ಲೂಟಿಗೆ ಕರಡಿನಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ. ಶಾಲಾ ಶುಲ್ಕ, ಅಭಿವೃದ್ಧಿ ಶುಲ್ಕ, ಬೋಧಕೇತರ ಶುಲ್ಕವೆಂದು ಮೂರು ವಿಧಗಳಲ್ಲಿ ಶುಲ್ಕವನ್ನು ಪಡೆಯಲು ಹೇಳಲಾಗಿದೆ. ಮಹಾನಗರ, ಜಿಲ್ಲೆ, ತಾಲ್ಲೂಕ, ಗ್ರಾಮೀಣ ಪ್ರದೇಶವೆಂದು ಶಾಲಾ ಶುಲ್ಕವನ್ನು ವಿಂಗಂಡಿಸಿ ಹಂಚಲಾಗಿದೆ. ಶಿಕ್ಷಕರ ವೇತನದಲ್ಲಿ ತಾರತಮ್ಯ ನೀತಿ ಅನುಸರಿಸಲಾಗಿದೆ.

ಅಭಿವೃದ್ದ ಶುಲ್ಕವನ್ನು ಪಡೆಯುವುದಕ್ಕಾಗಿ ಖಾಸಗಿ ಶಾಲೆಗಳನ್ನು ಸೌಲಭ್ಯಗಳ ಆಧಾರದಲ್ಲಿ ಎ.ಬಿ.ಸಿ.ಡಿ.ಇ ಎಂದು ವಿಂಗಂಡಿಸಿ 1500 ರೂ 10.000 ರೂ ವರೆಗೂ ಅಭಿವೃದ್ಧಿ ಶುಲ್ಕ ಪಡೆಯಲು ಅವಕಾಶ ನೀಡಲಾಗಿದೆ. ಶ್ರೇಷ್ಟ ಶಾಲಾ 10,000 ರೂ ಕನಿಷ್ಟ ಶಾಲೆ 1500 ರೂ ಪಡೆಯಲು ಸೂಚಿಸಲಾಗಿದೆ. ಮಗುವಿಗೆ ಶ್ರೇಷ್ಟ ಕನಿಷ್ಟವೆಂಬ ಕಲ್ಪನೆಯನ್ನು ಬಿತ್ತಲು ರಾಜ್ಯ ಸರಕಾರ ಮುಂದಾಗಿದೆ.ಕನಿಷ್ಟ ಮೂಲಭೂತ ಸೌಲಭ್ಯ ಇಲ್ಲದ ಸರಕಾರಿ ಶಾಲೆಗಳನ್ನು ಮುಚ್ಚುವ ಸರಕಾರ , ಖಾಸಗಿ ಶಾಲೆಯಲ್ಲಿ ಸೌಲಭ್ಯ ವಿಲ್ಲದಿದ್ದರು 1500 ರೂ ನೀಡಿ ಎಂದು ತನ್ನ ಖಾಸಗಿ ಶಾಲೆಗಳ ಮೇಲಿನ ಪ್ರೀತಿಯನ್ನು ಎತ್ತಿ ತೋರಿಸಿದೆ.

ಈಗಾಗಲೆ ಹೆಚ್ಚಿನ ಹೊರೆಯ ಮೂಲಕ ಪಾಲಕರಿಂದ ಮನಸೋ ಇಚ್ಚೆ ಹಣ ವಸೂಲಿ ಮಾಡಿಕೊಳ್ಳುವ ಖಾಸಗಿ ಶಾಲೆಗಳನ್ನು ನಿಯಂತ್ರಿಸಲು ಸರಕಾರ ವಿಫಲವಾಗಿದೆ.  ತಪ್ಪು ಮಾಡುವ ಖಾಸಗಿ ಶಾಲೆಗಳ ಮೇಲೆ ಕಾನೂನು ಕ್ರಮ ಜರುಗಿಸುವವರು ಯಾರು? ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರು ಶಿಕ್ಷಣ ಪ್ರಾಧಿಕಾರದ ಕಾರ್ಯವೇನು ? ಎಂಬ ಪ್ರಶ್ನೆಗಳಿಗೆ ಉತ್ತರವಿಲ್ಲ. ದಲಿತ ಹಿಂದುಳಿದ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿಯನ್ನು ಕೊಡದೆ ವಂಚಿಸಲಾಗಿದೆ. ಕರಡು ವರದಿಯಲ್ಲಿ ಅನೇಕ ದೋಷಗಳಿದ್ದು ಅದನ್ನು ರದ್ದು ಪಡಿಸಲು ಮುಂದಾಗಬೇಕಿದೆ. ಪಾಲಕರ ಮತ್ತು ವಿದ್ಯಾರ್ಥಿ ಸಂಘಟನೆಗಳ ಸಲಹೆಯನ್ನು ಪಡೆದು  ಸಮಾನ ಶಿಕ್ಷಣ ನೀಡುವ ಹೊಸ ವರದಿಯನ್ನು ಸರಕಾರ ರಚುಸುಲು ಮುಂದಾಗಲಿ.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category):