ಸಂಪದದಲ್ಲಿ ಹೊಸತು!
'ಸಂಪದ' ಉತ್ತಮಪಡಿಸಬೇಕು ಎನ್ನುವುದು ಸಂಪದ ಬಳಸುವವರ, ಸಂಪದದ ಹಿಂದಿರುವ ಟೆಕ್ನಿಕಲ್ ತಂಡದ ಹಾಗೂ ಸಂಪದ ಓದುವರ ನಿತ್ಯದ ಆಲೋಚನೆ. ಹೀಗಾಗಿ ಹೊಸ ಫೀಚರುಗಳನ್ನು ಸೇರಿಸುತ್ತಿರುವಂತೆ ಅದರೆಡೆ ಒಂದು ನೋಟ ಬೀರುವ ಪ್ರಯತ್ನ ಈ ಪುಟದ ಮೂಲಕ.
ಅನುಚಿತ ಬರಹಗಳನ್ನು ನಿರ್ವಾಹಕರ ಗಮನಕ್ಕೆ ತರಬಹುದು
ಸಂಪದದಲ್ಲಿ ಅನುಚಿತ ಬರಹಗಳಾಗಲಿ, ಪ್ರತಿಕ್ರಿಯೆಗಳಾಗಲಿ ಕಂಡುಬಂದಲ್ಲಿ ಸದಸ್ಯರು ಈಗ ತಕ್ಷಣ ಒಂದೇ ಕ್ಲಿಕ್ಕಿನಲ್ಲಿ ನಿರ್ವಾಹಕರ ಗಮನಕ್ಕೆ ತರಬಹುದು.
ಪ್ರತಿ ಲೇಖನ ಹಾಗು ಪ್ರತಿಕ್ರಿಯೆ ಕೆಳಗೆ ಇರುವ ಲಿಂಕುಗಳ ಪಟ್ಟಿಯಲ್ಲಿ "ನಿರ್ವಾಹಕರ ಗಮನಕ್ಕೆ ತನ್ನಿ" ಎನ್ನುವುದನ್ನು ಕ್ಲಿಕ್ ಮಾಡಿ ಅದರ ಮೂಲಕ ಸಂದೇಶ ಕಳುಹಿಸಿದರಾಯಿತು. ಮುಂದೆ ಓದಿ »

- 70 hits
ಹೊಸ ಸರ್ವರ್ ಗೆ ಸಂಪದ
ಇಂದು ಹೊಸ ಸರ್ವರ್ ಗೆ ಸಂಪದವನ್ನು ಸ್ಥಳಾಂತರಿಸಲಾಗಿದೆ. ಹಳೆಯ ಸರ್ವರಿನಲ್ಲಿ ಜಾಗ ಕಡಿಮೆ ಇದ್ದದ್ದಲ್ಲದೆ ಬಹಳ ಹಳೆಯ ಹಾರ್ಡ್ ವೇರ್ ಇದ್ದದ್ದರಿಂದ ನಿಧಾನವಾಗಿ ಹೋಗಿತ್ತು. ಜೊತೆಗೆ ಸಂಪದದ ಓದುಗರ ಸಂಖ್ಯೆ ಪ್ರತಿದಿನ ಹೆಚ್ಚಾಗುತ್ತಿರುವುದರಿಂದ ಹೆಚ್ಚುತ್ತಿರುವ ಲೋಡ್ ಹಳೆಯ ಸರ್ವರ್ ತಡೆದುಕೊಳ್ಳುತ್ತಿರಲಿಲ್ಲ. ಈಗ ಹೊಸ ಸರ್ವರ್ ಓದುಗರಿಗೆಲ್ಲ ಸಂಪದದ ಓದು ಮತ್ತಷ್ಟು ಉತ್ತಮಗೊಳಿಸುವುದು.
ಹೊಸ ಸರ್ವರಿಗೆ ಸ್ಥಳಾಂತರ ಪೂರ್ಣಗೊಂಡಿಲ್ಲವಾದ್ದರಿಂದ ಕೆಲವೆಡೆ ಹೆಚ್ಚು ಕಡಿಮೆಯಾಗಬಹುದು (ಪುಟಗಳು ಎಂದಿನಂತೆ ಲೋಡ್ ಆಗುವುವು. ಇ-ಮೇಯ್ಲ್, ಚಿತ್ರಗಳು ಇತ್ಯಾದಿಗಳಲ್ಲಿ ಹೆಚ್ಚು ಕಡಿಮಯಾಗಬಹುದು). ಇಂಥದ್ದೇನಾದರೂ ಆದಲ್ಲಿ ದಯವಿಟ್ಟು ಕೂಡಲೆ ತಪ್ಪದೆ ಸರ್ವರ್ ನಿರ್ವಾಹಕರಿಗೆ ತಿಳಿಸಿ ಸಹಕರಿಸಿ.

- 169 hits
ಸಂಪದದ ಎಲ್ಲ ಚಿತ್ರಪುಟಗಳು ಇನ್ನು ಒಂದೆಡೆಯೇ ಸುಲಭವಾಗಿ ಸಿಗುತ್ತದೆ

ಚಿತ್ರಪುಟಗಳನ್ನು ಇನ್ನು ಸುಲಭವಾಗಿ track ಮಾಡಬಹುದು. ಮುಂದೆ ಓದಿ »

- 164 hits
ಬರಹಗಳ ಸಂಪೂರ್ಣ ಪಟ್ಟಿ
ಸಂಪದಿಗರು ಈಗ 'ಸಂಪದ'ದಲ್ಲಿ ತಾವು ಬರೆದು ಹಾಕಿದ ಲೇಖನಗಳ ಸಂಪೂರ್ಣ ಪಟ್ಟಿ ಒಂದೇ ಪುಟದಲ್ಲಿ ಪಡೆಯಬಹುದು. ಮುಂದೆ ಓದಿ »

- 299 hits



RSS: