veena (ಬ್ಲಾಗ್ ಬರಹಗಳು)
ಈ ಹಾಡನ್ನು ಬರೆದವರು ಯಾರು?
October 22, 2008 - 4:08pm — veena
ಕರ್ನಾಟಕ ಬರಿ ನಾಡಲ್ಲ, ನಮ್ಮ ಸಂಸ್ಕೃತಿಯ ಧಾತು
ಕನ್ನಡ ಕೇವಲ ನುಡಿಯಲ್ಲ ನಮ್ಮಂತರಂಗದಾ ಮಾತು.
ಈ ಹಾಡನ್ನು ಬರೆದವರು ಯಾರು ಎಂಬುದು ಗೊತ್ತಿದ್ದರೆ, ದಯವಿಟ್ಟು ತಿಳಿಸಿರಿ.

- veena ರವರ ಬ್ಲಾಗ್
- Login or register to post comments
- 149 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಎಂದೂ ಮರೆಯದ ಆ ದಿನ
June 6, 2008 - 5:42pm — veenaಹೈಕೋರ್ಟ್ ಸಂಚಾರಿ ಪೀಠ ಜುಲೈ ೭ ರಿಂದ ಧಾರವಾಡ ಹಾಗೂ ಗುಲಬರ್ಗಾ ದಲ್ಲಿ ಆರಂಭಗೊಳ್ಳಲು
ಹೈ ಕೋರ್ಟ್ ಆದೇಶಿಸಿದೆ. ಇದೇ ಸಂದರ್ಭದಲ್ಲಿ ಸುಮಾರು ೭ ವರ್ಷಗಳ ಹಿಂದೆ ನಡೆದ ಘಟನೆ ನೆನಪಿಗೆ ಬರುತ್ತಿದೆ.
ಅದಿನ್ನೂ ನಾನು ಕೆಲಸಕ್ಕೆ ಸೇರಿದ ಹೊಸತು. ಧಾರವಾಡ ನನಗಿನ್ನೂ ಒಗ್ಗಿರಲಿಲ್ಲ. ಪ್ರತಿ ಶುಕ್ರವಾರ ಸಂಜೆ ಶಿವಮೊಗ್ಗದ ಬಸ್ ಹತ್ತುತ್ತಿದ್ದ ನಾನು ಭಾನುವಾರ ರಾತ್ರಿ ಅಲ್ಲಿಂದ ಹೊರಡುತ್ತಿದ್ದೆ. ಅದು ಜುಲೈ ತಿಂಗಳ ಒಂದು ಭಾನುವಾರದ ರಾತ್ರಿ, ೧೧-೩೦ ಬಸ್ಸಿಗೆ ಒಬ್ಬಳೇ ಧಾರವಾಡಕ್ಕೆ ಹೊರಟಿದ್ದೆ. ಶಿವಮೊಗ್ಗದಲ್ಲೇ, ಧಾರವಾಡದಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸ ಬೇಕೆಂಬ ಸಲುವಾಗಿ ಬಂದ್ ನಡೆಯುವುದರ ವಾಸನೆ ಬಡಿಯಿತು. ಬಂದ್ ಶುರುವಾಗುವುದು ಸಾಮಾನ್ಯವಾಗಿ ಬೆಳಿಗ್ಗೆ ೯ ರ ನಂತರ ಎಂಬ ಭಂಡ ದೈರ್ಯದ ಮೇಲೆ ಬಸ್ ಹತ್ತಿದೆ. ಅಪ್ಪ ಹೇಳಿದರು ಬೇಡ ಅಂತ, ಆದರೆ ನಾನು ಕೇಳ ಬೇಕಲ್ಲ.
ಚಳುವಳಿಕಾರರು ಬಸ್ಸನ್ನು ಹಾವೇರಿಯಿಂದ ಮುಂದೆ ಬಿಡಲಿಲ್ಲ. ಬಸ್ಸನ್ನು ಬೇರೆ ಮಾರ್ಗದ ಮೂಲಕ ಕಲಘಟಗಿಗೆ ಒಯ್ಯಲಾಯಿತು. ಬಹಳಷ್ಟು ಪ್ರಯಾಣಿಕರು ಅಲ್ಲೇ ಇಳಿದು ಬೇರೆ ವ್ಯವಸ್ಥೆ ಮಾಡಿಕೊಂಡರು. ಮುಂದೆ ಓದಿ »

ಖಾಸಗಿ ಚಾನಲ್ ಗಳಲ್ಲಿ ಹಬ್ಬದ ವಿಶೇಷ ಕಾರ್ಯಕ್ರಮಗಳು.
September 20, 2007 - 12:12pm — veena
- veena ರವರ ಬ್ಲಾಗ್
- Login or register to post comments
- 560 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಸಂಪದಕ್ಕೊಂದು ಸರ್ಚ್ ಎಂಜಿನ್
June 13, 2007 - 1:20pm — veenaನಾನು ಹಿಂದೆ ಎಂದೋ ಓದಿದ ಬ್ಲಾಗ್ ಅನ್ನು ಮತ್ತೊಮ್ಮೆ ಓದಬೇಕು ಎಂದು ಹುಡುಕುತ್ತಿದ್ದೇನು, ಆದರೆ ಸಿಗುತ್ತಿಲ್ಲ, ಸುಮಿತ್ರಾ ಹಲವಾಯಿ ಎಂಬ ಲೇಖಕಿಯ ಬಗ್ಗೆ ಓದಿದ ನೆನಪು. ಆದರೆ ಈಗ ಸಿಗುತ್ತಿಲ್ಲ. ಆಗ ನನಗನ್ನಿಸಿತು, ಸಂಪದಕ್ಕೊಂದು ಗೂಗಲ್ ತರಹದ ಸರ್ಚ್ ಎಂಜಿನ್ ಇದ್ದರೆ ಎಷ್ಟು ಚೆನ್ನಾಗಿತ್ತು ಅಂತ. ಮುಂದೆ ಓದಿ »


RSS: