sushil (ಲೇಖನಗಳು)
ಟೈಮಿಗಿಲ್ಲ ಟೈಮ್ ಸೆನ್ಸು
July 5, 2008 - 1:36am — sushilಕಾಲ ನಾವಂದುಕೊಂಡಂತೆ ಬಾರದು.ಅದಕ್ಕೆ ಆ ಕಾಲನ 'ಸಮಯ'ಕ್ಕೆ ಹೀಗೆ ಒಂದಿಷ್ಟು ಬೈಗುಳ ನೀಡುವತ್ತ..
ಟೈಮಿಗಿಲ್ಲ ಟೈಮ್ ಸೆನ್ಸು
ಸ್ವಲ್ಪ ಕೂಡ ಕಾಮನ್ ಸೆನ್ಸು ||
ನಾ ಖುಷಿಯಾಗಿದ್ದಾಗ ಓಡಿಹೋಗುತ್ತೆ
ದುಃಖದಲ್ಲಿದ್ರೆ ನಿಂತೇ ಬಿಡತ್ತೆ
ಖಾಲಿಯಾಗಿದ್ರೆ ಕೂತು ಊಟ ಮಾಡುತ್ತೆ
ಮಲಗಿದ್ರೆ ತಾನೂ ಮಲಗೇ ಬಿಡತ್ತೆ ||
ಟೈಮಿಗಿಲ್ಲ ಟೈಮ್ ಸೆನ್ಸು.. ಮುಂದೆ ಓದಿ »

ಶ್ರೀಬಸವೇಶ್ವರರ ವಚನಗಳು-3
June 18, 2008 - 11:58pm — sushil****ಜಾತಿ ಪದ್ಧತಿ 'ಸಲ್ಲ' ಎಂದ ಬಸವಣ್ಣ****
ಎಲ್ಲ ಕೆಲಸಗಳೂ ಸಮವೇ. ಕಾಯಕದಲ್ಲಿ ಮೇಲು-ಕೀಳು ಎಂಬುದಿಲ್ಲ. ಜಗದಲಿ ಕಿವಿಯಿಂದ ಹುಟ್ಟಿದವರಾರು ಇಲ್ಲ..
ಹೀಗಿರುವಾಗ ಉಚ್ಚನೀಚ ಭಾವನೆಗಳು ಸಲ್ಲ. ಬಸವಣ್ಣನವರು ವ್ಯಕ್ತಿಯ ಶ್ರೇಷ್ಟತೆ
ನಿರ್ಣಯ ಆಗುವುದು ಹುಟ್ಟಿದ ಜಾತಿಯಿಂದಲ್ಲ ಬದುಕುವ ರೀತಿಯಿಂದ ಎಂದು ಈ ವಚನದಲ್ಲಿ ಮಾರ್ಮಿಕವಾಗಿ
ತಿಳಿಸಿದ್ದಾರೆ. ಮುಂದೆ ಓದಿ »

ಶ್ರೀಬಸವೇಶ್ವರರ ವಚನಗಳು-2
June 8, 2008 - 2:26am — sushilನೀನೊಲಿದರೆ ಕೊರಡು ಕೊನರುವುದಯ್ಯ
ನೀನೊಲಿದರೆ ಬರಡು ಹಯನಹುದಯ್ಯ
ನೀನೊಲಿದರೆ ವಿಷವಮೃತವಹುದಯ್ಯ
ನೀನೊಲಿದರೆ ಸಕಲ ಪಡಿಪದಾರ್ಥ ಇದಿರಲಿಪ್ಪವು
ಕೂಡಲಸಂಗಮದೇವ
ನೀರಿಂಗೆ ನೈದಿಲೆಯೇ ಶೃಂಗಾರ
ಊರಿಂಗೆ ಅಕನೆಯೇ ಶೃಂಗಾರ
ಸಮುದ್ರಕ್ಕೆ ತೆರೆಯೇ ಶೃಂಗಾರ
ನಾರಿಗೆ ಗುಣವೇ ಶೃಂಗಾರ
ಗಗನಕ್ಕೆ ಚಂದ್ರಮನೇ ಶೃಂಗಾರ
ನಮ್ಮ ಕೂಡಲಸಂಗಮನ ಶರಣರಿಗೆ
ನೊಸಲ ವಿಭೂತಿಯೇ ಶೃಂಗಾರ ಮುಂದೆ ಓದಿ »

ಪ್ರಶಂಸೆಯ ಪ್ರಶಂಸೆ-ಪಾ.ವೆಂ.ಆಚಾರ್ಯರ ಬರಹಗಳಿಂದ.
June 4, 2008 - 2:00am — sushilಆ ದಿವಸ ನನಗಿನ್ನೂ ನೆನಪಿದೆ.ನಾನಾಗ ನಾಲ್ಕನೇ ಫಾರ್ಮಿನಲ್ಲಿದ್ದೆ.ನನ್ನ ಎಂಗ್ಲೀಷ್ ಮಾಸ್ತರರು ಕ್ಲಾಸಿಗೆ ಬಂದವರೇ ತಾವು ತಿದ್ದಲು ಒಯ್ದಿದ್ದ ಪ್ರಬಂಧ ಪುಸ್ತಕಗಳಲ್ಲಿ ಒಂದನ್ನು ಆರಿಸಿ ಅದರ ಕೆಲ ವಾಕ್ಯಗಳನ್ನು ಕ್ಲಾಸಿಗೆಲ್ಲ ಓದಿ ಹೇಳಿದರು. ಮುಂದೆ ಓದಿ »

- Login or register to post comments
- 286 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಕೆ.ಎಸ್.ನ ರವರ ಓದಲೇಬೇಕಾದ ಸುಂದರ ಪದ್ಯ.
May 24, 2008 - 9:09pm — sushilಚಳಿಗಾಲ ಬಂದಾಗ ಎಷ್ಟು ಚಳಿ ಎಂಬರು
ಬಂತಲ್ಲ ಬೇಸಿಗೆ ಕೆಟ್ಟ ಬಿಸಿಲೆನ್ವರು
ಮಳೆ ಬಿತ್ತೊ ಬಿತದಲ್ಲಿ ಶನಿ ಎಂಬ ಕಾಟ
ಇವರು ಮೆಚ್ಚುವ ವಸ್ಥು ಇಲ್ಲಿಲ್ಲ ಜೋಕೆ!
ನಿಂತವರ ಕೇಳುವರು ನೀನೇಕೆ ನಿಂತೆ
ಮಲಗಿದರೆ ಗೊಣಗುವರು ಇವಗಿಲ್ಲ ಚಿಂತೆ
ಒಡಿದರೆ ಬೆನ್ನ ಹಿಂದಯೇ ಇವರ ಟೀಕೆ
ಇವರು ಮೆಚ್ಚುವ ವಸ್ಥು ಇಲ್ಲಿಲ್ಲ ಜೋಕೆ!
ಓದಿದರೆ ಹೇಳುವರು ಮತ್ತೊಮ್ಮೆ ಬರೆಯೋ ಮುಂದೆ ಓದಿ »

- Login or register to post comments
- 323 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS: