srinivasps (ಚರ್ಚೆಯ ವಿಷಯಗಳು)
ಆಶ್ವಯುಜ ಶುದ್ಧ ಮಹಾನವಮಿ ಬರಲಂದು - ಪೂರ್ಣ ಸಾಹಿತ್ಯ ಬೇಕು
October 15, 2008 - 11:20pm — srinivaspsನಮ್ಮಮ್ಮಂಗೆ ಈ ಪದ್ಯದ ಪೂರ್ಣ ಪಾಠ ಬೇಕಂತೆ...
ಆಶ್ವಯುಜ ಶುದ್ಧ ಮಹಾನವಮಿ ಬರಲಂದು
ಲೇಸಾಗಿ ಹರಸಿದರು ಬಾಲಕರು ಬಂದು
ಈಶ ನಿಮಗತ್ಯಧಿಕ ಸುಖವ ಕೊಡಲೆಂದು
ಲೇಸಾಗಿ ಹರಸಿದರು ಬಾಲಕರು ಬಂದು....(ಮುಂದೆ ಏನು?)
ಗೊತ್ತಿದ್ದವರು ತಿಳಿಸ್ತೀರ...ಮೇಲಿನ ಸಾಲುಗಳಲ್ಲಿ ತಪ್ಪಿದ್ದರೆ ತಿದ್ದಿ...
--ಶ್ರೀ

ಗುಬ್ಬಿಗಳ ಸಂರಕ್ಷಣೆ ಹೇಗೆ?
October 3, 2008 - 4:47pm — srinivaspsಹೆಚ್ಚು ಕಡಿಮೆ ಬೆಂಗಳೂರಿನ ಎಲ್ಲ ಭಾಗಗಳಲ್ಲೂ ಗುಬ್ಬಿಗಳು ಕಾಣೆಯಾದರೂ,
ನಮ್ಮ ಮನೆಯ ಬಳಿ ಇನ್ನೂ ಗುಬ್ಬಿಗಳ ಚಿಂವ್-ಚಿಂವ್ ನಿಂತಿಲ್ಲ...
ಇವನ್ನು ಉಳಿಸಿ-ಬೆಳಸುವುದು ಹೇಗೆ?
--ಶ್ರೀ

ತೆಂಗಿನ ಮರ ಮತ್ತು ನೀರಿನ ಸಂಪು ಎರಡೂ ಕಾಪಾಡೋದು ಹೇಗೆ?
October 3, 2008 - 2:38pm — srinivaspsನಮ್ಮ ಬಂಧುಗಳಿಬ್ಬರ ಮನೆಯಲ್ಲಿ ಇದೇ ತಾಪತ್ರಯ ಆಗಿದೆ...
ತೆಂಗಿನ ಮರದ ಹತ್ತಿರದಲ್ಲೇ ನೀರಿನ ಸಂಪು ಇದೆ...
ತೆಂಗಿನ ಮರ ಸೊಂಪಾಗಿ ಬೆಳೆದು ಇದರ ಬೇರು ಸಂಪು ಹಾಳು ಮಾಡತ್ತೆ ಎಂದು ಒಲ್ಲದ ಮನದಲ್ಲಿ ತೆಂಗಿನ ಮರಕ್ಕೆ ಕೊಡಲಿ ಹಾಕಲಿದ್ದಾರೆ...
ಎರಡನ್ನೂ ಉಳಿಸೋದಿಕ್ಕೆ ಉಪಾಯಗಳೇನು?
--ಶ್ರೀ

ಸಂಪದದ ಪಾಯಿಂಟ್ ಉಪಯೋಗವೇನು ?
September 10, 2008 - 11:37am — srinivaspsಸಂಪದದ ಪಾಯಿಂಟ್ ಉಪಯೋಗವೇನು ?
ಬ್ಲಾಗ್ ಲೇಖನಕ್ಕೆ '೨' , ಕಾಮೆಂಟ್ ಗೆ '೧' ಇತ್ಯಾದಿ ...
ಅತಿ ಹೆಚ್ಚು ಪಾಯಿಂಟ್ ಗಳಿಸಿದವರಿಗೆ ಮುಂದೆ ಹರಿ ಅವರು ಗಿಫ್ಟ್ ಕೊಡ್ತಾರ??? ![]()
--ಶ್ರೀ

"ಶಂಖದಿಂದ ಬಂದರೆ ತೀರ್ಥ..."
September 4, 2008 - 2:57pm — srinivasps"ಶಂಖದಿಂದ ಬಂದರೆ ತೀರ್ಥ..."
ಈ ಗಾದೆಯ ಒಳಾರ್ಥ ಗೊತ್ತಿದ್ದರೂ...ಅಕ್ಷರಶಃ ಏನು ಇದರ ಅರ್ಥ ?
ಶಂಖದಿಂದ ಬಂದಾಗ ನೀರಿನಲ್ಲಿ ವೈಜ್ನಾನಿಕ ಬದಲಾವಣೆಗಳನ್ನು ಕಂಡು ಹಿಡಿದಿದ್ದಾರೆ ತಿಳಿಸಿ ....
-ಶ್ರೀ








RSS: