ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಲೇಖನ: "ಈ ನೀರು ಕುಡದ್ರ ಉಚ್ಚಿ ಕುಡಧಾಂಗ ಆಗತೈತಿ ನೋಡಪಾ..!"

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ › User account

sprasad (ಬ್ಲಾಗ್ ಬರಹಗಳು)

ಸೇಡು!

June 25, 2008 - 1:46pm — sprasad

ದಡವ ಅಪ್ಪಿ ಹರಿವ ನದಿಯ ಎದೆಯಲ್ಲಿ
ಮೀನುಗಾರಾನ್ಯಾರೋ ಎಂದೋ
ಊರಿದ ಬೆಂಕಿ ಇಂದು ಸಣ್ಣ ಎರೆಹುಳುಗಳಾಗಿ
ಮೀನುಗಳನ್ನು ಗಾಳಕ್ಕೆ ಸಿಕ್ಕಿಸುತ್ತಿವೆ....

  • ಕವನ
~.~
  • sprasad ರವರ ಬ್ಲಾಗ್
  • 3 ಪ್ರತಿಕ್ರಿಯೆಗಳು
  • 430 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮಂಕು ನೀಲಿ ಚುಕ್ಕೆ!

August 8, 2007 - 11:12am — sprasad
350px-PaleBlueDot.jpg

ನ್ಯೂಯೋರ್ಕಿನ ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಅಕ್ಟೋಬರ್ ೧೩, ೧೯೯೪ ರಂದು ಖ್ಯಾತ ಖಗೋಳ ಶಾಸ್ತ್ರಜ್ಞರಾದ ಕಾರ್ಲ್ ಸಗನ್ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡುತ್ತಾ, ಮೇಲಿನ ಚಿತ್ರವನ್ನು ತೋರಿಸಿದರು..

ಇದು ೧೯೯೦ರಲ್ಲಿ ಭೂಮಿಯಿಂದ ನಭದತ್ತ ಚಿಮ್ಮಿದ ಅಂತರಿಕ್ಷ ನೌಕೆ ವಾಯೇಜರ್ ೧ ಸುಮಾರು ೪ ಬಿಲಿಯನ್ ಮೈಲುಗಳ ದೂರದಿಂದ ತೆಗೆದದ್ದಾಗಿದೆ. ಅದರ ಮುಖ್ಯ ಉದ್ದೇಶ ಪೂರ್ಣಗೊಂಡ ನಂತರ, ಸೂರ್ಯ ಮಂಡಲದಿಂದ ಹೊರಕ್ಕೆ ತನ್ನ ಯಾನವನ್ನು ಬೆಳಸಿದ್ದ ಅದು ಸೂರ್ಯನ ಸಮತಲದಿಂದ ಸುಮಾರು ೩೨ ಡಿಗ್ರಿ ಮೇಲಿನ ಪಥದಲ್ಲಿದ್ದಾಗ, ಹಿಂದೆ ತಿರುಗಿ ಅದಕ್ಕೆ ಕಂಡ ಎಲ್ಲಾ ಗ್ರಹಗಳ ಚಿತ್ರವನ್ನು ತೆಗೆಯುವಂತೆ ಆದೇಶಿಸಲಾಯಿತು. ಆ ಅನಂತ ದೂರದಿಂದ ವಾಯೇಜರಿನ ಕ್ಯಾಮೆರಾ ಕಣ್ಣಿಗೆ ಭೂಮಿಯು ಒಂದು ಅತಿ ಚಿಕ್ಕ ಬೆಳಕಿನ ಚುಕ್ಕೆಯಾಗಿ, ಈ ಚಿತ್ರದ ಒಂದು ಪಿಕ್ಸೆಲ್ಲಿಗಿಂತ್ ಚಿಕ್ಕದಾಗಿ ಕಾಣಿಸಿತು. ಈ ಚಿತ್ರವನ್ನು ನೋಡಿ ದ ನಿಜಕ್ಕೂ ವಿಚಲಿತಗೊಂಡಿದ್ದ ಡಾ|| ಸಗನ್ ಅವರ ಭಾಷಣದಲ್ಲಿ ಹೀಗೆಂದರು :

" ಆಗಸದ ಅನಂತದಿಂದ ಕೆಳಬಗ್ಗಿ ತೆಗೆದ ಈಚಿತ್ರವನ್ನು ಗಮನಿಸಿ, ಅದರಲ್ಲಿ ನಿಮಗೆ ಒಂದು ಎದ್ದು ಕಾಣುವ ಸಣ್ಣ ನೀಲಿ ಚುಕ್ಕೆ ಕಾಣಿಸಬಹುದು (ಗುರುತು ಹಾಕಿದಲ್ಲಿ)! ಅದೇ ನಾವು , ಅಲ್ಲಿದೆ ನಮ್ಮ ಮನೆ. ನಮಗೆ ಗೊತ್ತಿರುವ ಎಲ್ಲರೂ, ಪ್ರತಿಯೊಂದು ಮನುಷ್ಯ ಜೀವಿಯೂ, ಇಲ್ಲಿಯೇ ಬದುಕಿದ್ದು, ಇಲ್ಲಿಯೇ ಮಣ್ಣಾದದ್ದು! ನಮ್ಮೆಲ್ಲಾ ಸುಖ ಸಂತೋಷ ಹಾಗು ನೋವುಂಡ ಕ್ಷಣಗಳು, ದೃಢವಾಗಿ ನಂಬಲ್ಪಟ್ಟ ಸಾವಿರಾರು ಧರ್ಮಗಳು, ವಿಚಾರ ಪರಂಪರೆಗಳು, ಆರ್ಥಿಕ ಸಿದ್ಧಾಂತಗಳು, ಹೊಟ್ಟೆ ಪಾಡಿಗಾಗಿ ಬದುಕಿದ ಪ್ರತಿಯೊಂದು ಜೀವಿ, ಪ್ರತಿಯೊಬ್ಬ ನಾಯಕ ಹಾಗು ಹೇಡಿ, ಬದುಕಿದ್ದ ಎಲ್ಲಾ ನಾಗರೀಕತೆಗಳ ಪ್ರತಿಯೊಬ್ಬ ನಿರ್ಮಾರ್ತೃ ಹಾಗು ಧ್ವಂಸಕ, ಪ್ರತೀ ಚಕ್ರಾಧಿಪತಿ ಹಾಗು ಬಂಡುಕೋರ, ಪ್ರೇಮಿಸಿದ ಪ್ರತಿಯೊಂದು ಜೋಡಿಗಳು, ಎಲ್ಲ ಭರವಸೆಯ ಮಕ್ಕಳು, ತಂದೆ ತಾಯಂದಿರು, ಪ್ರತಿಯೊಬ್ಬ ಅನ್ವೇಷಕ ಹಾಗು ಶೋಧಕ, ನೀತಿಯನ್ನು ಭೋಧಿಸಿದ ಪ್ರತಿಯೊಬ್ಬ ಗುರು, ಎಲ್ಲಾ ಭ್ರಷ್ಟ ರಾಜಕಾರಣಿ, ಪ್ರತಿಯೊಬ್ಬ ಸೂಪರ್ ಸ್ಟಾರ್, ಎಲ್ಲ ಧೀಮಂತ ನಾಯಕರು, ಮನುಷ್ಯ ಜಾತಿಯ ಇತಿಹಾಸದಲ್ಲಿ ಬಂದು ಹೋದ ಪ್ರತಿ ಸನ್ಯಾಸಿ ಹಾಗು ಪಾಪಿ, ಎಲ್ಲರೂ ಬದುಕಿದ್ದು, ಸತ್ತಿದ್ದು ಎಲ್ಲವೂ ಸೂರ್ಯ ಪ್ರಕಾಶದಲ್ಲಿ ತೇಲುತ್ತಿರುವ ಈ ಒಂದೇ ಒಂದು ಧೂಳಿನ ಕಣದಲ್ಲಿ!  ಮುಂದೆ ಓದಿ »

  • ಖಗೋಳಶಾಸ್ತ್ರ
~.~
  • sprasad ರವರ ಬ್ಲಾಗ್
  • ೧ ಪ್ರತಿಕ್ರಿಯೆ
  • 546 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • Aravinda
    ಉ: ನಮ್ಮ ಹಾಸ್ಟೆಲ್ ಹುಡುಗರ ಕಾಫಿ ಯಾತ್ರೆ!
    November 23, 2008 - 2:33pm
  • bvenkatraya
    ಉ: ಅನ್ಯ ರಾಜ್ಯದವರಲ್ಲಿರುವ ಭಾಷಾ ಪ್ರೇಮ ನಮ್ಮಲ್ಲಿ ಯಾಕೆ ಇಲ್ಲಾ?
    November 23, 2008 - 1:51pm
  • bvenkatraya
    ಉ: ಅನ್ಯ ರಾಜ್ಯದವರಲ್ಲಿರುವ ಭಾಷಾ ಪ್ರೇಮ ನಮ್ಮಲ್ಲಿ ಯಾಕೆ ಇಲ್ಲಾ?
    November 23, 2008 - 1:42pm
  • ಮನಹ್ಪಠಲ
    ಉ: ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
    November 23, 2008 - 1:04pm
  • ASHOKKUMAR
    ಉ: ಸಂಜೆವಾಣಿ ಏರಿಸಿದ ಕ್ಷಿಪಣಿ
    November 23, 2008 - 11:48am
  • ASHOKKUMAR
    ಉ: ಮಿನಿ ರಾಜಕಾರಣಿ !
    November 23, 2008 - 11:47am
  • kpbolumbu
    ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?
    November 23, 2008 - 11:29am
  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು-88 ಎನಿತು ಇನಿದು ಕನ್ನಡ ನುಡಿಯು
    November 23, 2008 - 11:21am
  • mahesha
    ಉ: ಓದಿದ್ದು ಕೇಳಿದ್ದು ನೋಡಿದ್ದು-88 ತರಂಗ ಸಂಪಾದಕಿಯ ಚೊಚ್ಚಲ ಹೆರಿಗೆ!
    November 23, 2008 - 11:03am
  • prem
    ಉ: ಓದಿದ್ದು ಕೇಳಿದ್ದು ನೋಡಿದ್ದು-88 ತರಂಗ ಸಂಪಾದಕಿಯ ಚೊಚ್ಚಲ ಹೆರಿಗೆ!
    November 23, 2008 - 10:47am
ಇನ್ನಷ್ಟು


ವನ್ಯಮೃಗಗಳ ನಡುವೆ ಗೋವು ಬಂದೇನಿಹುದು? ।
ಪಣ್ಯವೀಧಿಯಲಿ ತಾತ್ವಿಕನಿಗೇನಿಹದು? ।।
ಅನ್ಯಾಯದುನ್ಮತ್ತ ಕೋಲಾಹಲದ ಲೋಕ ।
ಪುಣ್ಯವನು ಚಿಂತಿಪುದೆ? -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator