shylaswamy (ಲೇಖನಗಳು)
ಅಗಲಿದ ಚೇತನ
August 31, 2008 - 3:31pm — shylaswamy ಅಗಲಿದ ಚೇತನ.
ಅಪಾರಜ್ಞಾನ, ಅಷ್ಟೇ ಸೌಜನ್ಯತೆ, ಸರಳ ನೇರ ನಡೆ ನುಡಿ ಇವೆಲ್ಲವನ್ನೂ ಒಟ್ಟುಗೂಡಿಸಿದಾಗ ಎದ್ದು ಕಾಣುವ ರೂಪವೇ ಹಿರಿಯ ಸಾಹಿತಿಗಳಲ್ಲೊಬ್ಬರಾದ ಶ್ರೀಯುತ ಎಚ್.ಎಸ್.ಕೃಷ್ಣಸ್ವಾಮಿಯವರು. ಅಂಕಣಕಾರರೆಂದೇ ಖ್ಯಾತಿ ಹೊಂದಿರುವ ಅವರು ಈಗ 29ನೇ ತಾರೀಕು ಇನ್ನಿಲ್ಲವಾದರು ಎಂದು ತಿಳಿದಾಗ ಮನಸ್ಸಿಗೆ ಉತ್ತಮವಾದುದೇನನ್ನೋ ಕಳೆದುಕೊಂಡ ಭಾವ. 1920ರ ಆಗಸ್ಟ್ 20ರಂದು ಜನಿಸಿದ ಅವರು 2008ರ ಅದೇ ಆಗಸ್ಟ್ 29ರಂದು ನಮ್ಮನ್ನೆಲ್ಲಾ ಅಗಲಿದ್ದಾರೆ.
ಖ್ಯಾತ ಅರ್ಥಶಾಸ್ತ್ರಜ್ಞರಾದ ಇವರು ಅನೇಕ ದಿನಪತ್ರಿಕೆಗಳು ವಾರ ಪತ್ರಿಕೆಗಳಲ್ಲಿ ವಾಣಿಜ್ಯ, ವ್ಯಕ್ತಿವಿಷಯಕ್ಕೆ ಸಂಬಂಧಪಟ್ಟ ಅಂಕಣಗಳನ್ನು ಬರೆಯುವ ಮೂಲಕ ಜನಪ್ರಿಯರಾದರು. ಸುಧಾ ವಾರ ಪತ್ರಿಕೆಯಲ್ಲಿ 36 ವರ್ಷ ಒಂದು ವಾರವೂ ತಪ್ಪದೇ ವ್ಯಕ್ತಿ ವಿಶೇಷ ಅಂಕಣ ಬರೆದು ಅನೇಕ ಮಹಾನ್ ವ್ಯಕ್ತಿಗಳ ಪರಿಚಯ ಮಾಡಿಸಿದ್ದರು. ‘ಕನ್ನಡದಲ್ಲಿ ವಿಡಂಬನಾ ಸಾಹಿತ್ಯ’ ಎಂಬ ಇವರ ವಿಮರ್ಶನಾತ್ಮಕ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್‍ನ ‘ಭಾಸ್ಕರರಾವ್ ಸ್ಮಾರಕ’ ಬಹುಮಾನ ಲಭಿಸಿದೆ.ಹಾಗೆಯೇ ವಾಣಿಜ್ಯ ಹಾಗೂ ಅರ್ಥಶಾಸ್ತ್ರಕ್ಕೆ ಸಂಬಂಧಪಟ್ಟ ಹಾಗೆ ‘ನಮ್ಮ ಅಭಿವೃದ್ದಿ ಯೋಜನೆ’ ಕೃತಿಗೆ ರಾಜ್ಯ ಸರ್ಕಾರದ ಪ್ರಶಸ್ತಿ ಲಭಿಸಿದೆ. ಇವರ ಪ್ರಭಂದಗಳಲ್ಲಿ ಪ್ರಭುದ್ದತೆ, ಚಿಂತನೆ, ಅಧ್ಯಯನಶೀಲತೆ ಹಾಗೂ ಕಾವ್ಯ ಗುಣಗಳನ್ನು ಕಾಣಬಹುದು ಎಂದು ಡಾ.ದೇ.ಜವರೇಗೌಡರು ಹೇಳಿದ್ದಾರೆ. ಇವರು ಕೆಲವು ಕಾದಂಬರಿಗಳು ಸಹಾ ಬರೆದಿದ್ದಾರೆ.
ಇವರನ್ನು ಕವಿ ಚನ್ನವೀರಕಣವಿಯವರು ಸಾಹಿತ್ಯ ಲೋಕದ ಸವ್ಯ ಸಾಚಿ ಎಂದಿದ್ದಾರೆ. ಹಾಗೆಯೇ ಕವಿ ದೊಡ್ಡ ರಂಗೇಗೌಡರು ಇವರ ಸಾಹಿತ್ಯ ಭೂಮಿ ತೂಕದ ಸಾಹಿತ್ಯ ಎಂದೇ ವರ್ಣಿಸಿದ್ದಾರೆ. ಮುಂದೆ ಓದಿ »

ಮೇರು ವಿಜ್ಞಾನಿಯ ಕಥೆ
August 17, 2008 - 2:30am — shylaswamy ಹುಡುಕುವಿಕೆ, ಏನಾದರೂ ಹೊಸತನ್ನು ಹುಡುಕುತ್ತಲೇ ಇರುವಿಕೆ. ಇದೇ ಗುರಿಯಾಗಿ ವಿಜ್ಞಾನ ಗಗನದಲ್ಲಿ ಮಿಂಚಿ ಮಿನುಗುವ ನಕ್ಷತ್ರದಂತೆ ಮಾನವ ಚಿಂತನೆಯೆ ಎಲ್ಲೆಯ ದಾಟಿ ಮೇಲೇರಿ ಮೇಲೇರಿ ಅದ್ಭುತಗಳ ಸಾಧಿಸಿದರೂ ಎಲೆ ಮರೆಯ ಕಾಯಿಯೆಂದೇ ಭೌತವಿಜ್ಞಾನದ ಜಗತ್ತು ಗುರುತಿಸಿರುವ ಮಹಾನ್ ಮೇಧಾವಿ ಶ್ರೀಯುತ K.S.ಕೃಷ್ಣನ್ ಅಂದರೆ ಕರಿಯಮಾಣಿಕ್ಯಂ ಶ್ರೀನಿವಾಸ ಕೃಷ್ಣನ್ 1898ರ ಡಿಸೆಂಬರ್ 4ರಂದು ತಮಿಳುನಾಡಿನಲ್ಲಿ ಜನಿಸಿದವರು.
“ವಾಸ್ತವಗಳನ್ನು ಕಾಣುವುದೇ ಭೌತ ಶಾಸ್ತ್ರದ ಅರ್ಥ” ಎಂದು ಕೃಷ್ಣನ್ ಪದೇಪದೇ ತನ್ನ ವಿದ್ಯಾರ್ಥಿಗಳಿಗೆ ಹೇಳುತ್ತಿದ್ದರು. ನಾನಾ ಕ್ಷೇತ್ರಗಳ ಮೂಲಕ ಅವರು ಭೌತಶಾಸ್ತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಕೃಷ್ಣನ್ ರವರು C.V.ರಾಮನ್ ರವರ ಮಾರ್ಗದರ್ಶನದಲ್ಲಿ ಬೆಳೆದವರು. C.V.ರಾಮನ್ರವರ ಬೆಳಕು ಕ್ಷೇತ್ರದಲ್ಲಿ ರಾಮನ್ ಪರಿಣಾಮದ ಶೋಧನೆಯಲ್ಲಿ ಹೆಚ್ಚು ದುಡಿದವರು. 1928ರಲ್ಲಿ ರಾಮನ್ರವರು ದ್ರವಗಳ ಮೂಲಕ ಬೆಳಕು ಚದುರುವುದನ್ನು ಗಮನಿಸಿದರು. ಬೆಳಕಿನ ಒಂದು ಕಿರಣವನ್ನು benzene ಮುಂತಾದ ದ್ರವಗಳ ಮೂಲಕ ಹಾಯಿಸಿದಾಗ ಅದು ಹಲವಾರು ಕಿರಣಗಳಾಗಿ ಚದುರಿದವು. ಆ ಕಿರಣಗಳು ಬೇರೆ ಬೇರೆ frequency ಅಂದರೆ ವೇಗ ಹೊಂದಿರುವುದರಿಂದ ವಿವಿಧ ಬಣ್ಣಗಳಲ್ಲಿ ಕಾಣುತ್ತವೆ. ಕೆಲವು ಬಣ್ಣಗಳು ಕೆಲವು ಸಂದರ್ಭಗಳಲ್ಲಿ ತೀವ್ರತೆಯನ್ನು ಹೊಂದುತ್ತವೆ. ನೋಡಿ! ಸಾಧಾರಣವಾಗಿ ಆಕಾಶ ನೀಲಿಯಾಗಿ ಕಾಣುತ್ತದೆ. ವಾತಾವರಣದಲ್ಲಿರುವ ಸಣ್ಣ ಕಣಗಳಿಂದ ಸೂರ್ಯನ ಕಿರಣಗಳು ಚದುರಿಸಲ್ಪಟ್ಟಾಗ ನೀಲಿ ಬಣ್ಣದ ಕಿರಣಗಳ ತೀವ್ರತೆ ಹೆಚ್ಚಾಗಿರುತ್ತದೆ. ಅದೇರೀತಿ ಸೂರ್ಯ ಹುಟ್ಟುವಾಗ ಅಥವಾ ಮುಳುಗುವಾಗ ವಾತಾವರಣದ ಅತಿ ಹೆಚ್ಚಿನ ಭಾಗದ ಮೂಲಕ ಸೂರ್ಯನ ಕಿರಣಗಳು ಹಾದು ಬರುವಾಗ ನೀಲಿ ಬಣ್ಣ ತನ್ನ ತೀವ್ರತೆ ಕಳೆದುಕೊಂಡು ಆ ಸ್ಥಾನವನ್ನು ಕೆಂಪು ಬಣ್ಣ ಪಡೆದು ಆಕಾಶ ಕೆಂಪು ಬಣ್ಣವನ್ನು ಹೊಂದುವಂತೆ ಮಾಡುತ್ತದೆ. ಈ ಸಂಶೋಧನೆ C.V.ರಾಮನ್ರವರಿಗೆ 1930ರಲ್ಲಿ ನೋಬಲ್ ಪಾರಿತೋಷಕವನ್ನು ತಂದುಕೊಟ್ಟರೂ ಇದರಲ್ಲಿ ಅವರ ಸಮಕ್ಕೂ ಕೈ ಜೋಡಿಸಿದವರು ಎಂದರೆ K.S.ಕೃಷ್ಣನ್ ಅವರು. ಆ ನೊಬೆಲ್ ಪ್ರಶಸ್ತಿ C.V.ರಾಮನ್ ಅವರಿಗೇ ಸಲ್ಲಬೇಕು ಎಂಬುದು ನಿರ್ವಿವಾದ. ಆದರೂ ಕೃಷ್ಣನ್ ಅವರ ಸಹಾಯವನ್ನು C.V.ರಾಮನ್ ಅವರು ಹೀಗೆ ಸ್ಮರಿಸುತ್ತಾರೆ, “1930ರಲ್ಲಿ ನನಗೆ ನೀಡಿದ ನೋಬೆಲ್ ಪ್ರಶಸ್ತಿ 1921ರಿಂದ ಮಾಡಿದ ಸಂಪೂರ್ಣ ಕೆಲಸವನ್ನು ಗಣನೆಗೆ ತೆಗೆದುಕೊಳ್ಳದೇ 1928ರಲ್ಲಿ ಆದ ಮುಖ್ಯ ಕೆಲಸಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡರೆ ನನ್ನ ಈ ಪ್ರಶಸ್ತಿಗೆ ಕೃಷ್ಣನೂ ಸಹಾ ಪಾಲುದಾರನಾಗುತ್ತಿದ್ದ.” ಮುಂದೆ ಓದಿ »

ಧಾರವಾಡದ ಕೋಗಿಲೆ
August 4, 2008 - 2:56pm — shylaswamyದೆಹಲಿ ಆಕಾಶವಾಣಿಯಲ್ಲಿ ಸುಶ್ರಾವ್ಯವಾದ ಹಿಂದೂಸ್ತಾನಿ ಸಂಗೀತ ಕೇಳಿಬರುತ್ತಿತ್ತು. ಅದನ್ನು ಕೇಳುತ್ತಾ ಕುಳಿತಿದ್ದ ಓರ್ವ ಹುಡುಗಿ, “ಆಂಟಿ ಹಾಡ್ತಾರೆ ಅಂತ ಕೂತ್ರೆ ಯಾರೋ ಗಂಡಸರು ಹಾಡ್ತಾ ಇದಾರೆ.” ಎಂದು ಗೊಣಗಿದಳು. ಅದನ್ನು ಕೇಳಿಸಿಕೊಂಡ ಅವಳ ಅಮ್ಮ “ಗಂಡಸಾದರೇನು ಹೆಂಗಸಾದರೇನು? ಸಂಗೀತ ಅಂತೂ ಚೆನ್ನಾಗಿದೆ ಅಲ್ವಾ? ಸುಮ್ಮನೆ ಕೂತು ಕೇಳು” ಎಂದಾಗ,
ಮಗಳು, “ಹೌದು ಸಂಗೀತವೇನೋ ಮೇಲ್ಮಟ್ಟದ್ದೆ. ಕೇಳಲು ಕರ್ಣಾನಂದವಾಗೇ ಇದೆ. ಆದರೂ ಆಂಟಿ ತನ್ನ ಹಾಡು ಬರತ್ತೆ ಕೇಳು ಅಂತ ಹೇಳಿದ್ರು. ಅದು ಯಾಕೆ ಬರಲಿಲ್ಲ ಅಂತ ಆಶ್ಚರ್ಯ ಆಯ್ತು ಅಷ್ಟೆ.” ಅಂದಳು.
ಆ ಆಂಟಿ ಮನೆಗೆ ಬಂದರು. ಅವಳು ಒಳಗೆ ಕರೆದು ಉಪಚರಿಸಿದಳು. ಅವರು ಸುಧಾರಿಸಿಕೊಂಡು ಕೇಳಿದರು, “ ನನ್ನ ಹಾಡು ಕೇಳಿದ್ಯೇನೆ ಹುಡುಗಿ?”
“ರೇಡಿಯೋ ಆನ್ ಮಾಡಿದ್ದೆ ಆಂಟಿ. ಆದರೆ ಯಾರೋ ಗಂಡಸರು ಹಾಡುತ್ತಿದ್ದರು.” ಎಂದಳು ಹುಡುಗಿ.
ಆಗ ಅವರು ಜೋರಾಗಿ ನಕ್ಕು, “ಆ ಗಂಡು ಕೋಗಿಲೆ ನಾನೇಕಣೆ ಹುಡುಗಿ” ಎಂದರು.
ಒಂದು ಕ್ಷಣ ಹುಡುಗಿ ಪೆಚ್ಚಾಗಿ ನಂತರ ಅವರೊಂದಿಗೆ ನಗಲು ಪ್ರಾರಂಭಿಸಿದಳು. “ಹೆಸರು ಅನೌನ್ಸ್ ಮಾಡಿದಾಗ ಯಾರೋ ಬಂದಿದ್ದರು. ಆ ಗಡಿಬಿಡಿಯಲ್ಲಿ ಹೆಸರು ಕೇಳಿಸಿಕೊಳ್ಳಲು ಆಗಲಿಲ್ಲ. ಅದಕ್ಕೆ ಈ ತಾಪತ್ರಯ ಆಗಿದ್ದು.” ಎಂದಳು. ಮುಂದೆ ಓದಿ »

ಜುಗ್ಗನ ಕಥೆ
July 17, 2008 - 11:23am — shylaswamyಜುಗ್ಗನ ಕಥ
[ಮೈದಾಸನ ಕಥೆಯನ್ನು ಒಂದು ವಿಡಂಬನಾತ್ಮಕ ರೂಪಕವಾಗಿ ಇಲ್ಲಿ ಬರೆದಿದ್ದೇನೆ.]
ಮೇಳ:- ಜುಗ್ಗ ಜುಗ್ಗ ಜುಗ್ಗ
ನಮ್ಮೂರಲ್ಲೊಬ್ಬ ಜುಗ್ಗ
ಅವನೇ ನಮ್ಮ ಮೈದಾಸ
ಕಾಸಿಗೆ ಕಾಸು ಕೂಡಿಡ್ತಾನೆ
ಸಾಲದು ಎಂದು ಗೋಳಿಡ್ತಾನೆ || ಜುಗ್ಗ ||
ತಿಂದರೆ ಹೋಯ್ತು
ಉಂಡರೆ ಹೋಯ್ತು
ಅನ್ನೋ ಅಂತ ಕಂಜೂಸು
ಕಂಜೂಸು ಕಂಜೂಸು ಕಂಜೂಸು
ಒಂದು ಪೈಸಾ ಹೋಯ್ತು
ಅಂದರೂ ಜೇವ ಹೋಯ್ತು ಮುಂದೆ ಓದಿ »

- Login or register to post comments
- 180 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ವಿಜ್ಞಾನಿಗಳೊಡನೆ ರಸನಿಮಿಷಗಳು
July 12, 2008 - 11:32am — shylaswamy ಜಿ.ಟಿ. ನಾರಾಯಣ್ ರಾವ್ ರವರ ಬಗ್ಗೆ ಚಿಂತಿಸುತ್ತ ನನ್ನ ಪುಸ್ತಕದ ಆಲ್ಮೇರಾ ಬಳಿ ಪುಸ್ತಕಗಳನ್ನು ಹುಡುಕುತ್ತಿದ್ದಾಗ ಕಣ್ಣಿಗೆ ಬಿದ್ದವರು ಜೆ.ಆರ್.ಲಕ್ಷ್ಮಣರಾವ್ ರವರು. ಅವರ ಪುರ್ಣ ಹೆಸರು ಜಗಲೂರು ರಾಘವೇಂದ್ರ ರಾವ್ ಲಕ್ಷ್ಮಣ ರಾವ್. 1921ರಲ್ಲಿ ಜನಿಸಿದ ಇವರು 1943ರಿಂದ 38 ವರ್ಷಗಳ ಕಾಲ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಪರಮಾಣು ಚರಿತ್ರೆ, ಬೈಜಿಕ ವಿದ್ಯುತ್ ಹೀಗೆ ಅನೇಕ ವೈಜ್ಞಾನಿಕ ಲೇಖನಗಳನ್ನು ಬರೆದಿದ್ದಾರೆ.
ನಾವು ಸಾಧಾರಣವಾಗಿ ವಿಜ್ಞಾನಿಗಳು ಎಂದರೆ ನಮ್ಮಂತೆ ಸಾಮಾನ್ಯ ಮನುಷ್ಯರು ಎಂದು ಪರಿಗಣಿಸುವುದೇ ಇಲ್ಲ. ಅವರೆಲ್ಲೋ ಎತ್ತರದಲ್ಲಿ ಇರುವ ವಿಶಿಷ್ಟ ಮನೊಭಾವದ ವ್ಯಕ್ತಿಗಳಾಗಿರುತ್ತಾರೆ, ನಮ್ಮ ನಿಮ್ಮ ಹಾಗೆ ಸಾಮಾನ್ಯ ವಿಚಾರಗಳು ಅವರಿಗೆ ಬರುವುದೇ ಇಲ್ಲ, ಸದಾ ಗಂಭೀರ ಪ್ರವೃತ್ತಿಯವರಾಗಿ ಇರುತ್ತಾರೆ ಎಂದೆಲ್ಲ ಅವರ ಬಗ್ಗೆ ಚಿಂತಿಸಿರುತ್ತೇವೆ. ಸಾಮಾನ್ಯ ಜನರಂತೆ ಅವರು ಸಂತೋಷ ಆದಾಗ ಕುಣಿದಾಡುವುದು, ಸಣ್ಣ ತಪ್ಪು ಮಾಡಿ ಪೇಚಿಗೆ ಸಿಕ್ಕಿ ಹಾಕಿಕೊಳ್ಳುವುದು ಮುಂತಾದವು ಅವರಿಂದ ಬಲು ದೂರ ಎಂದುಕೊಳ್ಳುತ್ತೇವೆ. ಆದರೆ ಜೆ.ಆರ್. ಲಕ್ಷ್ಮಣ ರಾಯರು ವಿಜ್ಞಾನವಲ್ಲದೇ ವಿಜ್ಞಾನಿಗಳ ಬಗ್ಗೆಯೂ ಹೆಚ್ಚು ಆಸಕ್ತಿಯುಳ್ಳವರಾಗಿ ಅವರ ದಂತಕಥೆಗಳಿಂದಲೂ ಆಕರ್ಷಿತರಾದರಂತೆ. ಹೀಗಾಗಿ ತಾನು ಸವಿದು ಬಾಯಿ ಚಪ್ಪರಿಸಿದ ಸುದ್ದಿಗಳನ್ನು ನಮಗಾಗಿ “ವಿಜ್ಞಾನಿಗಳೊಡನೆ ರಸನಿಮಿಷಗಳು” ಎಂಬ ಕೃತಿ ರಚಿಸಿ ಮನರಂಜನೆ ನೀಡಿದ್ದಾರೆ. ಅವುಗಳನ್ನು ಓದುತ್ತಿದ್ದರೆ ಆ ವಿಜ್ಞಾನಿಗಳೆಲ್ಲಾ ನಮಗೆ ತೀರಾ ಹತ್ತಿರದವರೆನ್ನಿಸುತ್ತಾರೆ. ಅಪಾರ ಬುದ್ಧಿಶಕ್ತಿಯ ಅವರ ಹಸುಳೆ ಸ್ವಭಾವ, ವಿನೋದ ಪ್ರಿಯತೆ, ಮಾನವೀಯತೆ ಮತ್ತು ಮರೆಗೂಳಿತನ ನಮ್ಮ ಹೃದಯವರಳಿಸಿ ತುಟಿಯಂಚಿನಲ್ಲಿ ನಗು ಅರಳುವಂತೆ ಮಾಡುತ್ತವೆ. ಜೆ.ಆರ್. ಲಕ್ಷ್ಮಣರಾವ್ ರವರು ಇಲ್ಲಿ ಮೆರೆಸಿರುವ ಹಾಸ್ಯ ಯಾರ ಮನಸ್ಸನ್ನೂ ಘಾಸಿಗೊಳಿಸದ ಹಿತವಾದ ನಗೆರತ್ನಗಳಂತಿವೆ. ಈ ಪುಸ್ತಕದಲ್ಲಿನ ಒಂದು ಪ್ರಸಂಗವನ್ನು ಇಲ್ಲಿ ಉದಾಹರಿಸುತ್ತೇನೆ. ಮುಂದೆ ಓದಿ »

- Login or register to post comments
- 231 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS: