ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಲೇಖನ: "ಈ ನೀರು ಕುಡದ್ರ ಉಚ್ಚಿ ಕುಡಧಾಂಗ ಆಗತೈತಿ ನೋಡಪಾ..!"

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ › User account

shashikannada (ಲೇಖನಗಳು)

ಶಾಸ್ತ್ರೀಯ ಭಾಷೆಯ ಗುಣ ಲಕ್ಷಣಗಳು

November 6, 2008 - 3:13pm — shashikannada

ಈ ಹಿಂದೆ ಪ್ರಸ್ತಾಪಿಸಿದ ಹಾಗೆ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ ತಮಿಳು ಹಾಗೂ ಸಂಸ್ಕ್ರತ ಪ್ರಾಧ್ಯಾಪಕ ಪ್ರೊ.ಜಾರ್ಜ್ ಎಲ್. ಹಾರ್ಟ್ ಅಂತರ್ಜಾಲದಲ್ಲಿ ತಾವು ಪ್ರಕಟಿಸಿದ್ದ ಲೇಖನದಲ್ಲಿ ಶಾಸ್ತ್ರೀಯ ಭಾಷೆಯ ಕುರಿತು ನಾಲ್ಕು ಚಹರೆಗಳನ್ನು ಪಟ್ಟಿ ಮಾಡಿದ್ದರು.
ಅವುಗಳೆಂದರೆ,

1) ಒಂದು ಭಾಷೆ ಪುರಾತನವಾಗಿರಬೇಕು
2) ಅದು ಸ್ವತಂತ್ರ ಪರಂಪರೆಯನ್ನು ಹೊಂದಿದ್ದು ತನ್ನಷ್ಟಕ್ಕೆ ತಾನೇ ಬೆಳೆದಿರಬೇಕು
3) ಬೇರೊಂದು ಬಾಷೆಯಿಂದ ಒಡಮೂಡಿರಬಾರದು
4) ಸಮೃದ್ಧ್ದವಾದ ಹಾಗೂ ಸಂಪದ್ಭರಿತವಾದ ಪ್ರಾಚೀನ ಇತಿಹಾಸ ಹೊಂದಿರಬೇಕು

ಇದು ಒಂದೆಡೆಯಾದರೆ, ಮತ್ತೊಂದೆಡೆ ಭಾರತ ಸರಕಾರ ಒಂದು ಭಾಷೆಯನ್ನು ಶಾಸ್ತ್ರೀಯ ಭಾಷೆ ಎಂದು ಮಾನ್ಯ ಮಾಡುವುದಕ್ಕೆ ನಾಲ್ಕು ಚಹರೆಗಳನ್ನು ಪಟ್ಟಿ ಮಾಡಿದ್ದು, ಅವು ಇಂತಿವೆ:

1) ಒಂದು ಭಾಷೆಯ ಪಠ್ಯಗಳು/ದಾಖಲಾದ ಇತಿಹಾಸ ಒಂದು ಸಾವಿರ ವರ್ಷಕ್ಕೂ ಪುರಾತನವಾಗಿರಬೇಕು
2) ಪುರಾತನ ಸಾಹಿತ್ಯ /ಪಟ್ಯಗಳು ತಲೆತಲೆಮಾರುಗಳ ಜನರಿಂದ ಅತ್ಯಂತ ಮೌಲಿಕ ಪರಂಪರೆಯೆಂದು ಪರಿಗಣಿತವಾಗಿರುಬೇಕು
3) ಸಾಹಿತ್ಯಿಕ ಪರಂಪರೆ ಸ್ವೋಪಜ್ಞವಾಗಿದ್ದು, ಯಾವುದೇ ಬೇರೊಂದು ಭಾಷೆ/ಸಮುದಾಯದಿಂದ ಸ್ವೀಕಾರವಾಗಿರಬಾರದು
4) ಶಾಸ್ತ್ರೀಯ ಭಾಷೆ ಮತ್ತು ಸಾಹಿತ್ಯ ಪ್ರಸ್ತುತ ಭಾಷೆ ಮತ್ತು ಸಾಹಿತ್ಯಕ್ಕ್ಕಿಂತ ಭಿನ್ನವಾಗಿರಬೇಕು ಅಥವಾ ಇತ್ತೀಚಿನ ಸ್ವರೂಪಕ್ಕಿಂತ ಭಿನ್ನವಾಗಿರಬೇಕು ಅಥವಾ ಇತ್ತೀಚಿನ ಸ್ವರೂಪಕ್ಕಿಂತ ಅಥವಾ ಅದರಿಂದ ಬೆಳವಣಿಗೆ ಹೊಂದಿದ ಭಾಷೆಗಳಿಗಿಂತ ಬೇರೆಯದೇ ಎನ್ನಿಸುವ ಹಾಗಿರಬೇಕು (ಉದಾಹರಣೆ: ಲ್ಯಾಟಿನ್ಗಿಂತ ರೋಮನ್; ಸಂಸ್ಕೃತ ಪಾಳಿಗಿಂತ ಪ್ರಾಕೃತ ಮತ್ತು ಆಧುನಿಕ ಇಂಡೋ ಆರ್ಯನ್ ಭಾಷೆಗಳು ಭಿನ್ನವಾಗಿರುವ ಹಾಗೆ)  ಮುಂದೆ ಓದಿ »

  • ಭಾಷೆ-ಕನ್ನಡ
~.~
  • Login or register to post comments
  • 118 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಶಾಸ್ತ್ರೀಯ ಭಾಷೆಗಳು ಹಾಗೂ ಕನ್ನಡ

October 28, 2008 - 3:01pm — shashikannada
Halmidi Inscription

ಕಳೆದ ಮೂರ್ನಾಲ್ಕು ವರ್ಷಗಳಿಂದ ಈ "ಕ್ಲಾಸಿಕಲ್" ಭಾಷೆ ಕುರಿತು ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ವಲಯದಲ್ಲಿ ಭಾರೀ ಚರ್ಚೆಯೇ ನಡೆದಿದೆ. UNESCO(ಯುನೆಸ್ಕೊ ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಸಾಂಸ್ಕೃತಿಕ ಸಂಸ್ಥೆ) ಬಹಳ ವರ್ಷಗಳ ಹಿಂದೆಯೇ ಭಾರತದ ಅತ್ಯಂತ ಪ್ರಾಚೀನ ಭಾಷೆಯೆಂದು ಸಾಮಾನ್ಯವಾಗಿ ಪರಿಗಣಿಸಲ್ಪಟ್ಟಿರುವ ಸಂಸ್ಕೃತವನ್ನು ಒಳಗೊಂಡಂತೆ ಕ್ಲಾಸಿಕಲ್ ಗ್ರೀಕ್, ಲ್ಯಾಟಿನ್ ಮತ್ತು ಕ್ಲಾಸಿಕಲ್ ಪಷರ್ಿಯನ್ (ಇಂಡೋ-ಯುರೋಪಿಯನ್ ಭಾಷೆಗಳು) ಕ್ಲಾಸಿಕಲ್ ಚೈನೀಸ್ (ಸೈನೊ-ಟಿಬೆಟಿಯನ್ ಭಾಷೆ) ಭಾಷೆಗಳನ್ನು "ಕ್ಲಾಸಿಕಲ್" ಭಾಷೆಗಳೆಂದು ಗುರುತಿಸಿತ್ತು. ನಮ್ಮ ದೇಶದಲ್ಲಿ ಈ ಶಾಸ್ರೀಯ ಭಾಷೆ ಎಂಬುದರ ಕುರಿತು ಚರ್ಚೆ ನಡೆಯಲಾರಂಭಿಸಿದ್ದು ನಮ್ಮ ನೆರೆಯ ಭಾಷೆ, ದ್ರಾವಿಡ ಭಾಷೆಗಳಲ್ಲಿಯೇ ಅತ್ಯಂತ ಪ್ರಾಚೀನ ಭಾಷೆಯೆಂದು ಹೇಳಲಾಗುವ ತಮಿಳನ್ನು ಭಾರತ ಸರಕಾರ "ಕ್ಲಾಸಿಕಲ್" ಭಾಷೆ ಎಂದು ಘೋಷಿಸಿದ ನಂತರವೇ.

2004 ನೇ ಇಸವಿ ಅಕ್ಟೋಬರ್ 12 ರಂದು ಕೇಂದ್ರ ಸರಕಾರ ಈ ಕುರಿತು ಅಧಿಸೂಚನೆ ಹೊರಡಿಸುವ ಮೂಲಕ ತಮಿಳನ್ನು ಅಧಿಕೃತವಾಗಿ "ಕ್ಲಾಸಿಕಲ್" ಭಾಷೆ ಎಂದು ಘೋಷಿಸಿತು. ಆನಂತರವಷ್ಟೇ ಕರ್ನಾಟಕದಲ್ಲಿ ಕ್ಲಾಸಿಕಲ್ ಭಾಷೆಯ ಕುರಿತು ಚರ್ಚೆ ನಡೆಯಲಾರಂಭಿಸಿದ್ದು. ಒಂದು ವೇಳೆ ತಮಿಳಿಗೆ ಕ್ಲಾಸಿಕಲ್ ಭಾಷೆ ಸ್ಥಾನಮಾನ ಸಿಗದಿದ್ದಲ್ಲಿ ಈ ಚರ್ಚೆಯೇ ಹುಟ್ಟುತ್ತಿರಲಿಲ್ಲವೇನೋ. ಅಂದು ಆರಂಭವಾದ ಚರ್ಚೆ ಇಲ್ಲಿಯವರೆಗೂ ಮುಂದುವರಿಯುತ್ತಲೇ ಬಂದಿದೆ.  ಮುಂದೆ ಓದಿ »

  • ಭಾಷೆ-ಕನ್ನಡ
~.~
  • 8 ಪ್ರತಿಕ್ರಿಯೆಗಳು
  • 244 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮತ್ತೆ ಬಂದಿದೆ ಸ್ವಾತಂತ್ರ್ಯಹೀನ ಸ್ವಾತಂತ್ರ್ಯ ದಿನ...!

August 14, 2008 - 11:38pm — shashikannada

ದೇಶದ ಪ್ರತಿಷ್ಠಿತ ಸಾಪ್ತಾಹಿಕಗಳಲ್ಲೊಂದಾದ "ದಿ ವೀಕ್" ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ವಿಶೇಷ ಸಂಚಿಕೆಯೊಂದನ್ನು ಹೊರತಂದಿದೆ. ಅದರಲ್ಲಿನ "ಕವರ್ ಸ್ಟೋರಿ"ಯಲ್ಲಿ ಈ ವರ್ಷ ಪ್ರತಿಷ್ಠಿತ ಮ್ಯಾಗ್ಸೆಸ್ಸೆ ಪ್ರಶಸ್ತಿಗೆ ಭಾಜನರಾದ ಡಾ.ಪ್ರಕಾಶ್ ಆಮ್ಟೆ(ತಮ್ಮ ಪತ್ನಿ ಮಂದಾಕಿನಿಯವರೊಂದಿಗೆ)ಯವರ ಲೇಖನವೊಂದು ಪ್ರಕಟವಾಗಿದೆ.  ಮುಂದೆ ಓದಿ »

  • ಚಿಂತನೆ
~.~
  • 12 ಪ್ರತಿಕ್ರಿಯೆಗಳು
  • 320 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಸುದ್ದಿಸೂಳೆಯ ಬೆನ್ನತ್ತಿ ಹೊರಟಿರುವ ಮಾಧ್ಯಮಗಳು!(ಭಾಗ 2)

August 11, 2008 - 4:14pm — shashikannada

ಮಾಧ್ಯಮಗಳು ಈ ರೀತಿ ವರ್ತಿಸಿದ ಪ್ರಕರಣ ಇದೇ ಮೊದಲೇನಲ್ಲ. ಈ ಹಿಂದೆ ಬಹುಚರ್ಚಿತ ನಿತಾರಿ ಪ್ರಕರಣ, ಜೆಸ್ಸಿಕಾ ಲಾಲ್ ಪ್ರಕರಣದಲ್ಲೂ ಇದೇ ರೀತಿಯಾಗಿಯೇ ನಡೆದುಕೊಂಡಿದ್ದವು ಎಂದು ಹೇಳುತ್ತ ಅವುಗಳ “ಸಚ್ಚಾರಿತ್ರ್ಯ ಚರಿತ್ರೆ”ಯನ್ನು ನೆನಪಿಸಿಕೊಳ್ಳುವ “ಪುಣ್ಯ” ಕಾರ್ಯವನ್ನು ಮಾಡಬಹುದು.  ಮುಂದೆ ಓದಿ »

  • ಪ್ರಚಲಿತ
~.~
  • 9 ಪ್ರತಿಕ್ರಿಯೆಗಳು
  • 374 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಸುದ್ದಿಸೂಳೆಯ ಬೆನ್ನತ್ತಿ ಹೊರಟಿರುವ ಮಾಧ್ಯಮಗಳು! (ಭಾಗ 1)

August 7, 2008 - 1:34pm — shashikannada

ಪೀಠಿಕೆ
-------

ಭಾರತದ ಜನಗಳಾದ ನಾವು ಭಾರತವನ್ನು ಒಂದು (ಸಾರ್ವಭೌಮ ಸಮಾಜವಾದಿ ಸರ್ವಧರ್ಮ ಸಮಭಾವದ ಪ್ರಜಾಸತ್ತಾತ್ಮಕ) ಗಣರಾಜ್ಯವಾಗಿ ರಚಿಸಲು ಹಾಗೂ:
ಅದರ ಸಮಸ್ತ ನಾಗರಿಕರಿಗೆ:
ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ;
ವಿಚಾರ, ಅಭಿವ್ಯಕ್ತಿ, ವಿಶ್ವಾಸ, ಧರ್ಮಶ್ರದ್ಧೆ ಮತ್ತು
ಉಪಾಸನಾ ಸ್ವಾತಂತ್ರ್ಯ;
ಸ್ಥಾನಮಾನ ಮತ್ತು ಅವಕಾಶ ಸಮಾನತೆ  ಮುಂದೆ ಓದಿ »

  • ಪ್ರಚಲಿತ
~.~
  • 8 ಪ್ರತಿಕ್ರಿಯೆಗಳು
  • 392 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ
12ಮುಂದಿನ ›ಕೊನೆಯ »

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • Aravinda
    ಉ: ನಮ್ಮ ಹಾಸ್ಟೆಲ್ ಹುಡುಗರ ಕಾಫಿ ಯಾತ್ರೆ!
    November 23, 2008 - 2:33pm
  • bvenkatraya
    ಉ: ಅನ್ಯ ರಾಜ್ಯದವರಲ್ಲಿರುವ ಭಾಷಾ ಪ್ರೇಮ ನಮ್ಮಲ್ಲಿ ಯಾಕೆ ಇಲ್ಲಾ?
    November 23, 2008 - 1:51pm
  • bvenkatraya
    ಉ: ಅನ್ಯ ರಾಜ್ಯದವರಲ್ಲಿರುವ ಭಾಷಾ ಪ್ರೇಮ ನಮ್ಮಲ್ಲಿ ಯಾಕೆ ಇಲ್ಲಾ?
    November 23, 2008 - 1:42pm
  • ಮನಹ್ಪಠಲ
    ಉ: ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
    November 23, 2008 - 1:04pm
  • ASHOKKUMAR
    ಉ: ಸಂಜೆವಾಣಿ ಏರಿಸಿದ ಕ್ಷಿಪಣಿ
    November 23, 2008 - 11:48am
  • ASHOKKUMAR
    ಉ: ಮಿನಿ ರಾಜಕಾರಣಿ !
    November 23, 2008 - 11:47am
  • kpbolumbu
    ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?
    November 23, 2008 - 11:29am
  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು-88 ಎನಿತು ಇನಿದು ಕನ್ನಡ ನುಡಿಯು
    November 23, 2008 - 11:21am
  • mahesha
    ಉ: ಓದಿದ್ದು ಕೇಳಿದ್ದು ನೋಡಿದ್ದು-88 ತರಂಗ ಸಂಪಾದಕಿಯ ಚೊಚ್ಚಲ ಹೆರಿಗೆ!
    November 23, 2008 - 11:03am
  • prem
    ಉ: ಓದಿದ್ದು ಕೇಳಿದ್ದು ನೋಡಿದ್ದು-88 ತರಂಗ ಸಂಪಾದಕಿಯ ಚೊಚ್ಚಲ ಹೆರಿಗೆ!
    November 23, 2008 - 10:47am
ಇನ್ನಷ್ಟು


ಗುರುವಿನ ವಿಸ್ತರದ | ಪರಿಯ ನಾನೇನೆಂಬೆ
ಮೆರೆವ ಬ್ರಹ್ಮಾಂಡದೊಳಹೊರಗನವ ಬೆಳಗಿ |
ಪರಿಪೂರ್ಣನಿಪ್ಪ ಸರ್ವಜ್ಞ ||

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator