ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › User account

rameshbalaganchi (ಬ್ಲಾಗ್ ಬರಹಗಳು)

"ಭಿಷ್ಟಿ ಪೊಡೇ ಟಪುರ್ ಟುಪುರ್"

June 3, 2008 - 10:13pm — rameshbalaganchi

ಮಳೆಯಿಲ್ಲದೆ ಮಳೆನೀರ ಹನಿಯ ಸದ್ದು.

ಈ ಶೀರ್ಷಿಕೆ, ಒಂದು ಬಂಗಾಳಿ ಹಾಡಿನ ಸಾಲು. ಟಪ್, ಟಪ್ ಮಳೆ ಬೀಳುತ್ತಿದೆ ಅಂತ ಇದರ ಅರ್ಥ. ಬಾಲ್ಯದಲ್ಲಿ ಕೇಳಿದ ಹಾಡು ಇದು.

ಬೆಂಗಳೂರ್ನಲ್ಲಿ ಬಿಟ್ರೆ ಮಳೆ ಮತ್ತೆಲ್ಲಿ ಶುರುವಾಗಿದ್ಯೋ ಗೊತ್ತಿಲ್ವಲ್ಲ!!. ಇಲ್ಲಿ ತೀರ್ಥಳ್ಳೀಲಿ ಏಪ್ರಿಲ್ ತಿಂಗ್ಳಲ್ಲಿ ಸ್ವಲ್ಪ ಮುಖಹಾಕಿ,"ತಡೀರಿ, ಬರ್ತೀನಿ" ಅಂದಿದ್ದೆ ಅದೆಲ್ಲಿಗ್ಹೋಯ್ತೋ? ಹೆಚ್ಚಿನಂಶ ಮಲೆನಾಡ ಅಡಿಕೆ ಬೆಳೆಗಾರ್ರ ಹಿಡಿಶಾಪಕ್ಕೆ ರೋಸಿ ಎಲ್ಲೋ ಗುಳೇ ಹೋಗಿರ್ಬೇಕು.
ಬೆಂಗ್ಳೂರು ಬೇಡ ಅಂತ ಬಯಸಿ ಬಯ್ಸಿ ನಾನು ಇಲ್ಲಿಗೆ ಬಂದಾಗ ಏನು ಜಲಸಿರಿ!! ಅಬ್ಬಾ ನೆನಸ್ಕೊಂಡ್ರೆ ಮೈಯೆಲ್ಲ ಪುಳಕ ಬರತ್ತೆ! ನನ್ನ ಬಾಲ್ಯಕಾಲದ ಅನೇಕ ನೆನೆಪುಗ್ಳು ಮಳೆ, ಪ್ರವಾಹ, ಮಳೆನೀರಿನ ಸದ್ದು, ಕೊಚ್ಚೆರಾಡಿ ಇವುಗ್ಳ ಜೊತೇನೇ ತೆಕ್ಕೆಯಾಗಿವೆ. ಬಾಲ್ಯಕಾಲದಲ್ಲಿ ಶಿವಮೊಗ್ಗಾದಲ್ಲಿ ಎಷ್ಟು ಮಳೆ ಬರಿತ್ತು ಅಂದ್ರೆ ಹೇಳೋದೇ ಬೇಡ. ದಿನ ಬಿಟ್ದಿನ ಶಾಲೆಗೆ ರಜೆ ಇರ್ತಿತ್ತು. ನದಿ ದಡ್ದಲ್ಲಿ ನಿಂತು ದಡ ಕೊರೀತಾ ಕೆಂಪು ರಾಡಿಯಾಗಿ ಹರಿಯೋ ತುಂಗೆ ನೋಡಿದ್ರೆ ಅದ್ಯಾವ ಪುಣ್ಯಾತ್ಮ "ತುಂಗಾ ಪಾನಂ" ಅಂದ್ನೋ ಅನ್ಸೋದು. ನಮ್ಮ ಮನೆಯ ಹತ್ರಾನೇ ಇದ್ದ ಒಂದು ದೊಡ್ಡ ಮೋರಿ- ವೈತರಣಿ ಅಂತ್ಲೇ ಕರೀತಿದ್ವಿ ಅದನ್ನ- ತುಂಬಿ ನೀರೆಲ್ಲ ಅಕ್ಕ ಪಕ್ಕದ ವಠಾರಕ್ಕೆ ನುಗ್ಗಿ ಒಳ್ಳೇ ಫಜೀತಿ. ನಮ್ಮೂರ ದೇವರ ಅರ್ಚಕರಾದ ರಾಂಭಟ್ರು ತಮ್ಮ ಧಡೂತಿ ಹೆಂಡ್ತೀನ ಅನಾಮತ್ತಾಗಿ ತೋಳಲ್ಲಿ ಬಳಸಿ ಎತ್ಕೊಂಡು ಸೊಂಟಮಟ್ಟ ನೀರಲ್ಲಿ ಅವ್ರನ್ನು ಸುರಕ್ಷಿತ ಜಾಗಕ್ಕೆ ಕರ್ಕೊಂಡ್ಹೋಗ್ತಿದ್ದ ದೃಶ್ಯ ಯಾವತ್ಗೂ ಮರ್ಯೋದೇ ಇಲ್ಲ. ಸೀಗೇಹಟ್ಟಿ ಅನ್ನೋ ಶಿವಮೊಗ್ಗದ ಎಕ್ಸ್‌ಟೆನ್ಶನ್ ಸದಾ ಮಳೆಗಾಲದಲ್ಲಿ ಸುದ್ದಿಯಲ್ಲಿರ್ತಿತ್ತು. ನಾಲ್ಕಾಣೆ ಕೊಟ್ರೆ ಸಾಕು ಪ್ರೈವೇಟ್ ಬಸ್ನೋರು ಗಿಟ್ಟಿಗಿರಿದು ಜನತುಂಬ್ಕೊಡು ಸೀಗೇಹಟ್ಟಿ, ಹರಕೆರೆ, ಗಾಜನೂರು ಎಲ್ಲ ಕಡೆ ಪ್ರವಾಹದ ದೃಶ್ಯ ತೋರ್ಸೋರು.  ಮುಂದೆ ಓದಿ »

  • ಆಂಡಯ್ಯ
  • ನೀರು
  • ಮಳೆ
~.~
  • rameshbalaganchi ರವರ ಬ್ಲಾಗ್
  • 6 ಪ್ರತಿಕ್ರಿಯೆಗಳು
  • 366 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು

May 17, 2008 - 7:17pm — rameshbalaganchi

ಪಂಪನ ’ವಿಕ್ರಮಾರ್ಜುನ ವಿಜಯ’ದಲ್ಲಿ ಮತ್ತು ಆಂಡಯ್ಯನ 'ಕಬ್ಬಿಗರ ಕಾವ'ದಲ್ಲಿ ಕಂಡುಬರುವ ಕನ್ನಡನಾಡಿನ ಚೆಲುವು
ಜಲಜಲನೊ[ೞ್ಕು]ತಿರ್ಪ ಪರಿಕಾಲ್ ಪರಿಕಾಲೊಳಳುರ್ಕೆಗೊಂಡ ನೆಯ್ದಿಲ
ಪೊಸವೂ ಪೊದಳ್ದ ಪೊಸನೆಯ್ದಿಲ ಕಂಪನೆ ಬೀಱಿ ಕಾಯ್ತ ಕೆಂ
ಗೊಲೆಯೊಳೆ ಜೋಲ್ವ ಶಾಳಿ [ನವ]ಶಾಳಿಗೆ ಪಾಯ್ವ ಶುಕಾಳಿ ತೋಱೆ ಕ
ಯ್ವೊಲಗಳಿನೊಪ್ಪಿ ತೋಱೆ ಸಿರಿ ನೋಡುಗುಮಾ ವಿಷಯಾಂತರದೊಳ್  ಮುಂದೆ ಓದಿ »

  • ಕನ್ನಡ / ಸಾಹಿತ್ಯ /ತಿರುಳು
~.~
  • rameshbalaganchi ರವರ ಬ್ಲಾಗ್
  • 11 ಪ್ರತಿಕ್ರಿಯೆಗಳು
  • 691 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಅಂಬರಕ್ಕೆ ಹಾರಿತಯ್ಯೋ!!

April 16, 2008 - 5:07am — rameshbalaganchi
ಮರಿ ಬುಲ್‌ಬುಲ್ ನನ್ನ ಕಂಪ್ಯೂಟರ್ ಟೇಬಲ್ ಮೇಲೆ

ಸರಿ ಸುಮಾರು ಎರಡು ವರ್ಷದ ಹಿಂದಿನ ಬೇಸಿಗೆ ಇರಬೇಕು, ಕುಟುಂಬದ ಜೊತೆ ಬೆಂಗಳೂರಿಗೆ ಹೋದವನು "ನಮ್ಮೂರೇ ಚಂದ" ಅಂದ್ಕೋತಾ "ಉಸ್ಸಪ್ಪಾ" ಅಂದು ಮನೆಗೆ ಬಂದು ಬಿದ್ದೆ! ಮಳೆ ಇನ್ನೂ ಮೊದಲಿಟ್ಟಿರ್ಲಿಲ್ಲ. ಯಾತಕ್ಕೂ ಮನಸ್ಸು ಬಾರದ ಹಾಗೆ ವಿಪರೀತ ಧಗೆ!!ಮನೆ ಹೊರಗೆ ಬಂದು ಜಗಲಿ ಮೇಲೆ ಕೂತ್ರೆ ಹಾಯನ್ಸೋ ಹಾಗೆ ಗಾಳಿಮರದ ತಂಪುಗಾಳಿ. ಮೇಲೆ "ಕುಹೂ ಕುಹೂ" ಕರ್ಣರಸಾಯನ ಬೇರೆ. ಜೊತೆಗೆ ಕಾಗೆ ಕೋಗಿಲೆಗಳ ಜೂಟಾಟ ನೋಡ್ತಾ ಮೈಮರೆತಿದ್ದೆ. ಚಿತ್ತ ಏನೂ ನೇಯದೆ ನಿರುಮ್ಮಳವಾಗಿತ್ತು. ಅಷ್ಟರಲ್ಲಿ "ಅಪ್ಪ, ಅಪ್ಪ, ಇಲ್ನೋಡ್ಬಾರಪ್ಪಅಂತ ಉಸಿರುಬಿಡದೆ ಮಗಮಹಾರಾಯನ ತುರ್ತಿನ ಕಿರಿಚಾಟ. ಮನಸ್ಸಿಲ್ಲದ ಮನಸ್ಸಿಂದ ಎದ್ದು ಹೋಗಿ ನೋಡಿದ್ರೆ ನಮ್ಮ ಗರಾಜ್‌ನಲ್ಲಿ ಬಟ್ಟೆ ಹರವಕ್ಕೆ ಹಾಕಿರೋ ಪ್ಲಾಸ್ಟಿಕ್ ವೈರ್‌ಗಳು ಸೇರೋ ಕಡೆ ಪುಟ್ಟದೊಂದು ಹಕ್ಕಿಗೂಡು!!! ಸಾಧಾರಣವಾಗಿ ಯಾರಿಗೂ ಕಾಣದ ಹಾಗೆ ಮರದಲ್ಲಿ ಎಲೆಯ ಸಂದಿನಲ್ಲಿ ಗೂಡು ಕಟ್ಟುವ ಹಕ್ಕಿ, ನಾವೆಲ್ಲ ಹದಿನೈದು ದಿನ ಮನೆಯಲ್ಲಿ ಇಲ್ಲದಿದ್ದಾಗ ಮನೆ ಬಿಟ್ರು ಅಂದ್ಕೊಂಡ್ತೋ ಏನೋ, ತೀರಾ ಅಪರೂಪಕ್ಕೆ ನಮ್ಮ ಗರಾಜನ್ನ್ನು ಆರಿಸಿಕೊಂಡಿತ್ತು.

ಯಾವ ಹಕ್ಕೀದು ಈ ಗೂಡು ಅಂತ ಪುಸ್ತಕದಲ್ಲಿ ತಲಾಶ್ ಮಾಡುತ್ತಿದ್ದಾಗ ಅದು ಬುಲ್‍ಬುಲ್ ಹಕ್ಕೀದು ಅಂತ ಗೊತ್ತಾಯ್ತು. ಮರುದಿನ ಬಚ್ಚಲುಮನೆಯಿಂದ ಊಟದ ಮನೆಗೆ ಗರಾಜ್ ಹಾದು ಬರುತ್ತಿರುವಾಗ ಬರ್ರ್ರ್ ಅನ್ನೋ ರೆಕ್ಕೆಯ ಸಡಗರದ ಸದ್ದು. ನನ್ನ ಹೆಜ್ಜೆಸದ್ದಿಗೆ ಹೆದರಿದ ಹೆಣ್ಣು ಬುಲ್‌ಬುಲ್ ಹೊರಗೆ ಹಾರಿ ಗೇಟಿನ ಹತ್ತಿರ ಗಣೆ ಬೇತಾಳನ ಹಾಗೆ ಬೆಳಿದು ನಿಂತಿದ್ದ ದಾಸವಾಳದ ಗಿಡದ ಕೊಂಬೆಯ ಮೇಲೆ ಕೂತು "ಶನಿ ತೊಲಗಿತೋ ಇಲ್ವೋ" ಅಂತ ಗರಾಜಿನ ಸಂದಿನಲ್ಲಿ ಹಣಕುತ್ತಾ ಇತ್ತು. ನಾನು ಊಟದ ಮನೆಯಕಡೆ ಹೋದಹಾಗೆ ಮಾಡಿ ಬಾಗಿಲ ಸಂದಿನಿಂದ ಹಣಕಿದರೆ ತಾಯಿ ಹಕ್ಕಿ ಬಾಯಲ್ಲಿ ಒಂದು ಹಣ್ಣೆಲೆ ಕಚ್ಕೊಂಡು ಗೂಡು ಪೂರ್ತಿ ಮಾಡಕ್ಕೆ ಹಾಜರ್!!  ಮುಂದೆ ಓದಿ »

  • ಹೊಸ ಬ್ಲಾಗ್
~.~
  • rameshbalaganchi ರವರ ಬ್ಲಾಗ್
  • 4 ಪ್ರತಿಕ್ರಿಯೆಗಳು
  • 558 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • Arun Dongre
    ಉ: hi friends,
    October 8, 2008 - 11:14am
  • hndivya
    ಉ: ನಿರೀಕ್ಷೆ
    October 8, 2008 - 11:12am
  • vidhata
    ಉ: ಅಲ್ನೋಡು, ಕಲ್ಬೆಂಚಿನ್ಮೇಲೆ ಕೂತ್ಕೊಂಡ್ ಎಷ್ಟ್ ಚೆನ್ನಾಗ್ ಬರೀತಿದಾರಲ್ವಾ !
    October 8, 2008 - 11:08am
  • Arun Dongre
    ಉ: ಗಜಲ್
    October 8, 2008 - 11:08am
  • harsha.st
    ಉ: ಭಗವದ್ಗೀತೆಯ ಯಥಾರೂಪ
    October 8, 2008 - 11:02am
  • harsha.st
    ಉ: ಉಪ್ಪು ರೋಸೋದು ಅಂದ್ರೇನು? ಇದು ಯಾವ ಊರ ಬಳಕೆ?
    October 8, 2008 - 10:52am
  • ASHOKKUMAR
    ಉ: ಲಿನಕ್ಸ್ ಗೆ ೧೭ ವರ್ಷದ ಹರೆಯ
    October 8, 2008 - 10:52am
  • kishoreyc
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 10:24am
  • Aditi
    ಉ: ಇಂಬಕ್ಕ
    October 8, 2008 - 10:14am
  • mahesha
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 10:00am
ಇನ್ನಷ್ಟು


ದುರ್ಬಲರಿಗೆ ಕ್ಷಮಿಸುವ ಹಕ್ಕಿಲ್ಲ, ಕ್ಷಮಿಸುವ ಶಕ್ತಿ ಮತ್ತು ಹಕ್ಕಿರುವುದು ಬಲಿಷ್ಠರಿಗೆ ಮಾತ್ರ.

— ಮಹಾತ್ಮ ಗಾಂಧಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator