parvathi.G.r (ಲೇಖನಗಳು)
ನಿನ್ನೆಡೆಗೆ ,,,
November 5, 2008 - 4:48pm — parvathi.G.rಬೇಕು ಬದುಕಲಿ ಸಾಕು ಅನಿಸುವಷ್ಟು ಮೌನ
ಬೇಕು ಅನಿಸುವಷ್ಟು ಮಾತು
ಹಿಡಿ ಮುಡಿಯಲಿ ಹಿಡಿಯಲಾರದಷ್ಟು ಪ್ರೀತಿ.
ಆದರೆ ಏಷ್ಟು ಜನರಿಗೆ ಸಿಗುತ್ತೆ? ಇವೆಲ್ಲಾ , ಮೌನ ಬೇಕಾದವರಿಗೆ ಮಾತು ಹೆಚ್ಚು, ಮಾತು ಬೇಕಾದವರಿಗೆ ಉಸಿರು ಗಟ್ಟಿಸುವ ಮೌನ, ಇನ್ನು ಪ್ರೀತಿ ಹಿಡಿಯೂ ಇಲ್ಲ, ಮುಡಿಯೂ ಇಲ್ಲ. ಮುಂದೆ ಓದಿ »

- Login or register to post comments
- 117 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಬಾಡದ ಹೂವದು ಸ್ನೇಹ..........
August 4, 2008 - 5:18pm — parvathi.G.rಬಾಡದ ಹೂವದು ಸ್ನೇಹ..........
ಮತ್ತೆ ಬಂದಿದೆ ಗೆಳೆಯರ ದಿನ ಸ್ನೇಹದ ಅಂಗಳದಲ್ಲಿ ಕಿರು ನಗೆಯ ಬೀರುತ್ತಾ, ಹಳೆಯ ನೆನಪುಗಳ ಕದಡುತ್ತ, ಎಂದೋ ಯಾವುದೋ ಕಾರಣಕ್ಕೆ ಮುನಿಸಿಕೊಂಡ ಸ್ನೇಹಿತರ ಒಂದು ಗೂಡಿಸುತ್ತಾ, ಕಳೆದು ಹೋದವರ ಮತ್ತೆ ತನ್ನ ಸ್ನೇಹದಲ್ಲಿ ಬಂದಿಸುತ್ತಾ, ಬಂದಿತೆ ಮತ್ತೆ ಮೆಲು ನಗೆಯ ಬೀರುತ್ತಾ, ಗೆಳೆಯರ ದಿನ ಆತ್ಮೀಯ ಗೆಳೆಯ ಗೆಳತಿಯರಿಗಾಗಿ, ಮುಂದೆ ಓದಿ »

ಕನ್ನಡಿಯೊಳಗಿನ ಗಂಟು
July 23, 2008 - 1:17pm — parvathi.G.rಕಾಲೇಜಿನ ಕಡೆಯ ದಿನವದು, ಕೊನೆಯ ದಿನವಾದ್ದರಿಂದ ಸಹಜವಾಗಿ ಅಗಲಿಕೆಯ ನೋವು ಎಲ್ಲರಲ್ಲೂ ಇತ್ತು, ವಿದಾಯಗಳು ಸಂದಾಯವಾಗುತ್ತಿತ್ತು. ಆಟೋ ಗ್ರಾಫ್ ವಿನಿಮಯ, ಭವಿಷ್ಯದ ಚಿಂತನೆ, ಯಾಕೋ ಯಾರದು ಮಾತುಗಳೇ ಮುಗಿಯುತ್ತಿರಲಿಲ್ಲ, ಮುಂದೆ ಓದಿ »

ಮರಳು ಗೂಡು,
July 11, 2008 - 11:05am — parvathi.G.rಸಂಜೆ ಕಾಫಿ ಹೀರುತ್ತಾ, ತಾರಸಿಯ ಮೇಲೆ ನಿಂತಾಗ ಮುಳುಗುತ್ತಿರುವ ಸೂರ್ಯನ ಹೊಂಬಣ್ಣ, ಕಂಗಳಲ್ಲಿ ಹೊಂಬೆಳಕನ್ನೇ ತುಂಬುತ್ತದೆ, ಇನ್ನೂ ಸಂಜೆಯಾಗುತ್ತಲೇ ಗೂಡು ಸೇರುವ ತವಕದಲ್ಲಿ ಚಿತ್ತಾಕರ್ಶಕವಾಗಿ ಸಾಗಿ ಹೋಗುವ ಹಕ್ಕಿಗಳು, ಅವುಗಳ ಕಲರವ ಹೊಸ ಲೋಕಕ್ಕೆ ಒಯ್ಯುತ್ತವೆ. ಮುಂದೆ ಓದಿ »

ಹೂಗಾರನ ಪುಸ್ತಕ ಪ್ರೇಮ
July 3, 2008 - 10:38am — parvathi.G.rವೆಂಕಟರಮಣ ಸ್ವಾಮಿ ದೇವಸ್ಥಾನದ ಹೊರಭಾಗದಲ್ಲಿ ಹೂ ಮಾರುವ ಕಾಯಕ ಹೊತ್ತ ಹೂಗಾರನನ್ನು ನೋಡಿದಾಗಲೆಲ್ಲಾ ನನ್ನಲ್ಲಿ ಒಂದು ಕುತೂಹಲ ಮನೆ ಮಾಡುತಿತ್ತು. ಕಾರಣ ಆತನ ಕೈಯಲ್ಲಿ ಸದಾ ಯಾವುದಾದರೊಂದು ಕನ್ನಡ ಪುಸ್ತಕವಿರುತ್ತಿತ್ತು, ಬೆಳಗ್ಗೆ ೬ ರಿಂದ ರಾತ್ರಿ ೧೦ ವರೆಗೆ ಆತ ಅಲ್ಲಿರುತ್ತಿದ್ದ, ಆತನಿಲ್ಲದ ಸಮಯದಲ್ಲಿ ಆತನ ಅಮ್ಮ ಅಲ್ಲಿರುತ್ತಿದ್ದಳು.
ನಾವು ಹಳ್ಳಿಗೆ ರಜೆಯಲ್ಲಿ ಹೋದಾಗ ಈ ವೆಂಕಟರಮಣ ದೇವಸ್ಥಾನಕ್ಕೆ ಹೋಗುತ್ತಿದ್ದೆವು ರಜೆ ಇದ್ದಷ್ಟು ದಿನ, ದಿನಾ ಹೋಗಿ ಬರುವುದು ಪ್ರತೀತಿ. ಆಗ ನಾವು ಚಿಕ್ಕವರು ಆತ ಅಲ್ಲಿ ಹೂಮಾರುತ್ತಾ ಓದುತ್ತಾ ಕುಳಿತಿರುತ್ತಿದ್ದ. ತನ್ನ ಶಾಲಾ ಜೀವನ ಮುಗಿಸಿ ಹೂಗಾರನಾಗಿ ತನ್ನ ಕಾರ್ಯವನ್ನು ಆರಂಭಿಸಿ ಬಿಟ್ಟಿದ್ದ, ಅಮ್ಮನೊಂದಿಗೆ ದೇವಸ್ಥಾನಕ್ಕೆ ಹೋದಾಗ ಅಮ್ಮನ ಸೆರಗಿನಿಂದೆ ಅಡಗಿನಿಂತು, ಆತ ಮುಗುಚಿಟ್ಟಿ ಪುಸ್ತಕಗಳ ಹೆಸರು ಓದುವುದು. ಆದರೆ ಅದನ್ನು ಕೂಡಿಸಿ ಓದುವಷ್ಟರಲ್ಲಿ ಅಮ್ಮ ಹೂ ಕೊಂಡು ಹೊರಟು ಬಿಡುತ್ತಿದ್ದಳು. ಆತ ಮುಗುಳು ನಗುತ್ತಾ "ಏನ್ ಪುಟ್ಟಿ ಅನ್ನುತ್ತಿದ್ದ ?"
ನಾನೋ ಪೆದ್ದು ಪೆದ್ದು ನಗೆ ಬೀರಿ, ಪುಸ್ತಕ ಯಾವುದೆಂದು ಕೇಳಲು ಭಯ, ಪುಸ್ತಕದತ್ತ ಕೈ ತೋರಿದರೆ ಅದಾ ಎಂದು ಅದರ ಹೆಸರೇನೋ ಹೇಳುತಿದ್ದ, ಆಗ ಅದು ಅರ್ಥವಾಗದ ವಯಸ್ಸು ಬಿಡಿ. ನನ್ನ ಅರಿವಿಗೆ ಬಂದಂತೆ ಅದು ಹಳಗನ್ನಡ ಅದಕ್ಕೇ ನನಗೆ ಅದನ್ನು ಸೇರಿಸಿ ಓದಲು ಕಷ್ಟವಾಗುತ್ತಿತ್ತು. ಮುಂದೆ ಓದಿ »


RSS: