karihaida (ಬ್ಲಾಗ್ ಬರಹಗಳು)
ಹೈಟ್ ಆಫ್ ಪೈರಸಿ
April 2, 2008 - 10:13pm — karihaida
ಇಂದು ಬೆಂಗ್ಳೂರಿಂದ ಮೈಸೂರ್ಗೆ "ಐರಾವತ' ಹತ್ಕೊಂಡ್ ಬರ್ಬೇಕಾದ್ರೆ, 'ಗಾಳಿಪಟ' ಚಿತ್ರ ಹಾಕಿದ್ರು. ಯಾವ್ದೋ ಸಿನೆಮಾ ಹಾಲ್ನಲ್ಲಿ ಕೂತ್ಕೊಂಡ್ ಹ್ಯಾಂಡಿಕ್ಯಾಮಿಂದ ತೆಗೆದದ್ದು. ಕ್ವಾಲಿಟಿ ಕಚ್ಛಡವಾಗಿತ್ತು. ಅದನ್ನ ನನ್ ಪಕ್ಕದ್ ಸೀಟ್ನಲ್ಲಿ ಕೂತೋನ್ ಒಬ್ಬ ಅವ್ನ ಮೊಬೈಲ್ ಕ್ಯಾಮೆರಾ ಇಂದ ಸೆರೆ ಹಿಡೀತಿದ್ದ. ಅಫ್ ಕೋರ್ಸ್ ಹಾಡ್ಗಳನ್ನ್ ಮಾತ್ರ

ಕವಲ್ ದಾರಿ
March 27, 2008 - 9:15pm — karihaidaನಾನ್ ಹಟ್ಟಿ ಬುಟ್ಟಿ ಏಷ್ಟ್ ವರ್ಸ ಆಯ್ತು ಅಂತ್ ನಂಗೇ ಜ್ಞಾಪ್ಕ ಇಲ್ಲ. ಮೊದ್ಲಿಗೆ ಒಟ್ಟೆ ಪಾಡು, ಆಮೇಲೆ ಹಿಂತಿರುಗಕ್ಕೆ ಏನೋ ಮುಜುಗ್ರ. ನನ್ನ್ ವೇಸ, ಭಾಸೆ, ಆಡು-ಪಾಡು ಎಲ್ಲಾ ಬದಲಾಗದೆ. ಶುರೂಲಿ ತಿಂಗ್ಳಿಗ್ ಒಂದ್ಸಾರಿ ಹೋಗ್ತಿದ್ದೆ. ಓದಾಗ ಏನೇನೋ - ಬಟ್ಟೆ, ಆಟಸಾಮಾನು, ತಿಂಡಿ, ಪಾತ್ರೆ ಎಲ್ಲಾ ಕೊಂಡ್ಕೊಂಡು ಹೋಗಿ ಕೊಡ್ತಿದ್ದೆ. ಅವ್ರಿಗೆ ಖುಷಿಯಾಗೋದು. ಮೈ ಸವ್ರಿ ಏಂಗಾಗ್ಬುಟ್ಟ ಅನ್ನೋವ್ರು. ಆದ್ರೆ ಈಗೀಗ ವರ್ಷಕ್ಕೊಂದ್ಸಾರಿ ಹೋದ್ರು "ಬಂದ್ಯಾ ಬಾ. ಚೆಂದಾಕ್ಕಿದ್ಯ? ಕೆಲ್ಸ ಎಂಗದೆ?" ಅಂತ ಕೇಳಿ ತಮ್ಮ ಪಾಡ್ಗೆ ತಾವು ಓಯ್ತಾರೆ. ಏನಾದ್ರು ತೊಗೊಂಡ್ ಹೋದ್ರೆ, ಒಂದ್ಸಾರಿ ಕಣ್ ಹಾಯ್ಸಿ ಅಲ್ಲೇ ಇಡ್ತಾರೆ. ಮನ್ಸಿಗ್ ಯಾಕೋ ಬೋ ಬೇಸರ ಆಗತ್ತೆ.
ಹಂಗಂತ ಹಟ್ಟಿಗ್ ಹೋಗೋದು, ಬಿಡಕ್ ಆಯ್ತದ? ಯೋಳಿ! ಹಂಗೇ ಯೋಚ್ಸ್ಕೊಂಡ್ ಹೋದೆ ಹಟ್ಟಿ ಕಡೆ ಈ ಬಾರಿನು. ಈ ಸಾರಿ, ಎರಡ್ ವರ್ಷ ಆಮೇಲೆ ಹೋಯ್ತಿರೋದು ಹಟ್ಟಿಗೆ. ಎಂಗೆಂಗಾಗೈತೋ, ಎಂಗೆಂಗವ್ರೋ ವಸಿ ನೋಡಾಣ ಅಂತ ಹೊರಟೆ. ನಮ್ ಪಟ್ಟಣದಾಗೆ ಒಂದ್ ಬಸ್ ಹಿಡ್ಕಂಡ್ ಹೋದ್ರೆ ನಮ್ ಕಾಡಿನ್ತವ ಇರೋ ಒಂದ್ ಹಳ್ಳಿಗ್ ತಂದ್ ನಿಲ್ಸ್ತಾನೆ. ಅಲ್ಲಿಂದ ಬೋ ದೂರ ನಡ್ಕಂಡ್ ಹೋಗ್ಬೇಕು. ಅರ್ಧ ದಿನಾನೆ ಬೇಕು ನಡ್ಯಾಕ್ಕೆ. ಒಬ್ಬನೇ ಬೇರೆ. ಅಭ್ಯಾಸ ಬೇರೆ ತಪ್ಪಿ ಹೋಗದೆ. ಉಸ್ಸಪ್ಪ ಅನ್ಕೋಂಡ್ ಹೋಗ್ಬೇಕಲ್ಲಪ್ಪ ಅಂತ ಯೋಚ್ಸ್ಕೊಂಡು ಬಸ್ ಹತ್ದೆ. ಒಂದೆರಡ್ ಗಂಟೆ ಕಳೀತು. ಒಳ್ಳೆ ನಿದ್ದೆ ಮಾಡಿದ್ದೆ. ಕಂಡಕ್ಟ್ರಪ್ಪಾ ನನ್ ಮುಖ್ದಾಗೆ ಸೀಟಿ ಊದಿ ಎಬ್ರಸ್ದ. "ನಿನ್ ಹಳ್ಳಿ ಬಂದೈತೆ ಇಳ್ಕಳಣ್ಣೌ" ಅಂದ. ನಾನು ನನ್ ಗಂಟು, ಮೂಟೆನೆಲ್ಲಾ ಹಿಡ್ದು ಇಳ್ದೆ. ನಾನು ಇಳ್ದ್ ತಕ್ಷಣ ಬಸ್ನವ ಮುಂದಕ್ ಹೊಂಟ್ಬಿಟ್ಟ. ಮುಂದೆ ಓದಿ »

ಕೋಳಿ ವ್ಯಾಪಾರ
March 16, 2008 - 7:20pm — karihaidaನಮ್ ಕಾಡ್ನಾಗೆ ಹಲವಾರು ಹಟ್ಟಿಗಳಿವೆ. ನಮ್ ಹಟ್ಟಿಗಿಂತ ದೋಡ್ದು ಮೂರ್ನಾಲ್ಕುಅವೆ. ನಮ್ ಜೀವ್ನ ತುಂಬಾ ಸರಳ. ನಾವೇನು ಭತ್ತ, ಕಬ್ಬು ಬೆಳೆಯಲ್ಲ. ಕೋಳಿ, ಹುಂಜ, ಆಡು ಸಾಕ್ಕೊತ್ತೀವಿ. ಕಾಡ್ನಲ್ಲಿ ಏನೇನ್ ಸಿಗುತ್ತೋ ಅದ್ರಲ್ಲೇ ಜೀವ್ನ ಸಾಗಿಸ್ತೀವಿ. ಬೇರೆ ಬೇರೆ ಹಟ್ಟಿಗ್ಳು ಅಷ್ಟೇ. ಅವ್ರ್ ಪಾಡಿಗೆ ಅವ್ರು, ನಮ್ ಪಾಡಿಗೆ ನಾವು.
ನಮ್ ಹಟ್ಟಿಲಿ ಹತ್ತಾರು ಗುಡುಸ್ಲುಗಳಿವೆ. ನಮ್ಮಲ್ಲಿ ಎಲ್ರೂ ಒಟ್ಗೆ ಸೇರಿ ಕೋಳಿ, ಆಡು ಸಾಕ್ತೀವಿ. ಗಂಡಸ್ರೆಲ್ಲಾರು ಹೊತ್ತಾರೆ ಹೋಗಿ ಕಾಡ್ನಾಗೆ ಬೇಟೆ ಆಡಿ, ಮರಗಳಲ್ಲಿ ಹಣ್ಣು ಹಂಪ್ಲು, ಕಡ್ಡಿ-ಕಟ್ಟಿಗೆ ಕಟ್ಕೊಂಡು ಬರ್ತೀವಿ. ಹೆಂಗುಸ್ರೆಲ್ಲಾ ಗುಡುಸ್ಲು ಕಡೆ ನಿಗಾ ಮಡಿಕ್ಕೊಂಡಿರ್ತಾರೆ. ಐಕ್ಳೆಲ್ಲಾ ಆಡ್ಕೊಂಡು ಹಾಡ್ಕೊಂಡು ಕಾಲ ಕಳೀತವೆ. ಇತ್ತಾಗೆ ನಮ್ ಕೋಳಿಗ್ಳು ಅದ್ರ ಪಾಡಿಗೆ ನೆಲದಲ್ಲಿ ಸಿಗೋ ಹುಳು ಹುಪ್ಟೆ ತಿನ್ಕೊಂಡ್ ಮೊಟ್ಟೆಗಿಟ್ಟೆ ಇಡತ್ವೆ. ಇರೋ ಹತ್ತಾರು ಕೋಳಿಗಳು ಎಲ್ಲಿ ಹೋದ್ವು ಏನ್ಮಾಡ್ತಿವೆ ಅಂತ ಯಾರು ತಲೆಕೆಡ್ಸ್ಕೊತಾ ಇರ್ಲಿಲ್ಲ.
ಆದ್ರೆ ಇತ್ತೀಚ್ಗೆ ಈ ಕೋಳಿಗಳೇ ನಮ್ಗೆ ದೋಡ್ ತಲೆನೋವಾಗಿದೆ. ನಾನ್ ಕಾಡ್ನಲ್ಲಿ ಬೇಟೆ ಆಡಕ್ಕೆ ಹೋದಾಗ ನಮ್ ಹತ್ರದ್ ಹಟ್ಟಿನವ ನನ್ಗೆಳೆಯ ನಾಟ ಸಿಕ್ಕ. ಅವ ಸಿಕ್ಕಿ ಈಗಾಗ್ಲೆ ಒಂದ್ ವರ್ಷ ಆಗಿರ್ಬೇಕು.
"ಯಾಕ್ಲಾ ನಾಟ ? ಲಗ್ನಗಿಗ್ನ ಆದ್ಯೋ ಎಂಗೆ ?' ಅಂದೆ. ಅವ ತಿರುಗ್ಸಿ, "ಇಲ್ಲಾ ಕಳ, ನಮ್ ಹಟ್ಟೀಲಿ ಈಗ ಕೋಳಿ ವ್ಯಾಪಾರ ಶುರು ಹಚ್ಕೊಂಡಿವಿ' ಅಂದ. "ಏನ್ಲಾ ಹಂಗಂದ್ರೆ' ಅಂತಂತಂದೆ.

"ಪ್ರತಿ ವಾರ ಪಟ್ಣದಿಂದ ನಮ್ ಹಟ್ಟಿಗೆ ಇಬ್ರು ಬಂದು ನಾವು ಕೊಡೋ ಕೋಳಿಗಳ್ನ ಎತ್ಕೊಂಡ್ ಓಯ್ತಾರೆ' ಅಂದ. "ಹಂಗಾದ್ರೆ ನೀವು ಸಾರ್ ಮಾಡಕ್ ಏನ್ ಹಾಕ್ತೀರ್ಲ ?' ಅಂತ ಕೇಳ್ದೆ.
ಅವ "ಅಯ್ಯ, ನಾವು ಕಾಡ್ನಿಂದ ತರ್ತೀವಲ್ಲ ಸೊಪ್ಪು, ಹಣ್ಣು. ಅದ್ರಲ್ಲೇ ಮಾಡ್ತೀವಿ ಸಾರ್ನ. ಆಮ್ಯೇಕೆ ಆ ಪಟ್ಣದವ್ರು ಅಲ್ಲಿಂದ ಏನೆಲ್ಲಾ ತರ್ತಾರೆ ಗೊತ್ತೇನ್ಲಾ? ನಮ್ಗೆ ಅವ್ರು ಕೋಳಿ ಬದ್ಲಿಗೆ ಬಣ್ಣ್ ಬಣ್ಣದ್ ಬಟ್ಟೆ, ಐಕ್ಳಿಗೆ ಗೊಂಬೆಗ್ಳು, ತಿನ್ನಾಕ್ ಪೆಪ್ರಮಿಂಟು, ಬೇಯ್ಸಿದ್ ಹಿಟ್ಟು ಇನ್ನು ಏನೇನೋ ಎಲ್ಲಾ ಕೊಡ್ತಾರೆ'. "ನಾನು ನಿಮ್ ಹಟ್ಟಿ ಕಡೀಕ್ಕೆ ಹೊಂಟಿದ್ದೆ ಕಳ. ಈಗ ಎಂಗಾಗದೆ ಅಂದ್ರೆ ನಾವೆಲ್ಲ ಕೂತು ಕೋಳೀನ್ನೋಡ್ಕೊಂಡ್ರು ಅವ್ರಿಗೆ ಕೊಡೊ ಅಷ್ಟು ಕೋಳಿಗ್ಳು ಸಾಕಾಗ್ತಿಲ್ಲ ಕಳ. ಅದ್ಕೆ ನಾನು ಅವ್ರನ್ ಕೇಳ್ದೆ ನಮ್ ಪಕ್ಕದ್ ಹಟ್ಟಿಯಿಂದಾನು ಕೋಳಿಗಳ್ ತಂದ್ರೆ ಏಂಗೆ ಅಂತ. ಅದ್ಕೆ ಅವ್ರು ಹಂಗೆಲ್ಲಾ ಆಯ್ಕಿಲ್ಲ. ನಿಮ್ ಹಟ್ಟೀದೇ ಕೋಳಿಗ್ಳು ಬೇಕು ಅಂದ್ರು.' ಮುಂದೆ ಓದಿ »








RSS: