kannadakanda (ಲೇಖನಗಳು)
ಕನ್ನಡಕಂದರ್ ತಪಂಗೆಯ್ದರ್
August 8, 2008 - 9:52am — kannadakandaಕನ್ನಡದೇವಿಯ ದಯಮೇ-
ಮಿನ್ನುಂ ತಮಗೆ ದೊರೆಯದೆನುತುಂ ತೆಂಕಣದಾ
ಪೊನ್ನಂಪೇಟೆಯ ಕಾಡೊಳ್
ಕನ್ನಡಕಂದರ್ ಮರದಡಿಯೊಳ್ ತಪಗೆಯ್ದರ್|| ಮುಂದೆ ಓದಿ »

ಬಸವಣ್ಣನವರ ವಚನಗಳು ಭಾಗ ೧
July 29, 2008 - 4:23am — kannadakandaಸಮುದ್ರ ಘನವೆಂಬೆನೆ? ಧರೆಯ ಮೇಲಡಗಿತ್ತು.
ಧರೆ ಘನವೆಂಬೆನೆ? ನಾಗೇಂದ್ರನ ಫಣಾಮಣಿಯ ಮೇಲಡಗಿತ್ತು.
ನಾಗೇಂದ್ರ ಘನವೆಂಬೆನೆ?
ಪಾರ್ವತಿಯ ಕಿಱುಕುಣಿಕೆಯ ಮುದ್ರಿಕೆಯಾಯಿತ್ತು.
ಅಂತಹ ಪಾರ್ವತಿ ಘನವೆಂಬೆನೆ?
ಪರಮೇಶ್ವರನ ಅರ್ಧಾಂಗಿಯಾದಳು.
ಅಂತಹ ಪರಮೇಶ್ವರನ ಘನವೆಂಬೆನೆ?
ನಮ್ಮ ಕೂಡಲ ಸಂಗನ ಶರಣರ
ಮನದ ಕೊನೆಯ ಮೊನೆಯ ಮೇಲಡಗಿದನು ||೧|| ಮುಂದೆ ಓದಿ »

- Login or register to post comments
- 155 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ದಿಕ್ಪಾಲಕರು ಮತ್ತು ವಿದಿಕ್ಕುಗಳನ್ನು ಸರಿಯಾಗಿ ಗುಱುತಿಸುವುದು
July 4, 2008 - 12:27pm — kannadakandaಅಮರಕೋಶದ ಈ ಶ್ಲೋಕವನ್ನು ಗಮನಿಸಿ
ಇಂದ್ರೋ ವಹ್ನಿಃ ಪಿತೃಪತಿಃ ನೈಋತೋ ವರುಣೋ ಮರುತ್
ಕುಬೇರಃ ಈಶಃ ಪತಯಃ ಪೂರ್ವಾದೀನಾಂ ದಿಶಾಂ ಕ್ರಮಾತ್||
ಇದಱರ್ಥ ಪೂರ್ವದಿಕ್ಕಿನಿಂದ ಹಿಡಿದು ಬಲಕ್ಕೆ (ಪ್ರದಕ್ಷಿಣವಾಗಿ) ಬಂದಾಗ ದಿಕ್ಪಾಲಕರನ್ನು ಹೀಗೆ ಹೇೞಬಹುದು
ಪೂರ್ವಕ್ಕೆ=ಮೂಡಣಕ್ಕೆ ಇಂದ್ರ
ವಹ್ನಿಃ=ಅಗ್ನಿ=ಆಗ್ನೇಯ=ಮೂೞ್ತೆಂಕಣ ಅಥವಾ ತೆಮ್ಮೂಡಣಕ್ಕೆ ಅಗ್ನಿ ಮುಂದೆ ಓದಿ »

ದನಿಯಱಿವು
July 3, 2008 - 10:21am — kannadakandaಕನ್ನಡ ದನಿಗಳ ಅಱಿವಿನ ಬಗ್ಗೆ ಬರೆಯುತ್ತಿದ್ದೇನೆ.
ಉಸಿರುಲಿಗಳು(ಸರಗಳು=ಸ್ವರಗಳು):
ಅ ಆ (ಕೊರಲು(ಳು)ಲಿ).
ಇ ಈ (ಅಂಗುೞುಲಿ).
ಉ ಊ (ತುಟಿಯುಲಿ).
(ಋ, ೠ) (ನೆತ್ತಿಯುಲಿ)
ಎ ಏ ಐ (ಕೊರಲಂಗುೞುಲಿ).
ಒ ಓ ಔ (ಕೊರಲ್ದುಟಿಯುಲಿ).
ತಡೆಯುಲಿಗಳು(ಬೆಂಜನಗಳು):
ಕ (ಖ) ಗ (ಘ) ಙ (ಕೊರಲುಲಿಗಳು) ನನ್ನ ಪ್ರಕಾರ ಮೆದುವಂಗುೞುಲಿ . ಮುಂದೆ ಓದಿ »

ಹದಿನೆಂಟು ಪುರಾಣಗಳು ಹಾಗೂ ಅಷ್ಟಸಿದ್ಧಿಗಳು
June 28, 2008 - 9:59am — kannadakandaಮದ್ವಯಂ ಭದ್ವಯಂ ಚೈವ ಬ್ರತ್ರಯಂ ವಚತುಷ್ಟಯಮ್|
ಅನಾಪಲಿಂಗಕೂಸ್ಕಾನಿ ಪುರಾಣಾನಿ ಪ್ರಚಕ್ಷತೇ||
ಈ ಶ್ಲೋಕದಲ್ಲಿ ಹದಿನೆಂಟು ಪುರಾಣಗಳನ್ನು ತಿಳಿಸಲಾಗಿದೆ
ಮದ್ವಯಂ=ಮತ್ಸ್ಯ, ಮಾರ್ಕಂಡೇಯ (೨)
ಭದ್ವಯಂ=ಭವಿಷ್ಯ, ಭಾಗವತ(೨)
ಬ್ರತ್ರಯಂ=ಬ್ರಹ್ಮ, ಬ್ರಹ್ಮಾಂಡ, ಬ್ರಹ್ಮವೈವರ್ತ(೩)
ವಚತುಷ್ಟಯಂ=ವರಾಹ, ವಾಮನ, ವಾಯು, ವಿಷ್ಣು (೪)
ಅ=ಅಗ್ನಿ (೧)
ನಾ=ನಾರದ(೧)
ಪ=ಪದ್ಮ(೧)
ಲಿಂ=ಲಿಂಗ(೧) ಮುಂದೆ ಓದಿ »



RSS: