ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › User account

ismail (ಲೇಖನಗಳು)

ಜಿ ಟಿ ನಾರಾಯಣರಾವ್ ಇನ್ನಿಲ್ಲ

June 27, 2008 - 8:40am — ismail

ಕನ್ನಡ ವಿಜ್ಞಾನ ಸಾಹಿತ್ಯದ ಪ್ರವರ್ತಕರಲ್ಲಿ ಒಬ್ಬರಾದ ಜಿ. ಟಿ ನಾರಾಯಣರಾವ್ ಇನ್ನಿಲ್ಲ. ಇಂದು (೨೭ ಜೂನ್ ೨೦೦೮ ಶುಕ್ರವಾರ) ಬೆಳಿಗ್ಗೆ ಏಳುಗಂಟೆಯ ವೇಳೆಗೆ ನಿಧನರಾದರೆಂದು ಕುಟುಂಬದವರು ತಿಳಿಸಿದ್ದಾರೆ.  ಮುಂದೆ ಓದಿ »

  • ಮಾಹಿತಿ ಫಲಕ
~.~
  • 7 ಪ್ರತಿಕ್ರಿಯೆಗಳು
  • 681 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಚಿ ಶ್ರೀನಿವಾಸರಾಜು ಇನ್ನಿಲ್ಲ

December 28, 2007 - 10:30am — ismail

 

 

ಕರ್ನಾಟಕದ ಸಾಹಿತ್ಯಾಸಕ್ತರಿಗೆಲ್ಲಾ ಮೇಷ್ಟ್ರಾಗಿದ್ದ ಚಿ. ಶ್ರೀನಿವಾಸರಾಜು ಇನ್ನಿಲ್ಲ.  ಮುಂದೆ ಓದಿ »

  • ಮಾಹಿತಿ ಫಲಕ
~.~
  • 2 ಪ್ರತಿಕ್ರಿಯೆಗಳು
  • 733 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೈಕ್ರೋಸಾಫ್ಟೀಕರಣವನ್ನು ಪ್ರತಿಭಟಿಸೋಣ

October 2, 2007 - 4:34pm — ismail

ಗೆಳೆಯರೆ, ತಂತ್ರಜ್ಞಾನದ ಸಾಧ್ಯತೆಗಳಿಂದಾಗಿ ಜಗತ್ತು ಕಿರಿದಾಗುತ್ತಿದೆ. ಕನ್ನಡ ಈಗ ಕರ್ನಾಟಕದಲ್ಲಷ್ಟೇ ಅಲ್ಲದೆ ಸಾಮಾನ್ಯ ಕನ್ನಡಿಗನು ಕೇಳಿಯೂ ಅರಿಯದ ಅನೇಕ ದೇಶಗಳಲ್ಲಿ ಅನುರಣಿಸುತ್ತಿದೆ. ಅಂತರ್ಜಾಲದ ಮೂಲಕ ಕನ್ನಡ ವಿಶ್ವಾತ್ಮಕ ದೇಶ ಭಾಷೆಯೂ ಆಗಿಬಿಟ್ಟಿದೆ. ಈ ಪ್ರಕ್ರಿಯೆಗಳು ತೆರೆದಿಟ್ಟಿರುವ ಸಾಧ್ಯತೆಗಳ ಜತೆ ಜತೆಯಲ್ಲೇ ಕನ್ನಡ ಭಾಷೆ, ಅದರ ಅಕ್ಷರಗಳಿಗಿರುವ ಅನನ್ಯತೆಯನ್ನು ಕಿತ್ತುಕೊಳ್ಳುವ ಪ್ರಯತ್ನಗಳೂ ಚಾಲನೆಯಲ್ಲಿವೆ. ಇದಕ್ಕೆ ಉತ್ತಮ ಉದಾಹರಣೆ ಮೈಕ್ರೋಸಾಫ್ಟ್ ಸಂಸ್ಥೆ ತನ್ನ ಆಪರೇಟಿಂಗ್ ಸಿಸ್ಟಂಗಳಲ್ಲಿ ನೀಡುತ್ತಿರುವ ಕನ್ನಡ ಸವಲತ್ತಿನ ಕೊರತೆಗಳು. ಈ ಕುರಿತಂತೆ ಈಗಾಗಲೇ ಸಂಪದದಲ್ಲಿಯೇ ಸಾಕಷ್ಟು ಚರ್ಚೆಗಳು ನಡೆದಿರುವುದರಿಂದ ಅದನ್ನು ಮತ್ತೊಮ್ಮೆ ವಿವರಿಸುವ ಅಗತ್ಯವಿಲ್ಲ ಎಂದುಕೊಳ್ಳುತ್ತೇನೆ.

ಸದ್ಯ ಕರ್ನಾಟಕ ಸರಕಾರ ಮೈಕ್ರೋಸಾಫ್ಟ್ ನ ಜತೆ ಒಂದು ತಿಳಿವಳಿಕೆ ಪತ್ರ ಮಾಡಿಕೊಂಡಿದೆ. ಇದನ್ನು ವಿವರಿಸುವುದಕ್ಕೆ ಮೈಕ್ರೋಸಾಫ್ಟ್ ಮಾಮೂಲಿನ ಮೆಮರಾಂಡಂ ಆಫ್ ಅಂಡರ್ ಸ್ಟ್ಯಾಂಡಿಂಗ್ (MOU)ಎಂಬ ಪದ ಬಳಸದೆ ಲೆಟರ್ ಆಫ್ ಇಂಟೆಂಟ್ ಎಂಬ ಪದ ಬಳಸಿತು. ಇದು ಉದ್ದೇಶಪೂರ್ವಕವಾದುದೋ ಅಲ್ಲವೋ ನನಗೆ ಗೊತ್ತಿಲ್ಲ. ಆದರೆ ಲೆಟರ್ ಆಫ್ ಇಂಟೆಂಟ್ ಎಂಬುದು ಸಾಮಾನ್ಯನಿಗೆ ಸ್ವಲ್ಪ ಹೊಸತಾತ ಪದ. ಯಾವುದೋ ಪ್ರಸ್ತಾವನೆಯನ್ನು ಮುಂದಿಡುತ್ತಿದ್ದಾರೆ ಎಂಬ ಭ್ರಮೆ ಹುಟ್ಟಿಸಬಲ್ಲ ಪದ. ಕಾನೂನಿನ ಪರಿಭಾಷೆಯಲ್ಲಿ ಇದಕ್ಕೂ MOUಗೂ ವ್ಯತ್ಯಾಸವಿಲ್ಲ. ಒಪ್ಪಂದವೊಂದರ ಪೂರ್ವ ಭಾವಿಯಾಗಿ ಮಾಡಿಕೊಳ್ಳುವ ಕರಾರು ಇದು.  ಮುಂದೆ ಓದಿ »

  • ಮಾಹಿತಿ ಫಲಕ
~.~
  • 5 ಪ್ರತಿಕ್ರಿಯೆಗಳು
  • 2685 hits
  • 1 attachment
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಇದ್ದವರು ಇಬ್ಬರೇ ಆದರೆ ಕದ್ದವರಾರು?

September 22, 2007 - 7:40pm — ismail
ಬ್ಯಾನರ್ಜಿ, ರಾಮಕೃಷ್ಣ ಹೆಗಡೆ, ನಜೀರ್ ಸಾಬ್

ಕರ್ನಾಟಕದಲ್ಲಿ ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದದ್ದು ಮತ್ತು ಆ ಅವಧಿಯದ್ದಕ್ಕೂ ಕರ್ನಾಟಕ ಬರದ ಬಾಧೆಯನ್ನು ಅನುಭವಿಸಿದ್ದನ್ನು ಬಹುಶಃ ಯಾರೂ ಮರೆತಿರಲಿಕ್ಕಿಲ್ಲ. ಈ ಅವಧಿಯಲ್ಲಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ, ಅವರ ಸಂಪುಟ ಸಹೋದ್ಯೋಗಿಗಳಾದ ಧರ್ಮಸಿಂಗ್‌, ಮಲ್ಲಿಕಾರ್ಜುನ ಖರ್ಗೆ ಮುಂತಾದವರು ಕೇಂದ್ರ ಸರಕಾರ ಬರ ಪರಿಹಾರಕ್ಕೆ ಅಗತ್ಯವಿರುವ ಸಂಪನ್ಮೂಲವನ್ನು ಒದಗಿಸುತ್ತಿಲ್ಲ ಎಂದು ಮೇಲಿಂದ ಮೇಲೆ ಹೇಳಿದ್ದೂ ಪತ್ರಿಕೆಗಳನ್ನು ಓದುವ, ಟಿ.ವಿ.ನೋಡುವ ಎಲ್ಲರಿಗೂ ನೆನಪಿರಬೇಕು. ಆಗ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌.ಡಿ.ಎ. ಸರಕಾರವಿತ್ತು. ಕರ್ನಾಟಕದ ಅನಂತಕುಮಾರ್‌ ಮತ್ತು ಕರ್ನಾಟಕದಿಂದ ರಾಜ್ಯ ಸಭೆಗೆ ಆಯ್ಕೆಯಾಗಿದ್ದ ವೆಂಕಯ್ಯ ನಾಯ್ಡು ಕೇಂದ್ರ ಸಚಿವ ಸಂಪುಟದಲ್ಲಿದ್ದರು. ಕೇಂದ್ರದ ನೆರವಿಗೆ ಸಂಬಂಧಿಸಿದಂತೆ ಕರ್ನಾಟಕದ ಅಧಿಕಾರಾರೂಢ ಕಾಂಗ್ರೆಸ್ಸಿಗರ ಟೀಕೆ ಹೆಚ್ಚುತ್ತಲೇ ಹೋದಾಗ ಇಬ್ಬರೂ ಕೇಂದ್ರ ಸಚಿವರು ಪ್ರತಿಕ್ರಿಯಿಸಿದ್ದರು. ಕೇಂದ್ರ ಬರ ಪರಿಹಾರಕ್ಕೆಂದು ಒದಗಿಸಿದ್ದ ಹಣವನ್ನು ರಾಜ್ಯ ಸರಿಯಾಗಿ ಬಳಸಿಕೊಂಡಿಲ್ಲ. ಬಹಳಷ್ಟು ಹಣ ಬಳಸದೆಯೇ ಲ್ಯಾಪ್ಸ್‌ (laps) ಆಗಿದೆ ಎಂದಲ್ಲಾ ಗದ್ದಲವೆಬ್ಬಿಸಿದ್ದರು. ಇದಕ್ಕೆ ಕರ್ನಾಟಕದಲ್ಲಿ ವಿರೋಧ ಪಕ್ಷವಾಗಿದ್ದ ಬಿಜೆಪಿಯ ಜಗಧೀಶ್‌ ಶೆಟ್ಟರ್‌, ಬಿ.ಎಸ್‌.ಯಡಿಯೂರಪ್ಪ, ಕೆ.ಎಸ್‌.ಈಶ್ವರಪ್ಪ ಮುಂತಾದವರೆಲ್ಲಾ ಧ್ವನಿಗೂಡಿಸಿ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.  ಮುಂದೆ ಓದಿ »

  • ಪ್ರಚಲಿತ
~.~
  • Login or register to post comments
  • 613 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಜಿ.ಟಿ.ನಾರಾಯಣರಾವ್ ಸಂದರ್ಶನ (ಆಡಿಯೋ, ವಿಡಿಯೋ)

August 10, 2007 - 2:52am — ismail
ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

 

ಜಿ.ಟಿ. ನಾರಾಯಣರಾವ್ ಅಧ್ಯಯನ ಕೊಠಡಿಯಲ್ಲಿ

ಸಂಪದ ತಂಡ ಹೊಸತೇನನ್ನಾದರೂ ಯೋಚಿಸಿದರೆ ಅದನ್ನು ಸಾಧ್ಯವಾಗಿಸುವುದಕ್ಕೆ ವಿಶ್ವವೇ ನಮ್ಮ ಪರವಾಗಿ ಸಂಚು ಹೂಡುತ್ತದೆ ಎನಿಸುತ್ತದೆ. ಕನ್ನಡ ವಿಜ್ಞಾನ ಸಾಹಿತ್ಯ ಇತಿಹಾಸದಲ್ಲಿ ಪ್ರಮುಖ ಸ್ಥಾನ ಪಡೆದಿರುವ ಜಿ.ಟಿ.ನಾರಾಯಣರಾವ್‌ ಅವರದ್ದೊಂದು ಪಾಡ್‌ಕ್ಯಾಸ್ಟ್‌ ಮಾಡಬೇಕು ಎಂಬ ಯೋಜನೆ ಬಹಳ ಹಳೆಯದು. ಆದರೆ ಅದು ಸಾಧ್ಯವಾಗಿರಲಿಲ್ಲ. ಈ ನಡುವೆ ಹರಿಪ್ರಸಾದ್‌ ನಾಡಿಗರು ಪಾಡ್‌ಕ್ಯಾಸ್ಟ್‌ ಜತೆ ವಿಡಿಯೋ ಕೂಡಾ ಹಾಕಬಹುದು ಎನ್ನುತ್ತಿದ್ದರು. ಇದಕ್ಕೆ ಅಗತ್ಯವಿರುವ ಕ್ಯಾಮೆರಾ, ಧ್ವನಿಗ್ರಹಣ, ಆಮೇಲೆ ಸಂಕಲನವನ್ನೆಲ್ಲಾ ಯಾರು ಮಾಡುವುದು ಎಂಬುದು ನಮ್ಮೆದುರು ಇದ್ದ ದೊಡ್ಡ ಪ್ರಶ್ನೆಯಾಗಿತ್ತು.

ಗೆಳೆಯ ಅಭಯಸಿಂಹ ವೃತ್ತಿಯ ಕಾರಣಕ್ಕೆ ಬೆಂಗಳೂರಿಗೆ ವಾಸ್ತವ್ಯವನ್ನು ಬದಲಾಯಿಸಿದ್ದೇ ನನ್ನೆದುರು ಇದ್ದ ಎಲ್ಲ ಪ್ರಶ್ನೆಗಳಿಗೂ ಉತ್ತರ ದೊರೆತಿಬಿಟ್ಟಿತು. ಅದರ ಪರಿಣಾಮವಾಗಿ ಈ ವಿಡಿಯೋ ಹಾಗೂ ಪಾಡ್‌ಕ್ಯಾಸ್ಟ್‌ ನಿಮ್ಮ ಮುಂದಿದೆ.

ಜಿ.ಟಿ.ಎನ್‌. ನನಗೆ ಪುಸ್ತಕಗಳ ಮೂಲಕ ಬಾಲ್ಯದಲ್ಲೇ ಪರಿಚಿತರು. ನಿಮ್ಮಲ್ಲನೇಕರಿಗೂ ಅವರು ಹೀಗೆ ಪರಿಚಿತರಾಗಿರಬಹುದು. ಹತ್ತು ಹನ್ನೆರಡು ವರ್ಷಗಳಿಂದ ಅವರನ್ನು ವೈಯಕ್ತಿಕವಾಗಿ ಪರಿಚಯಿಸಿಕೊಳ್ಳಲೂ ಸಾಧ್ಯವಾಯಿತು. `ನುಡಿದಂತೆ ನಡೆಯುವುದು' ಎಂಬುದಕ್ಕೆ ಸಾಕ್ಷಿಯಾಗುವಂಥ ಬದುಕು ಜಿ.ಟಿ.ಎನ್‌. ಅವರದ್ದು. ವೈಜ್ಞಾನಿಕ ಮನೋಧರ್ಮ ಎಂಬುದು ಕೇವಲ ಅವರ ಬರೆವಣಿಗೆಗೆ ಸೀಮಿತವಾಗಿರುವ ವಿಷಯವಲ್ಲ. ಅದು ಅವರ ಬದುಕೂ ಕೂಡಾ.  ಮುಂದೆ ಓದಿ »

  • ಶ್ರಾವ್ಯ (ಆಡಿಯೋ) - Podcasts
~.~
  • 10 ಪ್ರತಿಕ್ರಿಯೆಗಳು
  • 5105 hits
  • 2 attachments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ
1234ಮುಂದಿನ ›ಕೊನೆಯ »

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಸಾಂಗರ್, ರಾಜಸ್ಥಾನ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 12:12am
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 12:06am
  • vasant.shetty
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:56pm
  • ಹಿರಣ್ಯಾಕ್ಷ
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:56pm
  • srinivasps
    ಉ: 'ಸಂಪದಿಗ' ಪುಲ್ಲಿಂಗ ಆದರೆ..ಸ್ತ್ರೀಲಿಂಗ ಏನಾಗುತ್ತೆ?
    October 15, 2008 - 11:48pm
  • vasant.shetty
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:47pm
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:42pm
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:29pm
  • pradeep_adiga
    ಉ: ಕಲಾಂ ಸರ್.. ಇಂದು ‘ನಿಮಗೆ ಹಜಾರ್ ಸಲಾಂ..ಲಾಖ್ ಮುಬಾರಕ್ ’.
    October 15, 2008 - 11:15pm
  • vasant.shetty
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:12pm
ಇನ್ನಷ್ಟು


ನನ್ನ ಸ್ವಂತ ವ್ಯವಹಾರ ನನಗೆ ತಲೆ ಚಿಟ್ಟು ಹಿಡಿಸುತ್ತದೆ. ಅದಕ್ಕಾಗಿಯೇ ನಾನು ಬೇರೆಯವರ ವ್ಯವಹಾರದಲ್ಲಿ ತಲೆ ಹಾಕುವುದು.

— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ, ಕವಿ, ಕಾದಂಬರಿಗಾರ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator