ismail (ಚರ್ಚೆಯ ವಿಷಯಗಳು)
ಅನಂತಮೂರ್ತಿ: ಐದು ದಶಕದ ಬರೆವಣಿಗೆ
February 27, 2007 - 6:29pm — ismailಅನಂತಮೂರ್ತಿಯವರು ತಮ್ಮ ಐದು ದಶಕಗಳ ಸಾಹಿತ್ಯ ಚಟುವಟಿಕೆಯ ಕುರಿತಂತೆ ಸಾಹಿತ್ಯ ಅಕಾಡೆಮಿಯಲ್ಲಿ ನೀಡಿದ ಸಂವತ್ಸರ ಉಪನ್ಯಾಸದ ಪೂರ್ಣಪಾಠ ಅವರ ಬ್ಲಾಗ್‌ನಲ್ಲಿ ಇದೆ. ಮುಂದೆ ಓದಿ »

- Login or register to post comments
- 840 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಕೋಮುಗಲಭೆಗಳಲ್ಲಿ ಸಾಯುವುದು ಮನುಷ್ಯರು
January 29, 2007 - 5:48pm — ismailವರ್ತಮಾನದ ಸೋಷಿಯೋಪೊಲಿಟಿಕಲ್ (ಸಮಾಜೋರಾಜಕೀಯ?) ಸಂದರ್ಭದ ಅತಿದೊಡ್ಡ ಸಮಸ್ಯೆ ಎಂದರೆ ನಮಗರಿವಿಲ್ಲದಂತೆಯೇ ನಾವು ಜಾತೀವಾದಿಗಳೋ, ಮತೀಯವಾದಿಗಳೋ, ಕೋಮುವಾದಿಗಳೋ ಆಗಿಬಿಡುವುದು. ಅಂದರೆ ನಿರ್ದಿಷ್ಟ ವಾದವೊಂದನ್ನು ಸಮರ್ಥಿಸಲು ಹೊರಡು ಅದರ ಕುರುಡು ಸಮರ್ಥಕರಾಗಿಬಿಡುವ ಇಲ್ಲವೇ ಯಾವುದೋ ಒಂದು ವಾದವನ್ನು ಟೀಕಿಸಲು ಹೊರಟು ಅದರ ಕುರುಡು ವಿಮರ್ಶಕರಾಗಿಬಿಡುವುದು. ಕರ್ನಾಟಕದಲ್ಲಿ ಕೋಮುವಾದಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಎಲ್ಲಾ ಚರ್ಚೆಗಳಲ್ಲಿಯೂ ಈ ಅತಿಯನ್ನು ಕಾಣಬಹುದು. ಮುಂದೆ ಓದಿ »

- Login or register to post comments
- 849 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಮೈಕ್ರೋಸಾಫ್ಟೀಕರಣ
January 22, 2007 - 5:13pm — ismail
ಮೈಕ್ರೋಸಾಫ್ಟ್ ನ 'ವಿಸ್ತಾ' ಇನ್ನೇನು ಮಾರುಕಟ್ಟೆಗೆ ಬರಲಿದೆಯಂತೆ. ಎಕ್ಸ್ ಪಿಯಲ್ಲಿ ಇದ್ದ ಕನ್ನಡ ಅಕ್ಷರಗಳ ಸಮಸ್ಯೆ ಇಲ್ಲಿಯೂ ಮುಂದುವರಿದಿದೆ ಎಂಬುದು ವಿಸ್ತಾದ ರಿಲೀಸ್ ಕ್ಯಾಂಡಿಡೇಟ್ -2 ಪರೀಕ್ಷಿಸಿದವರಿಗೆಲ್ಲಾ ತಿಳಿಯುತ್ತದೆ. Rank ಈಗ ರ್ಯಾಂಕ್ ಆಗುವುದಿಲ್ಲ. ಆದರೆ ಸಾಫ್ಟ್ ವೇರ್ ಎಂದು ಬರೆದರೆ ಅದು ಸಾ ಫ್ ಟ್ ವೇ ರ್ ಆಗುತ್ತದೆ.
ಮೈಕ್ರೋಸಾಫ್ಟ್ ನಲ್ಲಿ ಇದೆಲ್ಲಾ ಸರಿಯಾಗಿರಲೇಬೇಕು ಎಂದು ವಾದಿಸುವುದರ ಬದಲಿಗೆ ಅದನ್ನು ಬಳಸುವುದನ್ನೇ ಬಿಟ್ಟು ಬಿಡಿ ಎಂಬ ವಾದವನ್ನು ಮಂಡಿಸಬಹುದು. ಇದು ತಾತ್ವಿಕವಾಗಿ ಸರಿಯೂ ಹೌದು. ನನಗೆ ಕಾಡುತ್ತಿರುವುದು ಈ ಸಮಸ್ಯೆಯಲ್ಲ. ಯಾವುದಾದರೂ ಒಂದು ಸಂಸ್ಥೆ ಸಾವಿರಾರು ವರ್ಷಗಳ ಇತಿಹಾಸವಿರುವ ಭಾಷೆಯೊಂದನ್ನು ಅದಕ್ಕೆ ತೋಚಿದಂತೆ ಬದಲಾಯಿಸಿಬಿಡುವುದನ್ನು ಒಪ್ಪಿಕೊಳ್ಳಬೇಕೇ?
ಸಾ ಫ್ ಟ್ ವೇ ರ್ ಎಂಬಂಥ ಪ್ರಯೋಗವನ್ನು ಬಿಎಂಶ್ರೀ ಒಮ್ಮೆ ಪ್ರತಿಪಾದಿಸಿದ್ದರು. ಆದರೆ ಅದಕ್ಕೆ ಹೆಚ್ಚಿನವರ ಬೆಂಬಲ ದೊರೆಯಲಿಲ್ಲ. ಕೆಲವರಿದನ್ನು ವಿರೋಧಿಸಿದರು ಎಂದೂ ಓದಿದ್ದು ನೆನಪಾಗುತ್ತಿದೆ. ಈಗ ಮೈಕ್ರೋಸಾಫ್ಟ್ ಇದನ್ನು ಹೇರುತ್ತಿದೆ. ವಿರೋಧಿಸುವುದು ಬಿಡಿ. ಕನಿಷ್ಠ ಇದರ ಕುರಿತು ಚರ್ಚಿಸುತ್ತಿಲ್ಲ.
ಎಲ್ಲರಿಗೂ ತಿಳಿದಿರುವಂತೆ ಎಲ್ಲಾ ಸಾಫ್ಟ್ ವೇರ್ ಗಳ ಅತಿದೊಡ್ಡ ಗ್ರಾಹಕ ಸರಕಾರ. ಸರಕಾರ ತನ್ನ ಎಲ್ಲಾ ಕೆಲಸಕ್ಕೆ ಮೈಕ್ರೋಸಾಫ್ಟ್ ನ ತಂತ್ರಾಂಶಗಳನ್ನೇ ಬಳಸುತ್ತಿದೆ. (ಇತ್ತೀಚೆಗೆ ಚುನಾವಣಾ ಆಯೋಗ ಮುಕ್ತ ತಂತ್ರಾಂಶಗಳನ್ನು ಬಳಸುವ ಪ್ರಯತ್ನ ಆರಂಭಿಸಿದೆ) ಕರ್ನಾಟಕ ಸರಕಾರದ ಇ-ಗವರ್ನನ್ಸ್ ಕಾರ್ಯದರ್ಶಿಯವರಿಗಂತೂ ಮೈಕ್ರೋಸಾಫ್ಟ್ ಎಂದರೆ ಪಂಚಪ್ರಾಣ. ಆಡಳಿತದಲ್ಲಿ ಕನ್ನಡ ಎಂಬ ಪರಿಕಲ್ಪನೆ ಕಂಪ್ಯೂಟರ್ ಗಳ ಸಂದರ್ಭದಲ್ಲಿಯೂ ನಿಜವಾಗುತ್ತಿರುವ ಹೊತ್ತಿನಲ್ಲಿ ಕನ್ನಡ ಬರೆವಣಿಗೆಯೂ ಮೈಕ್ರೋಸಾಫ್ಟ್ ನ ತಂತ್ರಾಂಶಗಳ ಮೂಗಿನ ನೇರಕ್ಕೆ ಇರುತ್ತದೆ ಎಂದಾಗುತ್ತದೆಯಲ್ಲವೇ?
ಮೈಕ್ರೋಸಾಫ್ಟ್ ಎಕ್ಸ್ ಪಿಗಾಗಿ ಹೊರತಂದಿದ್ದ ಕನ್ನಡ ಹೊದಿಕೆ ಅಥವಾ ಲಾಂಗ್ವೇಜ್ ಇಂಟರ್ ಫೇಸ್ ಪ್ಯಾಕ್ ನಲ್ಲಿ ಕನ್ನಡವನ್ನು ವ್ಯವಸ್ಥಿತವಾಗಿ ಕೊಂದಿರುವುದರ ಬಗ್ಗೆ ಉದಾಹರಣೆ ಸಹಿತ ಒಂದು ವರ್ಷದ ಹಿಂದೆಯೇ ಪ್ರಶಾಂತ್ ಪಂಡಿತ್ 'ಸಂಪದ'ದಲ್ಲಿಯೇ ಬರೆದಿದ್ದರು. ಆ ಸ್ಥಿತಿ ಈಗಲೂ ಬದಲಾಗಿಲ್ಲ. ವಿಸ್ತಾಕ್ಕೂ ಇದೇ ಹೊದಿಕೆಯನ್ನು ಬಳಸಲಾಗುತ್ತದೆ ಎಂಬ ಮಾತೂ ಕೇಳಿಬರುತ್ತಿದೆ.
ಮೈಕ್ರೋಸಾಫ್ಟ್ ತಪ್ಪುಗಳನ್ನು ತಿದ್ದಿಕೊಳ್ಳಲು ಸಿದ್ಧವಿಲ್ಲ. ಈ ತಪ್ಪನ್ನು ತಿದ್ದಿಸಬೇಕು ಎಂಬ ಅರಿವು ಕರ್ನಾಟಕ ಸರಕಾರಕ್ಕೂ ಇರುವಂತೆ ಕಾಣಿಸುತ್ತಿಲ್ಲ. ಸರಕಾರಕ್ಕೂ, ಮೈಕ್ರೋಸಾಫ್ಟ್ ಗೂ ಕನ್ನಡವನ್ನು ಕೊಲ್ಲಬೇಡಿ ಎಂದು ಹೇಳುವವರು ಯಾರು? ಹೇಗೆ?
-ಇಸ್ಮಾಯಿಲ್

ಕನ್ನಡ ಸಿನಿಮಾ ನೋಡಬೇಕೆ?
September 5, 2005 - 3:22pm — ismailಕನ್ನಡದಲ್ಲಿ ಕತೆಗಳೇ ಇಲ್ಲ. ಕನ್ನಡದಲ್ಲಿ ಒಳ್ಳೆಯ ಚಿತ್ರಕತೆ ಬರೆಯುವವರಿಲ್ಲ. ಹೀಗೆ ಕನ್ನಡ ಚಿತ್ರ ನಿರ್ಮಾಪಕರು ಹೇಳುತ್ತಾ ಹೋಗುತ್ತಾರೆ. ನಿಜಕ್ಕೂ ಕನ್ನಡದಲ್ಲಿ ಸಿನಿಮಾಗಳಿಗೆ ಅಗತ್ಯವಿರುವ ಕತೆಗಳ ಕೊರತೆ ಇದೆಯೇ?
ಗಾಂಧಿನಗರದ ದೊಡ್ಡ ಸಮಸ್ಯೆ ಎಂದರೆ ಯಶಸ್ಸಿನ ಹಿಂದೆ ಸಾಗುವುದು. ಪ್ರತೀ ಯಶಸ್ಸೂ ತನ್ನಷ್ಟಕ್ಕೇ ವಿಶಿಷ್ಟ ಎನ್ನುವುದನ್ನು ಗಾಂಧಿನಗರ ಒಪ್ಪುವುದಿಲ್ಲ. ತೆಲುಗು ರಿಮೇಕ್ ಸಿನಿಮಾ ಒಂದು ಯಶಸ್ವಿಯಾದರೆ ಕನ್ನಡದ ನಿರ್ಮಾಪಕರೆಲ್ಲಾ ದಂಡು ದಂಡಾಗಿ ಆಂಧ್ರಪ್ರದೇಶ ಯಾತ್ರೆ ಆರಂಭಿಸುತ್ತಾರೆ. ಕೊನೆಗೊಮ್ಮೆ ಅವೆಲ್ಲಾ ಸೋಲುತ್ತವೆ. ಆಗ ಜ್ಞಾನೋದಯವಾದಂತೆ ವರ್ತಿಸುವ ಈ ನಿರ್ಮಾಪಕರು ಕನ್ನಡದಲ್ಲಿ ಕತೆಗಳನ್ನು ಹುಡುಕುವುದಿಲ್ಲ ಬದಲಿಗೆ ಸೀದಾ ತಮಿಳು ಸಿನಿಮಾಗಳನ್ನು ನೋಡತೊಡಗುತ್ತಾರೆ. ಹೀಗೆ ಮಲೆಯಾಳಂ, ಹಿಂದಿ ಎಲ್ಲಾ ಮುಗಿಯುವ ವೇಳೆಗೆ ಕೆಲವು ನಿರ್ಮಾಪಕರು ಚಿತ್ರ ನಿರ್ಮಿಸಲಾರದ ಮಟ್ಟಕ್ಕೆ ತಲುಪಿರುತ್ತಾರೆ. ಈ ಹಂತದಲ್ಲಿ ಕೆಲವರು 'ಸ್ಟ್ರೇಟ್ ಸಬ್ಜೆಕ್ಟ್' ಮಹಾನುಭಾವರು ಪ್ರವೇಶಿಸುತ್ತಾರೆ. ಇವರು ತಮಿಳು, ಮಲೇಯಾಳಂ ಇಲ್ಲವೇ ತೆಲುಗು ಸಿನಿಮಾಗಳ ಸಿ.ಡಿ. ನೋಡಿ ಒಂದು ಚಿತ್ರಕತೆ ರಚಿಸುತ್ತಾರೆ. ಇದಕ್ಕೆ ಪ್ರಶಸ್ತಿ ಬರಬೇಕೆಂದು ಆಶಿಸುತ್ತಾರೆ. ಮುಂದೆ ಓದಿ »


RSS: