ismail (ಬ್ಲಾಗ್ ಬರಹಗಳು)
ಮೀಸಲಾತಿಯ ಆಚೆಗೆ ನೋಡೋಣ
May 15, 2006 - 5:18pm — ismailಮೀಸಲಾತಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಚರ್ಚೆಗಳು ಬಹಳ ಮುಖ್ಯವಾದ ವಿಷಯವೊಂದನ್ನು ಮರೆತು ಬಿಟ್ಟಿವೆ. ಮೀಸಲಾತಿ ಬೇಡ ಎನ್ನುವವರು ಮುಂದೊಡ್ಡುತ್ತಿರುವ ತಥಾಕಥಿತ ಮೆರಿಟ್ ಎಷ್ಟು ಅಬ್ಸರ್ಡ್ ಆದ ಪರಿಕಲ್ಪನೆ ಎಂಬುದು ನಮ್ಮ ಕ್ಯಾಪಿಟೇಷನ್ ಕಾಲೇಜುಗಳನ್ನು ನೋಡಿದರೆ ಅರ್ಥವಾಗುತ್ತದೆ. ಅದಕ್ಕೂ ದೊಡ್ಡ ತಮಾಷೆ ಎಂದರೆ ಪ್ರತಿಭೆ ಎಂಬುದು ಕೆಲವೇ ಜಾತಿಗಳಿಗೆ ಮಾತ್ರ ಸೀಮಿತವಾದ ವಿಷಯ ಎಂಬಂಥ ಧ್ವನಿಯಲ್ಲಿ ಮಾತನಾಡುವುದು. ಮೀಸಲಾತಿ ಬೇಕು ಎಂದು ವಾದಿಸುತ್ತಿರುವವರೂ ಅಷ್ಟೇ. ಮೀಸಲಾತಿ ಇಲ್ಲದಿದ್ದರೆ ನಮಗೆ ಬದುಕೇ ಇಲ್ಲ ಎಂಬಂತೆ ವಾದಿಸುತ್ತಾರೆ. ಈ ಮೂಲಕ ತಾವು ದಡ್ಡರು ಎಂದು ಒಪ್ಪಿಕೊಳ್ಳುತ್ತಾರೆ. ಮುಂದೆ ಓದಿ »

ವಿನ್-98ನಲ್ಲಿ ಯೂನಿಕೋಡ್
April 8, 2006 - 9:24pm — ismailಸಂಪದ ಆಗಷ್ಟೇ ಆರಂಭವಾಗಿತ್ತು. ಇಷ್ಟೂ ಕಾಲವೂ ಕಚೇರಿ ಕಂಪ್ಯೂಟರ್‌ಗಳಲ್ಲಿಯೇ ನನ್ನ ಕಲಿಕಾ ಸಾಹಸವನ್ನು ನಡೆಸಿದ್ದ ನಾನು ಕೊನೆಗೂ ಒಂದು ಕಂಪ್ಯೂಟರ್ ಕೊಂಡಿದ್ದೆ. ಮನೆಯಲ್ಲಿದ್ದ ಕಂಪ್ಯೂಟರ್‌ನಲ್ಲಿ ಯೂನಿಕೋಡ್ ಸವಲತ್ತಿದ್ದರೂ ಅದರಲ್ಲಿ ಇಂಟರ್ನೆಟ್ ಇರಲಿಲ್ಲ. ಅದನ್ನು ಪಡೆಯುವ ಯೋಚನೆಯೂ ನನಗಾಗ ಇರಲಿಲ್ಲ. ಮುಂದೆ ಓದಿ »

- ismail ರವರ ಬ್ಲಾಗ್
- Login or register to post comments
- 1230 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಮುಗ್ಧತೆಯ ಅಂತ್ಯವೇ ಕೃಷಿಯ ಆರಂಭ
March 15, 2006 - 9:34pm — ismailಲೈಂಗಿಕತೆಯ ಅವಶ್ಯಕತೆಯೇ ಇಲ್ಲದೇ ಮಣ್ಣು ಜೀವಿಗಳನ್ನು ಹುಟ್ಟಿಸುತ್ತದೆ ಎಂದು ಪ್ರಾಚೀನ ಭಾರತೀಯರು, ಗ್ರೀಕರು ನಂಬಿದ್ದರು. ತಾಪದ ಪ್ರಭಾವದಿಂದ ಮಣ್ಣು ಜೀವಿಗಳನ್ನು ಹುಟ್ಟಿಸುತ್ತದೆ ಎಂದು ಗ್ರೀಕ್ ಚಿಂತಕ, ಗುರು ತೇಲ್ಸ್ ತನ್ನ ವಿದ್ಯಾರ್ಥಿಗಳಿಗೆ ಹೇಳಿದ್ದ. ಮಣ್ಣು ಯಾವ ಬಾಹ್ಯ ನೆರವೂ ಇಲ್ಲದೆ ಸೃಷ್ಟಿಸುವ ಶಕ್ತಿ ಹೊಂದಿದೆ ಎಂಬ ವಾದವನ್ನು ತತ್ವಜ್ಞಾನಿ ಅರಿಸ್ಟಾಟಲ್ ಮಂಡಿಸಿದ್ದ. ಮುಂದೆ ಓದಿ »

ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು
March 3, 2006 - 8:08pm — ismailಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು
ಈ ಗಾದೆ ಕನ್ನಡಿಗರಿಗೆಲ್ಲಾ ಪರಿಚಿತ. ರೈತರಂತೂ ಇದನ್ನು ಅಕ್ಷರಾರ್ಥದಲ್ಲೇ ಕಲ್ಪಿಸಿಕೊಂಡು ಸ್ವಾರಸ್ಯವನ್ನು ಗ್ರಹಿಸಿಯಾರು. ಒಂದು ವಸ್ತುವನ್ನು ಇಬ್ಬರು ಎರಡು ಪರಸ್ಪರ ಭಿನ್ನ ದಿಕ್ಕುಗಳಿಗೆ ಎಳೆದರೆ ಅದು ಒಂದಿಂಚೂ ಅಲುಗದು ಎಂಬುದನ್ನು ಈ ಗಾದೆ ಧ್ವನಿಸುತ್ತದೆ. ಇನ್ನೂ ಸರಳಗೊಳಿಸಿದರೆ ಇಬ್ಬರ ಮೊಂಡುವಾದಗಳು ಅಥವಾ ಇಬ್ಬರ ವ್ಯರ್ಥ ಪ್ರಯತ್ನಗಳಿಗೆ ಇದು ರೂಪಕವಾಗಬಹುದು. ಈ ಸರಳ ಗ್ರಹಿಕೆಗಳ ಆಚೆಗೆ ಹೋಗಿ ಈ ಗಾದೆಯನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿದರೆ...? ಮುಂದೆ ಓದಿ »

ನೆಲದ ಮರೆಯ ನಿದಾನ-2: ಮರದಿಂದ ಹಣ್ಣು ಯಾಕೆ ಕೆಳಗೆ ಬೀಳುತ್ತದೆ?
February 27, 2006 - 7:32pm — ismailಮರದಿಂದ ಹಣ್ಣು ಯಾಕೆ ಕೆಳಗೆ ಬೀಳುತ್ತದೆ? ಈ ಪ್ರಶ್ನೆಗೆ ಶಾಲೆಗೆ ಹೋದ ಯಾರೂ ಉತ್ತರ ಕೊಡುತ್ತಾರೆ. ಗುರುತ್ವಾಕರ್ಷಣೆಯಿಂದಾಗಿ ಅದು ಕೆಳಗೆ ಬೀಳುತ್ತದೆ. ಯಾಕೆ? ಎಂಬ ಮತ್ತೊಂದು ಪ್ರಶ್ನೆ ಹಾಕಿದರೆ ನ್ಯೂಟನ್‌ನ ಗುರುತ್ವಾಕರ್ಷಣೆಯ ಸಿದ್ಧಾಂತಗಳ ವಿವರಣೆಯನ್ನು ಪಡೆಯಬಹುದು. ಮುಂದೆ ಓದಿ »



RSS: