hpn (ಲೇಖನಗಳು)
ಗೂಗಲ್ ಕ್ರೋಮ್ : ಮೊದಲ ನೋಟ
September 3, 2008 - 2:31am — hpnAsterix ಕಾಮಿಕ್ಸ್ ಓದುವಾಗ ಬಹಳ ಸರಿ ಕೇಳಿ ಬರುವ ಒಂದು ಜೋಕು: ಕಥೆಯಲ್ಲಿ phoenician ವ್ಯಾಪಾರಿಯೊಬ್ಬನಿಗಿರುವ ಆಳುಗಳದ್ದು. ಅವರುಗಳು ಕಥೆಯಲ್ಲಿ ಈ ವ್ಯಾಪಾರಿಯ ಪಾರ್ಟ್ನರುಗಳಂತೆ, ಸರಿಯಾಗಿ ಓದಿಕೊಳ್ಳದೆ ಸಹಿ ಹಾಕಿ ಇವನಡಿ ಆಳುಗಳಂತೆ ದುಡಿಯುತ್ತಿರುತ್ತಾರೆ.
ಗೂಗಲ್ ನ ಯಾವುದೇ ಹೊಸ ಪ್ರಾಡಕ್ಟು ಟ್ರೈ ಮಾಡಲು ಹೊರಟ ನಾವುಗಳು ಇದೇ ವ್ಯಾಪಾರಿಯ ಪಾರ್ಟ್ನರುಗಳ ಥರಾ. ಪೇಜುಗಟ್ಟಲೆ ಟರ್ಮ್ಸ್ ಅಂಡ್ ಕಂಡೀಶನ್ಸ್ ಯಾರು ತಾನೆ ಓದಿಕೊಳ್ಳುತ್ತಾರೆ? ಜೊತೆಗೆ ಅದು ಯಾವಾಗ ಬೇಕಾದರೂ ಬದಲಾಗಬಹುದು ಎಂದು ಬೇರೆ ಅದರಲ್ಲೊಂದು clause ಇರುತ್ತದೆ!
ಇರಲಿ, ಹೀಗೆ ಟರ್ಮ್ಸಿಗೆ ಒಪ್ಪಿಕೊಂಡರೆ ಮಾತ್ರ ಮುಂದೆ ಹೋಗುವಂತೆ ಸುಮಾರು ಆನ್ಲೈನ್ ಸೇವೆಗಳು ನೋಡಿಕೊಳ್ಳುತ್ತವೆ. ಇದು ಅವುಗಳಿಗೆ ತೆಗೆದುಕೊಳ್ಳಲೇಬೇಕಾದ measuresಉ. ಆದರೆ "ಕಿಸೀಕೆ ಸಘೇ ನಹಿ ಹೋತೆ" ಎಂಬಂತಿರುವ ಮಲ್ಟಿನ್ಯಾಶನಲ್ಲುಗಳಲ್ಲಿ ನಂಬಿಕೆಯಿಡೋದು ಕಷ್ಟವೇ. ಇವೆಲ್ಲ ಮನಸ್ಸಿಗೆ ಬಂತು, ಬರೆದೆ. ಈಗ ಬದಿಗಿಡೋಣ. ಏಕೆಂದರೆ ಸ್ವಲ್ಪವೇ ಹೊತ್ತಿನ ಮುಂಚೆ ಸ್ವತಃ ಗೂಗಲ್ ರೆಡಿ ಮಾಡಿರುವ ಬ್ರೌಸರ್ - ಗೂಗಲ್ ಕ್ರೋಮ್ (Google Chrome) ಬಿಡುಗಡೆಯಾಗಿದೆ. ಇದರ ಮೊದಲ ಇಣುಕುನೋಟ ಇಗೋ ನಿಮ್ಮ ಮುಂದೆ. ಮುಂದೆ ಓದಿ »

ತಿಳಿ ಹಾಸ್ಯ ಮರೆತಿಲ್ಲ!
August 30, 2008 - 1:55am — hpnಕನ್ನಡದಲ್ಲಿ ಹಾಸ್ಯಕ್ಕೊಂದು ಹೊಸ ಆಯಾಮ. ಹೊಸ ಪರಿಧಿ. ಕುವೆಂಪುರವರು "ಬೂಟಾಟಿಕೆ"ಯೆಂದು ಕರೆದ ರಾಜಕೀಯ ನಾಟಕದೊಳು ಇರುವ ಹಾಸ್ಯದ ಘಮಲು ಇನ್ನು ತನ್ನದೇ ಆದ ಸೂರಿನಡಿ ಕಾಣಿಸಿಕೊಳ್ಳುವುದು.
ಹೊಸ ವಿಳಾಸ: ಮಜಾವಾಣಿ.ನೆಟ್
ತಿಳಿ ಹಾಸ್ಯ ಮರೆತಿಲ್ಲ, ಸತ್ಯದ ಸುಳಿವಿಲ್ಲ, ಅಣಕು ಮಾಡುವುದು ಹಿಡಿದು ಸುದ್ದಿಯ ಜಾಡು ಎನ್ನುತ್ತಾರೆ ಬ್ಯೂರೋ ಸದಸ್ಯರೊಬ್ಬರು.
ಮತ್ತೊಬ್ಬ ಸದಸ್ಯರು ಬರೆದು ತಿಳಿಸುವಂತೆ:
"ಮಜಾವಾಣಿಗೆ ನೀವೂ ಬರೆಯಬಹುದು! ತಿಳಿ ಹಾಸ್ಯ ತಿಳಿದಿರಬೇಕು, ಹಾಸ್ಯ ಪ್ರಜ್ಞೆಯಿಲ್ಲದವರಿಂದ ಬೈಸಿಕೊಳ್ಳಲು ರೆಡಿಯಾಗಿರಬೇಕು"
ನೀವು ರೆಡೀನಾ? ಮೇಲೆ ಕ್ಲಿಕ್ ಮಾಡಿ! ಮುಂದೆ ಓದಿ »

ತಕ್ಕಮಟ್ಟಿಗೆ ವಿಕಿಪೀಡಿಯಾದ ಒಂದು ವಿಸ್ತೃತ ಪರಿಚಯ
August 29, 2008 - 1:30am — hpnನಿಮಗೊಂದು ಚೂರು ಮಾಹಿತಿ ತಿಳಿದಿದೆ. ಮತ್ತೊಬ್ಬರಿಗೊಂಚೂರು ಮಾಹಿತಿ ತಿಳಿದಿದೆ. ಈ ಮಾಹಿತಿಗಳ ಚೂರುಗಳನ್ನು ಒಂದೆಡೆ ಬೆಸೆದು, ಅತ್ತಿತ್ತ ಓದುತ್ತ, ಅಲ್ಲಿಲ್ಲಿ ಕೇಳಿದ್ದನ್ನು ಬೆಸೆಯುತ್ತ ಜೊತೆಗೂಡಿಸಿ ಸೇರಿಸುತ್ತ ಹೋದರೆ ಏನಾಗುತ್ತದೆ? ಅದು ವಿಕಿಪೀಡಿಯ. ಕೇಳಿದವರಿಗೆಲ್ಲ ನಾವು ವಿಕಿಪೀಡಿಯ ಒಂದು ಮುಕ್ತ ವಿಶ್ವಕೋಶ ಎಂದು ಹೇಳುತ್ತೇವೆ. ಅದು ಯಾರೊಬ್ಬರೂ ಓದಬಹುದಾದ, ಹಾಗೂ ಎಡಿಟ್ ಮಾಡಬಹುದಾದ ವಿಶ್ವಕೋಶ ಎನ್ನುತ್ತೇವೆ. ಆದರೆ ಇದು ನಿರ್ಮಿತಗೊಳ್ಳುತ್ತಿರುವ ವಿಶ್ವಕೋಶ. ಇನ್ನೂ ಬರೆದು ಮುಗಿಸಿಲ್ಲದ ಪುಸ್ತಕದಂತೆ. ಈ ಜ್ಞಾನ ಭಂಡಾರ ನಿರ್ಮಾಣದಲ್ಲಿ ಎಲ್ಲರಿಗೂ ತಮ್ಮ ಜ್ಞಾನ ಕೂಡಿಡಲು ಒಂದು ಮುಕ್ತ ಅವಕಾಶ.
ಮಾಹಿತಿ ಹುಡುಕುತ್ತ ಹೋದವರಿಗೆ ಅಲ್ಲಿಲ್ಲಿ ಸಿಕ್ಕ ಮಾಹಿತಿಯ ಸತ್ಯಾಸತ್ಯತೆಯನ್ನು ಅಳಿಯಬೇಕೆಂಬ ಅರಿವು ಇರುತ್ತದೆ. ಎಲ್ಲೆಲ್ಲೂ ಸಿಗುವ ಮಾಹಿತಿ ಸತ್ಯವಿರಬೇಕಿಲ್ಲ, ನಾವುಗಳು ಸತ್ಯವೆಂದುಕೊಂಡು ನಂಬಿ ಮುನ್ನುಗುತ್ತೇವೆಯೇ ಹೊರತು ಸತ್ಯ ಹಾಗೂ ಸತ್ಯವಲ್ಲದ್ದನ್ನು ಅಳಿಯುತ್ತ ಸತ್ಯ-ಅಸತ್ಯದ ನಡುವಿನ ಹಂದರ ಕಂಡುಹಿಡಿಯಲು ಹೊಡೆದಾಡುವುದು ಜೀವನ ಪರ್ಯಂತ ಇದ್ದದ್ದೇ ಅಲ್ಲವೆ? ಮುಂದೆ ಓದಿ »

ನಾಳೆ ಮುಂಜಾನೆ ಚಂದ್ರಗ್ರಹಣ
August 16, 2008 - 6:09pm — hpnನಾಳೆ, ಅಂದರೆ ಆಗಸ್ಟ್ ೧೭, ಭಾನುವಾರ ಮುಂಜಾನೆ ಸುಮಾರು ೨.೩೦ ರಿಂದ ೪.೦೦ ರ ನಡುವೆ (ಭಾರತದಲ್ಲಿ) ಚಂದ್ರಗ್ರಹಣ ನೋಡಲು ಸಿಗುವುದಂತೆ (ಮೋಡವಿಲ್ಲದಿದ್ದರೆ).
ಇದುವರೆಗೂ ಬಂದಿರುವ ವರದಿಗಳಂತೆ ಅಮೇರಿಕ ಬಿಟ್ಟು ಉಳಿದ ಸುಮಾರು ಪ್ರಾಂತ್ಯಗಳಲ್ಲಿ ಇವತ್ತು ಚಂದ್ರಗ್ರಹಣ ನೋಡಬಹುದಂತೆ. ಮುಂದೆ ಓದಿ »

ಮರುಪೂರಣ - ಹೀಗೊಂದು Case Study
August 7, 2008 - 11:28pm — hpn![]()
ಕೃಷಿಯಲ್ಲಿ ತೊಡಗಿಸಿಕೊಂಡವರಿಗೆ ತಿಳಿದಷ್ಟು ನೀರಿನ ಬೆಲೆ ಬಹುಶಃ ಬೇರೆ ಯಾರಿಗೂ ತಿಳಿದಿರಲಿಕ್ಕಿಲ್ಲ. ಮಳೆಯಾಗಿ ಬಿದ್ದ ನೀರನ್ನು ಹರೆದು ಪೋಲಾಗಲು ಬಿಡದೆ ಅದನ್ನು ಬಳಸಿಕೊಂಡು ನೀರಿನ ಸದುಪಯೋಗಪಡೆಯುವುದು ಕಜೆಯವರು ನೆನಪಿಸುವಂತೆ "ನೀರ ನಿಶ್ಚಿಂತೆ". ಅಡಿಕೆ ಪತ್ರಿಕೆಯಲ್ಲಿ ಸಹಾಯ ಸಂಪಾದಕರಾಗಿ ಕೆಲಸ ಮಾಡುತ್ತಿರುವ ನಾ. ಕಾರಂತರು ಪುತ್ತೂರಿನ ಬಳಿ ಬಾವಿಗೆ ಮರುಪೂರಣ ಮಾಡಿದ್ದರ ದೃಷ್ಟಾಂತವೊಂದನ್ನು ನಮ್ಮೊಂದಿಗೆ ವಾಟರ್ ಪೋರ್ಟಲ್ಲಿನಲ್ಲಿ ಹಂಚಿಕೊಂಡಿದ್ದಾರೆ. ಓದಿ:
ಕಡು ಬೇಸಿಗೆ. ಸುತ್ತೆಲ್ಲಾ ಭಣಭಣ. ನಲ್ಲಿಯಲ್ಲಿ ಅರ್ಧ ಗಂಟೆ ನೀರು ಬಂದರೆ ಹೆಚ್ಚು. ಇಂತಹ ಪರಿಸ್ಥಿತಿಯಲ್ಲೂ ಪುತ್ತೂರಿನ ಆದರ್ಶ ಆಸ್ಪತ್ರೆ ಬಳಿಯ ರಾಜರತ್ನಂ ಅವರ ಬಾವಿಯಲ್ಲಿ ಹತ್ತಡಿ ನೀರಿಗೆ ತೊಂದರೆಯಿಲ್ಲ. ಚಾವಣಿ ನೀರನ್ನು ಬಾವಿಗೆ ಮರುಪೂರಣ ಮಾಡಿದ್ದರ ಫಲ.
ಇವರದು ಹಳೆ ಬಾವಿ. ಮೃದು ಮಣ್ಣು. ಒರತೆ ಕಡಿಮೆ. ಕೆಲವೊದು ಸಲ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಮಳೆ ಬಂದಾಗ ಮೇ ಕೊನೆ ವರೆಗೂ ಕುಡಿಯುವ ನೀರಿಗೆ ತೊಂದರೆಯಾಗುತ್ತಿರಲಿಲ್ಲ. ಸುಮಾರು ಎಂಭತ್ತರ ಹೊತ್ತಿಗೆ ಬಾವಿ ಒಮ್ಮೆ ಬತ್ತಿತ್ತು. ಆಗ ದೂರದಿಂದ ನೀರನ್ನು ತಂದ ಸಾಹಸ ರಾಜರತ್ನಂ ಅವರಿಗೆ ನೆನಪಿದೆ. ಆಮೇಲಿನ ದಿವಸಗಳಲ್ಲಿ ಮನೆಬಳಕೆಗೆ ಬಳಸಲು ತೊಂದರೆಯಾಗುತ್ತಿರಲಿಲ್ಲ. ಮುಂದೆ ಓದಿ »








RSS: