harshavardhan v.sheelavant (ಲೇಖನಗಳು)
ಸದಾ ಅಮರುವ ಕರಡಿ ಅಕಾಲ ಮೃತ್ಯುವಿಗೆ ಈಡಾಗಿ ‘ಅಮರ’ವಾದಾಗ..
November 20, 2008 - 9:44pm — harshavardhan v...ಆಹಾರ ಹುಡುಕಿಕೊಂಡು ನಾಡಿಗೆ ಬಂದ ಮೂರು ಕರಡಿಗಳು ತೆರೆದ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಮಾಗಡಿ ತಾಲ್ಲೂಕು ದೊಡ್ಡೇರಿ ಗ್ರಾಮದಲ್ಲಿ ಜರುಗಿರುವುದಾಗಿ ಮಾಧ್ಯಮಗಳಲ್ಲಿ ಇಂದು ಅತ್ಯಂತ ಚಿಕ್ಕ ಸುದ್ದಿಯಾಗಿ ವರದಿಯಾಗಿದೆ. ಚಿಕ್ಕದಾದರೂ ಕರಡಿ ಬಗ್ಗೆ ಕಳಕಳಿಯಿಂದ ಕೆಲ ಮಾಧ್ಯಮಗಳಾದರೂ ಜವಾಬ್ದಾರಿಯಿಂದ ಸುದ್ದಿ ಮಾಡಿವೆ ಎಂಬುದೇ ಸಮಾಧಾನ.
ಸ್ಥಳೀಯರ ಪ್ರಕಾರ ಕಾಡಿನಿಂದ ಆಹಾರ ಅರಸಿ ನಾಡಿಗೆ ಬಂದ ಮೂರು ಕರಡಿಗಳು ಗ್ರಾಮದ ಹೊರವಲಯದಲ್ಲಿದ್ದ ಬಾವಿಗೆ ಕತ್ತಲಲ್ಲಿ ಆಕಸ್ಮಿಕವಾಗಿ ಬಿದ್ದು ಸತ್ತಿವೆ. ದನ ಕಾಯಲು ಆ ಪ್ರದೇಶಕ್ಕೆ ಹೋಗಿದ್ದ ಗ್ರಾಮದ ಕೆಲವರು ಬಾವಿಯಿಂದ ಬರುತ್ತಿದ್ದ ದುರ್ವಾಸನೆಯನ್ನು ಪತ್ತೆ ಹಚ್ಚಿ, ಕರಡಿಗಳು ಮೃತಪಟ್ಟಿರುವುದನ್ನು ಗುರುತಿಸಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ. ಈ ಕರಡಿಗಳು ಸತ್ತು ೩ ದಿನಗಳಾಗಿವೆ ಎಂದು ಶಂಕಿಸಲಾಗಿದೆ.
ಸುಮಾರು ನಾಲ್ಕು ವರ್ಷಗಳ ಕೆಳಗೆ ಇರಬಹುದು. ಪ್ರಜಾವಾಣಿ ದಿನಪತ್ರಿಕೆಯ ‘ಕರ್ನಾಟಕ ದರ್ಶನ’ ಪುರವಣಿಯ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀ ನಾಗೇಶ ಹೆಗ್ಗಡೆ (ನನ್ನ ವೃತ್ತಿ ಹಾಗು ವಿದ್ಯಾ ಗುರುಗಳು ಎಂದು ಸೂಚ್ಯವಾಗಿ ಹೇಳಬಹುದು) ನನ್ನಂತಹ ನೂರಾರು ಬರಹಗಾರರಿಗೆ ಜೀವದಾಯಿಯಾಗಿದ್ದರು. ಬಹುಶ: ನನ್ನ ಜಾಯಮಾನದ ಒಂದು ಪೀಳಿಗೆಯನ್ನೇ ಕಟ್ಟುತ್ತ ಹರ್ಷಿಸಿದ ಮಹನೀಯ ಅವರು. ಹಾಗೆ ಅವರು ಕೊಟ್ಟ ಕೆಲ ‘ಅಸೈನ್ ಮೆಂಟ್’ ಗಳಲ್ಲಿ ಧರೋಜಿ ಕರಡಿ ಧಾಮದ ಭೇಟಿಯೂ ಸೇರಿದೆ. ಆ ಅನುಭವ ಹಾಗು ಅವರು ತಿದ್ದಿ, ಪೋಷಿಸಿದ ನುಡಿಚಿತ್ರದಲ್ಲಿ ಅಗಾಧವಾದ ಅವರ (ನನ್ನದಲ್ಲ!) ಕರಡಿ ಪ್ರೀತಿ ವ್ಯಕ್ತವಾಗಿದೆ. ಮುಂದೆ ಓದಿ »

ನೀನಾರಿಗಾದೆಯೋ ಎಲೈ ಮಾನವಾ..? ಎನ್ನುತ್ತಿದೆ ಗಜಪಡೆ..!
November 17, 2008 - 5:53pm — harshavardhan v..."ಇಲ್ಲಿ ಅಡಗಿದೆ ಜಗತ್ತಿನ ಅತ್ಯಂತ ಕ್ರೂರ ಪ್ರಾಣಿ"
ಯಾವುದಪ್ಪ..ಅದು? ಎಂದು ಕುತೂಹಲದಿಂದ ನಾವು ಆ ಅಕ್ಷರಗಳನ್ನು ಕೆತ್ತಲಾದ ಪೆಟ್ಟಿಗೆಯ ಬಾಗಿಲು ತೆರೆದರೆ..
ಅಲ್ಲೊಂದು ಕನ್ನಡಿ. ಬಾಗಿಲು ತೆರೆದವನ/ಳ ಮುಖ ಅದರಲ್ಲಿ ಪ್ರತಿಬಿಂಬವಾಗಿ ಕಾಣುತ್ತದೆ! ಅರ್ಥಾತ್..ಜಗತ್ತಿನ ಅತ್ಯಂತ ಕ್ರೂರ ಪ್ರಾಣಿ ಮನುಷ್ಯ!
ಮೈಸೂರಿನ ಜಗತ್ಪ್ರಸಿದ್ಧ ಶ್ರೀ ಜಯಚಾಮರಾಜೇಂದ್ರ ಮೃಗಾಲಯದ ಸ್ವಾಗತ ದ್ವಾರದಲ್ಲಿಯೇ ಈ ಪೆಟ್ಟಿಗೆಯನ್ನು ಇಡಲಾಗಿದೆ. ಅದು ಸ್ಪಷ್ಠವಾಗಿ ನಮ್ಮ ನಡವಳಿಕೆಗೆ ಕನ್ನಡಿ ಹಿಡಿಯುತ್ತದೆ.
"ನೀವು ನೋಡಲು ಕಾತರದಿಂದ ಬಂದಿರುವ ಅತ್ಯಂತ ಕ್ರೂರ ಪ್ರಾಣಿ ಈ ಮೃಗಾಲಯದ ಪಂಜರದೊಳಗಿಲ್ಲ..ಹೊರಗಿದೆ!" ಎಂಬ ದಿವ್ಯ ಸಂದೇಶವನ್ನು ಆ ಪೆಟ್ಟಿಗೆ ಸಾರುತ್ತದೆ.
ಒಂದು ಸಂಶೋಧನಾ ಪತ್ರಿಕೆಯ ಪ್ರಕಾರ ವರ್ಷವೊಂದರಲ್ಲಿ ಲಕ್ಷಾಂತರ ಗಿಡಗಳನ್ನು ಆಕಸ್ಮಿಕವಾಗಿ ಅಳಿಲುಗಳು ನಡುತ್ತವೆ! ಅಥವಾ ಹುಟ್ಟಿಸುತ್ತವೆ! ತಮ್ಮ ಬಾಯಿಯಲ್ಲಿ ನಿತ್ಯ ನೂರಾರು ಹಣ್ಣು, ಬೀಜಗಳನ್ನು ತಿನ್ನಲು ಹೆಕ್ಕುವ ಅವು, ನಂತರ ಆ ಹಣ್ಣುಗಳನ್ನು ಮತ್ತು ಬೀಜಗಳನ್ನು ಎಲ್ಲಿ ಬಚ್ಚಿಟ್ಟಿದ್ದೇವೆ ಎಂಬುದನ್ನೇ ಮರೆತು ಬಿಡುತ್ತವೆ. ಕಾಲಕ್ರಮೇಣ ಅಳಿಲಿನ ಲಾಲಾರಸದಲ್ಲಿ ಮಿಂದ ಬೀಜ/ ಹಣ್ಣು ಸುಪುಷ್ಠವಾಗಿ ಮೊಳಕೆ ಒಡೆದು ಗಿಡದ ವಂಶಾಭಿವೃದ್ಧಿಗೆ ಸಹಕಾರಿಯಗುತ್ತದೆ. ಹಾಗೆಯೇ ಅವು ಹಣ್ಣನ್ನು ತಿಂದು ಮಲದ ರೂಪದಲ್ಲಿ ಬಿಸುಟುವ ತ್ಯಾಜ್ಯದಲ್ಲಿಯೂ ಕೂಡ ಹೇರಳ ಬೀಜಗಳಿದ್ದು, ಆ ಸಮಗ್ರ ಗೊಬ್ಬರ ಲೇಪಿತ ಬೀಜಗಳು ಹುಲುಸಾಗಿ ಬೆಳೆದು ಕಾಡನ್ನು ಸಮೃದ್ಧಿ ಗೊಳಿಸುತ್ತವೆ. ಮುಂದೆ ಓದಿ »

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ‘ಸ್ವರಾಧಿರಾಜ್’ ಭೀಮಸೇನರಿಗೆ ‘ಭಾರತರತ್ನ’ ಗೌರವ.
November 5, 2008 - 1:47pm — harshavardhan v...೧೯೩೩, ಆಗಸ್ಟ್ ೧೫ ರಿಂದ ೨೦ ಹನ್ನೆರಡು ವರ್ಷದ ಬಾಲಕ ಗದುಗಿನ ಹೊಂಬಳದಿಂದ ಮನೆ ಬಿಟ್ಟು ಓಡಿಹೋದ.
ಮೈಸೂರಿನಲ್ಲಿ ಎಂ.ಎ. ಪದವಿ ಕಲೀಲಿಕ್ಕಿದ್ದ ತಂದೆ ಗುರುರಾಜರಿಗೆ ತಾರು ಹೋಯಿತು. ಅವರ ಸಹೋದರ ಗೋವಿಂದ ಈ ಟೆಲಿಗ್ರಾಂ ಕೊಟ್ಟಿದ್ದರು. ಇದೆ ಟೆಲಿಗ್ರಾಂ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಜೇಕಬ್ ಅವರಿಗೆ ತೋರಿಸಿ ರಜೆ ಪಡೆದು ಊರಿಗೆ ಓಡಿದರು ತಂದೆ.
ಇವರನ್ನು ನೋಡುತ್ತಲೇ ದು:ಖದ ಕಟ್ಟೆ ಒಡೆಯಿತು ತಾಯಿಗೆ. ‘ಊಟ, ತಿನಿಸಿನ ಮ್ಯಾಲೆ ಸಿಟ್ಟು ಮಾಡಿಕೊಂಡು, ಅನ್ನಕ್ಕ ತುಪ್ಪ ಬಡಿಸಲಿಲ್ಲ ಅನ್ನೋದನ್ನ ನೆವಾ ಮಾಡಿಕೊಂಡು ಊರು ಬಿಟ್ಟು ಹೋಗ್ಯಾನ’ ಗಳಗಳನೇ ಅಳುತ್ತ ತಾಯಿ ಅಲವತ್ತುಕೊಂಡರು.
ಒಳ್ಳೆಯ ಪೌಷ್ಠಿಕ ಆಹಾರದ ರೂಢಿಯಿದ್ದ ಹುಡುಗನಿಗೆ ಮೊದಲ ಪಲಾಯನ ಬಹಳ ತೊಂದರೆದಾಯಕ ಆಗಿತ್ತು. ಮುಂಬೈ ತಲುಪಿದಾಗ ಅವನ ಕಿಸೆಯಲ್ಲಿ ಒಂದು ದುಡ್ಡು ಇರಲಿಲ್ಲ! ಕನ್ನಡ ಭಾಷೆ ಬಿಟ್ಟರೆ ಬೇರೆ ಭಾಷೆ ಬರುತ್ತಿರಲಿಲ್ಲ. ಮುಂಬೈ ಅಂತಹ ಮಹಾನಗರಿಯಲ್ಲಿ ರಸ್ತೆಯ ಬದಿಗೆ ನಿಂತು ಅವನ ಹಾಡು ಕೇಳುವಷ್ಟು ಪುರುಸೊತ್ತು ಅಂದು ಕೂಡ ಯಾರಿಗೂ ಇರಲಿಲ್ಲ. ಮುಂದೆ ಓದಿ »

ನೀರ ನಿಶ್ಚಿಂತೆಯಲ್ಲಿ ‘ಬ್ಲಾಗೀದಾರರು’!
November 3, 2008 - 6:00pm — harshavardhan v...‘ಸಮೂಹ’ ಸಂವಹನಕ್ಕಿಂತ ‘ಸಮುದಾಯ’ ಕೇಂದ್ರಿತ ಸಂವಹನಕ್ಕೆ ಈಗ ಎಲ್ಲಿಲ್ಲದ ಬೇಡಿಕೆ. ಸಂತೆಯಲ್ಲಿ ಕಲ್ಲು ಹೊಡೆಯುವ ಬದಲು, ಜಾತ್ರೆಯಲ್ಲಿ ಗುರಿ ಇಟ್ಟು ಭಕ್ತನಿಗೇ ಬೀಸುವ ಕಲ್ಲಿದ್ದಂತೆ! ಗುರಿ ತಲುಪಿದರೆ ಒಂದೋ..ಎರಡೋ..ಹಣ್ಣು. ಗುರಿ ತಪ್ಪಿದರೆ..ಒಂದು ಕಲ್ಲು ಹೋಯಿತಷ್ಟೇ? ಮುಂದೆ ಓದಿ »

- Login or register to post comments
- 145 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
‘ನೀರ ನಿಶ್ಚಿಂತೆ’- ಅನ್ನದ ನೆಲ; ಅರಿವಿನ ಮುಗಿಲು, ಹುಬ್ಬಳ್ಳಿ ಕಾರ್ಯಾಗಾರ ಯಶಸ್ವಿ.
October 30, 2008 - 1:59pm — harshavardhan v...ಮುದ್ರಣ, ವಿದ್ಯುನ್ಮಾನ ಹಾಗು ಬಾನುಲಿ ಈ ಎಲ್ಲ ಮಾಧ್ಯಮಗಳನ್ನು ಮೈಗೂಡಿಸಿಕೊಂಡಿರುವ ಅಂತರ್ಜಾಲದ ‘ಆನ್ ಲೈನ್’ ಮಾಧ್ಯಮ ಇಂದು ಪ್ರಬಲ ಮತ್ತು ಜನಪ್ರಿಯ ಮಾಧ್ಯಮವಾಗಿ ಹೊರಹೊಮ್ಮುತ್ತಿದೆ ಎಂಬುದು ಕನ್ನಡ ಇಂಡಿಯಾ ವಾಟರ್ ಪೋರ್ಟಲ್ ಸಂಯೋಜಕ ಹರಿಪ್ರಸಾದ್ ನಾಡಿಗ ಅವರ ಅಭಿಪ್ರಾಯ. ಮುಂದೆ ಓದಿ »



RSS: