hamsanandi (ಲೇಖನಗಳು)
ಕರ್ಣ ರಸಾಯನ - ಒಂದು ನಾಟಕ
November 18, 2008 - 6:24am — hamsanandi
ಕೆಲವು ವರ್ಷಗಳ ಹಿಂದೆ ನಮ್ಮ ಕನ್ನಡ ಕೂಟವು ನಡೆಸಿದ ಕನ್ನಡೋತ್ಸವದಲ್ಲಿ ನಾನು
ನಾಟಕವೊಂದನ್ನು ಬರೆದು ಆಡಿಸಿದ್ದೆ. ಇದೊಂದು ತರಹದ ಹೊಸ ಪ್ರಯೋಗವಾಗಿತ್ತು. ಕರ್ನಾಟಕ
ಎರಡು ಕಲೆಗಳಾದ ಗಮಕ ವಾಚನ ಮತ್ತು ಯಕ್ಷಗಾನ ಇವೆರಡೂ ಬೆರೆಸಿ ಮಾಡಿಸಿದ ನೃತ್ಯನಾಟಕ
ಇದು.
ಕಾವ್ಯ ವಾಚನಕ್ಕೆ ಸಾವಿರಾರು ವರ್ಷದ ಇತಿಹಾಸವಿದೆ. ವಾಲ್ಮೀಕಿ ಬರೆದ ರಾಮಾಯಣವನ್ನು
ರಾಮನ ಮುಂದೇ ಲವ-ಕುಶರು ವಾಚಿಸಿದರು ಎಂದು ಉತ್ತರಕಾಂಡದಲ್ಲಿ ಬರುತ್ತದೆ. ನೂರಾರು
ವರ್ಷಗಳಿಂದ ಕರ್ನಾಟಕದ ಹಳ್ಳಿಹಳ್ಳಿಗಳಲ್ಲೂ ಗದುಗಿನ ಭಾರತ, ಜೈಮಿನಿ ಭಾರತವನ್ನು ವಾಚನ
ಮಾಡುವ ಪದ್ಧತಿ ನಡೆದುಕೊಂಡು ಬಂದಿತ್ತು.ಇನ್ನು ಯಕ್ಷಗಾನವೂ ಕೂಡ ಕರ್ನಾಟಕಕ್ಕೇ
ವಿಶಿಷ್ಟವಾದೊಂದು ಕಲಾಪ್ರಕಾರ ಎಂದು ಹೇಳುವ ಅಗತ್ಯವೇ ಇಲ್ಲ.
ಕುಮಾರವ್ಯಾಸನ ಬಗ್ಗೆ ಒಂದು ಕಾಲ್ಪನಿಕ ಪ್ರಸಂಗವನ್ನೂ, ಮತ್ತು ಅವನ ಗದುಗಿನ
ಭಾರತದಿಂದ ಆಯ್ದ ಕೆಲವು ಭಾಗಗಳನ್ನೂ ಆಯ್ದು ಬರೆದ ನಾಟಕವಿದು. ಇಲ್ಲಿ ಬರುವ
ಪದ್ಯಗಳೆಲ್ಲಾ ನಾರಣಪ್ಪನದ್ದೇ. ಅಲ್ಲದೆ, ಕೃಷ್ಣ, ಕರ್ಣ, ಅರ್ಜುನರ ಸಂಭಾಷಣೆಯಲ್ಲಿ
ಬರುವ ಹಲವಾರು ಸಾಲುಗಳೂ ಕೂಡ ಕುಮಾರವ್ಯಾಸನ ಪದ್ಯಗಳ ರೂಪಾಂತರಗಳೇ ಆಗಿವೆ.
ಮುಂದೆ ಓದಿ »

ಪುರಂದರ ದಾಸರ ಸಾಹಿತ್ಯದಲ್ಲಿ ನೃತ್ಯ
October 30, 2008 - 5:23am — hamsanandiದಾಸಸಾಹಿತ್ಯ ನಡುಗನ್ನಡ ಕಾಲದಲ್ಲಿ ಆರಂಭವಾಗಿ ಸುಮಾರು ಇಪ್ಪತ್ತನೇ ಶತಮಾನದವರೆಗೂ ಬೆಳೆದು ಬಂದ ಕನ್ನಡ ಸಾಹಿತ್ಯ ಪ್ರಕಾರ. ದಾಸಸಾಹಿತ್ಯದ ಮುಖ್ಯ ಉದ್ದೇಶ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಧರ್ಮ ಪ್ರಚಾರ ಮತ್ತು ಸಮಾಜ ಸುಧಾರಣೆ. ಈ ಕಾರ್ಯಕ್ಕೆ ಹರಿದಾಸರು ಉಪಯೋಗಿಸಿದ ಮಾಧ್ಯಮ ಸಂಗೀತ ಮತ್ತೆ ನೃತ್ಯದ್ದಾಗಿತ್ತು. ಗೆಜ್ಜೆ ಕಟ್ಟಿ ಕುಣಿಯುತ್ತ, ಹಾಡುತ್ತ ಬೀದಿಬೀದಿಯಲ್ಲಿ ತಿರುಗಿದ ಹರಿದಾಸರ ಬರವಣಿಗೆ ಅಂದಿನ ಸಮಾಜದ ಜನಜೀವನಕ್ಕೊಂದು ಕನ್ನಡಿ. ಆಗಿನ ಕಾಲದ ಎಷ್ಟೋ ಚಾರಿತ್ರಿಕ ಅಂಶಗಳನ್ನು ನಾವು ದಾಸರ ರಚನೆಗಳಿಂದ ಹೆಕ್ಕಿ ತೆಗೆಯಬಹುದಾಗಿದೆ.
ಹರಿದಾಸರಲ್ಲೆಲ್ಲ ಹೆಚ್ಚಿನ ಹೆಸರು ಗಳಿಸಿದವರು ಪುರಂದರದಾಸರೇ. 'ದಾಸರೆಂದರೆ ಪುರಂದರದಾಸರಯ್ಯ' ಎಂದು ತಮ್ಮ ಗುರುಗಳಿಂದಲೇ ಹೊಗಳಿಸಿಕೊಂಡ ಮಹಾನುಭಾವರು ಇವರು. ಇವರ ನಂತರ ಬಂದ ದಾಸರೆಲ್ಲ ಪುರಂದರದಾಸರನ್ನೇ ಗುರುವನ್ನಾಗಿ ಭಾವಿಸಿ 'ಪುರಂದರ ಗುರುಂ ವಂದೇ ದಾಸಶ್ರೇಷ್ಠಂ ದಯಾನಿಧಿಂ', 'ಗುರು ಪುರಂದರ ದಾಸರೆ ನಿಮ್ಮ ಚರಣಕಮಲವ ನಂಬಿದೆ" ಎಂದು ಹಾಡಿದ್ದಾರೆ. ಪುರಂದರ ದಾಸರ ಸಾಹಿತ್ಯದ ಹರಹು ಬಹಳ ವಿಸ್ತಾರವಾದದ್ದು. ಆಗಿನ ಕಾಲದ ಜನಜೀವನದ ಹೊಳಹುಗಳನ್ನು ಇವರ ರಚನೆಗಳನ್ನು ನಾವು ಕಾಣಬಹುದು. ಇವರ ಹಾಡುಗಳಲ್ಲಿ ಬರುವ ನಾಟ್ಯ-ನೃತ್ಯದ ಬಗ್ಗೆಯ ಕೆಲವು ಅಂಶಗಳನ್ನು ಈ ಬರಹದಲ್ಲಿ ಗಮನಿಸೋಣ.
ಪುರಂದರ ದಾಸರು ಹೆಚ್ಚಿನ ರಚನೆಗಳು ಸಹಜವಾಗೇ ಕೃಷ್ಣನ ಪರವಾಗಿರುವುದು ಈ ನಿಟ್ಟಿನಲ್ಲಿ ಅನುಕೂಲವೇ ಆಗಿದೆ. ಏಕೆಂದರೆ ಕೃಷ್ಣನು ತಾನೇ ಕಾಳಿಂಗನರ್ತನ ಮಾಡಿದ್ದು? 'ಆಡಿದನೋ ರಂಗ' ಎಂಬ ರಚನೆಯಲ್ಲಿ ಅವರು ಹೀಗೆ ಹಾಡುತ್ತಾರೆ: ಮುಂದೆ ಓದಿ »

ಭರ್ತೃಹರಿಯ ಸುಭಾಷಿತತ್ರಿಶತಿ - ಒಂದು ಅವಲೋಕನ
August 31, 2007 - 6:29am — hamsanandi
ಭಾರತೀಯ ಸಾಹಿತ್ಯದಲ್ಲಿ ಸಂಸ್ಕೃತ ಸಾಹಿತ್ಯ ಅತಿ ಪುರಾತನವಾದದ್ದು. ಅತಿ ಮುಂಚೆಯಿಂದಲೇ ಸಂಸ್ಕೃತ ಕಾವ್ಯದಲ್ಲಿ ಸುಭಾಷಿತ ಎಂಬ ಪ್ರಕಾರ ಬೆಳೆದು ಬಂದಿದೆ. ರಾಮಾಯಣ, ಮಹಾಭಾರತಗಳಲ್ಲೂ, ನಂತರ ಬಂದ ಭಾಸ-ಕಾಳಿದಾಸಾದಿಗಳ ನಾಟಕ ಹಾಗೂ ಮಹಾಕಾವ್ಯಗಳಲ್ಲಿಯೂ ಸುಭಾಷಿತಗಳ ಗುಂಪಿಗೆ ಸೇರಬಹುದಾದಂತಹ ಅನೇಕ ಶ್ಲೋಕಗಳು ಕಂಡು ಬರುತ್ತವೆ. ಸುಭಾಷಿತಕ್ಕೆ ಅಕ್ಷರಶಃ ಒಳ್ಳೆಯ ನುಡಿ ಎಂದು ಅರ್ಥ. ಎಷ್ಟೋ ಬಾರಿ ಒಗಟುಗಳು, ಚಮತ್ಕಾರೀ ಪದ್ಯಗಳು ಮುಂತಾದುವುಗಳನ್ನೂ ಸುಭಾಷಿತಗಳ ಗುಂಪಿಗೆ ಸೇರಿಸುವುದು ಉಂಟು. ಎಷ್ಟೋ ಸುಭಾಷಿತಗಳನ್ನು ಬರೆದವರು ಯಾರು ಎಂಬುದು ತಿಳಿಯದಿದ್ದರೂ, ಅವು ಶತಮಾನಗಳ ನಂತರವೂ ಬಳಕೆಯಲ್ಲಿರುವುದು ಗಮನಿಸಬೇಕಾದ ಸಂಗತಿ. ಅವುಗಳ ವಸ್ತು ಜಳ್ಳಾಗಿಲ್ಲದೇ, ಗಟ್ಟಿಯಾಗಿರುವುದು ಇದಕ್ಕೆ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ಮುಂದೆ ಓದಿ »

ಚಕೋರಂಗೆ ಚಂದ್ರಮನ ಬೆಳಕಿನ ಚಿಂತೆ
July 31, 2007 - 12:53am — hamsanandiಈಗ ಕೆಲವು ದಿನಗಳಿಂದ ಸುದ್ದಿಮಾಡಿರುವ ಬಸವಣ್ಣನವರ ಬಗ್ಗೆಯ ಜಯಪ್ರಕಾಶರ ಪುಸ್ತಕದ ಬಗ್ಗೆ ನಾವೆಲ್ಲಾ ಸಂಪದದಲ್ಲಿ ಬಹಳಷ್ಟು ಓದಿದ್ದೇವೆ. ಆದರೆ, ಬಸವಣ್ಣ ನಮಗೆ ಬೇಕಾಗಿರುವುದು ನಮಗೆ ಅವರು ಏನು ಹೇಳಿದರು ಎನ್ನುವುದರಿಂದಲೇ ಹೊರತು, ಅವರ ಹಿನ್ನಲೆ ಏನು ಎನ್ನುವ ಕಾರಣಕ್ಕೆ ಅಲ್ಲ. ಇದನ್ನು ನಾವು ಮರೆಯದಿದ್ದರೆ, ಎಷ್ಟೋ ಗೊಂದಲಗಳಿಂದ, ಗದ್ದಲಗಳಿಂದ ದೂರಾಗಬಹುದು. ಮುಂದೆ ಓದಿ »

ನಾಸದೀಯ ಸೂಕ್ತ
July 17, 2007 - 7:02am — hamsanandiನಾಸದೀಯ ಸೂಕ್ತ ಎಂಬುದು ಋಗ್ವೇದದ ಹತ್ತನೇ ಮಂಡಲದಲ್ಲಿ ಬರುವ ಏಳು ಋಕ್ಕುಗಳ ಒಂದು ಭಾಗ.ನಾನು ವೇದಗಳನ್ನು ಓದಿದವನಲ್ಲ, ಕಲಿತವನಲ್ಲ. ಸಂಸ್ಕೃತದ ಪರಿಚಯವಿದ್ದರೂ, ವೇದಗಳನ್ನು ಪೂರ್ತಿ ಅರ್ಥಮಾಡಿಕೊಳ್ಳುವಷ್ಟು ಅರಿತಿಲ್ಲ. ಈ ಭಾಗದಲ್ಲಿ ನಾಸೀತ್, ನಾಸೀತ್ (ಇರಲಿಲ್ಲ, ಇರಲಿಲ್ಲ) ಎಂದು ಮತ್ತೆ ಮತ್ತೆ ಬರುವುದರಿಂದ, ಇದಕ್ಕೆ ನಾಸದೀಯ ಸೂಕ್ತವೆಂದು ಹೆಸರು ಎಂದು ಬಲ್ಲವರೊಬ್ಬರು ಹೇಳಿದ್ದನ್ನು ಕೇಳಿದ್ದೇನೆ.
ಈ ಭಾಗವನ್ನು, ಅದರ ಇಂಗ್ಲಿಷ್ ಅನುವಾದವನ್ನೂ ಕೆಲವೆಡೆಗಳಲ್ಲಿ ಓದಿದ್ದೆ. ಒಮ್ಮೆ ಕನ್ನಡದಲ್ಲಿ ಇದನ್ನು ತರ್ಜುಮೆ ಮಾಡೋಣವೆನ್ನಿಸಿತು. ಮುಂದೆ ಓದಿ »








RSS: