csomsekraiah (ಲೇಖನಗಳು)
ಕಾರಂತರ ಜೀವಂತ ಪಾತ್ರಗಳು ೧೩ (೩)
October 16, 2008 - 7:33pm — csomsekraiahಸುನಾಲಿನಿ ಪ್ರಾಧ್ಯಾಪಕಿಯಾಗಿರುವ ಶಿಕ್ಷಣ ಸಂಸ್ಥೆ ಹೆಸರುವಾಸಿಯಾದುದಾಗಿರುತ್ತದೆ . ದೇಶದ ಪ್ರಮುಖರು ಅಲ್ಲಿಗೆ ಅತಿಥಿಗಳಾಗಿ ಬಂದು ಅಲ್ಲಿ ವಿಮರ್ಶೆ ಚರ್ಚಾಕೂಟ ಮುಂತಾದವು ಜರುಗುತ್ತಲೇ ಇರುತ್ತವೆ . ಒಂದು ಸಾರಿ ಸುನಾಲಿನಿ ಕಾಸರಕರು ಮುಂಬೈನ ಕೆಲವು ಗಣ್ಯರೊಡನೆ ಒಂದು ಬೌದ್ದಿಕ ಪ್ರವಾಸ ಕೈಗೊಳ್ಳಬೇಕಾಗುತ್ತದೆ . ಮುಂದೆ ಓದಿ »

ಕಾರಂತರ ಜೀವಂತ ಪಾತ್ರಗಳು ೧೩ (೨)
October 15, 2008 - 7:56pm — csomsekraiahಕಾದಂಬರಿ ತೊಡಗುವುದೇ ’ಹಂದಿಗೋಣ’ ಎಂಬ ಹಂದಿಯೂ ಅಲ್ಲದ ಕೋಣವೂ ಅಲ್ಲದ ವಿಚಿತ್ರವಾದೊಂದು ಹೆಸರಿನ ಊರಿನಿಂದ , ಗೋಕರ್ಣದ ಸಮೀಪದ ಆ ಊರಿಗೆ ಮೂರೂರಿನ ರಾಮಕೃಷ್ಣಯ್ಯನವರ ತಂಗಿಯನ್ನು ಕೊಟ್ಟಿರುತ್ತದೆ . ತಂಗಿಯ ಮಕ್ಕಳ ಉಪನಯನಕ್ಕೆ ರಾಮಕೃಷ್ಣಯ್ಯ ಆ ಊರಿಗೆ ಬಂದಿರುತ್ತಾರೆ .ಉಪನಯನದ ಊಟ ಮುಗಿದು ಎಲ್ಲರೂ ಚಾವಡಿಯಲ್ಲಿ ವಿರಾಮವಾಗಿ ಕುಳಿತಿದ್ದಾಗ , ಗೋಕರ್ಣದ ’ದೇವರುಹೆಗಡೆ’ ಎಂಬ ಹೆಸರಿನ ಮೇಧಾವಿಗೆ ತನ್ನ ಹಸ್ತಸಾಮುದ್ರಿಕ ವಿದ್ಯೆಯಲ್ಲಿನ ಪ್ರಾವೀಣ್ಯವನ್ನು ಪ್ರದರ್ಶಿಸುವ ಚಪಲವಾಗುತ್ತದೆ .ಆಲ್ಲಿ ಆಡುತ್ತಿದ್ದ ಹುಡುಗರಲ್ಲಿ ಒಬ್ಬನನ್ನು ಕರೆದು ಅವನ ಕೈ ನೋಡಿ ಇಂತಹ ಕೈಯಿ ಈ ಜಗತ್ತಿನಲ್ಲಿಯೇ ಇಲ್ಲ ಎಂದು ಘೋಷಿಸಿಬಿಡುತ್ತಾನೆ . ಮೂರೂರು ರಾಮಕೃಷ್ಣಯ್ಯನವರಿಗೆ ಬೇಸರವಾಗುವುದು ದೇವರು ಹೆಗಡೆಯ ಸಾಮುದ್ರಿಕ ಶಾಸ್ತ್ರಕ್ಕಿಂತ ಆ ವ್ಯಕ್ತಿಯ ಗತ್ತು ಮತ್ತು ಅಹಂಕಾರದ ಬಗ್ಗೆ . " ಎಂದೋ ಈ ಹುಡುಗ ಮಹಾರಾಜನಾಗುವುದನ್ನು ಕಾದು ಕುಳಿತು ಕಂಡು ಹಿಡಿಯುವವರಾದರೂ ಯಾರು? ಈಗ ಯಾವ ಬೊಗಳೆ ಬಿಟ್ಟರೆ ಯಾರು ಕೇಳುತ್ತಾರೆ ? " ಎಂದುಕೊಂಡ ರಾಮಕೃಷ್ಣಯ್ಯ ಅಲ್ಲಿಯೇ ಆಡುತ್ತಿದ್ದ ತಮ್ಮ ತಂಗಿಯ ಮಗ ಗಣೇಶನನ್ನು ಕರೆದು ಅವನ ಕೈ ನೋಡಲು ಹೇಳುತ್ತಾರೆ . ಆ ಹುಡುಗ ಕೈ ತೋರಿಸಿದ ರೀತಿ ರಾಮಕೃಷ್ಣಯ್ಯನವರ ಮಾತಿನ ಧಾಟಿ ಎರಡೂ ದೇವರು ಹೆಗಡೆಗೆ ಒಂದು ರೀತಿಯ ಸವಾಲಿನಂತೆ ಭಾಸವಾಗಿ , ತಾತ್ಸಾರವಾಗಿ ಅವನ ಕೈ ನೋಡಿದಂತೆ ನಟಿಸುತ್ತಾ " ಇಂತಹ ಕಳಪೆಯ ಕೈ ತಮ್ಮ ಜೀವಮಾನದಲ್ಲಿಯೇ ನೋಡಿಲ್ಲ ,ಇಂತಹ ಭವಿಷ್ಯವಿಲ್ಲದ ಕೈಯ್ಯನ್ನು ನೋಡಲೂಬಾರದು" ಎನ್ನುವ ಧಾಟಿಯಲ್ಲಿ ಮಾತಾಡಿಬಿಡುತ್ತಾನೆ. ಇಲ್ಲಿಗೆ ಇಂದ್ರನ ಸಭೆಯ ವಶಿಷ್ಟ ವಿಶ್ವಾಮಿತ್ರರ ವಾಗ್ವಾದದ ತರಹ ಆದ ದೇವರು ಹೆಗಡೆ , ರಾಮಕೃಷ್ಣಯ್ಯ ಇವರ ವಾದದಿಂದ, ರಾಮಕೃಷ್ಣಯ್ಯನವರಲ್ಲಿ ಹಠದ ಬೀಜವೊಂದು ಬೆಳೆದು , ತಂಗಿಯ ಮಗನ ಜೀವನವನ್ನು ಅಭಿವೃದ್ದಿಗೊಳಿಸಲೇಬೇಕು ಎಂಬ ಹಠಕ್ಕೆ ಬಿದ್ದು , ಅವನನ್ನು ತಮ್ಮ ಊರಿಗೇ ಕರೆದುಕೊಂಡು ಹೋಗಿ ಶಾಲೆಗೆ ಸೇರಿಸುತ್ತಾರೆ . ತಂಗಿಗೆ ಬಹಳ ಮಕ್ಕಳಿದ್ದುದರಿಂದ ಅವಳು ಅಣ್ಣನ ಇಷ್ಟದಂತೆ ಅವನ ಊರಿಗೆ ಮಗನನ್ನು ಕಳುಹಿಸುತ್ತಾಳೆ . ಮುಂದೆ ರಾಮಕೃಷ್ಣಯ್ಯನವರು ತಮ್ಮ ಹೆತ್ತ ಮಕ್ಕಳಿಗಿಂತಲೂ ಈ ತಂಗಿಯ ಮಗನ ಶ್ರೇಯಸ್ಸಿಗೆ ಶ್ರಮಿಸುತ್ತಾರೆ. ಮುಂದೆ ಓದಿ »

- Login or register to post comments
- 154 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಕಾರಂತರ ಜೀವಂತ ಪಾತ್ರಗಳು ೧೩ (೧)
October 14, 2008 - 5:46pm — csomsekraiahಬುದ್ದಿ ಇರುವ ಮನುಷ್ಯನನ್ನು , ಅವನ ಮನಸ್ಸು ಕೆಣಕುತ್ತಲೇ ಇರುವ ವಿಷಯಗಳಲ್ಲಿ ಆಕಾಶವು ಪ್ರಮುಖವಾದುದು . ಕಾಲದಿಂದ ಕಾಲಕ್ಕೆ ಆಕಾಶದ ಬಗ್ಗೆ ಅವನ ಅರಿವಿನ ವಿಸ್ತಾರ ಹೆಚ್ಚುತ್ತಲೇ ಇದೆ . ಈ ವಿಷಯದ ತಿಳಿವಿನಲ್ಲಿ ಪ್ರಾಚೀನ ಕಾಲದ ಭಾರತೀಯರು ಜಗತ್ತಿನ ಬೇರೆ ಭಾಗಗಳ ಜನರಿಗಿಂತ ತುಂಬಾ ಮುಂಚೂಣಿಯಲ್ಲೇ ಇದ್ದರು . ಮುಂದೆ ಓದಿ »

ಕಾರಂತರ ಜೀವಂತ ಪಾತ್ರಗಳು ೧೨ (೩)
September 30, 2008 - 6:15am — csomsekraiahಗೊಂಡಾರಣ್ಯದ ಹಿರಿಯ ಮುಖಂಡ ಅರುಣಾಚಲಯ್ಯ ನಾಡಿನ ಈ ಅಪದೆಶೆಯನ್ನು ಕಂಡೂ, ಏನೂ ಮಾಡಲು ತೋರದ ಅಸಹಾಯಕತೆಯಲ್ಲಿ ಚಿಂತೆಗೀಡಾಗುತ್ತಾನೆ ; ವ್ಯವಸ್ಥೆಯ ವಿರುದ್ದ ಒಂಟಿದನಿಯಾಗಿ ಸೆಣಸುತ್ತಿರುತ್ತಾನೆ . ಪ್ರಜಾಪ್ರಭುತ್ವಕ್ಕೆ ಅನುಗುಣವಾಗಿ ರಾಜ್ಯದಲ್ಲಿ ಚುನಾವಣೆಗಳೂ ಬರುತ್ತವೆ , ಅವುಗಳಲ್ಲಿ ಮೋಸ ವಂಚನೆಗಳೂ ನಡೆಯುತ್ತವೆ . ಪ್ರಗತಿಗಿಂತ ವಿಪ್ಲವ , ಚಳುವಳಿ , ಸಂಪು , ಬಂದ್ ಇವುಗಳದೇ ಸಾಮ್ರಾಜ್ಯವಾಗುತ್ತದೆ .
ರಾಜ್ಯದಲ್ಲಿ ದೇಶವಾದಿಗಳೂ , ಸಾಮ್ಯವಾದಿಗಳೂ , ಜನವಾದಿಗಳೂ ಮುಂತಾದ ವಿವಿಧ ತಾತ್ವಿಕ ಗುಂಪುಗಳು ತಮ್ಮ ತಮ್ಮ ಸಿದ್ದಾಂತದಂತೆ ಪಕ್ಷಗಳನ್ನು ಕಟ್ಟಿಕೊಂಡು ರಾಜಕೀಯವಾಗಿ ಸೆಣೆಸುತ್ತಾರೆ ; ಆದರೆ ಇದಾವುದರಿಂದಲೂ ಕುಸಿಯುತ್ತಿರುವ ಸಾಮಾಜಿಕ ವ್ಯವಸ್ಥೆಯನ್ನು ನೇರಗೊಳಿಸಲು ಮಾತ್ರ ಸಾಧ್ಯವಾಗುವುದಿಲ್ಲ . ಮುಂದೆ ಓದಿ »

- Login or register to post comments
- 123 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಕಾರಂತರ ಜೀವಂತ ಪಾತ್ರಗಳು ೧೨ (೨)
September 29, 2008 - 6:40am — csomsekraiahಜನತೆಗೆ ಕನಸುಗಳ ಜಾತ್ರೆಯನ್ನೇ ತೋರಿಸಿ ಕ್ರಾಂತಿಯ ಹರಿಕಾರರ ರೀತಿಯಲ್ಲಿ ಬಿಂಬಿಸಿಕೊಂಡ ನಾಯಕರೂ ಸಹ ಆಧಿಕಾರ ಸಿಕ್ಕ ಕ್ಷಣದಿಂದ ನಡೆದುಕೊಂಡ ರೀತಿ ಮಾತ್ರ ಅವರು ಯಾವುದನ್ನು ವಿರೋಧಿಸಿ ಅಧಿಕಾರಕ್ಕೆ ಬಂದರೋ ಅದರ ಮುಂದುವರಿದ ರೂಪವಾಗಿ ; ಅದರದೇ ಪಳೆಯುಳಿಕೆಯಾಗಿ ಬಣ್ಣ ಬದಲಾಯಿಸಿದುದು - ಕಳೆದ ಶತಮಾನದ ರಾಜಕೀಯ ಚರಿತ್ರೆಯನ್ನು ನಿಷ್ಪಕ್ಷಪಾತವಾಗಿ ಗಮನಿಸಿದವರಿಗೆ - ಮುಂದೆ ಓದಿ »


RSS: