ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಲೇಖನ: "ಈ ನೀರು ಕುಡದ್ರ ಉಚ್ಚಿ ಕುಡಧಾಂಗ ಆಗತೈತಿ ನೋಡಪಾ..!"

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ › User account

cmariejoseph (ಲೇಖನಗಳು)

ಅಂಗುಲಹುಳು

November 1, 2008 - 11:13am — cmariejoseph

ಕ್ರಿಸ್ತಪೂರ್ವ ಒಂದನೇ ಶತಮಾನದಿಂದ ಮೊದಲುಗೊಂಡು ಇಂದಿನವರೆಗೆ ಕನ್ನಡ ನಾಡು ನುಡಿ ಸಂಸ್ಕೃತಿ ನಿಂತನೀರಾಗದೆ ಉಚ್ಛ್ರಾಯಸ್ಥಿತಿಯಲ್ಲಿ ಸಾಗುತ್ತಿವೆ. ಪಂಪರನ್ನಾದಿಗಳ ಜೈನಯುಗವಾಗಿರಬಹುದು, ಕುಮಾರವ್ಯಾಸ ಪುರಂದರರ ಭಾಗವತಯುಗವಾಗಿರಬಹುದು, ರೈಸ್ ಕಿಟೆಲ್ಲರ ಕ್ರೈಸ್ತಯುಗವಾಗಿರಬಹುದು, ಕುವೆಂಪುಕಾರಂತರ ಜ್ಞಾನಪೀಠಯುಗವಾಗಿರಬಹುದು ಎಲ್ಲಿಯೂ ಕನ್ನಡಕ್ಕೆ ಸೋಲಿಲ್ಲ, ಕನ್ನಡಕ್ಕೆ ಕುಂದಿಲ್ಲ.
ಒಂದಲ್ಲ ಒಂದು ಸಂದರ್ಭದಲ್ಲಿ ಇಡೀ ದಕ್ಷಿಣ ಇಂಡಿಯಾವನ್ನು ತನ್ನ ತೆಕ್ಕೆಯಲ್ಲಿಟ್ಟು ಆಳಿದ ರಾಜಪರಂಪರೆ ಕನ್ನಡಿಗರದು. ದಕ್ಷಿಣಾದಿ ಸಂಗೀತ ಪ್ರಕಾರಕ್ಕೆ ಕರ್ನಾಟಕ ಸಂಗೀತ ಎನ್ನುವ ಹೆಮ್ಮೆಯ ನಾಮಾಂಕಿತದ ಗೌರವಭಾಜನರು ಕನ್ನಡಿಗರು, ರಾಷ್ಟ್ರಕ್ಕೆ ಬಂಗಾರ ನೀಡುವ ಪರುಷದ ಶಕ್ತಿಯಿದೆ ಕನ್ನಡದ ನೆಲಕ್ಕೆ, ಸುಗಂಧಸೌರಭ ಸೂಸುವ ಚಂದನ ಮಲ್ಲಿಗೆಗಳ ನಾಡಲ್ಲವೇ ನಮ್ಮದು!
ಭಾರತ, ರಾಮಾಯಣಗಳ ಖಳರಿಗೆ ಉದಾತ್ತತೆಯ ಬಣ್ಣ ಲೇಪಿಸಿ ಕಾವ್ಯದಲ್ಲಿ ನೆಲದ ಸೊಗಡಿನ ಕಂಪು ಪಸರಿಸಿದ ಕವಿಗಳು ನಮ್ಮವರು. ನವರಸಗಳ ಸಿದ್ಧಿಯಲ್ಲ ನವರಸಗಳ ಅಭಿವ್ಯಕ್ತಿಯಲ್ಲಿನ ಎಣೆಯಿಲ್ಲದ ಸಾಮರ್ಥ್ಯಕ್ಕಲ್ಲವೆ ಸಂದಿವೆ ಜ್ಞಾನಪೀಠಗಳು. ಕನ್ನಡದಲ್ಲಿ ಏನುಂಟು ಏನಿಲ್ಲ? ಕನ್ನಡವ ಕಾಣಬಲ್ಲ ಕಣ್ಣುಬೇಕು, ಮನಸು ಬೇಕು.
ಕನ್ನಡದಲ್ಲಿ ಏನೆಲ್ಲ ಇದೆ ಎಂದು ನಮಗೆ ತೋರಿಸಿಕೊಟ್ಟವರು ವಿದೇಶೀಯರು ಎಂಬುದನ್ನು ಕನ್ನಡದ ಕವಿ ಎ ಕೆ ರಾಮಾನುಜನ್ ಅವರು ತಮ್ಮ ಕವನವೊಂದರಲ್ಲಿ ಧ್ವನ್ಯಾತ್ಮಕವಾಗಿ ಹೇಳಿದ್ದಾರೆ. ನಾನು ಬಹಳ ವರ್ಷಗಳ ಹಿಂದೆ ಆ ಕವನ ಓದಿದ್ದು. ಈಗಲೂ ಅದರ ಹೂರಣ ಕಾಡುತ್ತದೆ.  ಮುಂದೆ ಓದಿ »

  • ಭಾಷೆ-ಕನ್ನಡ
~.~
  • 25 ಪ್ರತಿಕ್ರಿಯೆಗಳು
  • 334 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮತಾಂತರ ಏನು ಎತ್ತ

September 21, 2008 - 4:19pm — cmariejoseph

ಮತಾಂತರದ ಕುರಿತಂತೆ ಇತ್ತೀಚೆಗೆ ಪತ್ರಿಕೆಗಳಲ್ಲಿ ಬಹಳಷ್ಟು ಸುದ್ದಿಗಳು ಪ್ರಕಟವಾಗುತ್ತಿವೆ. ಕೆಲವರು ಭಾವಿಸುವಂತೆ ಕ್ರೈಸ್ತರು ಜಗತ್ತಿನಲ್ಲಿ ತಮ್ಮ ಸಂಖ್ಯಾಬಲ ಹೆಚ್ಚಿಸಿಕೊಳ್ಳಲು ಮತಾಂತರ ನಡೆಸುತ್ತಿದ್ದಾರೆ ಎನ್ನುವುದು ಸರಿಯಲ್ಲ.  ಮುಂದೆ ಓದಿ »

  • ಪ್ರಚಲಿತ
~.~
  • 99 ಪ್ರತಿಕ್ರಿಯೆಗಳು
  • 2282 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಒರಿಸ್ಸಾ ಮತ್ತು ಮತಾಂತರ

September 21, 2008 - 4:12pm — cmariejoseph

ಒರಿಸ್ಸಾದ ಗುಡ್ಡಗಾಡು ಪ್ರದೇಶಗಳ ಹಾಗೂ ಅಲ್ಲಿನ ಜನಜೀವನಶೈಲಿಯ ಕುರಿತ ಪರಿಚಯ ನನಗಿದೆ. ನನ್ನಂತೆಯೇ ಇಲ್ಲಿ ನೀರಿನ ಸದುಪಯೋಗದ ಬಗ್ಗೆ ತಿಳಿಸುವ ಕನ್ನಡಿಗರದೇ ಆದ ’ಕಾವಾ’ ಎಂಬ ಎನ್ ಜಿ ಓ ಹಾಗೂ ಇಲ್ಲಿ ಸೇವೆ ಸಲ್ಲಿಸುತ್ತಿರುವ ಕೇಂದ್ರ ರೇಷ್ಮೆ ಸಂಶೋಧನಾ ಸಂಸ್ಥೆಯ ಕನ್ನಡಿಗರು ಈ ಜನರ ಬಗ್ಗೆ ಚೆನ್ನಾಗಿ ಬಲ್ಲೆವು. ಪರಿಸ್ಥಿತಿಯ ವಾಸ್ತವ ನಮಗೆ ಗೊತ್ತು.  ಮುಂದೆ ಓದಿ »

~.~
  • 2 ಪ್ರತಿಕ್ರಿಯೆಗಳು
  • 186 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಗಿರಿಜನರ ನಾಡು ಕೋರಾಪುಟ್

July 5, 2008 - 7:25am — cmariejoseph

ಕೋರಾಪುಟ್ ಎಂಬುದು ಒರಿಸ್ಸಾದ ಪಶ್ಚಿಮದಲ್ಲಿನ ಗುಡ್ಡಗಾಡು ಪರಿಸರದ ಒಂದು ಜಿಲ್ಲೆ. ಬರೀ ಅರಣ್ಯ ಮತ್ತು ಬೆಟ್ಟಗುಡ್ಡಗಳಿಂದ ತುಂಬಿದ ಈ ಪ್ರದೇಶದಲ್ಲಿ ವಾಸಿಸುತ್ತಿರುವವರು ಸಹಜವಾಗಿ ಗುಡ್ಡಗಾಡು ಜನರು. ಭೂಪಟದಲ್ಲಿನ ಗಡಿರೇಖೆಗಳ ಪರಿವೆ ಇಲ್ಲದ ಇವರು ಜಾರ್ಖಂಡ್, ಛತ್ತೀಸ್‌ಗಡ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರ ಮತ್ತು ಒರಿಸ್ಸಾಗಳಲ್ಲಿ ವ್ಯಾಪಿಸಿರುವ ಬೃಹತ್ ಅರಣ್ಯದಲ್ಲಿ ಬಾಳುವೆ ಮಾಡುತ್ತಿದ್ದಾರೆ. ಮಳೆ ಬಿಸಿಲು ಚಳಿಗೆ ತಕ್ಕಂತೆ ತಾಣಗಳನ್ನು ಬದಲಿಸುತ್ತಾ ಪ್ರಾಣಿಗಳನ್ನು ಬೇಟೆಯಾಡುತ್ತಾ ಇದ್ದಲ್ಲೇ ಏನಾದರೂ ಬೆಳೆದುಕೊಳ್ಳುತ್ತಾ ಅತಿ ಸ್ವತಂತ್ರರಾಗಿ ಬದುಕುವ ಇವರನ್ನು ನಾಡಿಗರು ಆದಿವಾಸಿಗಳೆನ್ನುತ್ತಾರೆ.

ವಿಶಾಖಪಟ್ಟಣದಿಂದ ರಾಯಗಡದವರೆಗಿನ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ ೪೩ರಲ್ಲಿ ಸಾಗುವ ಲಾರಿಗಳು ಕೋರಾಪುಟ್ ಜಿಲ್ಲೆಯ ಸಿಮಿಲಿಗುಡ ಎಂಬ ಊರಿನಲ್ಲಿ ನೀರು ನೆರಳಿಗಾಗಿ ನಿಂತು ಸಾಗುವೆಡೆ ಈ ಆದಿವಾಸಿಗಳ ಸಂತೆ ನೆರೆಯುತ್ತದೆ. ರಾಗಿ, ತರಕಾರಿ, ಉಪ್ಪು, ಎಣ್ಣೆ, ಕಾಳುಕಡಿ, ಬಟ್ಟೆ, ಬಳೆ, ಕತ್ತಿ ಕುಡುಗೋಲು, ಆಡುಕುರಿ ಇವೆಲ್ಲ ಬಿಕರಿಯಾಗುವುದು ಪರಸ್ಪರ ವಿನಿಮಯ ಲೆಕ್ಕದಲ್ಲಿ. ಅರ್ಥಾತ್ ಇಲ್ಲಿ ಹಣದ ವಿನಿಮಯ ಅತಿ ಕಡಮೆ. ಗಂಡಸರು ಬರೀ ಲಂಗೋಟಿಯಲ್ಲಿದ್ದರೆ ಹೆಂಗಸರು ಲಂಗೋಟಿ ಜೊತೆಗೆ ಸೀರೆಯನ್ನು ಮಾಮೂಲಾಗಿ ಉಡದೆ ಶಾಲಿನಂತೆ ಹೊದ್ದುಕೊಳ್ಳುತ್ತಾರೆ.  ಮುಂದೆ ಓದಿ »

  • ಪ್ರವಾಸ ಕಥನ
~.~
  • 2 ಪ್ರತಿಕ್ರಿಯೆಗಳು
  • 312 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ನಮ್ಮ ಕಾರ್ಖಾನೆಯ ಕನ್ನಡ ಗ್ರಂಥಾಲಯ

April 16, 2008 - 9:15pm — cmariejoseph

ನಮ್ಮದೊಂದು ಪುಟ್ಟ ಗ್ರಂಥಾಲಯ. ಕನ್ನಡ ಲೈಬ್ರರಿ ಎಂಬುದೇ ಅದರ ಅಗ್ಗಳಿಕೆ. ಇಡೀ ಎಚ್ಎಎಲ್ ಕಾರ್ಖಾನೆಯಲ್ಲಿ ಮನೆಮಾತಾಗಿರುವ ಈ ಕನ್ನಡ ಗ್ರಂಥಾಲಯ ಇರುವುದು ಇಂಜಿನ್ ವಿಭಾಗದ ಒಳಾವರಣದಲ್ಲಿ. ಕಾರ್ಖಾನೆಯ ಯಾಂತ್ರಿಕದ ಜೀವನದ ಜೊತೆಗೇ ಮನರಂಜನೆ ಮತ್ತು ಆತ್ಮವಿಕಾಸಕ್ಕೆ ಇಂಬಾಗುವ ಪ್ರಕ್ರಿಯೆಯಲ್ಲಿ ತೊಡಗಿರುವ ಈ ಗ್ರಂಥಾಲಯಕ್ಕೆ ಈಗ ಇಪ್ಪತ್ತೈದು ವರ್ಷ ವಯಸ್ಸು. ಇಪ್ಪತ್ತೈದು ವರ್ಷಗಳ ಹಿಂದೆ ಪುಟ್ಟದಾಗಿ ಪ್ರಾರಂಭವಾದ ಈ ಪ್ರಯತ್ನದಲ್ಲಿ ಅದು ಅಂದು ಒಂದು ಟ್ರಂಕಿನಲ್ಲಿಟ್ಟ ಕೆಲವೇ ಪುಸ್ತಕಗಳ ಸಂಗ್ರಹವಾಗಿತ್ತು. ಇಂದು ಅದು ಬೆಳೆದು ಹದಿನೈದು ಕಪಾಟುಗಳಲ್ಲಿ ತುಂಬಿರುವ ಮೌಲಿಕ ಪುಸ್ತಕಗಳ ಸಂಗ್ರಹವಾಗಿದೆ. ಅಂದು ಮುಚ್ಚುಮರೆಯಲ್ಲಿ ನಡೆಯುತ್ತಿದ್ದ ಪುಸ್ತಕದೆರವಲು ಇಂದು ಅಧಿಕೃತ ಮಾನ್ಯತೆ ಗಳಿಸಿದೆ. ಮೊದಲು ಪುಸ್ತಕಗಳೆಂದರೆ ಪತ್ತೇದಾರಿ ಮತ್ತು ಸ್ತ್ರೀಸಾಹಿತ್ಯವಷ್ಟೇ ಎನಿಸಿದ್ದ ಭಾವನೆ ಹೋಗಿ ಇಂದು ಅಧ್ಯಾತ್ಮ, ಮಕ್ಕಳಸಾಹಿತ್ಯ, ವಿಜ್ಞಾನ, ಹಾಸ್ಯ, ಕವನ, ಕತೆ, ಕಾದಂಬರಿ, ಮನೋವಿಕಾಸ, ಆರೋಗ್ಯ, ವ್ಯಕ್ತಿಚಿತ್ರ, ಸಾಹಿತ್ಯಚಿಂತನೆ, ಇತಿಹಾಸ, ನಾಟಕ ಮುಂತಾದ ಎಲ್ಲ ಪ್ರಕಾರಗಳ ಸಂಗ್ರಹ ಇಲ್ಲಿದೆ. ಕೊಡುಗೆಯಾಗಿ ನೀಡಿದ ಪುಸ್ತಕಗಳು, ಚಂದಾ ಹಣದಿಂದ ಖರೀದಿಸಿದ ಪುಸ್ತಕಗಳ ಜೊತೆಗೆ ಕಾರ್ಖಾನೆಯ ಆಡಳಿತವರ್ಗವು ಪ್ರತಿವರ್ಷವೂ ತಾನೇ ಕೊಟೇಷನ್ ಕರೆದು ಐದುಸಾವಿರ ರೂಪಾಯಿಗಳ ಮೌಲ್ಯದ ಕನ್ನಡ ಪುಸ್ತಕ ಖರೀದಿಸಿಕೊಡುವುದರಿಂದ ಇಂದು ಈ ಪುಸ್ತಕಭಂಡಾರದಲ್ಲಿರುವ ಪುಸ್ತಕಗಳ ಸಂಖ್ಯೆ ೩೫೦೦ ಮುಟ್ಟಿದೆ. ಈ ವರ್ಷ ಕನ್ನಡ ಪುಸ್ತಕ ಪ್ರಾಧಿಕಾರವು ಸುಮಾರು ೨೫೦೦೦ ರೂಪಾಯಿಗಳ ಮೌಲ್ಯದ ೧೮೦ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದೆ. ಕೆಲಸದಿಂದ ನಿವೃತ್ತಿ ಹೊಂದುವ ಸದಸ್ಯರಿಗೆ ಪುಸ್ತಕದ ಉಡುಗೊರೆ ನೀಡಲಾಗುತ್ತದೆ. ಅಂತೆಯೇ ಆ ನಿವೃತ್ತ ಸದಸ್ಯರೂ ಗ್ರಂಥಾಲಯಕ್ಕೆ ಪುಸ್ತಕ ಕೊಡುಗೆ ನೀಡುವುದುಂಟು. ಈ ಸಾರಿಯ ಯುಗಾದಿಗೆ ಎಲ್ಲ ಸದಸ್ಯರಿಗೂ ಬೇವುಬೆಲ್ಲದ ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ’ರತ್ನಕೋಶ’ವನ್ನು ಹಂಚಿದೆವು. ಈ ಕಾರ್ಯವನ್ನು ವೀಕ್ಷಿಸಲು ಬಂದಿದ್ದ ಕಸಾಪ ಕಾರ್ಯದರ್ಶಿ ಜರಗನಹಳ್ಳಿ ಶಿವಶಂಕರ ಅವರಂತೂ ತುಂಬಾ ಆನಂದಿಸಿದರು.  ಮುಂದೆ ಓದಿ »

  • ಪ್ರಚಲಿತ
~.~
  • 10 ಪ್ರತಿಕ್ರಿಯೆಗಳು
  • 800 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ
123456789…ಮುಂದಿನ ›ಕೊನೆಯ »

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • rashmi_pai
    ಉ: ಭಾಷಾನುವಾದವೇನು?
    November 23, 2008 - 10:27pm
  • ASHOKKUMAR
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 23, 2008 - 10:14pm
  • srikanth
    ಉ: ಓಶೋ ಕಂಡಂತೆ ಗಾಂಧಿ!
    November 23, 2008 - 9:53pm
  • muralihr
    ಉ: ಸಾರ್ಥಕ ಜೀವನ:
    November 23, 2008 - 9:29pm
  • sandhya.darshini
    ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?
    November 23, 2008 - 9:28pm
  • cmariejoseph
    ಉ: ಭಾಷಾನುವಾದವೇನು?
    November 23, 2008 - 9:05pm
  • gurubaliga
    ಉ: ಭಾಷಾನುವಾದವೇನು?
    November 23, 2008 - 8:57pm
  • palachandra
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 23, 2008 - 7:04pm
  • palachandra
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 23, 2008 - 7:04pm
  • palachandra
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 23, 2008 - 7:02pm
ಇನ್ನಷ್ಟು


ಸು:ಖ ದು:ಖ ಗಳನು ತಟಸ್ಥಭಾವದಿ
ಸಕಲಕು ವಿತರಿಸುವುದು ಪ್ರಕೃತಿ
ಸು:ಖವ ಹೆಚ್ಚಿಸುತಾ ದು:ಖವ ತಗ್ಗಿಪ
ಯುಕುತಿಯೆನಿಸುವುದು ಸ೦ಸ್ಕೃತಿ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator