cmariejoseph (ಬ್ಲಾಗ್ ಬರಹಗಳು)
ಮೈಲಾರ ಮಲ್ಲಣ್ಣ
October 24, 2008 - 7:59pm — cmariejosephಅಂದಹಾಗೇ ಅದ್ಯಾವಾಗ್ಲೋ ಮೈಲಾರಲಿಂಗನ ಬಗ್ಗೆ ಬರೆದುಕೊಂಡಿದ್ದೆ. ಇತ್ತೀಚೆಗೆ ಬೀದರಿಗೆ ಹೋಗಿದ್ದಾಗ ಗೆಳತಿ ಉಮಾ ಅಲ್ಲೇ ಧನ್ನೂರು ಅನ್ತ ಇದೆ, ನಮ್ಮ ತಾತನ ಊರು, ಹೋಗ್ಬನ್ನಿ ಅಂದಿದ್ರು. ಧನ್ನೂರು, ಹಲಬರ್ಗಾ, ಭಾಲ್ಕಿ ಇತ್ಯಾದಿಗಳನ್ನು ನೋಡಿಬರೋಣವೆಂದು ಹೊರಟವನು ದಾರಿ ಮಧ್ಯೆ ಖಾನಾಪುರ ಎಂಬಲ್ಲಿ "ಮೈಲಾರ ಮಲ್ಲಣ್ಣಾ (ಖಂಡೋಬ) ಗುಡಿ" ಅನ್ತ ಬೋರ್ಡು ಕಂಡು ಫಕ್ಕನೇ ಅಚ್ಚರಿ ಮೂಡಿ ಅಲ್ಲೇ ಗಾಡಿ ತಿರುಗಿಸಿದೆ. ಬೀದರ್ ಹುಮನಾಬಾದ್ ರಸ್ತೇಲಿ ಅಯ್ ಟೆನ್ ಓಡಿಸೋ ಮಜಾನೇ ಬೇರೆ, ಈ ಕಿತ್ತು ಕೆರ ಹಿಡಿದಿದ್ದ ಹಳ್ಳಿ ರಸ್ತೇಲಿ ಅದೇ ತರ ಕಿತ್ತು ಕೆರ ಹಿಡಿದಿರೋ ಟಾಟಾ ಇಂಡಿಕಾ ಒಡ್ಸೋ ಮಜಾನೇ ಬೇರೆ. ಅಂದು ಭಾನುವಾರ, ರಸ್ತೆಯ ಎರಡೂ ಬದಿ ಜಾನುವಾರು ಸಂತೆ ನೆರೆದಿತ್ತು. ಮೈಲಾರ ಎಷ್ಟು ದೂರ ಅನ್ತ ಯಾರನ್ನೋ ಕೇಳಿದೆ. ಒಂದಿಬ್ಬರು ಓಡಿಬಂದರು ಬಕ್ರಾ ಬೇಕೇನ್ರೀ ಅನ್ತ. ನಾನು ಅವರಿಗೆ ಬೇಕಾದ ಗಿರಾಕಿ ಅಲ್ಲ ಅನ್ನೋದು ಖಾತ್ರಿಯಾಗಿ ಸುಮ್ಮನೇ ನೋಡುತ್ತಾ ನಿಂತರು. “ಮೈಲಾರಕ್ ನಡದೀನ್ರೀ, ಏಸು ದೂರ ಅದರೀ?” ಅಂದೆ. “ಮೈಲೂರನ್ನೋ ಊರು ಇರಾಂಗಿಲ್ರೀ, ಅಲ್ಲಿ ಬರೀ ಮಲ್ಲಣ್ಣಾಗುಡಿ ಅದರೀ, ನೀವ್ ಹಿಂಗಾ ಹೋಗರೀ, ಕಣ್ಣಿಗ್ ಕಾಣ್ತಾವ್ರೀ" ಅಂದರು. “ಅಲ್ರೀಯಪಾ, ಮೈಲಾರ ಅನ್ನೋ ಊರು ಇಲ್ಲೇನ್ರೀ? ಬೋರ್ಡು ಹಾಕ್ಯಾರಲ್ರೀ" ಅಂದಿದ್ದಕ್ಕೆ "ಅದ ಒಂದು ದೊಡ್ ಕತಿರೀ, ಅವರವ್ವನ ಶಾಪಾರೀ, ಕಾ ಅನ್ನೋ ಕಾಗಿ ಇರಂಗಿಲ್ಲ, ಗೂ ಅನ್ನೋ ಗೂಗಿ ಇರಂಗಿಲ್ಲ, ಅಂದಿದ್ಲಲ್ಲರೀ, ಅಲ್ಲೊಂದು ಕಾಗೀನೂ ಇಲ್ಲ, ಗೂಗೀನೂ ಇಲ್ಲ, ಮನುಷ್ಯಾರ್ ಭೀ ಮನಿ ಮಾಡಂಗಿಲ್ಲರೀ" ಅಂತ ಉತ್ತರ ಬಂತು. ಯಾಕೋ ತುಂಬಾ ಕುತೂಹಲ ಮೂಡಿತಾದರೂ ಆ ಕತೆಯನ್ನು ಮುಂದುವರಿಸುವ ಉಮೇದು ಅವರಿಗಿರಲಿಲ್ಲ. ಮುಂದೆ ಓದಿ »

ಒಂದು ನಾಯಿ ಕತೆ
June 27, 2008 - 6:21pm — cmariejosephಹೀಗೆ ಒಬ್ಬ ತನ್ನ ಹೆಂಡತಿಯೊಂದಿಗೆ ಜಗಳಾಡಿಕೊಂಡು ಮನೆ ಬಿಟ್ಟು ಹೊರಟ. ಮನೆ ಬಿಟ್ರೆ ಕಚೇರಿ, ಕಚೇರಿ ಬಿಟ್ರೆ ಮನೆ ಅಂತಿದ್ದೋನಿಗೆ ಈಗ ಎಲ್ಲಿಗೆ ಹೋಗಲೂ ತೋಚಲಿಲ್ಲ. ಸುಮ್ಮನೆ ಒಂದು ಪಾರ್ಕಿನಲ್ಲಿ (ಉದ್ಯಾನದಲ್ಲಿ) ಬೆಂಚಿನ ಮೇಲೆ ಕುಳಿತುಕೊಂಡ. ಮನ ಖಾಲಿಯಾಗಿತ್ತು. ಮುಂದೆ ಓದಿ »

ಅಂಬಾಲಾ ನಗರದಲ್ಲಿ ವಿಹಾರ
March 3, 2008 - 5:44pm — cmariejosephಹರ್ಯಾನಾ ರಾಜ್ಯದಲ್ಲಿರುವ ಅಂಬಾಲಾ ಶಹರ್ ಎಂಬುದು ಬಟ್ಟೆಗಳ ಸಗಟು ಮಾರಾಟ ಕೇಂದ್ರ. ಆದರೆ ನಿಜವಾದ ಜೀವತುಡಿತವಿರುವುದು ಅಂಬಾಲಾ ಕಂಟೋನ್ಮೆಂಟಿನಲ್ಲಿ ಮಾತ್ರ. ಬೇಸಿಗೆಯ ಹಗಲಿನ ಬೆಂಕಿಯಂಥ ಬಿರುಬಿಸಿಲಿಗೆ ಬೆಂದ ನಂತರ ಸಂಜೆ ತಂಪುಗಾಳಿ ಬೀಸುವಾಗ ವಾಕಿಂಗ್ ಹೊರಟು ತಳ್ಳುಗಾಡಿಗಳಲ್ಲಿ ಮಾರುವ ಗೋಲ್ ಗಪ್ಪೆ ಚಪ್ಪರಿಸುವುದು ತುಂಬಾ ಮಜವಾಗಿರುತ್ತೆ. ಮುಂದೆ ಓದಿ »

- cmariejoseph ರವರ ಬ್ಲಾಗ್
- Login or register to post comments
- 302 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಮುಳ್ಳಿನ ಕಿರೀಟ ಎಂಬ ನಾಟಕ
June 16, 2007 - 6:17pm — cmariejoseph
- cmariejoseph ರವರ ಬ್ಲಾಗ್
- Login or register to post comments
- 639 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಏನಂತೀರಿ ?
June 7, 2007 - 9:08pm — cmariejosephಕನ್ನಿಂಗ್ಹ್ಯಾಂ ರೋಡ್ ಜಂಕ್ಷನ್ನ ಎದುರಿನಲ್ಲಿ 'ನಿಟಾನ್ 'ಎಂಬ ಬಂಗ್ಲೆಯಿದೆ. ಅದರಲ್ಲೇನೂ ವಿಶೇಷ ಕಾಣದಿದ್ದರೂ ಅದರ ಹೆಸರೇ ವಿಶಿಷ್ಟವಾಗಿದೆ. 'ನಿಟಾನ್'ಎಂಬ ಹೊಸ ಮೂಲಧಾತು (Element) ಅನ್ನು ಕಂಡುಹಿಡಿದ ವಿಲಿಯಂ ರಾಮ್ಸೆಗೆ ೧೯೦೪ ರಲ್ಲಿ ನೊಬೆಲ್ ಪುರಸ್ಕಾರ ಸಿಕ್ಕಿತ್ತು. ಮುಂದೆ ಓದಿ »


RSS: