ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಲೇಖನ: "ಈ ನೀರು ಕುಡದ್ರ ಉಚ್ಚಿ ಕುಡಧಾಂಗ ಆಗತೈತಿ ನೋಡಪಾ..!"

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ › User account

benaka (ಬ್ಲಾಗ್ ಬರಹಗಳು)

೧೨. ನಾ ತಿಂದ 'ನಾನು'!

March 9, 2007 - 12:46am — benaka

ನನ್ನ ಜಪಾನ್ ಪ್ರವಾಸ : ೧೨. ನಾ ತಿಂದ 'ನಾನು'!
-------------------------------
 ಮುಂದೆ ಓದಿ »
~.~
  • benaka ರವರ ಬ್ಲಾಗ್
  • 5 ಪ್ರತಿಕ್ರಿಯೆಗಳು
  • 1575 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

೧೧.ಧರ್ಮರಹಿತ ನಾಡಿನಲ್ಲಿ ಶಾಸ್ತ್ರೀ

February 17, 2007 - 5:10am — benaka
ನನ್ನ ಜಪಾನ್ ಪ್ರವಾಸ: ೧೧.ಧರ್ಮರಹಿತ ನಾಡಿನಲ್ಲಿ ಶಾಸ್ತ್ರೀ
 ಮುಂದೆ ಓದಿ »
~.~
  • benaka ರವರ ಬ್ಲಾಗ್
  • 5 ಪ್ರತಿಕ್ರಿಯೆಗಳು
  • 1488 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

೧೦.ರೈಲಿನ ರಾಜ್ಯ

December 16, 2006 - 1:03am — benaka
ನನ್ನ ಜಪಾನ್ ಪ್ರವಾಸ - ೧೦.ರೈಲಿನ ರಾಜ್ಯ
------------------------------------------

ದೊಂತೊನ್ ಗೊತ್ತೊನ್, ಗಾಂತೊನ್ ಗೊತ್ತೊನ್, ಗತಾಂಗೊತೊನ್ ... ಇದೇನಿದು ಜಪಾನೀಭಾಷೆಯಲ್ಲೇನೋ ಬಡಬಡಿಸುತ್ತಿದ್ದೇನೆ ಎಂದುಕೊಳ್ಳಬೇಡಿ; ಇವೆಲ್ಲ ಇಲ್ಲಿಯ ಜನರು ರೈಲಿನ ಸದ್ದನ್ನು ಅನುಕರಿಸುವ ಬಗೆ ಅಷ್ಟೇ! ನಮ್ಮಲ್ಲಾದರೋ ಈಗಲೂ ಕೂಡ ಮಕ್ಕಳಾಗಲಿ, ದೊಡ್ಡವರಾಗಲಿ, ಹಳಿಬಂಡಿಯ ಸದ್ದನ್ನು ಚುಕುಪುಕು-ಚುಕುಬುಕು-ಚುಕ್‍ಬುಕ್ (ಡುಂಡಿರಾಜರಂತೆ ವಾಣಿಜ್ಯದವರಿಗಾದರೆ ಚೆಕ್‍ಬುಕ್ ಚೆಕ್‍ಬುಕ್)-ಇತ್ಯಾದಿಗಳಿಂದ ಅನುಕರಿಸುವುದನ್ನು ಕೇಳಿದ್ದೇನೆ. ಅದು ಉಗಿಬಂಡಿಯ ಕಾಲ, ಈಗೆಲ್ಲ ಡೀಸೆಲ್ ಗಾಡಿ - ಧಡಕ್ ಧಡಕ್ ಅಲ್ಲವೇನ್ರೀ? ಎನ್ನುವಿರೇನೋ! ನಾನು ಹೇಳಹೊರಟಿದ್ದು ಇನ್ನೂ ಮುಂದುವರೆದ ವಿದ್ಯುತ್ ಹಳಿಬಂಡಿಯ ಬಗ್ಗೆ; ಏನೇ ಆಗಲಿ, ಸದ್ದು "ಗಾಂತೊನ್ ಗೊತ್ತೊನ್" ಎಂದೇನೂ ನನಗೆ ಕೇಳಿಸಲಿಲ್ಲ. ಶಬ್ದ-ಭಾಷೆ ಆಯಾ ಪ್ರದೇಶದ ವೈಶಿಷ್ಟ್ಯ; ರೈಲು ಚುಕುಪುಕು ಎನ್ನುತ್ತದೆ ಎಂದರೆ ಇವರು ಫಕಫಕನೆ ನಕ್ಕಾರು! ಸರಿ, ಶಬ್ದವೇ ಇಲ್ಲದೆ ರೈಲು ಚಲಿಸಿದರೆ? ಬಿದ್ದು ಬಿದ್ದು ನಕ್ಕೀರಿ? ಅದು ರೈಲೇ ಅಲ್ಲ; ನೀನು ಬಿಡ್ತಾ ಇರೋದೇ ರೈಲು ಅಂತ!? ಖಂಡಿತ ಇಲ್ರೀ! ಇಲ್ಲಿ ನಾವು ತಿಳಿಯಬೇಕಿರುವ ಸತ್ಯ ಬಹಳಷ್ಟಿದೆ; ಇದನ್ನೇ ನಾನೀಗ ಹೇಳಹೊರಟಿದ್ದು - ಜಪಾನೆಂದರೆ ರೈಲಿನ ರಾಜ್ಯ!  ಮುಂದೆ ಓದಿ »

~.~
  • benaka ರವರ ಬ್ಲಾಗ್
  • 2 ಪ್ರತಿಕ್ರಿಯೆಗಳು
  • 1528 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

೯. 'ಕ್ಯೂಶೂ'ನಲ್ಲಿ ಕನ್ನಡ!

November 5, 2006 - 1:26am — benaka
ನನ್ನ ಜಪಾನ್ ಪ್ರವಾಸ - ೯. 'ಕ್ಯೂಶೂ'ನಲ್ಲಿ ಕನ್ನಡ!
------------------------------

ಸರಿ, ಹೊಸ ಜಪಾನಿನ ಜೀವನ ಶೈಲಿ ನನಗರ್ಥವಾಯಿತು! ಜೊತೆಗೆ ಬಾಬಾ ಭಕ್ತ ಅಸಾಮಿಯೂ ಇದ್ದುದರಿಂದ ಹೇಗೋ ಕಾಲ ತಳ್ಳುತ್ತಿದ್ದೆ. ಆದರೂ ಒಂದು ತಿಂಗಳ ಕಾಲ ಕನ್ನಡ-ಇಂಗ್ಲಿಷ್-ಹಿಂದೀ ಗಳ ಸಹವಾಸವೇ ಇಲ್ಲದೆ ಜಪಾನೀ ಭಾಷೆಯಲ್ಲಿ ಮಾತ್ರ ಮಾತುಕತೆ ನಡೆಯಿತು. ಅಬ್ಬ! ಅಂತಹ ಕಷ್ಟ ಅನುಭವಿಸಿದವನಿಗೇ ಗೊತ್ತು! ಏಕೆಂದರೆ ಜಪಾನೀಭಾಷೆಯಲ್ಲಿ ನನಗೆ ತಿಳಿದದ್ದು ಅಲ್ಪ-ಸ್ವಲ್ಪ ಮಾತ್ರ; ಅದೂ ತೋಕಿಯೋದ 'ಶುದ್ಧ' ಭಾಷೆ. ಇಲ್ಲಿಯೋ, ಅಸಾಮಿಯ 'ಓಸಾಕಾಬೆನ್' ಹಾಗೂ ಇತರರ 'ಕ್ಯೂಶೂಬೆನ್' ನುಡಿಭೇದಗಳನ್ನೇ ಕೇಳಿ ಕೇಳಿ ನನಗೆ ಜಪಾನೀಭಾಷೆ ಬರುತ್ತದೆಯೇ ಎಂದೇ ಸಂದೇಹವಾಗುತ್ತಿತ್ತು! ಬಹುಶಃ ಬೆಂಗಳೂರಿನಲ್ಲಿ ಕನ್ನಡ ಕಲಿತ ವಿದೇಶೀಯನೊಬ್ಬ ಮಂಗಳೂರಿಗೆ ಹೋಗಿ ಹುಬ್ಬಳ್ಳಿಯ ಕನ್ನಡಿಗರೊಂದಿಗೆ ಮಾತನಾಡಿದಂತಾಗಿತ್ತು ನನ್ನ ಸ್ಥಿತಿ! ಮಂಗಳೂರು ಎಂದಾಗ ನೆನಪಿಗೆ ಬಂತು ನೋಡಿ; ಇಲ್ಲಿ ನಾನು ಪ್ರತಿದಿನ ಅನ್ನ ಕೊಳ್ಳುತ್ತಿದ್ದ 'ಕೊಂಬಿನಿ'ಯಲ್ಲೊಮ್ಮೆ ಎಂದಿನಂತೆ ಅನ್ನ, ಸಿಹಿಮೊಸರು ಕೊಂಡು ಅಸಾಮಿಯೊಡನೆ ಹೊರಬರಲು ತಿರುಗಿದಂತೆಯೇ, ಮೀಸೆ ಬಿಟ್ಟ ಕೆಂಗೂದಲ ಜಪಾನೀಯನೊಬ್ಬ ಕಣ್ಣಿಗೆ ಬಿದ್ದ. ನಮ್ಮಪ್ಪ ಹೇಳುತ್ತಿದ್ದ ರಾಗಿ ಮುದ್ದೆ ಬಗೆಗಿನ ನಾಣ್ಣುಡಿ ನೆನಪಾಗಿ ಅದು ಆಶು-ಅಣಕವಿತೆಯಾಗಿ ಆಗಲೇ ನನಗೆ ನಗೆಬುಗ್ಗೆಯುಕ್ಕಿಬಂತು!  ಮುಂದೆ ಓದಿ »

~.~
  • benaka ರವರ ಬ್ಲಾಗ್
  • ೧ ಪ್ರತಿಕ್ರಿಯೆ
  • 1703 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

೮. ಹಳೆಯ ರಾಜ್ಯ ಇನ್ನಿಲ್ಲ!

October 10, 2006 - 12:04pm — benaka
ನನ್ನ ಜಪಾನ್ ಪ್ರವಾಸ: ೮. ಹಳೆಯ ರಾಜ್ಯ ಇನ್ನಿಲ್ಲ!

ಸರಿ, ಯಥಾಪ್ರಕಾರ ಕ್ಯೂಶೂದ್ವೀಪದ ಕೆಲಸ ಮುಂದುವರೆಯಿತು. ಕೆಲಸಕ್ಕೆ ಸ್ವಲ್ಪ ಹೊಂದಿಕೊಂಡದ್ದರಿಂದ ಈಗ ಕೆಲಸದ ಜೊತೆಗೆ ಜಪಾನಿನ ಸಮಾಜ - ಜೀವನವನ್ನು ನೋಡಲು ಶುರುಮಾಡಿದೆ. "....ಜಪಾನ್ ದೇಶ ಕಷ್ಟಜೀವಿಗಳ ಶ್ರಮಜೀವಿಗಳ ತಾಣ; ಆದ್ದರಿಂದಲೇ ಅದು ಇಂದು ಮುಂದುವರೆದ ದೇಶವಾಗಿದೆ...." ಐದನೇ ತರಗತಿಯ ಸಮಾಜಪರಿಚಯದ ಭೂಗೋಳದ ಪಾಠದ ವಾಕ್ಯ ನೆನಪಾಯಿತು. ನೂರಕ್ಕೆ ನೂರು ಸತ್ಯ; ಆದರೆ ಈಗಲ್ಲ! ಮೂವತ್ತು ನಲವತ್ತು ವರ್ಷಗಳ ಹಿಂದೆ ನಿಜವಾಗಿದ್ದ ಸಂಗತಿಯಿದು! ಈಗ ಆ ವಾಕ್ಯವನ್ನು "ಜಪಾನ್ ದೇಶ, ಸೋಮಾರಿ ಯುವಜನರ ತಂಗುದಾಣ" ಎಂದು ಬದಲಿಸುತ್ತಿದ್ದೆ. ಈಗ ಬೆಳಿಗ್ಗೆ ಎಬ್ಬಿಸುವುದರಿಂದ ಹಿಡಿದು, ಮಲಗಿಸುವವರೆಗೆ ಎಲ್ಲಾ ಕೆಲಸ ಮಾಡಲು ಯಂತ್ರಗಳೇ ಬಂದಿವೆಯಾದ್ದರಿಂದ ಮನುಷ್ಯನಿಗೆ ಕೇವಲ ಉಸಿರಾಡುವುದಷ್ಟೇ ಕೆಲಸ. ದೇವರಾಣೆ ಸತ್ಯ ಸ್ವಾಮೀ; ಇವರಷ್ಟು ಸುಖದಿಂದ ಬೆಳೆದಿರುವ ಇಂದಿನ ಯುವಕರನ್ನು ನಾ ಕಾಣೆ! ಶ್ರಮಜೀವಿಗಳಾಗಿದ್ದವರು ಈಗ ವಯಸ್ಸಾಗಿ ನಿವೃತ್ತಿಯ ಅಕ್ಕ-ಪಕ್ಕದಲ್ಲಿರುವವರು; ಸುಖಾರ್ಥಿ ಧೋರಣೆಯ ಈಗಿನ ಯುವಜನರಲ್ಲ. ಈಗಿನ ಶ್ರಮ(?)ಜೀವಿಗಳು ಕೆಲಸವನ್ನು ಹಿಂದಿನವರಂತೆ ದೇಶಕ್ಕಾಗಿ, ಅಭಿವೃದ್ಧಿಗಾಗಿ ಮಾಡುವವರಲ್ಲ; ಕೇವಲ ದುಡ್ಡಿಗಾಗಿ ಮಾಡುವವರು. ಇಲ್ಲಿನ ಸರರೀಮನ್[=ಸ್ಯಾಲರೀಮನ್ ಅಂದರೆ ಸಂಬಳದ ಶ್ರೀಸಾಮಾನ್ಯ] ಪ್ರತಿದಿನ ಮನೆಗೆ ಮರಳುವುದು ಕೆಲಸದ ವೇಳೆ ಮುಗಿದು ಮೂರುಗಂಟೆಗಳಾದಮೇಲೆಯೇ. ಈ ಝಾಂಗ್ಯೋ[=ಅಧಿಕಾವಧಿ ಕಾರ್ಯ = ಓವರ್‌ಟೈಮ್] ಕೆಲವರಿಗೆ ಅನಿವಾರ್ಯ ಹಾಗೂ ಅವಿಭಾಜ್ಯ ಅಂಗ! ನಿಜವಾಗಿಯೂ ಅಷ್ಟು ಕೆಲಸವಿರುವವರು ಕಡಿಮೆಯೇ ಆದರೂ, ಮೇಲಧಿಕಾರಿಯನ್ನು ಮೆಚ್ಚಿಸಲು, ಕೆಲಸ ಅಂಥದ್ದೇನೂ ಇಲ್ಲದಿದ್ದರೂ ತಾವೂ ಸುಮ್ಮನೆ ಕುಳಿತಿರುವವರೇ ಹೆಚ್ಚು! ಇನ್ನು ಕೆಲವರಿಗೆ ಕೆಲಸ ಶುರುವಾಗುವುದೇ ಕಛೇರಿಯ ನಿತ್ಯಾವಧಿ ಮುಗಿದ ಬಳಿಕ; ಝಾಂಗ್ಯೋ ದುಡ್ಡು ಬಂದರೆ ಬಿಡುವ ಮೂರ್ಖರುಂಟೇ? ಅಂಥದ್ದೇನೂ ಗಿಟ್ಟದೆಂದು ತಿಳಿದರೆ, ಅಥವಾ ಕೆಲಸದಲ್ಲಿ ಅಷ್ಟೇನೂ ಮನಸ್ಸಿಲ್ಲದವರಾದರೆ, ಸಂಜೆ ೫ : ೪೫ ಕ್ಕೆ ಗಂಟೆ ಢಣ್ಣೆನ್ನುತ್ತಿದ್ದಂತೆ ಎದ್ದೆನೋ ಬಿದ್ದೆನೋ ಎಂದು ಎಲ್ಲಾ ಪರಾರಿ! ಅವರ ಗಣಕ ಕೆಲವೊಮ್ಮೆ ಆರುವುದು ಎರಡು ನಿಮಿಷ ತಡವಾದರೆ ಅವರು ಪಡುವ ಸಂಕಟ ನೋಡಬೇಕು ನೀವು!  ಮುಂದೆ ಓದಿ »

~.~
  • benaka ರವರ ಬ್ಲಾಗ್
  • 3 ಪ್ರತಿಕ್ರಿಯೆಗಳು
  • 1696 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ
1234ಮುಂದಿನ ›ಕೊನೆಯ »

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • srikanth
    ಉ: ಓಶೋ ಕಂಡಂತೆ ಗಾಂಧಿ!
    November 23, 2008 - 9:53pm
  • muralihr
    ಉ: ಸಾರ್ಥಕ ಜೀವನ:
    November 23, 2008 - 9:29pm
  • sandhya.darshini
    ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?
    November 23, 2008 - 9:28pm
  • cmariejoseph
    ಉ: ಭಾಷಾನುವಾದವೇನು?
    November 23, 2008 - 9:05pm
  • gurubaliga
    ಉ: ಭಾಷಾನುವಾದವೇನು?
    November 23, 2008 - 8:57pm
  • palachandra
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 23, 2008 - 7:04pm
  • palachandra
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 23, 2008 - 7:04pm
  • palachandra
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 23, 2008 - 7:02pm
  • palachandra
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 23, 2008 - 7:00pm
  • ASHOKKUMAR
    ಉ: ಸಾರ್ಥಕ ಜೀವನ:
    November 23, 2008 - 6:14pm
ಇನ್ನಷ್ಟು


ಜೀವನ ಒಂದು ನಾಟಕವಿದ್ದಂತೆ. ಆದರಿಲ್ಲಿ ವಿಶ್ರಮಿಸಲು ಸೈಡ್ ವಿಂಗ್ ಗಳಿಲ್ಲ

— --- ಟಿ.ಪಿ.ಕೈಲಾಸಂ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator