anivaasi (ಚರ್ಚೆಯ ವಿಷಯಗಳು)
ಡೆಮಾಕ್ರಸಿ, ನಮ್ಮ ನಾಡು, ನಮ್ಮ ಜನ
September 7, 2007 - 3:31am — anivaasiನಮ್ಮ ನಾಡಿನ ರಾಜಕೀಯ ಹದಗೆಟ್ಟಿದೆ. ರಾಜಕಾರಣಿಗಳಿಂದಾಗಿ ಎಲ್ಲ ಕೊಳೆತು ನಾರುತ್ತಿದೆ. ನಮ್ಮ ನಾಡಿನ ಜನರ ಕಷ್ಟ ಕಾರ್ಪಣ್ಯಕ್ಕೆ ಕೊನೆಯೇ ಇಲ್ಲದಂತಾಗಿದೆ. ಇವೆಲ್ಲಾ ನಿಜವೇ. ಆದರೆ, ಇದನ್ನೇ ಎಷ್ಟು ದಿನಾಂತ ಹೇಳ್ಕೊಂಡಿರೋಕೆ ಆಗತ್ತೆ ಹೇಳಿ. ಸಿಟ್ಟು ವಿಷಾದ ಇರಲಿ, ಕನಿಷ್ಟ ಬೋರಾದರೂ ಆಗಬೇಕಲ್ಲವ? ಬೋರು ಆಗತ್ತೆ ಅಂತೀರ? ಅದನ್ನ ನಾನೂ ಒಪ್ಪತೀನಿ. ಯಾಕಂದರೆ ಜನ ಮತ ಹಾಕೋದನ್ನ ಬಿಟ್ಟಿಬಿಟ್ಟಿದ್ದಾರೆ ನೋಡಿ, ಅದಕ್ಕೆ. ಇವೆಲ್ಲಾ ಮಾತು ಮತ್ತೆ ಮತ್ತೆ ಹೇಳೋಕೆ ನಾನು ಹೊರಟಿಲ್ಲ. ಅದನ್ನೆಲ್ಲಾ ಮೀರಿದ್ದು, ಅದರ ಹಿಂದಿಂದು, ಅದರ ಬುಡದಲ್ಲಿ ನನಗೆ ಕಾಣೋ ಒಂದೆರಡು ವಿಷಯ ಹೇಳ್ತೀನಿ.
ಮೊದಲನೇದಾಗಿ, ರಾಜಕಾರಣಿಗಳು ನಮನಿಮಗಿಂತ ಜಾಸ್ತಿ ಧೂರ್ತರಲ್ಲ. ಹುಬ್ಬೇರಿಸಬೇಡಿ. ಅವರು ದೇವತೆಗಳೂ ಅಲ್ಲ. ಅವರ ಧೂರ್ತತೆಗೂ ನಮ್ಮ ಧೂರ್ತತೆಗೂ ಒಂದು ಸಣ್ಣ ವ್ಯತ್ಯಾಸ ಇದೆ. ನಮ್ಮ ಧೂರ್ತತೆಯಿಂದ ನಾಕಾರು ಜನಕ್ಕೆ ತೊಂದರೆ ಆಗಬಹುದು. ಅವರ ಧೂರ್ತತೆಯಿಂದ ಲಕ್ಷಾಂತರ ಜನಕ್ಕೆ ತೊಂದರೆ ಆಗತ್ತೆ. ನಮ್ಮ ಧೂರ್ತತೆ ಹೆಚ್ಚೇನೂ ಪರಿಣಾಮ ಬೀರದೇ ಇರಬಹುದು. ಅವರ ಧೂರ್ತತೆ ತುಂಬಾ ಕ್ರೂರವಾಗತ್ತೆ. ಆಯ್ತ? ಅವರು ನಮನಿಮಗಿಂತ ಜಾಸ್ತಿ ಧೂರ್ತರಲ್ಲ. ಕೈಯಲ್ಲಿ ಅಧಿಕಾರ ಇದ್ದಾಗ ನಮ್ಮಷ್ಟೇ ಧೂರ್ತತನ ಅವರು ತೋರಿಸದಿರೂ ಅದರ ಪರಿಣಾಮ ಹೆಚ್ಚು ಘೋರ. ಅವರ ಏನು ಮಾಡಿದರೂ ನಡೆಯೋದರಿಂದ, ಧೂರ್ತತೆ ಹೆಚ್ಚು ಬಳಸ್ತಾರೆ ಅನ್ನೋದು ಕೂಡ ನಿಜವೆ. ಆದರೆ, ನಮನಿಮಗಿಂತ ಜಾಸ್ತಿ ಧೂರ್ತರಲ್ಲ. ಮುಂದೆ ಓದಿ »

ಲೀಲ-ಜಾಲ (ಲೀಲಾಂತ)
June 22, 2007 - 1:17pm — anivaasi




RSS: