ಧರ್ಮಯುದ್ಧಕ್ಕೆ ಜಯವೆಂಬ ಮಕ್ಕಳಿಲ್ಲ.
ನಾವು ಉದಾತ್ತ ಎಂದು ಭ್ರಮಿಸುವ ಧರ್ಮಕ್ಕೂ, ಕ್ರೂರ ಎಂದು ಭ್ರಮಿಸುವ ಧರ್ಮಕ್ಕೂ,
ನಿರ್ಲಿಪ್ತ ಎಂದು ಭ್ರಮಿಸುವ ಧರ್ಮಕ್ಕೂ, ಮನುಷ್ಯ ಸೋತು ಶರಣಾಗತನಾಗುವುದೇ ಬೇಕು
ಮುಂದೆ ಓದಿ »

ಮೊನ್ನೆ "ಡೌನ್ಫಾಲ್" ಎಂಬ ಚಿತ್ರ ನೋಡಿದೆ. ಹಿಟ್ಲರನ ಕಡೆಯ ದಿನಗಳ ಬಗ್ಗೆ. ಕಳೆದ ಅರವತ್ತು ಮಿಕ್ಕ ವರ್ಷಗಳಲ್ಲಿ ಹಿಟ್ಲರನ ರಾಕ್ಷಸತೆಯ ಬಗ್ಗೆ ಸಾಕಪ್ಪ ಅನಿಸುವಷ್ಟು ಪುಸ್ತಕ, ಡಾಕ್ಯುಮೆಂಟರಿ ಎಲ್ಲಾ ಬಂದಿವೆ. ಬರುತ್ತಿವೆ. ಆದರೂ, ಹಿಟ್ಲರನ ಕಡೆಗಾಲದಲ್ಲಿ ಅವನನ್ನು ಹತ್ತಿರದಿಂದ ನೋಡುವ, ಹಲವು ಚರಿತ್ರೆ ಮತ್ತು ಆತ್ಮಚರಿತ್ರೆಯ ಪುಸ್ತಕಗಳನ್ನು ಆಧರಿಸಿದ ಈ ಚಿತ್ರಕ್ಕೆ ವಿಚಿತ್ರ ಮೋಹಕ ಶಕ್ತಿಯಿದೆ. ಹಿಟ್ಲರನ ಬಗ್ಗೆ ಹೊಸದಾಗಿ ಕಣ್ಣು ತೆರೆಸುವಂತಹ ಸಂಗತಿಗಳೇನೂ ಇಲ್ಲಿಲ್ಲ. ಆದರೆ ಸಾವಿಗೆ ಹತ್ತಿರ ನಿಂತ ಅವನ ನಡೆವಳಿಕೆ, ಉಳಿದ ಮನುಷ್ಯರಿಗಿಂತ ಹೇಗೆ ಭಿನ್ನವಾಗಿತ್ತು ಎನ್ನುವುದು ಒಂದಂಶವಾದರೆ, ಜಗತ್ತಿನ ಮಹಾಕೃತ್ಯವೊಂದಕ್ಕೆ ಕೇವಲ ಒಬ್ಬ ಮನುಷ್ಯ ಎಷ್ಟು ಮತ್ತು ಹೇಗೆ ಕಾರಣನಾಗಬಲ್ಲ ಎಂಬುದು ಇನ್ನೊಂದು.
೨೦೦೪ರಲ್ಲಿ ತಯಾರಾದ, ಜರ್ಮನ್ ಭಾಷೆಯ ಈ ಚಿತ್ರದಲ್ಲಿ ಜರ್ಮನರು ತಮಗೆ
ತಾವೇ ಹಿಟ್ಲರನ ಕತೆಯನ್ನು ಹೇಳಿಕೊಂಡಂತಿದೆ. "ಡೌನಫಾಲ್" ಹಿಟ್ಲರನನ್ನು ಮಾನವೀಯ ಗೊಳಿಸಿಬಿಟ್ಟಿತೇ ಎಂಬ ಗೊಂದಲ ಹಾಗು ಅನುಮಾನದ ಬಗ್ಗೆ ಜರ್ಮನರು ಚರ್ಚೆ ನಡೆಸಿದ್ದಾರೆ. ಆರು ಮಿಲಿಯನ್ ಯಹೂದ್ಯರ ಕೊಂದ ಹಿಟ್ಲರನನ್ನು ಲೋಕಕ್ಕೆ ಕೊಟ್ಟ ಜರ್ಮನಿಯ ಜನರಿಗೆ, ಒಬ್ಬ ಸಾಮಾನ್ಯನ ಅಮಾನುಷತೆಯನ್ನು ಅರಿಯುವುದು ಎಷ್ಟು ಮುಖ್ಯ ಎಂದು ಚೆನ್ನಾಗಿ ಗೊತ್ತಿರುವಂತಿದೆ.
ಮುಂದೆ ಓದಿ »

ಆಗಲೇ ನಿನ್ನ ಹುಟ್ಟುಹಬ್ಬವಾಗಿ ಮೂರ್ನಾಕು ದಿನ ಕಳೆದಿದೆ. ನೆನಪೇ ಆಗಲಿಲ್ಲ. ಒಂದು ಗ್ರೀಟಿಂಗ್ ಆದರೂ ಕಳಿಸಬಹುದಿತ್ತು. ಈಗ ಒಳ್ಳೊಳ್ಳೆ ಗ್ರೀಟಿಂಗ್ ಕಾರ್ಡುಗಳು ಸಿಗುತ್ತವೆ. ಬಣ್ಣಬಣ್ಣದ್ದು, ಫಳಫಳ ಹೊಳೆಯುವದು. ಕೆಲವದರಲ್ಲಿ ಇಂಗ್ಲೀಷಿನ ಒಳ್ಳೊಳ್ಳೇ ಸಾಲುಗಳು ಇರುತ್ತವೆ. ಇನ್ನು ಕೆಲವಲ್ಲಿ ಕೆಟ್ಟಕೆಟ್ಟ ಪ್ರಾಸದ ಸಾಲುಗಳು. ಶುಭದ ಬಗ್ಗೆ, ಬದುಕಿನ ಬಗ್ಗೆ, ವಿಸ್ಮಯದ ಬಗ್ಗೆ, ಪುಣ್ಯ,ಅದೃಷ್ಟದ ಬಗ್ಗೆ ಹಾಗೂ ಪ್ರೀತಿ-ಶಾಂತಿಯ ಬಗ್ಗೆ. ಬಣ್ಣಬಣ್ಣದ್ದು. ಫಳಫಳ ಹೊಳೆಯುವದು. ನನಗೆ ಕೊಳ್ಳೋದಕ್ಕೆ ಕಷ್ಟವೇನಿಲ್ಲ. ಕೈತುಂಬಾ ಸಂಬಳ. ಸರಿಯಾಗಿ ಪರಿಚಯವಿಲ್ಲದವರಿಗೂ ಕಾರ್ಡು ಕಳಿಸಿರುವಾಗ, ನಿನಗೆ ಸ್ವಲ್ಪ ಹೆಚ್ಚಿನ ಬೆಲೆಯದ್ದೇ ಕೊಳ್ಳಬಹುದಿತ್ತು.
ಆದರೆ ನೀನೀಗ ಎಲ್ಲಿದ್ದಿ ಅಂತ ಗೊತ್ತಿಲ್ಲದ್ದರಿಂದ ಗ್ರೀಟಿಂಗ್ ಕಾರ್ಡಿನಿಂದ ಏನೂ ಪ್ರಯೋಜನವಿಲ್ಲ, ಬಿಡು. ಇದರಿಂದ ಬೇಸರವೇನೂ ಇಲ್ಲ. ಯಾಕೆಂದರೆ ನಿನ್ನನ್ನು ಹುಡುಕೋದನ್ನೇ ಬಿಟ್ಟುಬಿಟ್ಟಿದ್ದೇನೆ. ನಿನ್ನನ್ನು ಹುಡಕೋಕೆ ಹೋದರೆ ಈಗೀಗ ಸಿನಿಕತೆ, ಕುಹಕ, ಅನುಮಾನ ಸಿಗತ್ತವೆ. ಅವೆಲ್ಲಾ ಇರಲಿ ಅಂದರೂ, ಅವೆಲ್ಲಾ ಸರಿಯಾದ ಕಾರಣಕ್ಕ ಅನ್ನೋದು ಮುಖ್ಯ ಪ್ರಶ್ನೆ. ಮುಂದೆ ಓದಿ »

ಪರಸ್ಪರ
ಗುಡ್ಡದ ಮೇಲೆ ಹುಡುಕುವ ಪಾರಮಾರ್ಥದವರು
ಕೆಸರಲ್ಲಿ ಕಾಲಿಟ್ಟು ತಡಕುವ ಲೌಕಿಕರ ಕಂಡು
ಮತ್ತು ಮುಂದೆ ಓದಿ »

ಧರ್ಮಯುದ್ಧಕ್ಕೆ ಜಯವೆಂಬ ಮಕ್ಕಳಿಲ್ಲ.
ನಾವು ಉದಾತ್ತ ಎಂದು ಭ್ರಮಿಸುವ ಧರ್ಮಕ್ಕೂ, ಕ್ರೂರ ಎಂದು ಭ್ರಮಿಸುವ ಧರ್ಮಕ್ಕೂ,
ನಿರ್ಲಿಪ್ತ ಎಂದು ಭ್ರಮಿಸುವ ಧರ್ಮಕ್ಕೂ, ಮನುಷ್ಯ ಸೋತು ಶರಣಾಗತನಾಗುವುದೇ ಬೇಕು
ಮುಂದೆ ಓದಿ »

ಸಿಡ್ನಿಗೆ ವಸಂತ ಕಾಲಿಟ್ಟಾಗ ಮನಸ್ಸು ಅರಳುತ್ತದೆ. ಇಲ್ಲಿಯ ಮಣ್ಣಿನದೇ ಆದ ವಾಟ್ಲ್ ಹೂಗಳ ಒಂದಷ್ಟು ಚಿತ್ರವನ್ನು ಉತ್ಸಾಹದಲ್ಲಿ ತೆಗೆದಿದ್ದೆ. ಆದರೆ ಯಾಕೋ ಅದನ್ನು ಇಲ್ಲಿ ಹಾಕಬೇಕೆಂದು ಒಂದು ವಾರದಿಂದ ಹೆಣಗುತ್ತಿದ್ದೇನೆ. ಮನಸ್ಸಾಗುತ್ತಿಲ್ಲ. ಮುಂದೆ ಓದಿ »
