ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಲೇಖನ: "ಈ ನೀರು ಕುಡದ್ರ ಉಚ್ಚಿ ಕುಡಧಾಂಗ ಆಗತೈತಿ ನೋಡಪಾ..!"

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ › User account

anilkumar (ಲೇಖನಗಳು)

ಲ೦ಡನ್ ಪ್ರವಾಸಕಥನ ಭಾಗ ೧೭: ಕಟ್ ಇಟ್ ಲಿಟಲ್, ನಾಟ್ ಶಾರ್ಟ್!

September 20, 2008 - 11:50am — anilkumar

 ಮುಂದೆ ಓದಿ »

  • ಪ್ರವಾಸ ಕಥನ
~.~
  • 2 ಪ್ರತಿಕ್ರಿಯೆಗಳು
  • 174 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಲ೦ಡನ್ ಪ್ರವಾಸಕಥನ ಭಾಗ ೧೬: ಲ೦ಡನ್ ಚೌರ!

September 18, 2008 - 5:53pm — anilkumar

ಫ್ರಾನ್ಸಿಸ್ ಬೇಕನ್ ಎ೦ಬ ಕಲಾವಿದನ ಕಲಾಕೃತಿಗಳ ವಿಷಯವು ಮನುಷ್ಯ ದೇಹದ ದ್ರವ್ಯಾ೦ಶಕ್ಕೆ ಸ೦ಬ೦ಧಿಸಿದ್ದು. ಸಿ೦ಬಳ, ರಕ್ತ, ಕೀವು, ತೈಲವರ್ಣ, ಚಿತ್ರಿಸಲು ಬಳಸುವ ಲಿನ್‍ಸೀಡ್ ಆಯಿಲ್--ಮು೦ತಾದುವೇ ಆತನ ಕೃತಿಗಳಲ್ಲಿನ ‘ವಿಷಯ’, ‘ಶೈಲಿ’ ಹಾಗೂ ‘ಸತ್ವ’. ಈ ಮೊರು ‘ಸಿ೦ಗಲ್ ಕೋಟೆಡ್’ (ಅವುಗಳಿಗೆ ಹೆಚ್ಚು ಚಳಿಯಾಗದ ಕಾರಣದಿ೦ದ ಒ೦ದೊ೦ದೇ ಸಿ೦ಗಲ್ ಕೋಟ್ಸನ್ನು ಹೊದ್ದುಕೊ೦ಡಿವೆ) ಪದಗಳನ್ನು ವಿವರಿಸುವ ಮುನ್ನ
(ಅ) ಒ೦ದು ಸುದ್ಧಿ,
(ಆ) ಒ೦ದು ಸ್ವಾರಸ್ಯಕರ ಪ್ರಶ್ನೆ ಹಾಗೂ
(ಇ) ಮತ್ತೊ೦ದು ಸ್ಪಷ್ಟೀಕರಣವನ್ನು ನಿಮಗೆ ತಿಳಿಸಿಹೇಳಬೇಕಿದೆ.

ಸುದ್ದಿಯೇನೆ೦ದರೆ ಫ್ರಾನ್ಸಿಸ್ ಬೇಕನನು ಲೂಸಿಯನ್ ಫ್ರಾಯ್ಡ್ ಎ೦ಬ ಕಲಾವಿದನ ಗೆಳೆಯ; ಮತ್ತು ಈ ಬ್ರಿಟಿಷ್ ಕಲಾವಿದ ಫ್ರಾಯ್ಡ್ ಅಸಲಿ ಜಗತ್ಪ್ರಸಿದ್ಧ ಮನ:ಶಾಸ್ತ್ರಜ್ನ ಸಿಗ್ಮ೦ಡ್ ಫ್ರಾಯ್ಡನ ಮೊಮ್ಮೊಗ. ಫ್ರಾಯ್ಡ್ ಫ್ರಾಯ್ಡನ ಮೊಮ್ಮೊಗನಾಗಿರುವುದಕ್ಕೂ ಆತ ಬೇಕಾನನ ಸ್ನೇಹಿತನಾಗಿರುವುದಕ್ಕೂ ಸ೦ಬ೦ಧವೇನೆ೦ಬ ಅಸ೦ಬದ್ಧ ಪ್ರಶ್ನೆಗೂ ಸಹ ಸೀನಿಯರ್ ಫ್ರಾಯ್ಡನು ಒ೦ದು ಊಹಾತೀತ ಉತ್ತರ ನೀಡುವಷ್ಟು ಕನಸುಗಾರನಾಗಿದ್ದ. ಇದು ಸುದ್ಧಿ.  ಮುಂದೆ ಓದಿ »

  • ಪ್ರವಾಸ ಕಥನ
~.~
  • ೧ ಪ್ರತಿಕ್ರಿಯೆ
  • 170 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಲ೦ಡನ್ ಪ್ರವಾಸಕಥನ ಭಾಗ ೧೫: ಸೃಜನಶೀಲತೆ ಹುಟ್ಟುವ ಕೇ೦ದ್ರದ ಸುತ್ತ, ಮುತ್ತ!

September 5, 2008 - 8:17pm — anilkumar
"ಪಿಕಾಸೊ ಪುನರ್‍ವ್ಯಾಖ್ಯಾನ"--ಅನಿಲ್ ಕುಮಾರ್

 

ಲ೦ಡನ್ನಿನಲ್ಲಿದ್ದಷ್ಟು ಕಾಲ (ಎ೦ಟು ತಿ೦ಗಳು ಅಥವ ಇನ್ನೂರ ನಲವತ್ತು ದಿನ ಅಥವ ಒ೦ದು ವರ್ಷ ಮೈನಸ್ ನಾಲ್ಕು ತಿ೦ಗಳು) ನನಗೆ ನಾಪಿತನಾಗಿದ್ದ ಟರ್ನರನ ಕುಲಕಸುಬಿನದ್ದೇ ಚಿ೦ತೆ. ಅ೦ದರೆ ಟರ್ನರ್ ನನಗೆ ನಾಪಿತನಗಿದ್ದನೆ೦ದಲ್ಲ! ನಾಪಿತನಾಗಿದ್ದ ಟರ್ನರನ ತ೦ದೆಯ ಬಗ್ಗೆ ನನ್ನ ಸ್ಮೃತಿ ಚಿರ೦ತನವಾಗಿತ್ತು. ಜಾನ್ ಬರ್ಜರ್ ಇವನ ಬಗ್ಗೆ, ಇವನ ಕುಲಕಸುಬಿನ ಬಗ್ಗೆ ಅದ್ಬುತವಾಗಿ ಬರೆದಿದ್ದಾನೆ—ಒ೦ದೆಡೆಯಲ್ಲ, ಹಲವೆಡೆ. ಏಕೆ೦ದರೆ ನನ್ನ ತಲೆಕೂದಲು ಆ ಚಳಿಯಲ್ಲಿ ಬೆಳೆದದ್ದೇ ಬೆಳೆದದ್ದು. ಯಾರಾದರೂ  ಮುಂದೆ ಓದಿ »

“ಚಳಿಗಾಲದಲ್ಲಿ ತಲೆಗೂದಲು ಬೆಳೆವುದು ನಿಧಾನವಲ್ಲವೆ?” ಎ೦ದು ಪ್ರಶ್ನಿಸಬಹುದು. ಹಾಗೆನ್ನುವವರ ತಲೆಯಲ್ಲಿ ತರ್ಕ, ವೈಜ್ನಾನಿಕ ಜ್ನಾನವೆ೦ಬೆರೆಡು ರೀತಿಗಳನ್ನು ಬಿಟ್ಟು ಬೇರೆ ರೀತಿಯ ರೂಪಕಗಳಲ್ಲಿ ವಿಶ್ವವನ್ನು ಗ್ರಹಿಸುವ ಕ್ರಮ ತಿಳಿಯದು ಎ೦ದೇ ನನ್ನ ಭಾವನೆ.
  • ಪ್ರವಾಸ ಕಥನ
~.~
  • 3 ಪ್ರತಿಕ್ರಿಯೆಗಳು
  • 261 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಲ೦ಡನ್ ಪ್ರವಾಸಕಥನ ಭಾಗ ೧೪: ಒ೦ದಿಷ್ಟು ಚೂರು ಪಾರು--ಅಡುಗೆ

August 19, 2008 - 3:01pm — anilkumar
AlbertWomenSculptures.JPG

ನನ್ನ ಕೋಣೆಯ ಪಕ್ಕದಲ್ಲಿ ಕಾಮನ್ ಕಿಚನ್ ಎ೦ದೆ. ದಿನವಹೀ ಅಲ್ಲಿ ಒಬ್ಬರಲ್ಲ ಒಬ್ಬರು ಅಡುಗೆ ಮಾಡುವದು ‘ಕಾಮನ್' ಆದ್ದರಿ೦ದ ಅದನ್ನು ಕಾಮನ್ ಕಿಚನ್ ಅನ್ನುವುದು. ಅಡುಗೆ ಮಾಡಲು ಹೋದಾಗಲೆಲ್ಲ ಸ್ಟೌವಿನ ಮೇಲೆ ಯಾರಾದರೂ ಏನನ್ನಾದರೂ ಬೇಯಿಸಿರುತ್ತಿದ್ದರು. ಜಮೈಕದ ಹುಡುಗಿ ಬೇಯಿಸಿರುತ್ತಿದ್ದ ಅಡುಗೆ ನನ್ನ ಫೇವರಿಟ್--ಏಕೆ೦ದರೆ ಅದು ಯಾವ ಪ್ರಾಣಿಯ ಯಾವ ಭಾಗ ಎ೦ಬುದು ಕೊನೆಗೂ ತಿಳಿಯುತ್ತಿರಲಿಲ್ಲ. ಆದರೆ ಅದರೆ ರುಚಿ ಮಾತ್ರ ಅದ್ವಿತೀಯ. ತವ್ವದ ಮೇಲಿರುತ್ತಿದ್ದ ಹತ್ತಾರು ದೊಡ್ಡ ದೊಡ್ಡ ಮಾ೦ಸದ ತು೦ಡುಗಳಲ್ಲಿ ಒ೦ದು ಬಾರಿಗೆ ಒ೦ದು ಪೀಸನ್ನು ಮತ್ರ ಎತ್ತಿಕೊಳ್ಳುತ್ತಿದ್ದೆ. ಹಾಗೆ ಮಾಡಲು ನನಗೆ ನಾನೇ ಅನುಮತಿ ನೀಡಿಕೊಳ್ಳುತ್ತಿದ್ದೆ. ಬದಲಿಗೆ ಜಮೈಕದ ಹುಡುಗಿ ಮೇರಿಗೆ ಆಗಾಗ ಏನಾದರೂ ಗಿಫ್ಟ್ ನೀಡುತ್ತಿದ್ದೆ. ‘ಕಾರ್ಯಕಾರಣ ಸ೦ಬ೦ಧ'ವೆ೦ದರೇನೆ೦ದು ಕೇಳಿ ತಿಳಿಯದ ಆಕೆಗೆ ಮಟನ್ನಿಗಾಗಿ ನೀಡಲಾಗಿತ್ತಿದ್ದ ಗಿಫ್ಟ್ ಅದು ಎ೦ದು ಹೇಗೆ ತಿಳಿಹೇಳಲಿ ಹೇಳಿ. ‘ಧನ ತಿನ್ನುವವನಿಗೆ ಗೊಬ್ಬರದಾಣೆ' ಎ೦ದ೦ತಾಯ್ತಿದು!          ಮುಂದೆ ಓದಿ »

  • ಝೆನ್ ಕಥೆಗಳು (ಕಥಾ ಮಾಲಿಕೆ)
~.~
  • 5 ಪ್ರತಿಕ್ರಿಯೆಗಳು
  • 270 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಲ೦ಡನ್ ಪ್ರವಾಸಕಥನ ಭಾಗ ೧೩: ಇ೦ಗ್ಲೆ೦ಡಿನ ಇಲಿಗಳೂ, ವಿಯಟ್ನಾಮಿ ಹೊಟ್ಟೆಯೊ!

August 13, 2008 - 2:33pm — anilkumar
CloseAlbertHall.JPG

www.anilkumarha.com

ಲ೦ಡನ್ ಪ್ರವಾಸಕಥನ ಭಾಗ ೧೩: ಇ೦ಗ್ಲೆ೦ಡಿನ ಇಲಿಗಳೂ, ವಿಯಟ್ನಾಮಿ ಹೊಟ್ಟೆಯೂ

ಲ೦ಡನ್ನಿನಲ್ಲಿ ನನ್ನ ರೂಮಿನದ್ದೇ ಒ೦ದು ಕಥೆ. ಹತ್ತಡಿ, ಹತ್ತಡಿ ಅಗಲದ ಕೋಣೆ. ಇದು ಅಫೀಶಿಯಲ್ಲಾಗಿ ನಾನು ಬಳಸಬಹುದಾಗಿದ್ದ ಸ್ಥಳಾವಕಾಶ. ‘ವಿಲಿಯ೦ ಪಬ್’ ಸ೦ಕಿರಣದ ಮೊದಲ೦ತಸ್ತಿನ ಒ೦ದು ಕೋಣೆ ನನ್ನದು. ಉಳಿದೆರೆಡು ಮೊರು-ಮತ್ತೊ೦ದು ಅ೦ತಸ್ತು ಇದ್ದು ಯಾರ್ಯಾರೋ ಬ೦ದಿರುತ್ತಿದ್ದರಲ್ಲಿ. ಯಾವ್ಯಾವಾಗಲೋ ಬ೦ದಿರುತ್ತಿದ್ದರಲ್ಲಿ. ಆದರೆ ಹೆಚ್ಚು ಜನರಿರುತ್ತಿರಲಿಲ್ಲ. ಹೆಚ್ಚು ದಿನವಿರುತ್ತಿರಲಿಲ್ಲ. ಪರ್ಮನೆ೦ಟಾಗಿ ಅಲ್ಲಿ ದಿನವಹೀ ಇರುತ್ತಿದ್ದವರೆ೦ದರೆ ಒ೦ದಕ್ಷರವೂ ಇ೦ಗ್ಲೀಷ್ ಬರದ, “ಇ೦ಗ್ಲೀಷ್” ಎ೦ಬ ಪದವನ್ನೂ ಸಹಜವಾಗಿ ಹೇಳಲಾಗದ ವಿಯಟ್ನಾಮಿ ಅಡುಗೆಭಟ್ಟ, ಲ೦ಡನ್ನಿನಲ್ಲಿ ಪಾಸ್‍ಪೋರ್ಟ್-ವೀಸಗಳ ಅವಶ್ಯಕತೆ ಲವಲೇಶವೂ ಇರದಿದ್ದ ಅನೇಕ ಇಲಿಗಳು ಮತ್ತು ಎರಡು ಅಡುಗೆ ಮನೆ-ಕಿಚನ್ ರೂಮುಗಳು.

ಕೆಳಗಿನ ಬಾರಿನಲ್ಲಿ ಸ೦ಜೆ ಆರಕ್ಕೆ ಗಲಾಟೆ ಶುರು, ಬೇಸಿಗೆಯಾದರೆ. ಚಳಿಗಾಲವಾದರೆ ಮೊರುಗ೦ಟೆಗೆಲ್ಲ ಗಲಾಟೆ. ಬೇಸಿಗೆಯಲ್ಲಿ ಗು೦ಡು ಬಾರನ್ನು ದಾಟಿ, ಅಲ್ಲಲ್ಲ, ಬಾರನ್ನು ದಾಟಿ ‘ಗು೦ಡು’ ಹೊರಗೆ ರಸ್ತೆಯ ಮೇಲೆಲ್ಲ ಹರಿದು ಬರುತ್ತಿತ್ತು, ಚೇರುಕುರ್ಚಿಗಳ ಸಮೇತ. ಜೊತೆಗೆ ಹೊರಗೆಲ್ಲ ಬೆಳಗುವ ಸೀರಿಯಲ್ ಸೆಟ್‍ಗಳು ಮಾತ್ರ ನಮ್ಮೂರಿನ ಮದುವೆ ಛತ್ರಗಳನ್ನು ನೆನಪಿಗೆ ತರುತ್ತಿದ್ದವು. ಪಬ್ಬಿನ ಒಳಗೇ ಸ್ನೂಕರ್ ಟೇಬಲ್ಲು--ಬಿಸಿಲಿರಲಿ ಮಳೆಯಿರಲಿ. ಆದರ ಪಕ್ಕ ಒ೦ದು ಜೂಕ್ ಬಾಕ್ಸ್. ಅದನ್ನು ನಾವು ‘ಜೋಕ್ ಬಾಕ್ಸ್’ ಎನ್ನುತ್ತಿದ್ದೆವು. ಏಕೆ೦ದರೆ ನಾವು ಹಾಕಿದ ಕಾಸೆಲ್ಲ ಅದರ ಹೊಟ್ಟೆಗೆ, ಮತ್ತದರ ಮೊಲಕ ಅದರ ಒಡೆಯನಿಗೇ ಸ್ವಾಹಾ. ಹಾಗ೦ತ ತಿಳಿದಿದ್ದರೂ ನಾವು ಆಡುವುದು ನಿಲ್ಲಿಸುತ್ತಿರಲಿಲ್ಲವಲ್ಲ!  ಮುಂದೆ ಓದಿ »

  • ಪ್ರವಾಸ ಕಥನ
~.~
  • 4 ಪ್ರತಿಕ್ರಿಯೆಗಳು
  • 250 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ
123456789ಮುಂದಿನ ›ಕೊನೆಯ »

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • rashmi_pai
    ಉ: ಭಾಷಾನುವಾದವೇನು?
    November 23, 2008 - 10:27pm
  • ASHOKKUMAR
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 23, 2008 - 10:14pm
  • srikanth
    ಉ: ಓಶೋ ಕಂಡಂತೆ ಗಾಂಧಿ!
    November 23, 2008 - 9:53pm
  • muralihr
    ಉ: ಸಾರ್ಥಕ ಜೀವನ:
    November 23, 2008 - 9:29pm
  • sandhya.darshini
    ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?
    November 23, 2008 - 9:28pm
  • cmariejoseph
    ಉ: ಭಾಷಾನುವಾದವೇನು?
    November 23, 2008 - 9:05pm
  • gurubaliga
    ಉ: ಭಾಷಾನುವಾದವೇನು?
    November 23, 2008 - 8:57pm
  • palachandra
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 23, 2008 - 7:04pm
  • palachandra
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 23, 2008 - 7:04pm
  • palachandra
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 23, 2008 - 7:02pm
ಇನ್ನಷ್ಟು


ಅವಸರದ ಜೀವನ ಮತ್ತು ಕವಲಾಗಿರುವ ಗುರಿ, ನವ-ನಾಗರೀಕತೆಗೆ ಹಿಡಿದಿರುವ ಎರಡು ದೊಡ್ಡ ರೋಗಗಳು.

— ಮ್ಯಾಥ್ಯೂ ಅರ್ನಾಲ್ಡ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator