anil_harihar (ಬ್ಲಾಗ್ ಬರಹಗಳು)
ತೆರೆದ ಕಣ್ಣು
May 9, 2008 - 5:19pm — anil_hariharತೆರೆದ ಕಣ್ಣುಗಳ ಎಳೆರವಿ ಕಿರಣಗಳಿಗೆ
ಅರಳಿದೆ ಮುಗ್ಧತೆಯ ಚೈತನ್ಯದ ಇನ್ನೊಂದು ಪದವಾಗಿ
ನಕ್ಕೆ ನಾ ವಸುಂಧರೆಯ ತೆಕ್ಕೆಯಲಿ
ಕಂಡೆನಾ ಜಗವ ಆ ಹಸಿರಿನ ಸೆರಗಲಿ
ಕಲೆತೆ ಅದೆಷ್ಟು ಪಾಠಗಳ ಆ ಪಕ್ಶಿಗಳ ಕಂಠದಲಿ
ಪಯಣ ಸಾಗಿತ್ತು ಎಷ್ಟೋ ಕನಸುಗಳ ಹೊತ್ತು
ಹೊಸ ಅನುಭವಗಳ ನಡುವೆ ಇತ್ತು ಚಿಂತೆಗಳ ಕಂತೆ
ನೆತ್ತಿಯ ಮೇಲಿನ ಮಾರ್ತಂಡ
ಮೇಲೆ ಸಂಭಂಧಗಳ ಸರಪಳಿಗಳು ಭವದ ಬಂಧನಕೆ ಮುಂದೆ ಓದಿ »

- anil_harihar ರವರ ಬ್ಲಾಗ್
- Login or register to post comments
- 294 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಅನುಭವ
May 9, 2008 - 4:16pm — anil_hariharಮುಂಗಾರಿನ ಮಳೆಯ
ಅದೊಂದು ಸುಂದರ ಅನುಭವ
ಸದ್ದಿಲ್ಲದ ಆ ಮಳೆಯ
ತಿಳಿಯದೆ ಹೋಯಿತು ಆರಂಭ
ಇಡೀ ಜಗವೆ ನಿಂತಲ್ಲೆ ನಿಂತ
ಮನಸಿನೊಳಗಿನ ಓಂದು ಭಾಸ
ಒಂದೇ ಒಂದು ಹನಿಗೆ ಅದೆಷ್ಟು
ಪುಟ್ಟ ಪುಟ್ಟ ಹನಿಗಳು
ಎಲೆಂಚಿನ ತುದಿಗೆ ನಿಲ್ಲದಾಗಿ
ಜಾರಿವೆ ಮಿಂಚುವ ಆ ಹನಿಗಳು
ಮನಹಾಕಿದೆ ನೆನಹುಗಳ ಮೆಲಕು
ಇನ್ನೊಂದು ನೆನಪು
ಈ ಹೊಸ ಅನುಭವ ಮುಂದಿನ ಮುಂಗಾರಿಗೆ

- anil_harihar ರವರ ಬ್ಲಾಗ್
- Login or register to post comments
- 284 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಮುಕ್ತಿ
May 9, 2008 - 4:07pm — anil_hariharಪಡಿಬೆಕೆನಿಸೆದ ಮುಕ್ತಿ
ಅದ್ರಿಲ್ಲಾ ಅದನ್ ಪಡೆಯೋ ಯುಕ್ತಿ
ಹಿಂಗ್ಯಾಕ ಆಗ್ಯದ ಈ ಹದಿನೆಂಟ
ತುಂಬ್ಯಾವ ಚಿಂತಿ ನೊರಾಯಂಟ
ಮುಗಿಸ್ಬೆಕ್ ನಾ ಇನ್ನೂ ದಿಗ್ರಿ
ಓಂದೊಂದರ ಸಿಗಬೆಕಲ್ಲಾ ಭಕ್ರಿ
ಮುಂದ ,ಹೆಂಡತಿ , ಮಕ್ಳು
ಸಂಸಾರದ ಗೋಳು.....
ಅದ್ರೂ ತೊಗೋಂಡ... ಹೊಗ್ಬೆಕ್
ಇಷ್ಟೆಲ್ಲಾ, ಅನುಭವ ಯದಕ್ಕ...?
ಪಡಿಬೆಕೆನಿಸೆದ ಮುಕ್ತಿ
ಅದ್ರಿಲ್ಲಾ ಅದನ್ ಪಡೆಯೋ ಯುಕ್ತಿ

- anil_harihar ರವರ ಬ್ಲಾಗ್
- Login or register to post comments
- 227 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಏಂತಹ ಹೊಸತು ಈ ದಿವಸ....
May 9, 2008 - 3:35pm — anil_hariharಏಂತಹ ಹೊಸತು ಈ ದಿವಸ....
ಕಾರ್ಮೋಡಗಳು ತುಂಬಿದ ಆಗಸ
ಏನೀ.. ಜಿಟಿಜಿಟಿ ಮಳೆಯ ಸಂದೇಷ
ಓಹೋ ಇದು ವಸಂತನ ಉಲ್ಲಾಸ
ಅವನಿಗೆ ಚೈತ್ರಳು ನಕ್ಕ ಭಾಸ..!
ಸಣ್ಣ ಸಣ್ಣ ಅಲ್ಲಿ ಇಲ್ಲಿ ಹಸಿರಿನ ಚಿಗುರು
ಮನವು ನೆನಹು ತುಂಬಿದ ಬಸಿರು
ಕಂಡಿದ್ದ ಕನಸು, ನನಸಾಯ್ತು ಏಂಬ ಹರುಷ
ಆದರೂ ಮುಕ್ತಾಯವಿಲ್ಲದ ದಿನದ ಈ ಸಂಘರ್ಷ
ಮುಂಜಾವಿನ ತಂಪುಗಾಳಿಯ ಆ ಸ್ಪರ್ಷ ಮುಂದೆ ಓದಿ »

- anil_harihar ರವರ ಬ್ಲಾಗ್
- Login or register to post comments
- 214 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಅನಿಸಿಕೆ
May 9, 2008 - 1:57pm — anil_hariharಹೊಂಬಿಸಿಲ ಮುಂಜಾವಿಗೆ
ನನ್ನ ಒಂದು ಅನಿಸಿಕೆ
ಕತ್ತಲು ಮನಕೆ ಆಸೆ ತಂದ ಆ
ಹೊಂಗಿರಣವಗಲೆ.....?
ಭಾನುವಿಗೆ ಮೈಚೆಲ್ಲಿ ಕುಳಿತು
ನಸುನಗುತಿರುವ ಮಲ್ಲಿಗೆಯಾಗಲೆ.......?
ಮನ ಮುದದಿಂದ ತುಂಬುವ
ತಂಪಾದ ಗಾಳಿಯಗಲೆ....?
ಹೂಹೂಗೆ ಹಾರಿ ಮಧು ಮಧು ಹೀರುವ
ದುಂಬಿಯಾಗಲೆ..? ಇಲ್ಲಾ ಮಧುವಾಗಲೆ...?
ದಟ್ಟ ಹಸಿರಿನ ಸೆರಗಿನಂತೆ ಇರುವ
ಹೊಗೆ ನಾನಾಗಲೆ...? ಇಲ್ಲಾ ಹಸಿರೆ ನಾನಾಗಲೆ...? ಮುಂದೆ ಓದಿ »

- anil_harihar ರವರ ಬ್ಲಾಗ್
- Login or register to post comments
- 173 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

RSS: