Shyam Kishore (ಲೇಖನಗಳು)
ಬುದ್ಧಿಗೆ ಕಸರತ್ತು: ಸಂಪದಬಂಧ - ೨
March 12, 2007 - 11:01am — Shyam Kishoreಆತ್ಮೀಯ ಸಂಪದಿಗರೇ,
ಸಂಪದಬಂಧ-೨ ಇದೀಗ ನಿಮ್ಮ ಮುಂದಿದೆ. ಈ ಬಾರಿ ಉತ್ತರಗಳನ್ನು ನನಗೆ "ವೈಯಕ್ತಿಕ ಸಂದೇಶ"ದ ರೂಪದಲ್ಲಿ ಕಳುಹಿಸುತ್ತೀರಾ? ಹಾಗೆ ಮಾಡಿದಲ್ಲಿ ಎಲ್ಲರಿಗೂ ಕೊನೆಯದಾಗಿ ಉತ್ತರ ಪ್ರಕಟಗೊಳ್ಳುವ ತನಕ ಕುತೂಹಲವಿರುತ್ತದೆ ಮತ್ತು ಭಾಗವಹಿಸಲು ಅವಕಾಶವಿರುತ್ತದೆ.
ಈ ಬಾರಿಯ ಸಂಪದಬಂಧದ ಉತ್ತರ ಮಾರ್ಚ್ ೨೦ (ಮುಂದಿನ ಮಂಗಳವಾರ) ಪ್ರಕಟವಾಗುತ್ತದೆ.
ಕಳೆದ ಬಾರಿಯಂತೆ ಈ ಸಾರ್ತಿ ಕೂಡಾ ಉತ್ಸಾಹದಿಂದ ಭಾಗವಹಿಸುತ್ತೀರಾ ಎಂದು ಭಾವಿಸಿದ್ದೇನೆ. ತಮ್ಮ ಸಲಹೆ-ಪ್ರತಿಕ್ರಿಯೆಗಳಿಗೆ ಸ್ವಾಗತವಿದೆ.
| 1 | 2 | ||||||||||||
| 3 | 4 | 5 | |||||||||||
| 6 | |||||||||||||
| 7 | 8 | 9 | 10 | ||||||||||
| 11 | |||||||||||||
| 12 | 13 | 14 | |||||||||||
| 15 | 16 | ||||||||||||
| 17 | 18 | 19 | |||||||||||
| 20 | |||||||||||||

ನಿಜಜೀವನದಲ್ಲಿ ಹಾಸ್ಯ: ನಿಮ್ಮನ್ನು ನೋಡ್ಕೊಳ್ಳೋಕೆ ನಾನಿಲ್ವೇನ್ರೋ!
March 10, 2007 - 8:45am — Shyam Kishore(ನಿಜಜೀವನದಲ್ಲಿಯೇ ಹಾಸ್ಯವನ್ನು ಹುಡುಕಬಹುದಾದ ಬಗ್ಗೆ ಮತ್ತು ಆ ರೀತಿಯ ಎರಡು ಸ್ವಾರಸ್ಯಕರ ಸನ್ನಿವೇಶಗಳ ಬಗ್ಗೆ ಈ ಹಿಂದೆ ಮೊದಲ ಕಂತಿನಲ್ಲಿ ಬರೆದಿದ್ದೆ. ಭೀಮ-ದುರ್ಯೋಧನರ ಕಾಳಗ ಮತ್ತು ಸಂಕೋಚ್ಯತೆ. ಈ ಬರಹ ಆ ರೀತಿಯ ನಿಜಜೀವನದಲ್ಲಿನ ಹಾಸ್ಯಮಯ ಸನ್ನಿವೇಶಗಳ ಎರಡನೆಯ ಕಂತು.) ಮುಂದೆ ಓದಿ »

- Login or register to post comments
- 614 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಬುದ್ಧಿಗೆ ಕಸರತ್ತು: "ಸಂ-ಪದಬಂಧ"-೧
February 27, 2007 - 12:32pm — Shyam Kishoreಆತ್ಮೀಯ ಸಂಪದಿಗರೇ,
ಪದಬಂಧವನ್ನು ಬಿಡಿಸುವುದು ಈಗೀಗ ಕೊಂಚ ಕಡಿಮೆಯಾಗುತ್ತಿರುವ ಹವ್ಯಾಸ. ನಾನು ಚಿಕ್ಕವನಿದ್ದಾಗ ಭಾನುವಾರದ ದಿನ ಬೆಳ್ಳಂಬೆಳಗ್ಗೆ ಪ್ರಜಾವಾಣಿಯನ್ನು ಅಂಗಳದ ತುಂಬ ಹರಡಿಕೊಂಡು, ಅಪ್ಪ, ಅಮ್ಮ, ಅತ್ತೆ, ಅಜ್ಜ, ಅಜ್ಜಿ ಹೀಗೆ ಮನೆಮಂದಿಗೆಲ್ಲ ತಲೆಕೆಡಿಸಿ ಪದಬಂಧಗಳನ್ನು ತುಂಬುತ್ತಿದ್ದೆ. ನಿಮ್ಮಲ್ಲೂ ಸಾಕಷ್ಟು ಜನರು ಸುಧಾ, ಪ್ರಜಾವಾಣಿಗಳ ಪದಬಂಧಗಳಲ್ಲಿ ಹುದುಗಿ ಭಾನುವಾರದ ಅರ್ಧ ದಿನವನ್ನೇ ಕಳೆದಿರಬಹುದು ಅಲ್ಲವೇ?
ಅದನ್ನೇ ನೆನೆಯುತ್ತಾ ಪದಬಂಧವೊಂದನ್ನು ರಚಿಸಲು ಪ್ರಯತ್ನಿಸಿದ್ದೀನಿ. ಬಿಡಿಸಿ, ಹೇಗಿತ್ತು ಅಂತ ಹೇಳುತ್ತೀರಾ? ಇದು ಕೇವಲ "ಪದಗಳ ಬಂಧ" ಆಗದಿರಲಿ ಎಂದು ಅಲ್ಲಲ್ಲಿ ನಮ್ಮ ಕನ್ನಡನಾಡು-ನುಡಿಯ ಬಗ್ಗೆ ಕೆಲವು ರಸಪ್ರಶ್ನೆಗಳನ್ನೂ ಸೇರಿಸಿದೆ. ಇಷ್ಟವಾಯಿತೋ ಇಲ್ಲವೋ ಹೇಳಿ.
ಈ ಪದಬಂಧಕ್ಕೆ ಉತ್ತರ ಶುಕ್ರವಾರ (ಮಾರ್ಚಿ ೨) ಪ್ರಕಟಗೊಳ್ಳುತ್ತದೆ.
| 1 | 2 | 3 | 4 | ||||||
| 5 | 6 | 7 | |||||||
| 8 | 9 | ||||||||
| 10 | 11 | ||||||||
| 12 | 13 | 14 | |||||||
| 15 | |||||||||
| 16 | 17 | 18 | 19 | ||||||
| 20 | |||||||||
| 21 | 22 | 23 |
| ಮೇಲಿನಿಂದ ಕೆಳಕ್ಕೆ | |||||||||
| 1. ನಮ್ಮ ಹೃದಯ ಸುಮಾರು ಇಷ್ಟು ಗಾತ್ರದ್ದಾಗಿರುತ್ತದೆ ಎಂದು ತಜ್ಞರ ಅಭಿಪ್ರಾಯ (2) | |||||||||
| 2. ಒಂದು ಬಗೆಯ ಅಂಟು; ಜಿಗುಟಾದ ದ್ರವ (2) | |||||||||
| 3. ಇಂದಿನ ಕಾಲದಲ್ಲಿ ಜಿಮ್ ಇರುವಂತೆ, ಹಿಂದಿನ ಕಾಲದಲ್ಲಿ ಅಂಗ ಸಾಧನೆಗೆ ಇವುಗಳಿದ್ದವು (3) | |||||||||
| 4. ಕರ್ನಾಟಕದ ಅತಿ ಎತ್ತರದ ಬೆಟ್ಟ (6) | |||||||||
| 5. ಭೂಮಿಯಿಂದ ಹೊರತೆಗೆದ ಲೋಹವೊಂದರ ಕಚ್ಚಾ ರೂಪ (3) | |||||||||
| 7. ರಾಗವಾಗಿ ಪದ್ಯಗಳನ್ನು ಹಾಡುವ ಕಲೆ. ಈಗೀಗ ನಶಿಸಿ ಹೋಗುತ್ತಿದೆ (3) | |||||||||
| 12. ಕರ್ನಾಟಕದಲ್ಲಿ ಅತಿ ಹೆಚ್ಚು ಕೆರೆಗಳನ್ನು ಹೊಂದಿರುವ ಜಿಲ್ಲೆ (3) | |||||||||
| 13. ಹತ್ತಿಯನ್ನು ಹೀಗೂ ಕರೆಯುತ್ತಾರೆ ಗೊತ್ತಾ, ಮರುಳೆ? (3) | |||||||||
| 14. "ಹಾರ ಮತ್ತು ---"ಗಳನ್ನು ಹಾಕಿ ಸ್ವಾಗತ ಕೋರುವುದು (ಅಥವಾ ಸನ್ಮಾನಿಸುವುದು) ನಮ್ಮ ಸಂಪ್ರದಾಯ ಅಲ್ಲವೇ? (3) | |||||||||
| 15. ಕುದುರೆಯ ಕಾಲಿಗೆ ಹಾಕುವುದು; ಅದೃಷ್ಟದ ಸಂಕೇತವೂ ಹೌದು (2) | |||||||||
| 17. ಎಣಿಸುವುದು (3) | |||||||||
| 18. ಫರ್ಮಂಟೇಶನ್ ಎನ್ನುವುದಕ್ಕೆ ಕನ್ನಡದಲ್ಲಿ ಹೀಗೆ ಹೇಳಬಹುದು (3) | |||||||||
| 19. ಜಗತ್ತಿನ ಅತಿ ಎತ್ತರದ ಏಕಶಿಲಾ ವಿಗ್ರಹ; ಇದು ಕರ್ನಾಟಕದಲ್ಲಿದೆ ಅನ್ನುವುದು ನಮಗೆ ಹೆಮ್ಮೆ ಅಲ್ಲವೇ? (3) | |||||||||
| 20. ಅಂತರ್ಜಾಲದಲ್ಲಿ ನಮಗೆ ದಕ್ಕಿರುವ ಡೈರಿ! (2) |
| ಎಡದಿಂದ ಬಲಕ್ಕೆ | ||
| 1. ಎತ್ತಲೋ ಮಾಯವಾದ ಮುತ್ತಿನ ಮೂಗುತಿ ತಂದ ಈತ ಯಾರು ಹೇಳಿ ನೋಡೋಣ? (5) | ||
| 3. ಎಲ್ಲದರಲ್ಲೂ ಈತನಿಗೇ ಮೊದಲ ಪೂಜೆಯಂತೆ (4) | ||
| 6. ನಾಡಪ್ರಭು ಕೆಂಪೇಗೌಡರ ಊರು (3) | ||
| 8. ಪತಿವ್ರತೆ ಎನ್ನುವುದಕ್ಕೆ ಕನ್ನಡದ ಪದ. ಇದರಿಂದ ಪ್ರಾರಂಭವಾಗುವ ಪ್ರಸಿದ್ಧ ಕಾವ್ಯವೂ ಇದೆ. (3) | ||
| 9. "ಕಾಗಿನೆಲೆ ಆದಿಕೇಶವ" ಈ ದಾಸರ ಕಾವ್ಯನಾಮ (3) | ||
| 10. ಮೂರಕ್ಷರದ ನರಕವನ್ನು ಬಲು ಬೇಗ ಸ್ವರ್ಗ ಮಾಡುವುದು ಹೀಗೆ! (2) | ||
| 11. ಹಸು ಕರು ಹಾಕಿದಾಗ, ಅದರ ಹಾಲನ್ನು ಬಳಸಿ ಮಾಡುವ ಒಂದು ರುಚಿಕರ ತಿನಿಸು (2) | ||
| 13. ಇವರಿಗಿಂತ ದೊಡ್ಡ ಬಂಧುವಿಲ್ಲ ಎಂದು ಗಾದೆಮಾತು ಹೇಳುತ್ತದೆ (2) | ||
| 14. ಕಸ್ತೂರಿ ಕಾಸಿಗೆ ಕೊಂಡದ್ದು ಏನನ್ನು ಎಂದು ನಿಮಗೇನಾದರೂ ಗೊತ್ತೇ? (3) | ||
| 16. ಇದು ಗೋಳಾಟ/ಪಿರಿಪಿರಿ ಅಲ್ಲ ಮಾರಾಯ್ರೇ, ಹಳೆಗನ್ನಡದ ಕವಿಯೊಬ್ಬನ ನೆಚ್ಚಿನ ಕಾವ್ಯ ಪ್ರಕಾರ (3) | ||
| 18. ನಮ್ಮ ಚೆಲುವ ಕನ್ನಡನಾಡು ಉದಯವಾಗಲಿ ಎಂದು ಹಾಡಿದ ಕವಿಯ ಊರು ಹೇಳಿ ನೋಡೋಣ? (5) | ||
| 21. ಪತಿ ಅಲ್ಲ ಸ್ವಾಮಿ. ಗಿಡಗಳಿಗೆ ನೀರು ಹಾಯಿಸಲು ಮಾಡಿದ "--" (2) | ||
| 22. ನಮ್ಮಷ್ಟಕ್ಕೆ ನಾವೇ ಹಾಡಿಕೊಳ್ಳುವುದಕ್ಕೆ ಹೀಗೆಂದು ಹೇಳಬಹುದು (3) | ||
| 23. ಕಿಟಕಿ ಅಲ್ಲ, ಚುಚ್ಚು ಮಾತಿದು (3) |

ಅಖಂಡ ಕರ್ನಾಟಕ - ಒಂದು ಇಣುಕು ನೋಟ
February 25, 2007 - 4:24am — Shyam Kishoreಕನ್ನಡ ನಾಡು-ನುಡಿಗೆ ಒದಗಿರುವ ದುಃಸ್ಥಿತಿ, ಕಾವೇರಿ ತೀರ್ಪಿನಂತಹ ಅನ್ಯಾಯ ನಮಗೆ ಆಗಿದ್ದರೂ, "ಮುಂದಿನ ವಾರ ಅಧಿವೇಶನ ಸೇರಿ, ವಿಚಾರ ಮಾಡಿ, ಆನಂತರ ನಮ್ಮ ಮುಂದಿನ ಕ್ರಮದ ಬಗ್ಗೆ ತೀರ್ಮಾನ ಮಾಡಿದರಾಯಿತು; ಈಗೇನು ಅಂತಹ ಅರ್ಜೆಂಟು?" ಎನ್ನುವಂತೆ ಸುಮ್ಮನಿರುವ ನಮ್ಮ ಮಂತ್ರಿ-ಮಹೋದಯರು, ಇವೇ ಮೊದಲಾದ ಹತ್ತಾರು ವಿಚಾರಗಳು ನಮ್ಮನ್ನು ಆಗಾಗ ಕಾಡುತ್ತಿರುತ್ತವೆ ಅಲ್ಲವೇ? ಆಶ್ಚರ್ಯವೆಂದರೆ ಇದೇ ರೀತಿಯ ಸಮಸ್ಯೆಗಳೇ ಸುಮಾರು ಅರವತ್ತು ವರ್ಷಗಳ ಹಿಂದೆಯೂ (ಅಂದರೆ ಏಕೀಕರಣಕ್ಕೂ ಹತ್ತು ವರ್ಷ ಮೊದಲು) ನಮ್ಮನ್ನು ಕಾಡುತ್ತಿದ್ದವು, ಇವೇನೂ ಹೊಸ ಸಮಸ್ಯೆಗಳಲ್ಲ ಎನ್ನುವ ಮಾತನ್ನು ನಿಮ್ಮ ಮುಂದಿಟ್ಟರೆ ನಂಬುತ್ತೀರಾ? ಪ್ರಾಯಶಃ ನಂಬಲಿಕ್ಕಿಲ್ಲ. ನೀವಷ್ಟೇ ಯಾಕೆ, ವಾರದ ಹಿಂದೆ ಯಾರಾದರೂ ಈ ರೀತಿ ನನಗೆ ಹೇಳಿದ್ದರೆ, ನಾನೂ ಸಹ ಅವರ ಮಾತನ್ನು ಸ್ವಲ್ಪ ಸಂದೇಹದಿಂದಲೇ ನೋಡುತ್ತಿದ್ದೆ. ಆದರೆ ಈಗ ನಂಬುತ್ತೀನಿ. ಕಾರಣ ಏನು ಅಂತ ಕುತೂಹಲವೇ? ಮುಂದೆ ಓದಿ. ಮುಂದೆ ಓದಿ »

ಬೋರಣ್ಣನ ಬೆಂಗ್ಳೂರು ಯಾತ್ರೆ
February 8, 2007 - 11:37am — Shyam Kishoreಬೀರ: ಓ, ಏನ್ ಬೋರಣ್ಣಾ, ಇಂಗೆ ತಲೆ ಮ್ಯಾಗೆ ಕೈಹೊತ್ಕಂಡು ಕುಂತ್ಕಡಿದ್ದೀಯಾ? ಏನ್ಸಮಾಚಾರ? ಮೈಯಾಗ ಉಸಾರಿಲ್ಲೇನು?
ಬೋರ: ಥತ್, ಸುಮ್ಕಿರಲೇ, ತಲೆ ತಿನ್‌ಬ್ಯಾಡ. ನಂದೇ ನಂಗಾಗೈತೆ; ತಲೆ ಕೆಟ್ಟು, ಎಕ್ಕುಟ್ಟ್ ಹೋಗದೆ.
ಬೀರ: ಅದೇನಣ್ಣಾ ಅಂಥಾ ಬೇಜಾರು? ಅದ್ಸರೀ,ಏನಣ್ಣಾ, ಬೆಂಗ್ಳೂರಿಗೆ ಓಗಿದ್ಯಂತೆ ಮೊನ್ನೆ? ಒಂದ್ ಕಿತ ನಂಗೂ ಏಳಾದಲ್ವಾ? ನಾನೂ ಬರ್ತಿದ್ದೆ. ನೀನು ಬಿಡಪ್ಪ ಬೋ ಜಾಣ. ಒಬ್ನೆ ಸಿಟೀಗ್ ಓಗಿ ಮಜಾ ಮಾಡ್ಕಂಡ್ ಬಂದ್ಬುಟ್ಟು, ಈಗಿಲ್ಲಿ ತಲೆ ಮ್ಯಾಕೆ ಕೈಹೊತ್ತು ಪೋಸು ಕೊಡ್ತಿದ್ದೀಯಾ.
ಬೋರ: ಲೇ ಬೀರಾ, ನಾನ್ ಬೆಂಗ್ಳೂರಿಗೆ ಹೋಗಿದ್ದು ಮಜಾ ಮಾಡಾಕಲ್ಲ ಕಣ್ಲೇ. ನಮ್ಮೂರ್ನಾಗೆ ಬೀದಿ ದೀಪ ಇಲ್ಲದೇ ಒಂದೂವರೆ ವರ್ಷ ಆಯ್ತು ನೋಡು, ಅದ್ಕೆ ಮಂತ್ರಿಗಳ ತಾವಾನೇ ಹೋಗಿ ಒಂದು ಅರ್ಜಿ ಹಾಕ್ ಬರಾಣ ಅಂತ ಹೋಗಿದ್ದೆ. ಈ ಉರಿ ಬಿಸ್ಲಲ್ಲಿ ಎರಡು ದಿನದಿಂದ ಓಡಾಡೀ ಓಡಾಡೀ, ತಲೆ ಕೆಟ್ಟೋಗದೆ.
ಬೀರ: ಅಬ್ಬಾ, ಅಬ್ಬಾ, ಅಬ್ಬಾ...ಇದೇನಣ್ಣಾ ಇದು?! ನಮ್ಮೂರಿಗೆ ಬೀದಿ ದೀಪ ಹಾಕ್ಸಕ್ಕೂ ಬೆಂಗ್ಳೂರಾಗಿರೋ ಮಂತ್ರಿಗಳ ತಾವ ಓಗ್ಬೇಕಾ? ಅಂತಾ ಕಾಲ ಬಂದ್ಬುಟ್ಟದಾ?
ಬೋರ: ಉಂ ಮತ್ತೆ. ಒಂದೂವರೆ ವರ್ಷದಿಂದ ಈ ಡಿ.ಸಿ. ಆಫೀಸು, ಎಂ.ಎಲ್.ಎ. ಮನೆ, ಜಿಲ್ಲಾ ಪಂಚಾಯತ್ತು ಅಂತ ನಾಯಿ ಅಲ್ದಂಗೆ ಅಲದ್ರೂ ಏನೂ ಆಗ್ಲಿಲ್ಲ. ಮೊನ್ನೆ ಪೇಪರ್ ಓದ್ತಾ ಇರೋವಾಗ ಒಂದು ಐಡಿಯಾ ಬಂತು ನೋಡು. ನಮ್ಮ ಹೊಸಾ ಮಂತ್ರಿಗಳು ಅವಾಗವಾಗ ಅದೇನೋ "ನೇರ ದರ್ಶನ" ಅಂತ ಮಾಡಿ, ಸ್ಟ್ರೇಟಾಗಿ ಜನ್ರು ಕೈಯಿಂದ್ಲೇಯ ಅರ್ಜಿ-ಪರ್ಜಿ ಎಲ್ಲಾ ತಗಾತಾರಂತೆ. ಅದ್ಕೇ ಈ ನನ್ ಮಕ್ಳಿಗೆ ಬುದ್ಧಿ ಕಲ್ಸಿದ ಹಾಗೆ ಆಗುತ್ತೆ, ನೇರ ಮಂತ್ರಿಗಳ ಅಫೀಸಿಗೇ ಹೋಗಾಣಾಂತ ಸಿಟೀಗೆ ಹೋದೆ.
ಬೀರ: ಬಲೇ ತ್ರಿಲ್ಲಿಂಗಾಗೈತಿ ಕಣಣ್ಣಾ, ಮುಂದಕ್ಕೇನಾತು... ಮುಂದೆ ಓದಿ »


RSS: