ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಲೇಖನ: "ಈ ನೀರು ಕುಡದ್ರ ಉಚ್ಚಿ ಕುಡಧಾಂಗ ಆಗತೈತಿ ನೋಡಪಾ..!"

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ › User account

Shyam Kishore (ಚರ್ಚೆಯ ವಿಷಯಗಳು)

ಕಾವೇರಿ ತೀರ್ಪಿನ ಬಗ್ಗೆ ಪ್ರಧಾನಮಂತ್ರಿ ಮತ್ತು ರಾಷ್ಟ್ರಪತಿಗಳಿಗೆ ಬರೆಯೋಣ

February 21, 2007 - 5:18am — Shyam Kishore

ಗೆಳೆಯರೇ,

ಕಾವೇರಿ ನೀರು ಹಂಚಿಕೆಯ ತೀರ್ಪಿನಲ್ಲಿ ನಮಗೆ ಆಗಿರುವ ಅನ್ಯಾಯದ ಬಗ್ಗೆ ಪ್ರಧಾನಮಂತ್ರಿ ಮತ್ತು ರಾಷ್ಟ್ರಪತಿಗಳಿಗೆ ಬರೆಯೋಣ (ದಟ್ಸ್ ಕನ್ನಡದಲ್ಲಿ ಕೂಡ ಈ ಬಗ್ಗೆ ಬಂದಿದೆ). ದಯವಿಟ್ಟು ಹತ್ತು ನಿಮಿಷಗಳನ್ನು ಈಗಲೇ ಮೀಸಲಿಟ್ಟು ಬರೆಯೋಣ. ಆಮೇಲೆ ಅಂತ ಮುಂದೂಡುವುದು ಬೇಡ.

"ನಮ್ಮ ಒಂದು ಪತ್ರದಿಂದ ಏನು ತಾನೇ ಆಗಲು ಸಾಧ್ಯ?" ಅಂತಲೋ, ಅಥವಾ "ಅಯ್ಯೋ, ಇವೆಲ್ಲ ಎಲ್ಲಿ ಉಪಯೋಗ ಆಗುತ್ತೆ" ಎಂದೋ, ಸಿನಿಕವಾದ ಅನುಮಾನವನ್ನು ಮಾತ್ರ ದಯವಿಟ್ಟು ನಮ್ಮಲ್ಲಿ ಮೂಡಲು ಬಿಡುವುದು ಬೇಡ. ಈ ಅನ್ಯಾಯ ಬರಿಯ ಕಾವೇರಿ ನದಿಯ ನೀರಿನ ಹಂಚಿಕೆಗಾದದ್ದಲ್ಲ, ನಮ್ಮ ನಾಡು-ನುಡಿಗೇ ಬಿದ್ದಿರುವ ಪೆಟ್ಟು ಎಂದೇ ನನ್ನ ಭಾವನೆ. ಹಾಗಾಗಿ ಈ ವಿಚಾರದಲ್ಲಿ ಬೇರೆ ರೀತಿಯ ಅನುಮಾನಗಳು ನಮ್ಮ ಉತ್ಸಾಹವನ್ನು ಕೊಲ್ಲದಿರಲಿ. ನಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಲು ಇರುವ ಎಲ್ಲ ಸೌಲಭ್ಯಗಳನ್ನೂ, ನಮ್ಮ ಕೈಲಾದ ರೀತಿಯಲ್ಲಿ ಬಳಸಿಕೊಳ್ಳೋಣ. ನಮ್ಮ ಹತ್ತು ನಿಮಿಷ ತಾನೇ ನಾವು ವ್ಯಯ ಮಾಡಬೇಕಾಗಿರೋದು? ಇನ್ನೇನೋ ಅಲ್ಲವಲ್ಲ! ಬನ್ನಿ, ಕೈಜೋಡಿಸಿ. ಸಂಪದ ಓದುಗರಿಂದಲೇ ನೂರಾರು ಸಂಖ್ಯೆಯಲ್ಲಿ ಪತ್ರಗಳು ಹೋಗಲಿ ಎಂದು ನನ್ನ ಕಳಕಳಿಯ ವಿನಂತಿ.

ಪ್ರಧಾನಿಗಳಿಗೆ ಪತ್ರಿಸಲು ಈ ಕೊಂಡಿ ಬಳಸಿ: http://pmindia.nic.in/write.htm

ರಾಷ್ಟ್ರಪತಿಗಳಿಗೆ ಪತ್ರಿಸಲು ಈ ಕೊಂಡಿ ಬಳಸಿ: http://presidentofindia.nic.in/scripts/writetopresident.jsp  ಮುಂದೆ ಓದಿ »

  • ಸುದ್ದಿ, ಸಮಾಚಾರ
~.~
  • Login or register to post comments
  • 729 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾವೇರಿ ನೀರು ಹಂಚಿಕೆ ಬಗ್ಗೆ ತೀರ್ಪು ಹೊರಬಿದ್ದಿದೆ

February 5, 2007 - 3:04pm — Shyam Kishore

ಕಾವೇರಿ ಪ್ಯಾನಲ್ ತೀರ್ಪು ಹೊರಬಿದ್ದಿದೆ. ತಮಿಳುನಾಡಿಗೆ 419 TMC ಮತ್ತು ಕರ್ನಾಟಕಕ್ಕೆ 270 TMC ಅಂತ ಇದೀಗ ನಿಗದಿಯಾಗಿರುವ ಪ್ರಮಾಣ. ಇದು ನಮ್ಮ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು? ಇದರ ಸಾಧಕ-ಬಾಧಕಗಳೇನು ಅಂತ ವಿವರವಾಗಿ ಗೊತ್ತಾ?  ಮುಂದೆ ಓದಿ »

  • ಸುದ್ದಿ, ಸಮಾಚಾರ
~.~
  • 5 ಪ್ರತಿಕ್ರಿಯೆಗಳು
  • 813 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಿಟ್ಟೆಲ್ ನಿಘಂಟು ಮತ್ತು ಭಾಷೆಯ ಹೊಸತನದ ಬಗ್ಗೆ ಒಂದಷ್ಟು

January 12, 2007 - 6:32pm — Shyam Kishore

ವೆಂಕಟೇಶ್ ಅವರ ಲೇಖನ "ಕನ್ನಡಕ್ಕೆ ಬಂದ ಕಿಟ್ಟೆಲ್ ಸಂಪತ್ತು" ಓದಿದ ನಂತರ ಈ ಪ್ರತಿಕ್ರಿಯೆ ಬರೆಯಲು ಶುರು ಮಾಡಿದೆ. ಅಷ್ಟರಲ್ಲಿ ಸುನಿಲ್‌ರವರ ಲೇಖನ "ಕಿಟ್ಟೆಲ್ ಸಂಪತ್ತಿನ ಪ್ರಸ್ತುತತೆ..." ಬಂತು. ಅದನ್ನು ಓದಿ ಮನಸ್ಸಿನಲ್ಲಿ ಇನ್ನೂ ಹಲವಾರು ವಿಚಾರಗಳು ಕಾಡತೊಡಗಿದವು. ಸರಿ ಬರಹ ರೂಪಕ್ಕೆ ಇಳಿಸಿಯೇ ಬಿಡೋಣ ಅಂತ ಕೂತಿದ್ದೀನಿ. ನನ್ನ ಅನಿಸಿಕೆಗಳೂ ಬಹಳಷ್ಟು ಇರುವುದರಿಂದ ಬೇರೆ ಲೇಖನದ ರೂಪದಲ್ಲಿ ಹೇಳೋದು ವಾಸಿ ಅಂತನ್ನಿಸಿ ಪ್ರತ್ಯೇಕವಾದ ಲೇಖನದ ರೂಪದಲ್ಲಿ ಬರೆಯುತ್ತಿದ್ದೇನೆ. ಇದು ನನ್ನ ವೈಯಕ್ತಿಕ ಅನಿಸಿಕೆ ಮತ್ತು ಲೇಖನಗಳಲ್ಲಿದ್ದ ವಿಚಾರಗಳ ಬಗ್ಗೆ ನನ್ನ ಅಭಿಪ್ರಾಯಗಳನ್ನು ವಸ್ತುನಿಷ್ಠವಾಗಿ ಹೇಳುವ ಪ್ರಯತ್ನ ಅಷ್ಟೇ ಹೊರತು "ಯಾರನ್ನೂ ಕುರಿತು" ಆರೋಪವಲ್ಲ/ಉದ್ದೇಶಪೂರ್ವಕ ಟೀಕೆಯಲ್ಲ. ಹಾಗೇನಾದರೂ ಯಾರಿಗಾದರೂ ಅನಿಸಿದಲ್ಲಿ, ನೋವುಂಟುಮಾಡಿದಲ್ಲಿ ದಯವಿಟ್ಟು ಕ್ಷಮಿಸಿ. ನನಗೊಂದು ಪ್ರತಿಕ್ರಿಯೆ ನೀಡಿ, ತಿದ್ದಿಕೊಳ್ಳಲು ಸಿದ್ಧ. ಇನ್ನೊಂದು ವಿಚಾರ, ಎಲ್ಲವನ್ನೂ ಪುಲ್ಲಿಂಗದಲ್ಲೇ ಬರೆದಿದ್ದೇನೆ. ಮಹಿಳೆಯರು ಕೊಂಚ ಸಹಿಸಬೇಕು! ೧. ಶತಮಾನವೇ ಕಳೆದರೂ ಇನ್ನೂ ಕಿಟ್ಟೆಲ್ ನಿಘಂಟು ಕನ್ನಡದ ಅತ್ಯುತ್ತಮ ನಿಘಂಟಾಗಿದೆ ಅನ್ನುವುದು ಕಿಟ್ಟೆಲ್ ಅವರ ಪ್ರತಿಭೆಗೆ ಸಂದ ಗೌರವ ಅಂತ ಮನಸ್ಸು ತಲೆಬಾಗಿದರೂ, ಹೃದಯ "ಅಯ್ಯೋ" ಅಂತನ್ನುತ್ತಿದೆ (ಅಳುತ್ತಿದೆ) Cry. ಇಂಗ್ಲೀಷಲ್ಲಿ ಸರಾಸರಿ ಎರಡು ವರ್ಷಕ್ಕೊಮ್ಮೆ Oxford ನಂತಹ ನಿಘಂಟುಗಳೂ "ಅಪ್‌ಡೇಟ್" ಆಗುತ್ತವೆ. ಹತ್ತಾರು "ಹೊಸ ಪದಗಳು" (ಹೊಸದು ಅಂದರೆ ಸಮಕಾಲೀನವಾದವು, ಈಗಿನ ಕಾಲಕ್ಕೆ ತಕ್ಕಂತೆ ಬಳಸುವಂತಹದ್ದು) ಮುಖ್ಯವಾಹಿನಿಗೆ ಸೇರಿಕೊಳ್ಳುತ್ತವೆ. ನಮ್ಮ ಕನ್ನಡದಲ್ಲಿ?!!! ಈ ಬಗ್ಗೆ ಯಾರಾದರೂ ಚಿಂತಿಸಿದ್ದೀರಾ? ಇದಕ್ಕಿಂತ ದೊಡ್ಡ ಸಾಕ್ಷ್ಯ ಬೇಕೆ, ಕನ್ನಡ ನಿಂತ ನೀರಾಗುತ್ತಿದೆ ಅನ್ನೋದಕ್ಕೆ. ಕಿಟ್ಟೆಲ್ ಅವರ ಬಗ್ಗೆ ತುಂಬು ಗೌರವ ಇದೆ. ಆದರೆ ಅವರ ನಿಘಂಟನ್ನು "ಅಪ್‌ಡೇಟ್ ಮಾಡಲೇಬಾರದು" ಅಂತ ಅವರೇನಾದರೂ ಉಯಿಲು ಬರೆದು ಇಟ್ಟಿದ್ದರೇ? ಇದು ಸಾಧ್ಯ ಆಗುತ್ತಿಲ್ಲ ಯಾಕೆ? ಇತ್ತೀಚಿನ ವರ್ಷಗಳಲ್ಲಿ ಕಿಟ್ಟೆಲ್ ನಿಘಂಟು "ಅಪ್‌ಡೇಟ್" ಆದದ್ದು ನನಗೆ ತಿಳಿದಂತೆ ಇಲ್ಲ.

೨. ಕನ್ನಡ ಸಾಹಿತ್ಯದ ಆರಂಭದಿಂದಲೂ ಪ್ರತಿ ಸಾಹಿತಿಯೂ ತನಗೆ ಬೇಕಾದಾಗ, ಸನ್ನಿವೇಶಕ್ಕೆ, ಅಗತ್ಯಕ್ಕೆ ತಕ್ಕಂತೆ ಪದಗಳನ್ನು ಬಳಸುತ್ತಲೇ ಬಂದಿದ್ದಾನೆ. ಇದು ಆಯಾ ಕೃತಿಕಾರರಿಗೆ ಮತ್ತು ರಸಾಸ್ವಾದನೆಗೆ ಸಂಬಂಧಿಸಿದ ವಿಷಯ. ಹಾಗಂತ ಕನ್ನಡ ಪದಗಳನ್ನು ಹುಡುಕಲಿಲ್ಲ ಅಂತಲ್ಲ. ನಿಘಂಟನ್ನು ಓದುವ ಹವ್ಯಾಸ ನನಗೂ ಸ್ವಲ್ಪ ಮಟ್ಟಿಗಿದೆ. ಆದರೆ "ಕೆಲವೊಮ್ಮೆ" ನಿಘಂಟಿನಿಂದ ಪದಗಳನ್ನು ಬಳಸಲೇಬೇಕೆಂದು ಬಳಸಿದಲ್ಲಿ ರಸಾಸ್ವಾದನೆಗೆ ಭಂಗವಾದೀತೆಂದು ನನ್ನ ಅನಿಸಿಕೆ. ಒಳ್ಳೆಯದು ಎಲ್ಲಿಂದ ಬಂದರೂ ಸ್ವೀಕರಿಸೋಣ. ಅದರಲ್ಲಿ ಹಿಂಜರಿಕೆ, ತಪ್ಪಿತಸ್ಥ ಮನೋಭಾವ ಯಾಕೆ? ಈ ರೀತಿಯ ಪ್ರಯತ್ನಗಳು (ಶುದ್ಧ ಕನ್ನಡ ಪರ್ಯಾಯ ಪದಗಳ ಬಳಕೆ) ನಿಧಾನವಾಗಿ ಪ್ರಾರಂಭವಾಗಿ, ಕ್ರಮೇಣ ರೂಢಿಗೆ ಬರಬೇಕೆ ಹೊರತು ಒಮ್ಮೆಗೇ ಹಿಂದಿನ ಎಲ್ಲವನ್ನೂ ತಿರಸ್ಕರಿಸಬೇಕು ಎಂದಲ್ಲ. ಎಲ್ಲಕ್ಕಿಂತ ರಸಾಸ್ವಾದನೆ ಮತ್ತು ಸಂವಹನ ಮುಖ್ಯ ಅಂತ ನನ್ನ ಭಾವನೆ. ಹಾಗಂತ ಕನ್ನಡ ತನ್ನ ಸ್ವಾಭಿಮಾನ ಕಳೆದುಕೊಳ್ಳಬೇಕು ಅಂತ ನಾನು ಖಂಡಿತ ಹೇಳುತ್ತಿಲ್ಲ. ನಾನೂ ಒಬ್ಬ "ಹದಿನಾರಾಣೆ ಕನ್ನಡಿಗ". ಉದಾಹರಣೆಗೆ ಆಂಡಯ್ಯನವರ "ಕಬ್ಬಿಗರ ಕಬ್ಬ" ಸಂಪೂರ್ಣ ಕನ್ನಡದ ಕೃತಿ ಅಂತ ಹೇಳುತ್ತಾರೆ. ಆದರೆ ಯಾಕೆ ಅವರ ನಂತರ ಯಾರೂ ಆ ಪ್ರಯತ್ನವನ್ನು ಪದೇ ಪದೇ (ಇನ್ನಷ್ಟು ದೊಡ್ಡ ಮಟ್ಟದಲ್ಲಿ) ಮಾಡಲಿಲ್ಲ? ಅಥವಾ ಆ ಒಂದು ಕೃತಿ ಕೂಡ ಯಾಕೆ ನಮ್ಮನ್ನು "ಗದುಗಿನ ಭಾರತ", ವಚನಗಳು, ದಾಸಸಾಹಿತ್ಯಗಳಷ್ಟು ಆವರಿಸಲಿಲ್ಲ? (ನಾನು ಕೇವಲ ಜನಪ್ರಿಯತೆಯ ಮಾನದಂಡವನ್ನಿಟ್ಟುಕೊಂಡು ಹೇಳುತ್ತಿಲ್ಲ) ನೀವೇ ಹೇಳಿ? ದಯವಿಟ್ಟು ತಪ್ಪು ತಿಳಿಯದಿರಿ, ನಾನು ಆಂಡಯ್ಯನವರ ಕಾವ್ಯದ ಬಗ್ಗೆ ಟೀಕಿಸುತ್ತಿಲ್ಲ. ಆ ಮಟ್ಟಿಗಿನ ಪಾಂಡಿತ್ಯ/ಅರ್ಹತೆ ನನಗಿಲ್ಲವೇ ಇಲ್ಲ. ಇರುವ ವಿಚಾರ ಹೇಳುತ್ತಿದ್ದೀನಿ ಅಷ್ಟೇ.  ಮುಂದೆ ಓದಿ »

  • ಸಾಹಿತ್ಯ, ಭಾಷೆ
~.~
  • 3 ಪ್ರತಿಕ್ರಿಯೆಗಳು
  • 747 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕರ್ನಾಟಕದಲ್ಲೇ ಎಳ್ಳು-ಬೆಲ್ಲಕ್ಕೆ ಎಳ್ಳು-ನೀರು?

January 7, 2007 - 12:16pm — Shyam Kishore

ಆತ್ಮೀಯ ಸಂಪದಿಗರೇ,

ನಿನ್ನೆ ತಾನೇ ಒಂದು ಆಘಾತಕಾರೀ ಸುದ್ದಿ ಓದಿದೆ. ನಮ್ಮ ಕನ್ನಡನಾಡಿನಲ್ಲಿ ಸಂಕ್ರಾಂತಿ ಒಂದು ಪ್ರಮುಖ ಹಬ್ಬ. ಅದಕ್ಕೆ ನಮ್ಮ ನೆಲದ ಸೊಗಡು ಮತ್ತು ಇತಿಹಾಸ ಎರಡೂ ಇವೆ. ಇಂತಹ ಸಂಕ್ರಾಂತಿಗೆ, ನಮ್ಮ ರಾಜಧಾನಿ ಬೆಂಗಳೂರಿನಲ್ಲೇ, ನಮ್ಮದೇ ನೆಲದ ಕಂಪನಿಯೊಂದು, ರಜೆ ಘೋಷಿಸಿಲ್ಲವಂತೆ. ಪೂರ್ತಿ ಸುದ್ದಿ ಓದಿ ನೋಡಿ: ಎಳ್ಳು-ಬೆಲ್ಲಕ್ಕೆ ಎಳ್ಳು-ನೀರು! ಅದಕ್ಕೆ ಬದಲಾಗಿ ಓಣಂ ಹಬ್ಬಕ್ಕೆ ರಜೆಯಂತೆ.  ಮುಂದೆ ಓದಿ »

  • ಸುದ್ದಿ, ಸಮಾಚಾರ
~.~
  • ೧ ಪ್ರತಿಕ್ರಿಯೆ
  • 623 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಹೊಸದಾಗಿ ಸೇರಿಸಿದ "ನುಡಿಮುತ್ತುಗಳ" ಬಗ್ಗೆ

December 29, 2006 - 6:24am — Shyam Kishore

ಸಂಪದ ಆಡಳಿತ ಮಂಡಳಿಯವರಿಗೆ,

ನಾನು ಇತ್ತೀಚಿಗೆ ೫-೬ ನುಡಿಮುತ್ತುಗಳನ್ನು ಸಂಪದಕ್ಕೆ (ನುಡಿಮುತ್ತುಗಳು ವಿಭಾಗಕ್ಕೆ) ಸೇರಿಸಿದೆ. ಇವತ್ತು ಅವುಗಳನ್ನು ಒಮ್ಮೆ ನೋಡೋಣ ಅಂತ ಪ್ರಯತ್ನಿಸಿದೆ. ಆದರೆ ಎಲ್ಲೂ ಅವು ಕಾಣಸಿಗಲಿಲ್ಲ. ಏಕಿರಬಹುದು ಅಂತ ಹೇಳುತ್ತೀರಾ?  ಮುಂದೆ ಓದಿ »

  • Feedback
~.~
  • ೧ ಪ್ರತಿಕ್ರಿಯೆ
  • 653 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • rashmi_pai
    ಉ: ಭಾಷಾನುವಾದವೇನು?
    November 23, 2008 - 10:27pm
  • ASHOKKUMAR
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 23, 2008 - 10:14pm
  • srikanth
    ಉ: ಓಶೋ ಕಂಡಂತೆ ಗಾಂಧಿ!
    November 23, 2008 - 9:53pm
  • muralihr
    ಉ: ಸಾರ್ಥಕ ಜೀವನ:
    November 23, 2008 - 9:29pm
  • sandhya.darshini
    ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?
    November 23, 2008 - 9:28pm
  • cmariejoseph
    ಉ: ಭಾಷಾನುವಾದವೇನು?
    November 23, 2008 - 9:05pm
  • gurubaliga
    ಉ: ಭಾಷಾನುವಾದವೇನು?
    November 23, 2008 - 8:57pm
  • palachandra
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 23, 2008 - 7:04pm
  • palachandra
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 23, 2008 - 7:04pm
  • palachandra
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 23, 2008 - 7:02pm
ಇನ್ನಷ್ಟು


ನಂಬಿದಂತಿರಬೇಕು, ನಂಬದಲೆ ಇರಬೇಕು |
ನಂಬಿದವ ಕೆಟ್ಟ ಸರ್ವಜ್ಞ ||

— ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator