ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಲೇಖನ: "ಈ ನೀರು ಕುಡದ್ರ ಉಚ್ಚಿ ಕುಡಧಾಂಗ ಆಗತೈತಿ ನೋಡಪಾ..!"

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ › User account

Shivakumar.Revadi (ಲೇಖನಗಳು)

ನಮ್ಮ ಮಗುವಿಗೊಂದು ಹೆಸರಿಡಿ

June 18, 2008 - 10:52pm — Shivakumar.Revadi

ಆತ್ಮೀಯ ಸಂಪದಿಗರಿಗೆಲ್ಲಾ ನನ್ನ ನಮಸ್ಕಾರಗಳು..................
ಈಗ ನಿಮ್ಮೊಂದಿಗೆ ನನ್ನ ಸಂತೋಷ ಹಂಚಿಕೊಳ್ಳುವ ಸಮಯ.
ನಮ್ಮ ಜೀವನದಲ್ಲಿ ಮತ್ತೊಂದು ಜೀವ ಸೇರ್ಪಡೆಯಾಯಿತು.
ನಾನು ಮತ್ತೊಂದು ಹೆಣ್ಣು ಮಗುವಿನ ತಂದೆಯಾದೆ.
ತಾಯಿ ಮತ್ತು ಮಗು ಆರೊಗ್ಯವಾಗಿದ್ದಾರೆ.
ಈಗ ಬಂತು ಸಮಸ್ಯೆ "ಮಗುವಿಗೊಂದು ಹೆಸರು".  ಮುಂದೆ ಓದಿ »

~.~
  • Login or register to post comments
  • 189 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಜನಪದ ಕಥೆ

May 13, 2008 - 6:22pm — Shivakumar.Revadi

ಒಂದು ಜಾನಪದ ಕತೆ  ಮುಂದೆ ಓದಿ »

  • ಜನಪದ ಸಾಹಿತ್ಯ
~.~
  • Login or register to post comments
  • 397 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ನಶಿಸುತ್ತಿರುವ ಶಬ್ದ ಬಳಕೆ

May 11, 2008 - 4:28pm — Shivakumar.Revadi

ನಮ್ಮ ಪೀಳಿಗೆಯಲ್ಲಿ ಯತೆಚ್ಚವಾಗಿ ಬಳಕೆಯಲ್ಲಿದ್ದ ಎಷ್ಟೊ ಶಬ್ದಗಳು ಇಂದು ತುಂಬಾ ವಿರಳವಾಗಿ ಬಳಕೆಯಲ್ಲಿವೆ ಅಥವಾ ಗ್ರಾಂಥಿಕ ರೂಪ ಪಡೆದಿವೆ, ಹಳ್ಳಿಯ ಜನಪದರೂ ಕೂಡ ದೂರದರ್ಶನದ ಪ್ರಭಾವದಿಂದ ಈ ಶಬ್ದಗಳನ್ನು ಗ್ರಾಂಥಿಕ ರೂಪದಲ್ಲಿ ಬಳಸುತ್ತಿದ್ದಾರೆ. ಮುಂದಿನ ಪೀಳಿಗೆ ಈ ಶಬ್ದ ಸಂಪತ್ತಿನಿಂದ ವಂಚಿತವಾಗುತ್ತೆನೊ ಎಂಬ ಆತಂಕ.

ನನ್ನ ನೆನಪಿನಿಂದ ಹೊರಬಿದ್ದ ಕೆಲ ಶಬ್ದಗಳನ್ನು ಪಟ್ಟಿ ಮಾಡಿದ್ದೇನೆ.
೧. ಚಕ್ಕಡಿ
೨. ಹಗೆ (ಧಾನ್ಯ ತುಂಬುವದು)
೩. ಅಗಸಿ ಬಾಗಲಾ
೪. ಬಂಕ/ಚಾವಡಿ
೫. ತತ್ರಾಣಿ
೬. ಹರನಾಳಗಿ
೭. ಜೂಲಾ (ಎತ್ತಿಗೆ ತೊಡಿಸೊ ಕಸೂತಿಮಾಡಿದ ಬಟ್ಟೆ)
೮. ಬೊಲ ಬಗರಿ
೯. ಶ್ಯಾವಗಿ ಮಣಿ  ಮುಂದೆ ಓದಿ »

  • ಪ್ರಚಲಿತ
~.~
  • ೧ ಪ್ರತಿಕ್ರಿಯೆ
  • 532 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರಭಾವ

May 8, 2008 - 3:24pm — Shivakumar.Revadi

ಈ ಕಥೆ ನನ್ನದಲ್ಲಾ, ಯಾವಾಗಲೋ ಕೇಳಿದ್ದು.

ಒಬ್ಬ ಸನ್ಯಾಸಿಯಿದ್ದ, ದಿನವೂ ಊರಿನಲ್ಲಿ ಭಿಕ್ಷೆ ಬೇಡಿ ಬದುಕುತ್ತಿದ್ದಾ, ಯಾರಾದರೂ ಸಮಸ್ಯೆ ತಂದರೆ ತನ್ನ ಕೈಲಾದ ಮಟ್ಟಿಗೆ ಪರಿಹರಿಸುತ್ತಿದ್ದಾ.  ಮುಂದೆ ಓದಿ »

  • ಸಣ್ಣ ಕಥೆ
~.~
  • Login or register to post comments
  • 354 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಗುರಜಿ ಹಾಡು

May 7, 2008 - 2:26pm — Shivakumar.Revadi

ನಾನು ಚಿಕ್ಕವನಿದ್ದಾಗಿನ ನೆನಪು....
ಮುಂಗಾರು ಮಳೆ ಬರುವದು ತಡವಾದರೆ ನಮ್ಮ ಕಡೆ ಗುರಜಿ ಆಡಿಸುವ ಸಂಪ್ರದಾಯ.
ಒಬ್ಬ ಹುಡುಗನನ್ನು ಅರೆಬೆತ್ತಲೆ ಮಾಡಿ (ಅವನೂ ಸಂತೊಷದಿಂದಲೇ ಒಪ್ಪುತ್ತಿದ್ದಾ) ತಲೆಯ ಮೇಲೆ ರೊಟ್ಟಿ ಬಡಿವ ಹಂಚು ಬೋರಲಾಕಿ ಅದರ ಮೇಲೆ ಸಗಣಿ ಗುಳ್ಳವ್ವ ಮಾಡಿ ಆ ಸಗಣಿ ಗುಳ್ಳವ್ವಕ್ಕೆ ಸಲ್ಪ ಹುಲ್ಲು ಸಿಗಿಸಿ ಮನೆ ಮೆನೆಗೆ ಹೋಗಿ ಗುರಜಿ ಹಾಡು ಹಾಡ್ತಾ ಇದ್ವಿ, ಆ ಮನೆಯವರು ಒಂದು ತಂಬಿಗೆ ನೀರನ್ನು ತಂದು ಗುರಜಿ ಮೇಲೆ ಸುರಿಯುತ್ತಿದ್ದರು ಆಗ ಗುರಜಿ ಆದ ಹುಡುಗ ಸಗಣಿ ಕೊಚ್ಚಿ ಹೋಗದಂತೆ ಗುಳ್ಳವ್ವನನ್ನು ಎರಡು ಕೈಯಿಂದ ಮುಚ್ಚಿಕೊಂಡು ತನ್ನ ಮೈ ಸುತ್ತಾ ಸುತ್ತುತ್ತಿದ್ದ ಆಗ ನಾವೆಲ್ಲಾ ಸಂಗಡಿಗರು ಕೆಳಗಿನಂತೆ ಹಾಡು ಹೇಳುತ್ತಿದ್ವಿ.

ಗುರಜಿ...ಗುರಜಿ.....
ಎಲ್ಲಾಡಿ ಬಂದೆ...
ಹಳ್ಳಾ ಕೊಳ್ಳಾ ತಿರುಗಾಡಿ ಬಂದೆ
ಉದ್ದತ್ತಿನ್ಯಾಗಾ ಉರುಳಾಡಿ ಬಂದೆ

ಮ್ಯಾದಾರವ್ವ ಏನ್ ಹಡದಾಳಾ
ಹೆಣ್ನ ಹಡದಾಳ
ಹೆಣ್ಣಿನ ತಲಿಗೆ ಎಣ್ಣಿಲ್ಲೋ ಬೆಣ್ಣಿಲ್ಲೋ

ಕುಂಬಾರಣ್ಣಾ ಮಣ್ಣಾ ತಂದಾನ
ಮಣ್ಣ ಕಲಸಾಕ ನೀರಿಲ್ಲೊ ನಾರಿಲ್ಲೊ  ಮುಂದೆ ಓದಿ »

  • ಜನಪದ ಸಾಹಿತ್ಯ
~.~
  • Login or register to post comments
  • 304 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ
12ಮುಂದಿನ ›ಕೊನೆಯ »

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • rashmi_pai
    ಉ: ಭಾಷಾನುವಾದವೇನು?
    November 23, 2008 - 10:27pm
  • ASHOKKUMAR
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 23, 2008 - 10:14pm
  • srikanth
    ಉ: ಓಶೋ ಕಂಡಂತೆ ಗಾಂಧಿ!
    November 23, 2008 - 9:53pm
  • muralihr
    ಉ: ಸಾರ್ಥಕ ಜೀವನ:
    November 23, 2008 - 9:29pm
  • sandhya.darshini
    ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?
    November 23, 2008 - 9:28pm
  • cmariejoseph
    ಉ: ಭಾಷಾನುವಾದವೇನು?
    November 23, 2008 - 9:05pm
  • gurubaliga
    ಉ: ಭಾಷಾನುವಾದವೇನು?
    November 23, 2008 - 8:57pm
  • palachandra
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 23, 2008 - 7:04pm
  • palachandra
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 23, 2008 - 7:04pm
  • palachandra
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 23, 2008 - 7:02pm
ಇನ್ನಷ್ಟು


ಕುಲಗೆಟ್ಟವರ ಚಿಂತೆ | ಒಳಗಿರ್ಪರಂತಲ್ಲ |
ಕುಲಗೆಟ್ಟು ಶಿವನ ಮರೆಹೊಕ್ಕು ಋಷಿಗಳು |
ಕುಲವಾದರಯ್ಯ ಸರ್ವಜ್ಞ ||

— ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator