Jayalaxmi.Patil (ಬ್ಲಾಗ್ ಬರಹಗಳು)
ನೀಲ ಕಡಲ ಬಾನು
October 20, 2008 - 9:13pm — Jayalaxmi.Patilಸಂಪದ ಸ್ನೇಹಿತರಿಗೆಲ್ಲ ನಮಸ್ಕಾರ. ನನ್ನ ಪುಸ್ತಕ ’ನೀಲ ಕಡಲ ಬಾನು’ವಿನ ಬಿಡುಗಡೆಗೆ ಒಂದಿಷ್ಟು ಜನ ಸಂಪದ ಸ್ನೇಹಿತರು ಬಂದಾರು ಅನ್ನೊ ನಿರೀಕ್ಷೆ ಇದ್ದದ್ದು ಸುಳ್ಳಲ್ಲ. ಒಂದಿಷ್ಟು ಜನ ಅಲ್ಲದಿದ್ದರೂ ಸಂಪದ ಬಳಗದಲ್ಲಿರುವ ಮುಂಬೈನ ಅವಿನಾಶ್ ಕಾಮತ್ (ಅಷ್ಟು ದೂರದಿಂದ ನನಗಾಗಿ ಬಂದ ಅವಿ ನಿಮಗೆ ನನ್ನ ಡಬಲ್ ಸೆಲ್ಯೂಟ್) ಹಾಗೂ ಬೆಂಗಳೂರಿನ ದೀಪಾ ರವಿಶಂಕರ್ ಬಂದು ನನ್ನ ಸಂಭ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಹಾರೈಸಿದರು. ಕಾರ್ಯಕ್ರಮದ ಒಂದು ಭಾಗವಾಗಿ ’ಕವಿತಾಭಿನಯ’ವನ್ನು ಹಮ್ಮಿಕೊಳ್ಳಲಾಗಿತ್ತು. ಆ ಕವಿತಾಭಿನಯದ ರಚನೆ ಅವಿನಾಶ್ ಕಾಮತ್ ಅವರದ್ದಾಗಿತ್ತು. ಅದನ್ನು ಮನೋಜ್ಞವಾಗಿ ದೀಪಾ ಅಭಿನಯಿಸಿದರು. ಅವರಿಬ್ಬರಿಗೂ ಈ ಸಂಪದದ ಮೂಲಕ ನನ್ನ ಮನದಾಳದ ನನ್ನಿ. ನಿಮ್ಮಲ್ಲಿ ಯಾರಾದರು ನನ್ನ ಸಂಭ್ರಮದಲ್ಲಿ ಸದ್ದಿಲ್ಲದೆ ಭಾಗವಸಿ ಹಾರೈಸಿ ಹೋದಿರಾ...? ತಿಳಿಯದು.ಹಾಗೆ ಬಂದವರಾಗಿದ್ದರೆ ಭೇಟಿಯಾಗಬೇಕಿತ್ತು. ನನ್ನ ಸಂಭ್ರಮ ಇಮ್ಮಡಿಯಾಗುತ್ತಿತ್ತು.
’ಅನೇಕ’ ಸಾಂಸ್ಕೃತಿಕ ಸಂಸ್ಥೆ ಈ ಕೃತಿ ಬಿಡುಗಡೆಯ ಜವಾಬ್ದಾರಿಯನ್ನು ಪ್ರೀತಿಯಿಂದ ವಹಿಸಿಕೊಂಡಿತ್ತು.’ಅನೇಕ’ದ ನಿರ್ವಾಹಕರಾದ ಖ್ಯಾತ ರಂಗ ನಿರ್ದೇಶಕ ಶ್ರೀ ಸುರೇಶ್ ಆನಗಳ್ಳಿ, ನನ್ನ ಪುಸ್ತಕ ಬಿಡುಗಡೆಯ ಸಮಾರಂಭವನ್ನು ತಮ್ಮ ಮನೆಯ ಸಂಭ್ರಮ ಎಂಬಂತೆ ನಿರ್ವಹಿಸಿದ ನನ್ನ ಸ್ನೇಹಿತರಾದ, ಅಪೇಕ್ಷಾ,ವಿಶ್ವಾಸ್,ಅಶೋಕ,ಮಲ್ಲಿಕಾರ್ಜುನ,ಸುರಭಿ, ಸುಶ್ಮಿತ,ರಂಜಿತಾ, ರವಿಶಂಕರ್, ಶಾರದ, ಐ.ಎಮ್.ದುಂಡಶಿ, ಭಾಸ್ಕರ್, ಮುಸ್ತಫಾ, ಪ್ರಶಾಂತ್ ಹಾಗೂ ಮುನಿರಾಜು ಅವರುಗಳ ಪ್ರೀತಿ ಅಮೂಲ್ಯ. ಮನೆಯವರೆಲ್ಲರ ಸಹಕಾರ ಅನನ್ಯ...
ನಿಮಗಾಗಿ ಕವನ ಸಂಕಲನದ ಶೀರ್ಷಿಕೆಯ ಕವನ... ಮುಂದೆ ಓದಿ »

ಸಾಧ್ಯವಾದರೆ ಒಮ್ಮ್ಮೆ ನೋಡಿ.
August 31, 2008 - 10:45am — Jayalaxmi.Patil’ಮುಂಬೈ ಮೇರಿ ಜಾನ್’ ಒಂದು ಸದಭಿರುಚಿಯ ಚಿತ್ರ. ಮುಂಬೈ ನನ್ನ ಪ್ರೀತಿಯ ಊರು ಅನ್ನುವ ಕಾರಣಕ್ಕಷ್ಟೆ ಹೇಳುತ್ತಿಲ್ಲ ನಾನು, ೨೦೦೬ರಲ್ಲಿ ಲೋಕಲ್ ಟ್ರೇನ್‍ನಲ್ಲಿ ನಡೆದ ಬಾಂಬ್ ಬ್ಲಾಸ್ಟ್ ನಂತರ ಮುಂಬೈ ಜೀವಗಳ ತಲ್ಲಣಗಳನ್ನು ವೈಭವಿಕರಿಸದೆ ತುಂಬಾ ನೈಜವಾಗಿ ಚಿತ್ರಿಸಿರುವುದು ಇಷ್ಟವಾಯಿತು. ಜೊತೆಗೆ ಎಲ್ಲಾ ಕಲಾವಿದರ ಅಭಿನಯ ಅಭಿನಂದನೀಯ. ಮುಂದೆ ಓದಿ »

ಇನಿಯ
August 21, 2008 - 11:27am — Jayalaxmi.Patilದಾರಿಯ ಕಲ್ಲಲ್ಲ ನನ್ನ
ಮೂಗುತಿಯ ವಜ್ರ ನೀನು
ಕಣ್ಣ ಹೊಳಪೇ ನೀನಾಗಿರುವಾಗ
ಬಾನಂಗಳದ ನಕ್ಷತ್ರವೇಕೆನಗೆ
ಮೊನ್ನೊಮ್ಮೆ ನೋಡುತಲಿದ್ದೆ ಬಾನೆಡೆಗೆ
ಸಂಕೋಚದಿಂದ ಸೆರಗೆಳೆದುಕೊಂಡಿತು
ತಾರೆ ಮುಖಕ್ಕೆ ಯಾಕೆ.... ಎಂದೆ
ಅಷ್ಟೊಂದು ಹೊಳಪೇನು ನಿನ್ನ ಕಣ್ಣಲ್ಲಿ
ಕೇಳಿತು ಅಸೂಯೆಯಿಂದ ಅದು
ನನ್ನಿನಿಯನ ನೆನಪು! ಎಂದೆ
ಕೇಳಿದ ನಕ್ಷತ್ರ ನಲ್ಲನ
ಹುಡುಕ ಹೊರಟಿತು.

ತಳ್ಳಂಕ
July 29, 2008 - 10:16pm — Jayalaxmi.Patilದೊರೆತ ಹರುಷದ ರಭಸಕ್ಕೆ
ಕಳೆದೀತೆಂಬ ಆತಂಕದ ಆಣೆಕಟ್ಟು
ತನ್ನದಾಗಿಯೂ ತನ್ನದಲ್ಲ
ಎಂಬ ಪ್ರಜ್ಞೆಯ ಚಿಟುಗುಮುಳ್ಳು
ಮಧುರ ಸೃತಿಗೆ
ಯಾತನೆಗೆ ಹನಿಗಣ್ಣಾದವಳ
ಕಣ್ಣಲ್ಲಿ, ಹನಿಯಲ್ಲಿ
ಅವನ ಬಿಂಬ
ನೆಲಕ್ಕುರುಳಿ ಚೂರಾದೀತೆಂಬ
ಭಯದಲಿ ರೆಪ್ಪೆ ಹೊದ್ದು
ಅಡಗಿಸಿದಳಾಕೆ.

ತಿಳಿಗೊಳದ ತಳ!
July 8, 2008 - 10:28am — Jayalaxmi.Patilಈ ತಿಳಿಗೊಳ ಕಲಕಿ ತಳ ಅಸ್ಪಷ್ಟವಾದಾಗಲೆಲ್ಲ ಕೊಳದ ಅಲೆ ಅಲೆಯಲ್ಲೂ ನೂರೆಂಟು ಪ್ರಶ್ನೆಗಳ ಹೊಯ್ದಾಟ. ಈ ಹೊಯ್ದಾಟಕ್ಕೆ ಸಮಾಧಾನದ ಬಿಸುಪು ದೊರೆತಲ್ಲಿ ಕೊಳದ ತಳದಲ್ಲಿ ನನ್ನನ್ನು ಅಥವಾ ನಮ್ಮನ್ನು ಹುಡುಕಿಕೊಳ್ಳಬಹುದೇನೊ... ಮುಂದೆ ಓದಿ »








RSS: