Aravinda (ಬ್ಲಾಗ್ ಬರಹಗಳು)
ಅಕ್ಕನ ಮಗಳು ಇಂಜಿನೀರ್ ಆದಾಗ :)
November 20, 2008 - 1:17am — Aravindaಮೊನ್ನೆ ನಾನು ಮಂಗಳೂರಿನ ಅಕ್ಕನ ಮನೆಗೆ ಹೋಗಿದ್ದಾಗ ನಡೆದ ಘಟನೆ.
ಅಕ್ಕನ ಮಗಳಿಗೆ ಈಗ ಮೂರು ವರ್ಷ, ತುಂಬಾ ಅಂದರೆ ತುಂಬಾ ಮಾತಾಡುತ್ತಾಳೆ. ನಾನು ಹೋದಾಗ ಊರಿಂದ ಅಪ್ಪ, ಅಮ್ಮನೂ ಮಂಗಳೂರಿಗೆ ಬಂದಿದ್ದರು.
ನನ್ನ ಅಮ್ಮನ ಮತ್ತು ಅವಳ(ಅಕ್ಕನ ಮಗಳು) ಮಾತುಕಥೆ ಹೀಗಿದೆ
"ನೀನು ದೊಡ್ಡವಳಾದ ಮೇಲೆ ಡಾಕ್ಟರ್ ಆಗ್ತೀಯ? " ಮುಂದೆ ಓದಿ »

ಒಂದು ಸುಳ್ಳು
August 27, 2008 - 11:21pm — Aravindaರಾತ್ರಿ ೧೦ ಗಂಟೆ ಆಗಿತ್ತು, ಆಫೀಸಿನಿಂದ ಬಂದು ಅನ್ನ ಮಾಡಲು ರೆಡಿ ಮಾಡಿದೆ , ಹಾಗೇ ಮನೆಗೆ ಫೋನ್ ಮಾಡಿದೆ.
ಊಟ ಆಯ್ತೇನೋ ಅಂತ ಅಮ್ಮ ಕೇಳಿದ್ಳು. ನಮ್ಮ ಹೊತ್ತಲ್ಲದ ಹೊತ್ತಿನ ರಗಳೆ ಅಮ್ಮಂಗೆ ಹೇಳಿ ಯಾಕೆ ಬೇಜಾರು ಮಾಡೋದು ಅಂತ ಊಟ ಆಯ್ತು ಅಂದೆ...

ಕೆಂಪು Apache ಬೈಕೂ ... ಕಪ್ಪು ಟೀ ಶರ್ಟೂ... ಒಂದು ಕಹಿ ಅನುಭವ
August 10, 2008 - 11:52pm — Aravindaಕಳೆದ ವಾರ WiFi router ತಗೋಳೋಣ ಅಂತ ಆಫೀಸಿಂದ KT Street(ಮೈಸೂರು) ಕಡೆ ಹೊರಟೆ. ಕಾಳಿದಾಸ ರಸ್ತೆ ಯಿಂದ ಬಸ್ ಸ್ಟಾಂಡ್ ಕಡೆ ಹೋಗಲು ಒಂದು ಶಾರ್ಟ್ ಕಟ್ ದಾರಿ ಇದೆ , ಅಲ್ಲಿ ಹೋಗುತ್ತಾ ಇದ್ದೆ. ಒಬ್ಬ ಪೋಲೀಸಿನವ ಅಡ್ಡ ಹಾಕಿ ನಿಲ್ಲಿಸಿದ ಅವರು ಹಾಗೇ ನನ್ನನ್ನು ನೋಡಿ ಮತ್ತೆ ಹೋಗಪ್ಪಾ ಅಂದರು. ಮುಂದೆ ಓದಿ »

ಬೇಸ್ತು ಬಿದ್ದ ಪ್ರಸಂಗ
May 31, 2008 - 3:29pm — Aravindaಇವತ್ತು ಬೆಳಗ್ಗೆ ಬೈಕ್ ಪಂಚರ್ ಆಗಿತ್ತು, ಸರಿ ಮಾಡಿಸಲು ಹೋಗಿದ್ದೆ. ಅಲ್ಲಿ ಅವರು ರಿಪೇರಿ ಮಾಡುತ್ತಿರಬೇಕಾದರೆ ನೋಡುತ್ತಾ ನಿಂತಿದ್ದೆ. ಎಲ್ಲಾ ಮುಗೀತು ಅನ್ನೋ ಅಷ್ಟರಲ್ಲಿ "ಇಲ್ಲಿ ಬನ್ನಿ ಕೂತ್ಕೊಳಿ ಸಾರ್" ಅಂತ ಹೇಳಿದ್ರು. ಇಷ್ಟೊತ್ತೂ ಏನೂ ಹೇಳದಿದ್ದವರು ಈಗ ಕೂತ್ಕೊಳಕ್ಕೆ ಹೇಳ್ತಿದಾರಲ್ಲಾ ಅಂತ ಅಂದುಕೊಂಡು, "ಇರಲಿ ಪರವಾಗಿಲ್ಲ" ಅಂದೆ. ಮುಂದೆ ಓದಿ »

ಲಿನಕ್ಸ್ ಹಬ್ಬದ ಜ್ವರ ಮತ್ತು ಸಡಗರ
May 9, 2008 - 12:09am — Aravindaನಾವು ಲಿನಕ್ಸ್ ಹಬ್ಬ ಮಾಡ್ತಾ ಇದೀವಿ ಅಂತ ಎಲ್ಲರ ಹತ್ರ ಹೇಳ್ಕೊಳೋದೇ ಖುಷಿ ಆಗ್ಬಿಟ್ಟಿತ್ತು. ಜಿಮೈಲಲ್ಲಿ, ಆರ್ಕುಟ್ ಅಲ್ಲಿ ಎಲ್ಲಾ ಕಡೆ ಸ್ಟೇಟಸ್ ಮೆಸೇಜ್ ಹಬ್ಬದ ಬಗ್ಗೆನೇ ! ಮುಂದೆ ಓದಿ »








RSS: