ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಲೇಖನ: "ಈ ನೀರು ಕುಡದ್ರ ಉಚ್ಚಿ ಕುಡಧಾಂಗ ಆಗತೈತಿ ನೋಡಪಾ..!"

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ › User account

ASHMYA (ಲೇಖನಗಳು)

ಸರ್ಪ್ರೈಸ್

March 20, 2008 - 12:33pm — ASHMYA

ಆ ದಿನ ನಾನು ತುಂಬ ಖುಷಿಯಲ್ಲಿದ್ದೆ.ಇವತ್ತಿನಿಂದ ಪಾತ್ರೆ ತೊಳೆಯೊ ರಗಳೆ ಇರೋಲ್ಲ,ನಾಳೆ ಬೆಳಗ್ಗೆ ಲೇಟಾಗಿ ಏಳ್ಬಹುದು,ಅಮ್ಮ ಮಾಡೊ ರುಚಿಯಾದ ಅನ್ನ ಸಾಂಬಾರ್ ತಿನ್ನಬಹುದು.. ಇನ್ನು ಏನೇನೋ.. ಯಾಕಂದ್ರೆ ಊರಿಗೆಂದು ಹೋಗಿದ್ದ ಅಮ್ಮ ಇವತ್ತು ವಾಪಸ್ ಬರ್ತಿದ್ದಾಳೆ.ಬೆಳಿಗ್ಗೆ ಏಳ್ತಾನೆ ಬಂದ ಆಲೋಚನೆ ಅಂದ್ರೆ ಇವತ್ತು ನಾನು ಕಾಲೇಜಿಗೆ ಹೋಗದೆ, ಒಂದು ವಾರದಿಂದ ದಿನಾಲು ಕಾಲೇಜಿಗೆ ಹೋಗುವ ಗಡಿಬಿಡಿಯಲ್ಲಿ ಚೆಲ್ಲಾಪಿಲ್ಲಿ ಮಾಡಿರುವ ಮನೆಯನ್ನು ಒಪ್ಪವಾಗಿ ಇಟ್ಟು, ಅಮ್ಮ ಬಂದ ತಕ್ಷ್ಣಣ ಅವಳಿಗೆ ಸರ್ಪ್ರೈಸ್ ಕೊಡಬೇಕೆಂದು.ಅದನ್ನು ಆಫೀಸಿಗೆ ಹೋಗಿದ್ದ ಅಪ್ಪನಿಗೆ ಕಾಲ್ ಮಾಡಿ ತಿಳಿಸಿದೆ.ಅಪ್ಪ ಸಹ ಒಪ್ಪಿದರು.ಅಮ್ಮನಿಗೆ ಮನೆ ಯಾವಗಲು ಕ್ಲೀನ್ ಅಗಿರಬೇಕು.ಅಂದುಕೊಂಡ ಹಾಗೇನೆ, ನಾನು ಕಾಲೇಜಿಗೆ ಚಕ್ಕರ್ ಹಾಕಿ ಎಲ್ಲ ಪಾತ್ರೆ ತೊಳೆದು,ಬಟ್ಟೆ ಬರೆ ಎತ್ತಿಟ್ಟು, ಮನೆಯನ್ನು ಚೊಕ್ಕವಾಗಿಟ್ಟೆ.ಅಮ್ಮ ಬರೋಕೆ ಇನ್ನ ಸ್ವಲ್ಪ ಹೊತ್ತಿತ್ತು.ನಾನು ಸ್ನಾನ ಮುಗಿಸಿ ರೆಡಿಯಾದೆ.ಅಮ್ಮ ಪಾಪ ಹಸಿದು ಬರ್ತಾಳೆ ಅಂತ ನಾನೆ ಅನ್ನಕ್ಕಿಟ್ಟೆ.ತಿಳಿಸಾರು ಮಾಡಿದೆ.ಇನ್ನು ಅಮ್ಮ ಬರಲೇ ಇಲ್ಲ.ಅದಾಗಲೇ ಘಂಟೆ ಒಂದಾಗಿತ್ತು. ಅಮ್ಮ ಹನ್ನೆರಡಕ್ಕೆ ಬರಬೇಕಿತ್ತು.ಬಸ್ಸು ಸಿಕ್ಕಿಲ್ಲವೇನೊ ಅಥವ, ಲೇಟಾಗಿ ಹೊರಟಳೇನೋ ಅಥವಾ.. ನನ್ನ ಯೋಚನೆಗಳು ನಿಲ್ತಾನೆ ಇರಲಿಲ್ಲ.ನನಗೆ ಅಮ್ಮನನ್ನು ಬಿಟ್ಟರೆ,ಈ ಊರಿನಲ್ಲಿ ಬೇರೆ ಯಾರು ಹತ್ತಿರದವರಿಲ್ಲ.ಶಾಲೆಯ ಗೆಳತಿಯರೆಲ್ಲ,ವರ್ಗವಾಗಿ,ಹೆಚ್ಚಿನ ಓದಿಗಾಗಿ, ಬೇರೆ ಬೇರೆ ಊರುಗಳಿಗೆ ಹೊರಟು ಹೋಗಿದ್ದಾರೆ. ಕಾಲೇಜಿನಲ್ಲಿ ಈಗೀಗ ಸ್ನೇಹಿತೆಯರ ಪರಿಚಯವಾಗುತ್ತಿದೆ.
ಅಮ್ಮ ಯಾಕಿಷ್ಟು ಲೇಟ್ ಮಾಡ್ತಿದಾಳೆ? ಅವಳಿಗೊತ್ತಿಲ್ವ ಇಲ್ಲಿ ನಾನೊಬ್ಬಳೆ ಇರ್ತೀನಿ ಅಂತ.. ಓ.. ಅಮ್ಮನಿಗೇನು ಗೊತ್ತು ನಾನು ಮನೆಯಲ್ಲಿರೊದು? ನಾನು ಕಾಲೇಜಿಗೆ ಹೋಗಿರ್ತೀನಿ ಅಂತ ಲೇಟಾಗೇನೇ ಹೊರ್ಟಿರ್ತಾಳೆ.ನಾನು ಸರ್ ಪ್ರೈ ಸ್ ಕೊಡಬೇಕು ಅಂತ ಅಂದುಕೊಂಡ ದಿವಸಾನೆ ಅಮ್ಮ ಲೇಟಾಗಿ ಹೊರ್ಡ್ಬೇಕಾ. ಛೆ.. ಮನೆ ಬೀಗ ಹಾಕಿದೀನ ನೋಡಿಬಿಡೋಣ,ಹಾಗೆ ಮಶಿನಿಗೆ ಬಟ್ಟೆ ಹಾಕಿಬಿಡೋದು,ಅಮ್ಮ ಬರೊವರೆಗೆ ಬಟ್ಟೆನು ಒಗೆದು ಮುಗಿದಿರುತ್ತೆ. ವ್ಹಾ.. ಇವತ್ತು ಅಮ್ಮ ತುಂಬಾನೆ ಸರ್ಪ್ರೈಸ್ ಆಗ್ತಾಳೆ.  ಮುಂದೆ ಓದಿ »

  • ಸಣ್ಣ ಕಥೆ
~.~
  • 3 ಪ್ರತಿಕ್ರಿಯೆಗಳು
  • 691 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • palachandra
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 23, 2008 - 7:04pm
  • palachandra
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 23, 2008 - 7:04pm
  • palachandra
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 23, 2008 - 7:02pm
  • palachandra
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 23, 2008 - 7:00pm
  • ASHOKKUMAR
    ಉ: ಸಾರ್ಥಕ ಜೀವನ:
    November 23, 2008 - 6:14pm
  • Aravind M.S
    ಉ: ಅಮೆರಿಕಾದ ಕ್ರಾಂತಿ! ಭಾರತದ ಭ್ರಾಂತಿ!
    November 23, 2008 - 5:36pm
  • Aravinda
    ಉ: ನಮ್ಮ ಹಾಸ್ಟೆಲ್ ಹುಡುಗರ ಕಾಫಿ ಯಾತ್ರೆ!
    November 23, 2008 - 2:33pm
  • bvenkatraya
    ಉ: ಅನ್ಯ ರಾಜ್ಯದವರಲ್ಲಿರುವ ಭಾಷಾ ಪ್ರೇಮ ನಮ್ಮಲ್ಲಿ ಯಾಕೆ ಇಲ್ಲಾ?
    November 23, 2008 - 1:51pm
  • bvenkatraya
    ಉ: ಅನ್ಯ ರಾಜ್ಯದವರಲ್ಲಿರುವ ಭಾಷಾ ಪ್ರೇಮ ನಮ್ಮಲ್ಲಿ ಯಾಕೆ ಇಲ್ಲಾ?
    November 23, 2008 - 1:42pm
  • ಮನಹ್ಪಠಲ
    ಉ: ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
    November 23, 2008 - 1:04pm
ಇನ್ನಷ್ಟು


ಅನುಭವದ ಪಾಲೊಳು ವಿಚಾರ ಮಂಥನವಾಗೆ |
ಜನಯಿಕುಂ ಜ್ಞಾನನವನೀತವೆ ಸುಖದಂ ||
ಗಿಣಿಯೋದು ಪುಸ್ತಕಜ್ಞಾನ; ನಿನ್ನನುಭವವೆ |
ನಿನಗೆ ಧರುಮದ ದೀಪ -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator