ASHMYA (ಬ್ಲಾಗ್ ಬರಹಗಳು)
ಟೇಕ್ ಕೇರ್...
August 11, 2008 - 10:49am — ASHMYAtake care ಗೆ ಕನ್ನಡದಲ್ಲಿ ಏನನ್ನಬೇಕು..ನಾನು ಸಾಮಾನ್ಯವಾಗಿ "ಜೋಪಾನ" ಎನ್ನುತಿದ್ದೆ. ಆದ್ರೆ ಇತ್ತೀಚೆಗೆ ಒಂದು ಜಾಹಿರಾತಿನಲ್ಲಿ takecare ಗೆ "ಕಾಳಜಿ ಮಾಡಿರಿ" ಅಂತ ನೋಡಿದೆ. ಅದೇನೋ, ನನಗೆ ಆ ಬಳಕೆ ಹಿಡಿಸಲಿಲ್ಲ.ನಮ್ಮ ಸೊಗಡಿಗೆ ಸರಿಹೊಂದಲಿಲ್ಲ ಅನ್ನಿಸ್ತು. takecare ಅಂತ ಕನ್ನಡದಲ್ಲಿ, ಮನಸ್ಸಿಗೆ ಆಪ್ತವಾಗುವ ರೀತಿ ಹೇಳುವುದು ಹೇಗೆ?

ಫಲಿಸಿದ ಪ್ರೇಮ
July 30, 2008 - 10:05am — ASHMYAಪುಷ್ಪಳ ಅಳು ನಿಲ್ಲೋ ಹಾಗೆ ಕಾಣ್ತಿರ್ಲಿಲ್ಲ.ನಾವು ಬಂದಾಗಿನಿಂದ ಒಂದೆ ಸಮನೆ ಅಳ್ತಾನೆ ಇದ್ದಾಳೆ.ಅವರ ಮಾವ,ಮಾವನ ಮಗ,ಅಪ್ಪ,ಚಂದ್ರು ಎಲ್ಲರ ಎಲ್ಲಾ ಪ್ರಶ್ನೆಗಳಿಗೂ ಅಳುವೊಂದೆ ಉತ್ತರವಾಗಿತ್ತು.ಪಾ..ಪ..ಅವಳೇನು ಮಾಡಿಯಾಳು..ಪ್ರಶ್ನೆಗಳು ಹಾಗೆ ಇದ್ದವು.ಅವರ ಅಪ್ಪ,'ಪುಷ್ಪ,ನಿನಗೆ ನಾನ್ ಬೇಕಾ ಅವನು ಬೇಕಾ?' ಅಂದ್ರೆ,ಚಂದ್ರು,'ಪುಷ್ಪ,ನೀನು ಬೇಡ ಅಂದ್ರೆ ನಾನು ಹೊರಟೋಗ್ತೀನಿ' ಮುಂದೆ ಓದಿ »

- ASHMYA ರವರ ಬ್ಲಾಗ್
- Login or register to post comments
- 217 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಆಟೋ ಹಿಂದಿನ ಬರಹ
April 3, 2008 - 6:47pm — ASHMYA1.ಆಡು ಮುಟ್ಟದ ಸೊಪ್ಪಿಲ್ಲ,ಆಟೊ ನುಗ್ಗದ ಗಲ್ಲಿ ಇಲ್ಲ.
2.ಮಾತೆಯ ಮಾತು ಕೇಳಿದರೆ ತಿರುಗುವ ಭೂಮಿಯೆ ನಿನ್ನ ಕೈಯಲ್ಲಿ,ಪ್ರೇಯಸಿಯ ಮಾತು ಕೇಳಿದರೆ.........?

ಪ್ರಶ್ನೆ
February 6, 2008 - 12:13pm — ASHMYAಎಲ್ಲ ಮರೆತ ಮೇಲೆ..
ಮನಸು ಮುರಿದ ಮೇಲೆ..
ಕಣ್ಣ ಪಸೆ ಆರಿದ ಮೇಲೆ..
ಧುತ್ತೆಂದು ಬಂದು ನಿಂತು,
ಮತ್ತದೇ ನಗು..ನೋಟ..ಮಾತು..
ಮಾಯ....(?)ಮೋಹ..(?)
ಗೆದ್ದೆನೆಂದುಕೊಳ್ಳುವಾಗಲೇ ಸೋಲು..
ಅಥವಾ ಇದೇ ಗೆಲುವಾ?

- ASHMYA ರವರ ಬ್ಲಾಗ್
- Login or register to post comments
- 319 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

RSS: