ಶ್ರೀನಿಧಿ (ಲೇಖನಗಳು)
ಬೆಂಗಳೂರಿನಲ್ಲಿ ಲಿನಕ್ಸ್ ಹಬ್ಬ - ಏನೇನಿದೆ?
March 25, 2008 - 10:44pm — ಶ್ರೀನಿಧಿ![]()
ಓಂಶಿವು ಅವರ ಲೇಖನ ನೀವೆಲ್ಲರೂ ನೋಡಿದ್ದೀರ ಎಂದುಕೊಂಡಿದ್ದೇನೆ. ಇಲ್ಲ ಎಂದರೆ ಇಲ್ಲಿ ನೋಡಿ.
ಈ ಲಿನಕ್ಸ್ ಜಾತ್ರೆಯಲ್ಲಿ
ಏನೇನಿರುತ್ತದೆ ? ಈ ಲಿನಕ್ಸ್ ಹಬ್ಬ ಎಂದರೆ ಏನು ? ಏನು ಮಾಡುತ್ತೀರ ಇಲ್ಲಿ ಅಂತ ಬಹಳ ಜನ ಕೇಳ್ತಿದ್ದಾರೆ.
ಈ ಹಬ್ಬದಲ್ಲಿ ನಾವು,
೧. ನಿಮ್ಮ ಲ್ಯಾಪ್ಟಾಪ್/ಡೆಸ್ಕ್ಟಾಪ್ ನಲ್ಲಿ ಲಿನಕ್ಸ್ ಹಾಕಿಕೊಳ್ಳುವುದು ಹೇಗೆ ಅಂತ ತೋರಿಸುತ್ತೇವೆ.
೨. ಲಿನಕ್ಸಿನಲ್ಲಿ ಕನ್ನಡ ಬರೆಯುವುದು ಹೇಗೆ ಮತ್ತು ಕನ್ನಡ ಓದುವುದು ಹೇಗೆ? ತೋರಿಸುತ್ತೇವೆ
೩. ನೀವು ತಂದಿರುವ ಲ್ಯಾಪ್ಟಾಪ್/ ಡೆಸ್ಕ್ಟಾಪ್ ನಲ್ಲಿ ನಿಮ್ಮ ಮುಂದೆಯೇ ಲಿನಕ್ಸ್ ಹಾಕಿಕೊಡುತ್ತೇವೆ.
೪. ನೀವು ಒಂದು ಖಾಲಿ ಸಿ.ಡಿ ತಂದರೆ ನಮ್ಮ ಬಳಿ ಇರುವ ಲಿನಕ್ಸಿನ ಒಂದು ಕಾಪಿ ನಿಮಗೂ ಕೊಡುತ್ತೇವೆ. (ಇದು ಪೈರಸಿ ಆಗೋಲ್ಲ!! ನೀವೂ ಆ ಸಿಡಿಯನ್ನ ಬೇರೆಯವರಿಗೆ ಹಂಚಬಹುದು!)
೫. ನಿಮ್ಮ ಯಾವುದೇ ಲಿನಕ್ಸ್ ಮತ್ತು ಕನ್ನಡ ಫಾಂಟ್ ಪ್ರಶ್ನೆಗೆ ಉತ್ತರ ಹೇಳಲು ನಾವು ತಯಾರಿರುತ್ತೇವೆ. ಮುಂದೆ ಓದಿ »

ಗೂಗಲ್ ನವರಿಂದ ಹೊಸ ತಂತ್ರಜ್ಞಾನ!!
April 2, 2007 - 5:57am — ಶ್ರೀನಿಧಿಗೂಗಲ್ ನವರು ಏನಾದರೊಂದು ಹೊಸತು ಮಾಡುತ್ತಲೇ ಇರುತ್ತಾರೆ. ಈ ಬಾರಿಯಂತೂ ಬೇರೆ ಯಾರೂ ಯೋಚನೆ ಮಾಡಲಾಗದಂತಹ ತಂತ್ರಜ್ಞಾನ ಹೊರತಂದಿದ್ದಾರೆ. ಬ್ರಾಡ್‍ಬ್ಯಾಂಡ್ ಅತ್ಯಂತ ತುಟ್ಟಿಯಾಗಿರುವ ಈ ಕಾಲದಲ್ಲಿ ಬಿಟ್ಟಿ internet ಕೊಡುವುದು ಆಶ್ಚರ್ಯ. ಅದೂ ಎಲ್ಲರ (ಪಾಶ್ಚಾತ್ಯ) ಮನೆಗಳಲ್ಲಿ ಇರುವ ಸಲಕರಣೆ ಉಪಯೋಗಿಸಿ!! ಮುಂದೆ ಓದಿ »

ನಿನಾದ
February 28, 2007 - 9:36am — ಶ್ರೀನಿಧಿಕೊರೆವ ಚಳಿರಾತ್ರಿಯಲ್ಲೂ
ತಾರಸಿಯ ಮೇಲೆ ಬವಳಿಸಿ
ಬೇಸಿಗೆಯ ನೆನಪಿಸುತ್ತಾ
ಮನಕೆ ತಂಪೆರೆದು ಮುಂದೆ ಓದಿ »

- Login or register to post comments
- 528 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಹೀಗೊಂದು ಚಿಂತನೆ
January 7, 2007 - 9:21am — ಶ್ರೀನಿಧಿಮೊನ್ನೆ ನಾನು ತೆಗೆದುಕೊಂಡ ವಿಷಯಗಳಿಗೆ ಗ್ರೇಡುಗಳು ಬಂದಿದ್ದವು. ಹೀಗೆ ಗ್ರೇಡುಗಳು ಬಂದಾಗಲೆಲ್ಲಾ ನನಗೆ ಈ ಪ್ರಪಂಚದ ನಶ್ವರತೆ-ವೈರಾಗ್ಯ ಮುಂತಾದ ಯೋಚನೆಗಳು ಹೆಚ್ಚಾಗುತ್ತವೆ. ಇದೂ ಒಂದು ರೀತಿಯ ಮಸಣ ವೈರಾಗ್ಯ.ಮಹಾಭಾರತ ಯುದ್ಧ ಮುಗಿದ ನಂತರ ಯುಧಿಷ್ಟಿರನಿಗೆ ಆದಂತೆ. ಇರಲಿ.. ಹೆಚ್ಚಿಗೆ ಹರಟೆ ಹೊಡೆಯದೇ ನೇರವಾಗಿ ಮಾತಿಗೆ ಬರುತ್ತೇನೆ.
ಪ್ರಶ್ನೆ:
ಜೀವ (ಅಥವಾ ಆತ್ಮ??) ಎಂದರೆ ಏನು? ಜೀವಿಗೆ ಒಂದೇ ಜೀವವೇ? ಅನೇಕ ಜೀವಗಳು ಸೇರಿ ಉನ್ನತ ಜೀವಿವೇ?
ಒಳನೋಟ:
ಉದಾಹರಣೆಗೆ ಮನುಷ್ಯನನ್ನೇ ತೆಗೆದುಕೊಳ್ಳೋಣ. ಮನುಷ್ಯ ಜೀವಿಸುತ್ತಿದ್ದಾನೆ ಎಂದರೆ ಅವನ ಮುಖ್ಯವಾದ ಎಲ್ಲಾ ಅಂಗಗಳೂ ಕೆಲಸ ಮಾಡುತ್ತಿವೆ ಎಂದರ್ಥ. ಅಂಗಗಳ ಕೆಲಸಕ್ಕೆ ಜೀವಕೋಶಗಳು ಬದುಕಿರಬೇಕು ಅಲ್ಲವೇ? ಜೀವಕೋಶಗಳು ಬದುಕಿವೆ ಎಂದರೆ ಜೀವಾಣುಗಳು ಬದುಕಿರಬೇಕು ತಾನೆ? ಅಷ್ಟಕ್ಕೂ ಜೀವಾಣುಗಳಿಗೆ ಕಾರಣವಾಗುವ ಇಂಗಾಲದ ಅಣು - ಅದರ ಎಲೆಕ್ಟ್ರೊನ್ ಬದುಕಿವೆಯೇ? ಇಲ್ಲ ಎಂದಾದರೆ ಬದುಕಿರದ ವಸ್ತುಗಳು ಸೇರಿ ಬದುಕನ್ನು ಹುಟ್ಟಿಸುತ್ತಿವೆಯೇ?ಎಲ್ಲಿಂದ?ಹೇಗೆ? ಮುಂದೆ ಓದಿ »

ಹನಿ-ಗೆ-ವನ
August 3, 2006 - 1:01am — ಶ್ರೀನಿಧಿಕಾಡಿನಲ್ಲೆಂದೆಂದೂ ಪ್ರೇಮದಾ ಗಂಧ
ನಾಡಿನಲ್ಲಿ ತಾಳ್ಲಾರದ ಹುಚ್ಚು ಜಂಜಾಟ
ಅದಕ್ಕೇ ನನ್ನ ಹುಡುಗಿಗೆ ನಾನೆಂದೆ ಮುಂದೆ ಓದಿ »

- Login or register to post comments
- 661 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

RSS: