ಶ್ರೀನಿಧಿ (ಬ್ಲಾಗ್ ಬರಹಗಳು)
ಗೀತ ಗೋವಿಂದ
April 7, 2006 - 9:48am — ಶ್ರೀನಿಧಿನಾನು ಆಗ ಮೊದಲ ಪದವಿ ಪೂರ್ವ (೧೧ನೇ) ತರಗತಿ ಎಂದು ನೆನಪು. "ಹಂಸಗೀತೆ" ಚಿತ್ರದಲ್ಲಿ ಬಾಲಮುರಳಿಯ ಗೀತಗೋವಿಂದದ ಹಾಡುಗಳನ್ನು ಕೇಳಿ ಪುಳಕಿತನಾಗಿದ್ದೆ. ಸರಿ ಗೀತ ಗೀತ-ಗೋವಿಂದದ ಪುಸ್ತಕಕ್ಕೆ ಹುಡುಕತೊಡಗಿದೆ. ನನ್ನ ಅಜ್ಜಿಯ ಬಳಿ ಗೀತಗೋವಿಂದ ಓದಬೇಕು ಎಂದಾಗ ಅಷ್ಟು ದೊಡ್ಡವನಾಗಿದ್ದೀಯಾ ಎಂದು ನಕ್ಕಿದ್ದರು. ಪುಸ್ತಕವೇನೋ ಸಿಕ್ಕಿತು ಆದರೆ ನನ್ನ ಸೋಮಾರಿತನ ಪುಸ್ತಕವನ್ನು ಮೂಲೆಗೆ ಸರಿಸಿತು. ಮೊನ್ನೆ ಸಂಜಯ್ ಸುಬ್ರಹ್ಮಣ್ಯಂ ಅವರ ಕಛೇರಿ ಕೇಳಿದ ನಂತರ ಆಸಕ್ತಿ ಕೆರಳಿತು. ಅದನ್ನು ಸಂಪದದಲ್ಲಿ ಯಾವ ವರ್ಗಕ್ಕೆ ಸೇರಿಸಬೇಕು ಎಂದು ತೋರದೆ ನನ್ನ ಬ್ಲಾಗಿಗೆ ಹಾಕಲು ನಿರ್ಧರಿಸಿದೆ. ಯಾವ ವರ್ಗಕ್ಕೆ ಸೂಕ್ತ ಎಂದು ತಿಳಿಸಿದರೆ ಅಲ್ಲಿಗೆ ಸೇರಿಸಲು ಸಿದ್ಧ. (ಅಥವಾ ಇದು ಸಂಪದಕ್ಕೆ ಹಾಕಲು ಸೂಕ್ತವೇ ಅಲ್ಲವೇ ಎಂದೂ ತಿಳಿಸಿದರೆ ಒಳ್ಳೆಯದು) ಮುಂದೆ ಓದಿ »

ಮರೆತ ಹಣ್ಣುಗಳು
April 2, 2006 - 12:05pm — ಶ್ರೀನಿಧಿ"I want only strawberry, no apple" ಎಂದು ಇಲ್ಲಿ ಒಂದು ಮಗು ಅಳುತ್ತಿದ್ದಾಗ ನೆನಪಿಗೆ ಬಂದದ್ದು ನಾನು ತಿಂದ ಹಣ್ಣುಗಳಲ್ಲಿ ಎಂದಿಗೂ ಮರೆಯಲಾಗದಂಥದ್ದು, ಸ್ವಲ್ಪವಾದರೂ ಅಪರೂಪ ಎನ್ನುವವು. ಮುಂದೆ ಓದಿ »








RSS: