ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಲೇಖನ: "ಈ ನೀರು ಕುಡದ್ರ ಉಚ್ಚಿ ಕುಡಧಾಂಗ ಆಗತೈತಿ ನೋಡಪಾ..!"

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ › User account

ಶ್ಯಾಮ ಕಶ್ಯಪ (ಲೇಖನಗಳು)

ಅಂತರ್ಜಾಲದಲ್ಲಿ ಸಂಶೋಧನೆಗೆ ಬೇಕಾದ ಉಪಯುಕ್ತ ತಂತ್ರಾಂಶಗಳು

January 4, 2008 - 2:09pm — ಶ್ಯಾಮ ಕಶ್ಯಪ

ಇಂದು ಅಂತರ್ಜಾಲ, ಮುದ್ರಿತ ಮಾಧ್ಯಮ ಮೊಬೈಲುಗಳು ಎಲ್ಲಾ ಕಡೆಯಿಂದಲೂ ಬೇಕಾದ, ಬೇಡವಾದ ಮಾಹಿತಿಗಳು ಸುದ್ದಿಗಳು ಬರುತ್ತಲೇ ಇರುತ್ತವೆ (ಈ ಲೇಖನ ಕೂಡ ಅವುಗಳಲ್ಲಿ ಒಂದು Eye-wink ).
ಈ ಮಾಹಿತಿ ಸ್ಫೋಟವನ್ನು ಸಮರ್ಪಕವಾಗಿ ಎದುರಿಸಿ ಬೇಕಾದದ್ದನ್ನು ಶ್ರಮವಿಲ್ಲದೇ ಹೆಕ್ಕಿ ಮಿಕ್ಕವನ್ನು ಬದಿಗಿಡುವುದು ಒಂದು ಸವಾಲೇ ಸರಿ. ಇದಕ್ಕಾಗಿ ಹಲವು ಉಪಯುಕ್ತ ತಂತ್ರಾಂಶಗಳಿವೆ. ಅವುಗಳಲ್ಲಿ ಎರಡು ತಂತ್ರಾಂಶಗಳನ್ನು ನಾನು ನನ್ನ ಕೆಲಸ ಕಾರ್ಯಗಳಲ್ಲಿ ಉಪಯೋಗಿಸುತ್ತಿದ್ದೇನೆ. ನನಗೆ ಇವು ಹಿಡಿಸಿವೆ, ಉಪಯುಕ್ತವಾಗಿವೆ. ಈ ತಂತ್ರಾಂಶಗಳು ಸಂಪದದ ಇತರ ಓದುಗರಿಗೂ ಉಪಯೋಗಕ್ಕೆ ಬರಬಲ್ಲವು ಎಂಬುವ ಆಶಯದಿಂದ ಇಲ್ಲಿ ಅವುಗಳ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇನೆ.

೧. ನ್ಯೂಸ್‍ರ್ಯಾಕ್: ಇಂದು ಭಾರತದ ಹಲವು ಪತ್ರಿಕೆಗಳು ಅಂತರ್ಜಾಲ ಪ್ರತಿಗಳನ್ನು ಹೊರತರುತ್ತಿವೆ. ಇದರಿಂದ ನಮಗಿಷ್ಟವಾದ ಪತ್ರಿಕೆಗಳನ್ನು ಅಂತರ್ಜಾಲದಲ್ಲಿ ಮುಕ್ತವಾಗಿ ಓದಬಹುದು. ಆದರೆ ಐವತ್ತಕ್ಕೂ ಹೆಚ್ಚಿರುವ ಪತ್ರಿಕೆಗಳನ್ನು ದಿನಾ ಓದುವುದು ಕಷ್ಟವಾಗಬಹುದು. ನಮಗೆ ಬೇಕಾಗಿರುವ ಒಂದೆರೆಡು ವಿಷಯಗಳನ್ನು ಇಡೀ ದಿನಪತ್ರಿಕೆಯಲ್ಲಿ ಹುಡುಕುವುದೂ ದುಸ್ತರವೇ. ಇದಕ್ಕಾಗಿ ಕರ್ನಾಟದವರೇ ಆದ ಸುಬ್ರಮಣ್ಯ ಶಾಸ್ತ್ರಿಗಳು Newsrack ಎನ್ನುವ ಮುಕ್ತ web-solution ಹೊರತಂದಿದ್ದಾರೆ. ಈ ವೆಬ್-ಸೈಟಿನಲ್ಲಿ ನಮಗೆ ಬೇಕಾಗಿರುವ ಪತ್ರಿಕೆಗಳ ಫೀಡ್ (RSS) ಗಳನ್ನು ಆಯ್ಕೆ ಮಾಡಿ, ನಮಗೆ ಬೇಕಾಗಿರುವ ವಿಷಯಗಳ key-word ಪದಗುಂಪುಗಳನ್ನು ರಚಿಸಿ ನಮ್ಮ ಪ್ರೊಫೈಲ್ ರಚಿಸಿಕೊಳ್ಳಬಹುದು. ನ್ಯೂಸ್‍ರಾಕ್ ನಂತರ ನಮ್ಮ ಪ್ರೊಫೈಲಿಗೆ ಹೊಂದುವ ಲೇಖನಗಳನ್ನು ನಾವು ಆರಿಸಿರುವ ಫೀಡ್‍ಗಳಲ್ಲಿ ಹುಡುಕಿ ಅದನ್ನು archive ಮಾಡುತ್ತದೆ. ದಿನದಲ್ಲಿ ಹಲವು ಬಾರಿ ಪತ್ರಿಕೆಗಳ ಫೀಡ್‍ಗಳು update ಆಗುವುದರಿಂದ ಸುಮಾರು ೨೦೦೨ರಿಂದ ಹಿಡಿದು ಇಂದಿನ ವರೆಗೆ ನಿಮಗೆ ಬೇಕಾದ ವಿಷಯದ ಬಗ್ಗೆ ಪ್ರಕಟಿತವಾದ ಲೇಖನಗಳು ತಾನಾಗಿಯೇ archive ಆಗಿರುತ್ತದೆ, ಅದರ RSS ಫೀಡ್ ಕೂಡ ನಿಮಗೆ ಲಭ್ಯವಾಗುತ್ತದೆ. ಉದಾಹರಣೆಗೆ ನಾನು ಕರ್ನಾಟಕದ ಕೃಷಿ ಸಂಬಂಧಿತ ವಿಷಯಗಳನ್ನು ಸಂಗ್ರಹಿಸಲು ಬಳಸುವ ಫೀಡ್ ಇಲ್ಲಿದೆ.  ಮುಂದೆ ಓದಿ »

  • ಜ್ಞಾನವಾಹಿನಿ
~.~
  • 3 ಪ್ರತಿಕ್ರಿಯೆಗಳು
  • 501 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಧರ್ಮಾಂಧತೆಯ ಬಗ್ಗೆ

April 2, 2007 - 1:34pm — ಶ್ಯಾಮ ಕಶ್ಯಪ

ಈ ಲೇಖನವನ್ನು ಒಂದು ವಾರ ಮುಂಚೆಯೇ ಬರೆದು ನನ್ನ ಬ್ಲಾಗ್ಸ್ಪಾಟ್ ಬ್ಲಾಗಿನಲ್ಲಿ ಹಾಕಿಕೊಂಡಿದ್ದೆ. ಆ ಹೊತ್ತಿನಲ್ಲಿ ಸಂಪದ ವಾದವಿವಾದಗಳಿಂದ ತುಂಬಿ ಹೋಗಿತ್ತು. ಅದಕ್ಕೆ ಮತ್ತೊಂದು ವಾದವೇಕೆ ಅಂತ ಸುಮ್ಮನಿದ್ದೆ. ಆದರೆ, ನಿನ್ನೆ ವಿಜಯಕರ್ನಾಟಕದಲ್ಲಿ ಇದೇ ವಿಷಯಕ್ಕೆ ಸಂಬಂಧಿಸಿದ ಮತ್ತೊಂದು ಲೇಖನ (ಮಾಳವಿಕ ಲಿಖಿತ) ಪ್ರಕಟಗೊಂಡದ್ದು ಓದಿ ಕಿರಿಕಿರಿಯಾಯಿತು. ಅದಕ್ಕೆ ಸಂಪದದಲ್ಲಿ ಈ ವಿಚಾರವಾಗಿ ಚರ್ಚ ಸಧ್ಯಕ್ಕೆ ನಡೆಯದೇ ಇರುವುದನ್ನು ಕಂಡು ಇಲ್ಲಿ ಹಾಕುತ್ತಿದ್ದೇನೆ.

ಇತ್ತೀಚೆಗೆ ವಿಜಯಕರ್ನಾಟಕದಲ್ಲಿ, ಹಿಂದೆ ಮುಸ್ಲಿಮರು ಮಾಡಿದ್ದ ಕೃತ್ಯಗಳ ಚರ್ಚೆ, ಆ ಕೋಮಿನ ವಿಚಾರಧಾರೆಯ ಬಗ್ಗೆಯ ಮೌಲಿಕ ನಿರ್ಧಾರಗಳನ್ನು ಮೊದಲೇ ತೆಗೆದುಕೊಂಡು ಬರೆದಿರುವಂತಹ ಹಲವು ಲೇಖನಗಳು ಮೇಲಿಂದ ಮೇಲೆ ಬರುತ್ತಿರುವಂತೆ ತೋರುತ್ತದೆ, ಅಥವ ಅವುಗಳು ಬಂದಾಗ ಜನರು ಇಷ್ಟಪಟ್ಟು ಓದುವುದೇ ಕಾರಣವೇನೋ, ಹಲವು ಜನರ ಬಾಯಿಯಲ್ಲಿ ಈ‌ ವಿಷಯ ಕೇಳಬರುತ್ತಲೇ ಇದೆ. ದು:ಖಕರ ಸಂಗತಿಯೆಂದರೆ, ಹತ್ತಿರವಾಗಿರುವ ಹಲವು ಜನರು ಈ‌ ವಾದಕ್ಕೆ ಮಾರು ಹೋಗಿ, ನೈಸ್ ವನ್ ಅಂತಾನೋ, ಸರಿಯಾಗಿಯೇ ಹೇಳ್ತಾನೆ ಅಂತಾನೋ ಹೊಗಳಿ ಗರ್ವದಿಂದ ತಮ್ಮ ನಿಲುವನ್ನೇ ಬದಲಿಸಿಕೊಳ್ಳುತ್ತಿರುವುದು, ಅದಕ್ಕಿಂತಲೂ ಹೆಚ್ಚಾಗಿ ಇತರರಿಗೂ‌ ಬಲವಂತವಾಗಿ ಈ‌ ಲೇಖನಗಳನ್ನು ಉಣಿಸುತ್ತಿರುವುದು.  ಮುಂದೆ ಓದಿ »

  • ಚಿಂತನೆ
~.~
  • 12 ಪ್ರತಿಕ್ರಿಯೆಗಳು
  • 1126 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಗ್ಲೂರ ತ್ರಾಕ: "ಜಗತ್‍ಸಮರ" - ಭಾಗ ೧

December 30, 2005 - 5:28am — ಶ್ಯಾಮ ಕಶ್ಯಪ

"ಕಸ ಕ್ರೀಪ ಮೇಹೆ ಚರಲ ಸರಟ್ ಸೇ ಕಸ ಸಬೀರ ಗ್ರಿಮ ಪ್ರೆಸ್ತ ಗ್ರಮೇಕ!" - ಪುರಾತನ ಭೃಗೂಚಿ ಭಾಷೆಯ ನಾಣ್ಣುಡಿ  ಮುಂದೆ ಓದಿ »

  • ಸಣ್ಣ ಕಥೆ
~.~
  • 12 ಪ್ರತಿಕ್ರಿಯೆಗಳು
  • 1191 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪಿಸುಮಾತು

August 11, 2005 - 7:32am — ಶ್ಯಾಮ ಕಶ್ಯಪ

ಹಿಡಿವೆ ನಿನ್ನ ನಾ ನಿದಿರೆಯಲಿ
ಮರೆಯಲಾರೆ ನನ್ನನ್ನೀಗ
ಬೇಡುವೆ ನೀನು ಭಯದಲಿ
ಕಪಿಮುಷ್ಟಿಯಿದು ಸರಳವಲ್ಲ
ಎಲುಬುಗಳು ನಿನ್ನವು ಚೂರಾಗುವುದು
ಎನಗೆ ಚಿಂತೆಯಿಲ್ಲ
ಉರಿಯುವುದೀಗ ನಿನ್ನಾತ್ಮ
ನನ್ನ ರೋಷದ ಬೆಂಕಿಯಲಿ
ಮೋಕ್ಷ ದೊರಕಬಹುದು ನಿನಗೂ
ಪಿಸುಗುಟ್ಟಿದಾಗ ನಾ ನಿನ್ನ ಕಿವಿಯಲಿ
ಇದ್ದಾಗ ಕೇಳಲಿಲ್ಲ...
ಈಗ ಆಲಿಸು ನೀ ಹುಲುಮಾನವ

  • ಕಾವ್ಯ ಮತ್ತು ಕವನ
~.~
  • Login or register to post comments
  • 690 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಆತ್ಮಹತ್ಯೆಯ ಸುತ್ತಮುತ್ತ

August 11, 2005 - 7:31am — ಶ್ಯಾಮ ಕಶ್ಯಪ

ಪೋಲು ಮಾಡಲು ಇರುವುದಿಷ್ಟು ಗಳಿಗೆ
ಮುಚ್ಚುತಿಹುದು ನನ್ನ ಯೋಚನೆಗಳ ಮಳಿಗೆ
ಕೆಲಸಕ್ಕೆ ಬಾರದ ಕಸ, ಆಚೆ ಹಾಕಿದ್ದಷ್ಟೇ ಏಳಿಗೆ

ಸಾಧನೆಗಳು ಸಾಧನೆಗಳೋ ಆಕಸ್ಮ್ಕಿಕ ಘಟನೆಗಳೋ ?
ವೀರ, ಈಗ್ಯಾಕೆ ಈ ಯೋಚನೆ,
ನನ್ನ ಅಹಮ್ಮಿಗೂ ಬೇಕು ಸಾಧನೆಗಳ ಸೇವನೆ

ಹೊರಗೆ ತೊಡಲು ಖಾದಿ
ಒಳಗೆ ಹುಳುಕು ದೇಹ, ಕೊಳೆತ ಮನಸ್ಸು
ಸಾಯಲು ಇದು ಒಳ್ಳೆಯ ವಯಸ್ಸು

  • ಕಾವ್ಯ ಮತ್ತು ಕವನ
~.~
  • Login or register to post comments
  • 587 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • muralihr
    ಉ: ಸಾರ್ಥಕ ಜೀವನ:
    November 23, 2008 - 9:29pm
  • sandhya.darshini
    ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?
    November 23, 2008 - 9:28pm
  • cmariejoseph
    ಉ: ಭಾಷಾನುವಾದವೇನು?
    November 23, 2008 - 9:05pm
  • gurubaliga
    ಉ: ಭಾಷಾನುವಾದವೇನು?
    November 23, 2008 - 8:57pm
  • palachandra
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 23, 2008 - 7:04pm
  • palachandra
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 23, 2008 - 7:04pm
  • palachandra
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 23, 2008 - 7:02pm
  • palachandra
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 23, 2008 - 7:00pm
  • ASHOKKUMAR
    ಉ: ಸಾರ್ಥಕ ಜೀವನ:
    November 23, 2008 - 6:14pm
  • Aravind M.S
    ಉ: ಅಮೆರಿಕಾದ ಕ್ರಾಂತಿ! ಭಾರತದ ಭ್ರಾಂತಿ!
    November 23, 2008 - 5:36pm
ಇನ್ನಷ್ಟು


ಅಖಂಡ ಕರ್ನಾಟಕ:
ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ!

ಇಂದು ಬಂದು ನಾಳೆ ಸಂದು
ಹೋಹ ಸಚಿವ ಮಂಡಲ
ರಚಿಸುವುದು ಕೃತಕವಲ್ತೊ
ಸಿರಿಗನ್ನಡ ಸರಸ್ವತಿಯ
ವಜ್ರ ಕರ್ಣಕುಂಡಲ!

— ಕುವೆಂಪು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator