ವೈಭವ (ಚರ್ಚೆಯ ವಿಷಯಗಳು)
ತೊಟ್ಲುಗಾಯಿ, ಬಟ್ಲುಗಾಯಿ ಅಂದರೇನು ? ಗೊತ್ತಾ
June 23, 2008 - 8:53pm — ವೈಭವ
ತೊಟ್ಟಿಲು+ಕಾಯಿ = ತೊಟ್ಟಿಲುಗಾಯಿ =>ತೊಟ್ಲುಗಾಯಿ
ಬಟ್ಟಲು+ಕಾಯಿ = ಬಟ್ಟಲುಗಾಯಿ => ಬಟ್ಲುಗಾಯಿ
ತೊಟ್ಟಿಲು+ಕಾಯಿ = ತೊಟ್ಟಿಲುಗಾಯಿ =>ತೊಟ್ಲುಗಾಯಿ
ಬಟ್ಟಲು+ಕಾಯಿ = ಬಟ್ಟಲುಗಾಯಿ => ಬಟ್ಲುಗಾಯಿ
ಇಲ್ಲಿ ಎರಡು ಒರೆಗಳು ಸೇರಿ ಬೇರೆ ಜೋಡಿಪದವಾಗಿ ಇನ್ನೊಂದು ಅರಿತವನ್ನು ಕೊಡುತ್ತೆ. ಏನದು ಹೊಸ ಅರ್ತ?

- 5 ಪ್ರತಿಕ್ರಿಯೆಗಳು
- 323 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಏನಿದು 'ಅದಿ'?
June 17, 2008 - 8:18am — ವೈಭವಈ ಪದಬಳಕೆಗಳನ್ನು ಗಮನಿಸಿ
೧. ನಿನ್ನ ಪೂಜೆಗೆ ಬಂದೆ ಮಾದೇಸ್ವರ, ಎನ್ನ ಕರುಣದಿ ಕಾಯೋ ಮಾದೇಸ್ವರ (ಕರುಣದಿ =ಕರುಣೆಯಿಂದ)
೨. ಸಕ್ಕದ ಕಬ್ಬಿಣದ ಕಡಲೆ, ಕನ್ನಡ ಸುಲಿದಬಾಳೆಹಣ್ಣಿನಂದದಿ( ಬಾಳೆಹಣ್ಣಿನಂದದಿ = ಬಾಳೆಹಣ್ಣಿನತರ)
ಈ 'ಅದಿ' ಸಂದರ್ಬಕ್ಕೆ ತಕ್ಕಂತೆ ಅರಿತ ಯತ್ವಾಸ ಉಂಟಾಗುತ್ತಾ?

- 5 ಪ್ರತಿಕ್ರಿಯೆಗಳು
- 512 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಕನ್ನಡ ನಾಡಿಗೆ ಒಂದು ಅಯ್ ಅಯ್ ಟಿ(Indian Institute of Technology) ಬೇಕಲ್ಲವೆ?
June 7, 2008 - 9:30pm — ವೈಭವ
ಈಗ ತಾನೆ ಒಂದು ಸುದ್ದಿ ನೋಡಿದೆ. ಅದರಲ್ಲಿ ಕನ್ನಡ ನಾಡಿನಲ್ಲಿ ಅಯ್ ಅಯ್ ಟಿ ಗಾಗಿ ಕೆಲವರು ದೆಲ್ಲಿ ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರಂತೆ.
ನಮ್ಮ ನಾಡಿನಲ್ಲಿ ಇರುವುದು ಒಂದೆ ಅಯ್ ಅಯ್ ಎಸ್ ಸಿ(Indian Institue of Scince IISc). ನಮ್ಮ ನಾಡಿನಲ್ಲಿ ಅದರಲ್ಲೂ ನಡು ಮತ್ತು ಬಡಗು ನಾಡಿನಲ್ಲಿ ಇಂತ ಯಾವ ಕಲಿಕೆಯ ಮತ್ತು ಅರಯ್ಯು ಮಾಡುವ ಕಲ್ಮನೆಗಳಿಲ್ಲ. ಮುಂದೆ ಓದಿ »

(ಏ)ನೆ, (ಏ)ನೊ ಇವು ಕನ್ನಡದಲ್ಲಿ ಹೆಣ್, ಗಂಡು ತೋರುಗಗಳು ??
June 6, 2008 - 10:08pm — ವೈಭವ
ನಮ್ಮ ಮಾತುಗಳು ಹೀಗಿರುತ್ತವೆ
೧. ನಾನ್ ಹೋಗ್ತಾ ಇದ್ದೀನಿ..ನೀನ್ ಬರ್ತೀಯೆನೆ? ( ಇಲ್ಲಿ 'ಏನೆ' ಹೆಣ್-ತೋರುಗ ಒರೆ, ಹೆಣ್ಣಿಗೆ ಕೇಳುತ್ತಿರುವ ವಾಕ್ಯ ಇದು)
೨. ನಾನ್ ಹೋಗ್ತಾ ಇದ್ದೀನಿ ..ನೀನ್ ಬರ್ತೀಯೇನೊ? ( ಇಲ್ಲಿ 'ಏನೊ' ಗಂಡ್-ತೋರುಗ ಒರೆ, ಗಂಡಿಗೆ ಕೇಳುತ್ತಿರುವ ವಾಕ್ಯ ಇದು)
ಮುಂದೆ ಓದಿ »

- 2 ಪ್ರತಿಕ್ರಿಯೆಗಳು
- 165 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಬೊಮ್ಮನಹಳ್ಳಿ, ಹೆಸರ್ಹಿಟ್ಟು, ಹೆಣ್ಹೆತ್ತ, ಬಂದ್ ಹೋಗು, ಸಿಮ್ಹ(ಸಿಂಹ) ಇವೆಲ್ಲ ತಪ್ಪು ಪದಗಳು ಅಲ್ಲವೆ?
May 28, 2008 - 10:21pm — ವೈಭವ
ಈಚೆಗೆ 'ಸುದಾ'ವಾರದೋಲೆಯಲ್ಲಿ 'ಹೆಣ್ಹೆತ್ತ'(ಣ್ ಕ್ಕೆ ಹ ಒತ್ತು) ಪದ ನೋಡ್ದೆ. ಇದು ತಪ್ಪು ಬರಹ.
ನಾವು ಉಲಿಯುವಾಗ 'ಹೆಣ್ಣೆತ್ತ'(ಣ ಗೆ ಣ ಒತ್ತು) ಅಂತನೇ ಉಲಿಯಿವುದು.
ಹಾಗೆಯೆ,
ಬೊಮ್ಮನಳ್ಳಿ, ಹೆಸರಿಟ್ಟು, ಬಂದ್ವೋಗು(ಬಂದೋಗು), ಸಿಮ್ಮ ಅಂತನೇ ಉಲಿಯುವುದು. ಇವೇ ಸರಿಯಾದ ಬರಹ ರೂಪಗಳು
ಮುಂದೆ ಓದಿ »




RSS: