ನೀತಿ
ಹರಿಶ್ಚಂದ್ರನ ದುಃಖವ ನೋಡಿ ಹುಡುಗನೊಬ್ಬ ಕಣ್ಣೀರಿಟ್ಟನು
ದೇವರನ್ನು ಅರಿಯಲು ತರುಣನೊಬ್ಬ ಗುರುವನ್ನರಸಿದನು
ತನ್ನ ಮಹತ್ಸಾಧನೆ ಕಂಟಕವಾಯ್ತಲ್ಲವೆನ್ದು ಮುದುಕನೊಬ್ಬ ಮರುಗಿದನು
ಸತ್ಯ ಸಿಕ್ಕಿತೋ...? ಗೊತ್ತಿಲ್ಲ
ದೇವರನ್ನರಿತನೋ...? ಗೊತ್ತಿಲ್ಲ
ಮನಃಶಾಂತಿ ಸಿಕ್ಕಿತೋ...? ಗೊತ್ತಿಲ್ಲ
ಇತಿಹಾಸದ ಕಾಡಲ್ಲಿ ನೀತಿಯ ಬೇರೂರಿ ಹೆಮ್ಮರಗಳಾಗಿ ನಿಂತರು








RSS: