ಕವನಗಳು

ವಿಧ: ಕವನ
April 24, 2024
ಅಡಿಯನು ಮೆಲ್ಲಗೆ ಇಡುತಿರು ಪ್ರಿಯತಮೆ ದಡವದು ಕೊಂಚ ದೂರವಿದೆ ಹಿಡಿದಿರು ಕರವನು ಬಿಡೆ ನಾ ಜಾರಲು ಕೊಡುವೆನು ವಚನ ನಾ ನಿನಗೆ   ಬಾಳಿನ ಪಯಣದಿ ಬೀಳದೆ ಸಾಗಲು ಜೋಳಿಗೆ ತುಂಬ ಪ್ರೀತಿಯಿದೆ ತಾಳುವ ಭಾವವು ಬಾಳಿಗೆ ಬೇಕಿದೆ ತೋಳನು ಚಾಚಿ ನಿಂತಿರುವೆ   ಒಪ್ಪದಿ ಬಾಚಿದ ಕಪ್ಪಿನ ಕೂದಲು ತಪ್ಪಿಸಿಕೊಂಡ ಮುಂಗುರುಳು ಒಪ್ಪಿದ ಮನಗಳು ತಪ್ಪದೆ ಬೆರೆವವು ತುಪ್ಪದ ಸವಿಯು ಪ್ರೇಮದೊಳು||   -ಪೆರ್ಮುಖ ಸುಬ್ರಹ್ಮಣ್ಯ ಭಟ್ (ಚಿತ್ರ ಕೃಪೆ ವಾಟ್ಸಾಪ್) 
ವಿಧ: ಕವನ
April 23, 2024
ಪುಸ್ತಕವ ತೆರೆದು ಓದುತ ನಲಿಯುತಲಿ ಕಲಿತ ವಿಷಯವು ಮಸ್ತಕದಲಿರಲಿ ಅಜ್ಞಾನವದು ಮನದಿಂದ ದೂರವಾಗುತಲಿ ಪುಸ್ತಕದ ಜ್ಞಾನ ಜಲದಂತೆ ಹರಿದು ಬರಲಿ   ಮೊದಲು ತಲೆಯ ತಗ್ಗಿಸಿ ಓದು ಮತ್ತೆ ಲೋಕದೊಳು ತಲೆಯೆತ್ತಿ ಬಾಳು  ಸನ್ಮಾನ ಗೌರವಗಳು ತಾನಾಗಿ ಬರುವುದು ಬದುಕು ಬಂಗಾರವಾಗುವುದು ಕೇಳು   *ವಿಶ್ವ ಪುಸ್ತಕದ ದಿನ* ಜೈಕಾರ ಹಾಕಿನ್ನು ಕೊಂಡು ಓದುವೆ ಪುಸ್ತಕವ ಅನುದಿನವುಯೆನ್ನು ಪುಸ್ತಕದ ಕೃತಿಸ್ವಾಮ್ಯ ಇರಲಿ ಎಂದೆಂದೂ  ಪ್ರಕಟಿಸಿದ ಪುಸ್ತಕಕೆ ಮನ್ನಣೆ ಸಿಗಲೆಂದು   ದೇಶ ಸುತ್ತುತಲೆ ಪುಸ್ತಕವ ನೋಡು ಜ್ಞಾನ…
ವಿಧ: ಕವನ
April 22, 2024
ಕೊರಗಿ ಕೊರಗಿ ಮನದೆ ಶಶಿಯು ಸೊರಗಿ ಸೊರಗಿ ಕೊಂಚ ಕೊಂಚ ಕರಗಿ ಮುಗಿದು ಕೊನೆಯಲೊಮ್ಮೆ ಶೂನ್ಯ ತಲಪಿದ ಮರುಗಿದಂಥ ಚುಕ್ಕಿ ತಾರೆ ಕರೆದು ಶಶಿಯ ನೋವ ಕಳೆಯೆ ಮೆರೆಯೆ ಮತ್ತೆ ಗುಂಡಗಾದ ಬೆಳಕು ಚೆಲ್ಲಿದ   ಇರುಳ ಲಾಂದ್ರ ಚುಕ್ಕಿ ಚಂದ್ರ ಮರಳೆ ತನ್ನ ಕಾರ್ಯವೆಸಗೆ ಧರಣಿಯಲ್ಲಿ ಮತ್ತೆ ಬಂತು ಸೆಳೆವ ಹುಣ್ಣಿಮೆ ಮರೆಯನೇನು ಹಳೆಯ ಚಾಳಿ ಕೊರಗಿನಲ್ಲಿ ಸವೆಯತೊಡಗಿ ಕರಗಿ ಶೂನ್ಯವಾಗೊ ಚಟದ ಪುನರಾವರ್ತನೆ||   -ಪೆರ್ಮುಖ ಸುಬ್ರಹ್ಮಣ್ಯ ಭಟ್ ಚಿತ್ರ ಕೃಪೆ:  ಅಂತರ್ಜಾಲ 
ವಿಧ: ಕವನ
April 21, 2024
ಮತ್ತೆ ಮತ್ತೇ ಅಲ್ಲೆ ನಿಂತು ಮುಗುಳು ನಗೆಯಾ ಚೆಲ್ಲುತ ಹಿಂದೆ ತಿರುಗೀ ನನ್ನ ನೋಡಿ ಕಣ್ಣು ಕಣ್ಣೂ ಬೆರೆಸುತ   ನನ್ನಲೇನೋ ಬೆಂಕಿ ಹಚ್ಚಿ ದೂರ ಹೋಗೀ ಕುಳಿತೆಯಾ ಒಳಗೆ ಸುಡುತಾ ಬೇಯಲೀಗ ನಗುತ ಸುತ್ತಾ ಸುಳಿದೆಯಾ   ರವಿಯ ಕಿರಣಾ ರಾಶಿಯೊಳಗೆ ಕೇಶರಾಶೀ ಸೇರುತ ಅದರ ರಶ್ಮೀ ನನ್ನ ಮೈಗೆ ತಾಗಿ ಮುತ್ತಾ ಒತ್ತುತ   ನೀನು ಬರದೇ ಇರುಳನಿಲ್ಲಿ ನಾನು ಹೇಗೇ ಕಳೆಯಲಿ ಚಂದ್ರ ತಾರೇ ಚೆಲುವಿನಲ್ಲಿ ನಮ್ಮ ಪಯಣಾ ಸಾಗಲಿ *** ಗಝಲ್ ಬದುಕಿನಲ್ಲಿ ಸವಿಯನು ತಿನಿಸಲೇ ಗೆಳತಿ ಜೀವನದಲ್ಲಿ ಪ್ರೇಮವ ಕುಣಿಸಲೇ ಗೆಳತಿ  …
ವಿಧ: ಕವನ
April 20, 2024
ಹಸಿರಿನ ಗಿಡಮರ ನಶಿಸಲು ತೊಡಗಿವೆ ಬಿಸಿಲಿನ ತಾಪ ಮಿತಿಮೀರಿ ಬಸಿಯುವ ಬೆವರಲಿ ಕುಸಿದಿದೆ ನೆಮ್ಮದಿ ಮುಸುಕಿದೆ ಚಿಂತೆ ಬಾಯಾರಿ   ಮಾತಲಿ ನುಡಿವರು ರೈತಗೆ ಬೆಂಬಲ ಕಾತರದಿಂದ ಕಾದಿಹನು ಭೂತದ ಬಾಯಲಿ ಗೀತೆಯ ಕೇಳುತ ಸೋತಿಹ ಕೃಷಿಕ ನೊಂದಿಹನು   ಮೋಡವು ಮಳೆಯನು ನೀಡದೆ ನಡೆದಿರೆ ಕಾಡಿದೆ ಬುವಿಯ ನೀರಿರದೆ ಮೋಡಿಯ ಮಾತಿಗೆ ಹಾಡಿತು ಹೃದಯವು ತೋಡಿತು ಗುಂಡಿ ಅರಿವಿರದೆ   ಕೃಷಿಕನ ಬಾಳಲಿ ಖುಷಿಯದು ಮೂಡಲಿ ನೊಸಲಲಿ ನೆರಿಗೆ ಬರದಿರಲಿ ಕೆಸರಲಿ ಕರಗಳ ಬೆಸೆಯುವ ರೈತನ ಮೊಸರಿನ ತಟ್ಟೆ ತುಂಬಿರಲಿ||   -…
ವಿಧ: ಕವನ
April 19, 2024
ಈಟಿನ ಗಿಡವಿದು ಚಂದದಿ ಚಿಗುರಿದೆ ಸಾಟಿಯು ಇಲ್ಲದೆ ಸೊಗಸಾಗಿ ತೋಟದಿ ಬೆಳೆಯುವ ಗಿಡಕಿದು ಪೋಷಣೆ ಕಾಟವ ನೀಡದು ಕಳೆಯಾಗಿ   ಕೋಟೆಯ ಸುತ್ತಲು ಕೊಂಚವೆ ಮಣ್ಣಲಿ ನಾಟಿದರಾಯಿತು ಬೆಳೆಯುವುದು ಕೋಟೆಗೆ ಬೇಲಿಯ ರೂಪದಿ ಬೆಳೆದರೆ ದಾಟಲು ಬಿಡದಿಹ ಭದ್ರತೆಯು   ಮಳೆಯಲಿ ದೊರೆಯುವ ನೀರನು ಬಳಸುತ ಬೆಳೆವುದು ತಾನೇ ಚಂದದಲಿ ಬೆಳೆಗಳ ಗಿಡಕಿದು ಉತ್ತಮ ಗೊಬ್ಬರ ಕೊಳೆತಿಹ ಈ ಗಿಡದೆಲೆಗಳಲಿ   ಸಾಕುವ ಸಲಹುವ ಪ್ರೀತಿಯ ಬಯಸದು ಸಾಕೆನುವಷ್ಟರ ಹಸಿರಿಹುದು ಬೇಕಿಹ ಸತ್ವವ ತಾನೇ ಪಡೆವುದು ಶೋಕವ ತೋರದು ಬಸವಳಿದು||   -…
ವಿಧ: ಕವನ
April 18, 2024
ಸೋತಿರುವ ಮುಖದಲ್ಲಿ  ಮಂದಹಾಸ ಮೂಡುವುದೆ ಜಗದ ನಿಯಮಗಳರಿವು ತಿಳಿಯುವುದೇ ಹೇಳು ಮದನ ಮೋರೆಯು ಇಲ್ಲ ಸುಖದ ನನಸದು ವಿಷವೆ ಕನಸ ಗೋಪುರದೊಳಗೆ  ಬಾಳುವೆಯೇ ಹೇಳು   ಹುಟ್ಟಿದಾಕ್ಷಣ ನಗುವು ಸತ್ತಾಗ ಅಳುವೆಲ್ಲ ಕಿತ್ತು ತಿನ್ನುವ ನೋವು ಹೃದಯದಲೇ ಹೇಳು ಬಾಲ್ಯವನು ಕಳೆಯುತಲೆ ಯೌವ್ವನದ ಮೋಹದಲಿ ಮುದ್ದಾದ ಪ್ರಿಯತಮನ ಪಡೆಯುವೆನೇ ಹೇಳು   ತಿರುಗಾಟ ಹುಡುಕಾಟ ನಡೆಯುತಿರೆ ಶನಿಕಾಟ ಜೊತೆಗೆ ಇರುವರ ಕಾಟ ಬದುಕುವೆನೇ ಹೇಳು ಶಿಖರ ದಾಟಿದ ಸಾಲ ತನುಮನವ ಬಂಧಿಸಿರೆ ಚಿತ್ತ ಶಾಂತಿಯು ಹೋಗೆ ಮೌನವಿದೆಯೇ ಹೇಳು  …
ವಿಧ: ಕವನ
April 17, 2024
ರಾಜಕೀಯ... ತಮ್ಮ ತಮ್ಮ ಪಕ್ಷದ ಎಂ ಪಿ ಎಂಎಲ್ಎ ಗಳಿಗೇ ಭಾರೀ ಅನುದಾನ...   ವಿರೋಧ ಪಕ್ಷದ ಪರಮ ಪಾಪಿಗಳಿಗೆ ಉಳಿದಿರುವುದು ಬರೀ ರೋದನ! *** ಬಿಸಿ-ಹಸಿ ಸುಳ್ಳು  ಬಿಸಿ ಬಿಸಿಯಾದ ಹಸಿ ಹಸಿ ಸುಳ್ಳು- ಈ ನಮ್ಮ ಚುನಾವಣಾ ಅಭ್ಯರ್ಥಿಗಳ ಆಸ್ತಿ ಘೋಷಣೆ...   ಮೂಗು ಮುಚ್ಚಿಕೊಂಡು ನಕ್ಕು- ಓಟು ಹಾಕುವುದೊಂದೇ ನಮ್ಮ ಪಾಲಿಗಿರುವ ವ್ಯರ್ಥ ಬವಣೆ! *** ಜಾಣತನ  ರಾಜಕೀಯದಲಿ ಹಣ ಮಾಡುವ ವಿಷಯ ಅಲ್ಲ ಅಷ್ಟು ದೊಡ್ಡತನ...   ಮಾಡಿದ ಸಂಪತ್ತನು ಉಳಿಸಿಕೊಳ್ಳಲು ಅತ್ತಿಂದಿತ್ತ ಹಾರಾಡುವುದೇ ಜಾಣತನ! *** ಇತಿಹಾಸ…
ಲೇಖಕರು: kavitha@ramesh
ವಿಧ: ಕವನ
April 16, 2024
ಉಷೆಯು ನಗುವಲಿ ನಿಶೆಯ ಸರಿಸುತ ಹಸಿರು ವನಸಿರಿ ಚೆಲುವಲಿ ಮಿಸುಪ ಕಾಂತಿಗೆ ಬೆಸನ ಬಯಸುತ ಧಿಷಣ ಕುಶಲದ ನೆಪದಲಿ ಒಂಟಿ ಪಯಣದೆ ಜಂಟಿಯಾಗವೆ ತುಂಟತನವನು ತೋರೆನು ತಂಟೆ ಮಾಡದೆ ನಂಟು ಬಯಸುತ ನೆಂಟನಾಗುವ ಕೋರಿಕೆ ಮುನ್ನ ಮನ್ನಿಸು ಬೆನ್ನ ಹತ್ತಿದೆ ಕೆನ್ನೆ ರಂಗಿಗೆ ಸೋತೆನು ನಿನ್ನ ಕಾಲ್ಗಳ ಹೊನ್ನ ಗೆಜ್ಜೆಯ ಚೆನ್ನ ನಾದವು ಘಲಿರಲಿ ಯಾವ ರಾಗದೆ ಭಾವ ತುಂಬುತ ಜೀವ ವೀಣೆಯ ಮಿಡಿಸಲಿ ನಾವೆ ಪಯಣದೆ ನೀವು ಬೆರೆತರೆ ನೋವ ಮರೆಯುತ ನಲಿಯುವ (ಜಲ ಷಟ್ಪದಿ ಕವನ) ಬೆಸನ = ಅಪ್ಪಣೆ ಧಿಷಣ = ಪ್ರತಿಭಾವಂತ -ಕಾ ವಿ…
ವಿಧ: ಕವನ
April 16, 2024
ಮುಡಿತುಂಬ ಮಲ್ಲಿಗೆಯ ಮುಡಿದಿರುವೆ ನೀ ಚೆಲುವೆ ಕುಡಿನೋಟ ನೀನೇಕೆ ಮರೆಸಿ ನಿಂತೆ ಬಡಿಗೆಯಲಿ ಒಂದೆರಡು ಬಡಿದು ಬಿಡು ಮನ ತಣಿಯೆ ಕಡೆಗಣಿಸಿ ತೆರಳದಿರು ನನ್ನ ಕಾಂತೆ   ಬಂಗಾರದೊಡವೆಯಲಿ ಶೃಂಗಾರಗೊಂಡಿರುವೆ ಸಂಗಾತಿ ನೀನೀಗ ಬಳಿಗೆ ಬಾರೆ ಸಿಂಗಾರಿ ನಿನ್ನಿಂದ ದಂಗಾಗಿ ಹೋಗಿರುವೆ ತಂಗಾಳಿಯಂದದಲಿ ಹಿತವ ತಾರೆ   ಕನಸೆಲ್ಲ ಕೈಗೂಡಿ ನನಸಾಗಿ ಬಂದಿರಲು ಮುನಿಸೇಕೆ ನನ್ನಲ್ಲಿ ಹೇಳು ಚೆಲುವೆ ಮನದೊಳಗೆ ಕುಳಿತಿರುವೆ ಕಣಕಣದಿ ಬೆರೆತಿರುವೆ ಮನದನ್ನೆ ತೊರೆ ಮೌನ ಜೊತೆಗೆ ಬೆರೆವೆ||   -ಪೆರ್ಮುಖ ಸುಬ್ರಹ್ಮಣ್ಯ…