ಈಗಿನಂತೆ 0 ಸದಸ್ಯರು ಮತ್ತು 22 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಅರೆ ಮಲೆನಾಡಿನ ಮಾಗಿ ಹಣ್ಣು 'ಗುಡ್ಡೇ ಗೇರು'
H G Arun kumar Huruli's picture
ಹೆಚ್.ಜಿ.ಅರುಣ ಕುಮಾರ್ ಹುರುಳಿ.
17
Jan
2012
ಬ್ಲಾಗ್ ಬರಹ

ಅರೆ ಮಲೆನಾಡಿನ ಮಾಗಿ ಹಣ್ಣು ಗುಡ್ಡೇ ಗೇರು

...

ಪ್ರತಿಕ್ರಿಯೆಗಳು: 8
ಹಿಟ್ಸ್ : 201
ಬಸ್ ಪ್ರಯಾಣದ ನೆನಪುಗಳು
addoor's picture
ಅಡ್ಡೂರು ಕೃಷ್ಣ ರಾವ್
19
Sep
2011
ಲೇಖನ
             ...
ಪ್ರತಿಕ್ರಿಯೆಗಳು: 7
ಹಿಟ್ಸ್ : 308
ಅನನ್ಯ ಅಲ್ಲಮ ೫ (೨)
csomsekraiah's picture
ಸಿ ಸೋಮಶೇಖರಯ್ಯ
26
Jun
2010
ಪುಟ

 

...
ಪ್ರತಿಕ್ರಿಯೆಗಳು: 0
ಹಿಟ್ಸ್ : 795
ವಾಕ್ಪಥ ೩ ನೇ ಹೆಜ್ಜೆ - ಒಂದು ವರದಿ ಸಂಪದ ಓದುಗರಿಗಾಗಿ ಮಾತ್ರ!
partha1059's picture
ಪಾರ್ಥಸಾರಥಿ
08
May
2011
ಲೇಖನ

ವಾಕ್ಪಥ ೩ ನೇ ಹೆಜ್ಜೆ - ಒಂದು ವರದಿ ಸಂಪದ ಓದುಗರಿಗಾಗಿ  ಮಾತ್ರ!

ಈ ಬಾನುವಾರ ಅಂದರೆ ೨೦೧೧ ರ ಮೇ ತಿಂಗಳ ೮ ರಂದು ವಾಕ್ಪಥ...

ಪ್ರತಿಕ್ರಿಯೆಗಳು: 27
ಹಿಟ್ಸ್ : 629
ಸಹವಾಸ ದೋಷ
hamsanandi's picture
ಹಂಸಾನಂದಿ
05
May
2010
ಬ್ಲಾಗ್ ಬರಹ

ಕಾದ ಕಬ್ಬಿಣದ ಮೇಲೆ ಬೀಳಲು ನೀರಹನಿ ಹೆಸರಿಲ್ಲದಂತಳಿವುದು
ಕಮಲದೆಲೆಯ ಮೇಲೆ...

ಪ್ರತಿಕ್ರಿಯೆಗಳು: 13
ಹಿಟ್ಸ್ : 1,039
ಮತದಾನ .
supreethjburji's picture
26
Jun
2006
ಬ್ಲಾಗ್ ಬರಹ

ಮೊನ್ನೆ ಮೊದಲ ಬಾರಿಗೆ ನನ್ನ ಮತದಾನದ ಗುರುತಿನ ಚೀಟಿ ಮನೆಗೆ ಬಂದಿತ್ತು ! ನನಗೀಗ ಮತದಾನದ ಹಕ್ಕು ಲಭಿಸಿದೆ ಎಂದಾಕ್ಷಣ ಏನೋ ಖುಷಿ , ಅದರ ಜೊತೆಗೆ ಕುತೂಹಲ !

ಖುಷಿ...

ಪ್ರತಿಕ್ರಿಯೆಗಳು: 1
ಹಿಟ್ಸ್ : 1,321
ಯುಗಯುಗಾದಿ ಕಳೆದರೂ ’ಯುಗಾದಿ’ ಕವಿತೆ ಮೆರೆದಿದೆ
h.a.shastry's picture
ಎಚ್. ಆನಂದರಾಮ ಶಾಸ್ತ್ರೀ
15
Mar
2010
ಪುಟ

  ಯುಗಾದಿಯೆಂದರೆ ಬೇವುಬೆಲ್ಲ, ಒಬ್ಬಟ್ಟು (ಹೋಳಿಗೆ), ಪಂಚಾಂಗಶ್ರವಣ ಮತ್ತು ಬೇಂದ್ರೆ ಕವನ.
  ಯುಗಾದಿಯಂದು ಸಂಭ್ರಮ ತರುವುದು ಹೊಸ ವರುಷ. ಜೊತೆಗೆ,...

ಪ್ರತಿಕ್ರಿಯೆಗಳು: 7
ಹಿಟ್ಸ್ : 1,181
ಎಲ್ಲ ಕೊಟ್ಟವನ ವಿರುದ್ಧ ದಂಗೆ ಏಳುವದು ಹರಾಮಿಕೋರತನವಾಗುತ್ತದೆ
uday_itagi's picture
ಉದಯ್ ಇಟಗಿ
15
Mar
2011
ಲೇಖನ

ಲಿಬಿಯಾದಲ್ಲಿ ಈ ಎಲ್ಲ ಗಲಾಟೆ ಶುರುವಾಗುವದಕ್ಕೆ ಎಂಟು ದಿನ ಮುನ್ನವೇ ನಾನು ಹದಿನೈದು ದಿನದ ಮಟ್ಟಿಗೆ ನನ್ನ ಮಧ್ಯಂತರ ರಜೆಯ ಮೇರೆಗೆ ಭಾರತಕ್ಕೆ ಬಂದಿಳಿದಿದ್ದೆ. ಅಸಲಿಗೆ ನಾನು...

ಪ್ರತಿಕ್ರಿಯೆಗಳು: 14
ಹಿಟ್ಸ್ : 750
ಆಧುನಿಕತೆಯ ರೋಗಗಳು
skakkilaya's picture
ಡಾ| ಶ್ರೀನಿವಾಸ ಕಕ್ಕಿಲ್ಲಾಯ
06
Nov
2006
ಬ್ಲಾಗ್ ಬರಹ

'ನಾವು ಮನುಷ್ಯರಯ್ಯ, ಪ್ರಾಣಿಗಳಲ್ಲ'. ಅದರಲ್ಲೇಕೆ ಸಂಶಯ? ನಾವು ಪ್ರಾಣಿಗಳಲ್ಲವೆಂದೋ ಅಥವಾ ಪ್ರಾಣಿಗಳಿಗಿಂತ ಮಿಗಿಲೆಂದೋ ಹೇಳಿಕೊಳ್ಳದಿದ್ದರೆ ನಮ್ಮ ಅಹಮ್ಮಿಗೆ ಸಂತೃಪ್ತಿ...

ಪ್ರತಿಕ್ರಿಯೆಗಳು: 0
ಹಿಟ್ಸ್ : 2,117
೯೦ರ ತೆನೆ: ಇನ್ನುಳಿದ ದಿನಗಳ ಸಾರ್ಥಕ ಬದುಕಿಗಾಗಿ
Shivashankar Rao's picture
Addoor Shivashankar Rao
01
Mar
2012
ಲೇಖನ

ತೊಂಬತ್ತು ವರುಷ ವಯಸ್ಸು ತುಂಬುತ್ತಿದೆ ನನಗೆ. ನಾನು ಸಾಕಷ್ಟು ದೀರ್ಘ ಕಾಲ ಬದುಕಿದ್ದೇನೆ ಅನಿಸುತ್ತದೆ. ಹಲವು ವ್ಯಕ್ತಿಗಳ ಸಾವಿನ ಸುದ್ದಿ ಓದಿದಾಗ ಅಥವಾ ಕೇಳಿದಾಗ, ನಾನು...

ಪ್ರತಿಕ್ರಿಯೆಗಳು: 9
ಹಿಟ್ಸ್ : 251

ಆಯ್ದ ಲೇಖನಗಳು

ಅಡ್ಡೂರು ಕೃಷ್ಣ ರಾವ್
(1 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
Addoor Shivashankar Rao
(1 ಪ್ರತಿಕ್ರಿಯೆ)
ಶ್ರೀಪತಿ ಮ. ಗೋಗಡಿಗೆ
(21 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)

ನೀನಿಲ್ಲದಿದ್ದಾಗ...

ನೀನಿಲ್ಲದಿದ್ದಾಗ...

ಅ೦ದು, ಬಾಳಿನಲಿ ಬೆಳಕಿಲ್ಲದಿದ್ದಾಗ ನೀನಿದ್ದೆ, ರವಿಯ ಒ೦ದು ಕಿರಣದ೦ತೆ, ಘಾಡಾ೦ಧಕಾರ ತು೦ಬಿದ ಗವಿಯಲಿ ಬೆಳಕಿ೦ಡಿಯ೦ತೆ, ಜೀವವಿಲ್ಲದಾ ಜಗತ್ತಿಗೆ, ಜೀವದ ಸಿ೦ಚನ ಸಿ೦ಪಡಿಸಲು ಅ೦ದು, ಜೀವನ ಮರುಭೂಮಿಯ೦ತೆ ಬರಡಾದಾಗ ನೀನಿದ್ದೆ, ತಿಳಿನೀರ ಕೊಳದ೦ತೆ, ಗಿರಿ ಶಿಖರಗಳಿ೦ದ ಹರಿವ ಝರಿಯ೦ತೆ, ಬಿರುಕಾಗಿ ಬರಡಾದ, ಜೀವವಿಲ್ಲದಾ ಜಗತ್ತಿಗೆ, ಜೀವದ ಸಿ೦ಚನ ಸಿ೦ಪಡಿಸಲು ಅ೦ದು, ಕಡು ಸೂರ್ಯ ಕೆ೦ಪಾಗಿ ಸುಡುವಾಗ ನೀನಿದ್ದೆ, ಚ೦ದಿರನ ತ೦ಪು ಕಿರಣದ೦ತೆ, ಹಿತವಾದ ಸ೦ಜೆಯ ತ೦ಗಾಳಿಯ೦ತೆ, ಸುಟ್ಟು ಕಪ್ಪಾದ ಭೂಮಿಗೆ ತ೦ಪನ್ನೆರೆಯಲು, ಜೀವವಿಲ್ಲದಾ ಜಗತ್ತಿಗೆ, ಜೀವದ ಸಿ೦ಚನ ಸಿ೦ಪಡಿಸಲು ಇ೦ದು, ರವಿಯ ಆ ಕಿರಣವಿದೆ, ತಿಳಿನೀರ ಕೊಳದ ಆ ಹನಿಯಿದೆ, ಗಿರಿಶಿಖರದಲಿ ಹರಿವ ಆ ಝರಿಯಿದೆ, ಚ೦ದಿರನ ಬೆಳದಿ೦ಗಳಿದೆ, ತ೦ಪಾದ ಸ೦ಜೆಯ ತ೦ಗಾಳಿಯಿದೆ, ಆದರೆ, ನೀನಿಲ್ಲ ನೀನಿಲ್ಲದಾ ಈ ಎಲ್ಲಾ ಜೀವವಿರುವ ಈ ಜಗತ್ತಿನಲಿ ಜೀವವಿರದ ಕಣಗಳು ಹಾಗೂ ನಾನು.
No votes yet
1500 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
Sunil Jayaprakash's picture
09
Jan
2006
9:44
ಹೃದಯ ಗೀತೆ ಹಾಡುತಿದೆ, ಭೂಮಿ ಸ್ವರ್ಗವಾಗಿದೆ. ಅಲ್ಲಲ್ಲ
ವಿರಹ ಗೀತೆ ಹಾಡುತಿರೆ, ಭೂಮಿ ಬೇಡವಾಗಿದೆ.

ಇದನ್ನು ನೋಡಿದರೆ, ಪ್ರಿಯಕರನೊಬ್ಬ ತನ್ನ ಪ್ರೇಯಸಿಯ ಕಳಕೊಂಡು ತೋಡಿಕೊಂಡ ವಿರಹಗೀತೆಯೆನಿಸುತ್ತಿದೆ. ಹೌದೆ. ಏಕೆಂದರೆ ತಂಗಾಳಿ, ಬೆಳದಿಂಗಳು ಗೆಳತಿಯ ಲಕ್ಷಣಗಳು.

ಹಾಗೆಯೇ ಪ್ರೇಯಸಿ ತನ್ನ ಪ್ರಿಯನಿಗಾಗಿ ಯಾವ ರೀತಿ ಹಾಡಬಹುದು.
ಇದು ಪ್ರಿಯಕರನೊಬ್ಬ ಬರೆದದ್ದೆ ಆದರೆ, ನೋಡಿ
ಗೆಳತಿಯನ್ನು ರವಿಯ ಕಿರಣ, ತಿಳಿನೀರ ಕೊಳದ ಆ ಹನಿ, ಗಿರಿಶಿಖರದಲಿ ಹರಿವ ಆ ಝರಿ, ಚ೦ದಿರನ ಬೆಳದಿ೦ಗಳು ಹೊಲಿಸಬಹುದು. ಇಲ್ಲೊಂದು ಅಂಶ ಗಮನಿಸೋಣ.
ಸೂರ್ಯ ಹಾಗು ಚಂದ್ರ ಪುಲ್ಲಿಂಗ, ಆದರೆ ಅವರ ಅಂಗಗಳು ಸ್ತ್ರೀಲಿಂಗ. ಈ ಸಮಸ್ಯೆಯನ್ನ ಯಾರಾದರು ಸರಳಿಸುತ್ತೀರ.

ಇನ್ನೊಂದು ಮಾತು ವಿರಹಿಗಳ ಅನ್ಲೀಷ್ಡ್ ಪುಸ್ತಕ ಯಾವುದು ಗೊತ್ತೆ.
ನಳ ದಮಯಂತಿ ಕಥೆ(ಮೇಘದೂತ). ಇದರ ಕನ್ನಡ ಅನುವಾದ ಪುಸ್ತಕ ಕೂಡ ಲಭ್ಯವಿದೆ.

ಮತ್ತೊಂದು ಮಾತು.
ಘಾಡಾ೦ಧಕಾರ ತಪ್ಪು ಪ್ರಯೋಗವಲ್ಲವೆ. ಗಾಢಾಂಧಕಾರ ಸರಿಯಾದ ಪದ.
ಶ್ರೀನಿಧಿ's picture
09
Jan
2006
11:23
ವಿರಹ ಗೀತೆಗಳು ಏಕೋ ಕೇಳುಗರ/ಓದುಗರ ಮನಕ್ಕೆ ಹೆಚ್ಚು ನಾಟುವಂತಹದ್ದು. ವಿರಹಗೀತೆ ಚೆನ್ನಾಗಿತ್ತು.. ಸೂರ್ಯ ಹಾಗೂ ಚಂದ್ರರು ಪ್ರೇಮಿಗಳ ಪ್ರೇಮ ಸಲ್ಲಾಪಕ್ಕೆ ಸಾಕ್ಷಿಗಳು ಸ್ವಾಮಿ. ನಮಗಿರುವಂತೆಯೇ ಅವರಿಗೂ ಒಂದು ಜೊತೆಯ ಕಲ್ಪನೆ ವಾಡಿಕೆ.(ಅವರು ನಮಗೆ ತೊಂದರೆ ಕೊಡಬಾರದಲ್ಲ??). ಅದಕ್ಕಾಗಿ ಅವರ ರಶ್ಮಿಗಳು ಸ್ತ್ರೀಲಿಂಗವಾದವು. (ರಶ್ಮೀ - ಸ್ತ್ರೀಲಿಂಗವಾದರೆ ಕಿರಣ - ಪುಲ್ಲಿಂಗ) . ಕಲ್ಪನೆಗೆ ಕಾಲಿಲ್ಲ ಅಲ್ಲವೆ?? ಅಂದಹಾಗೆ ಮೇಘದೂತ ನಳ-ದಮಯಂತಿ ಕಥೆ ಅಲ್ಲ.. ಒಬ್ಬ ಯಕ್ಷನ ವಿರಹದ್ದು ಸ್ವಾಮಿ.. ಕಾಳಿದಾಸನ ಅದ್ಭುತ ಮಹಾಕಾವ್ಯ.
tvsrinivas41's picture
09
Jan
2006
8:25
ಸುನೀಲ್ ಅವರು ಉತ್ತಮ ವಿಶ್ಲೇಷಕ ಅನ್ನುವುದನ್ನು ಸಾಬೀತುಪಡಿಸಿದ್ದಾರೆ. ಯಾವುದೇ ಕೃತಿಯನ್ನಾಗಲೀ ಬಹಳ ಗಹನವಾಗಿ ಅಭ್ಯಸಿಸಿ ಕುದಿಸಿ ಸೋಸಿಸಿ, ಸಾರವನ್ನು ತೆಗೆದು ನಮ್ಮ ಮುಂದಿಡುತ್ತಿದ್ದಾರೆ. ಒಳ್ಳೆಯ ಕೆಲಸವನ್ನೇ ಮಾಡುತ್ತಿದ್ದೀರಿ, ಸಾರ್. ಪತ್ರಿಕೆಗಳಿಗೂ ನಿಮ್ಮ ವಿಮರ್ಶೆಗಳನ್ನು ಬರೆದು ಕಳುಹಿಸಿ. ನಿಮ್ಮ ನೈಪುಣ್ಯತೆ ಜಗಜ್ಜಾಹೀರಾಗಲಿ. ವಂದನೆಗಳೊಂದಿಗೆ --- ತವಿಶ್ರೀನಿವಾಸ http://asraya.net
Sunil Jayaprakash's picture
10
Jan
2006
9:38

Quote:
ಸುನೀಲ್ ಅವರು ಉತ್ತಮ ವಿಶ್ಲೇಷಕ ಅನ್ನುವುದನ್ನು ಸಾಬೀತುಪಡಿಸಿದ್ದಾರೆ. ಯಾವುದೇ ಕೃತಿಯನ್ನಾಗಲೀ ಬಹಳ ಗಹನವಾಗಿ ಅಭ್ಯಸಿಸಿ ಕುದಿಸಿ ಸೋಸಿಸಿ, ಸಾರವನ್ನು ತೆಗೆದು ನಮ್ಮ ಮುಂದಿಡುತ್ತಿದ್ದಾರೆ
 

ಅಯ್ಯೋ ವಿಶ್ಲೇಷಣೆಯ ಮಾತು ಹಾಗಿರಲಿ. ಜಂಭದ ಕೋಳಿಗೆ ಗೋಳಾಯ್ತು ಎನ್ನುವ ಹಾಗೆ, ಉತ್ಸಾಹದ ಮದದಲ್ಲಿ ನಳ ದಮಯಂತಿಯ ಕಥೆಯೇ ಮೇಘದೂತ ಅನ್ನುವ ಅರ್ಥ ಬರುವ ಹಾಗೆ ಪೋಸ್ಟಿಸಿದೆ.
http://sampada.net/ninilladiddaga#comment-1242
ಶ್ರೀನಿಧಿಯವರು ಕಡ್ಡಿತುಂಡು ಮಾಡಿದ ಹಾಗೆ, ತಪ್ಪು ತೋರಿಸಿದರು.
http://sampada.net/ninilladiddaga#comment-1244
ಯಾಕೆ ಹೀಗಾಯಿತು ಎಂದು ಆಮೇಲೆ ಬ್ಲಾಗಿಸುತ್ತೇನೆ. ಆದರೆ ಮೊದಲು ತಪ್ಪೊಪ್ಪಿಗೆ ಸಲ್ಲಿಸಿಬಿಡೋಣ. ತಪ್ಪಿಗೆ ಕ್ಷಮೆಯಿರಲಿ, ಸ್ನೇಹಿತರೆ.

ಮೇಘದೂತದಲ್ಲಿ ಕಥೆಯ ನಾಯಕ(ಯಕ್ಷ), ಕುಬೇರನ ಕೋಪ(ಶಾಪ)ಕ್ಕೆ ತುತ್ತಾಗಿ, ಅವನ ಪ್ರೇಯಸಿಯಿಂದ ದೂರವಾಗಿ ಏಕಾಂಗಿಯಾಗಿರಬೇಕಾಗುತ್ತದೆ. ಆಗ ಪ್ರಿಯೆಯ ಜೊತೆ ಮಾತನಾಡಲು ಮೋಡಗಳನ್ನೆ ವಾಹಕಗಳಾಗಿ ಉಪಯೋಗಿಸುತ್ತಾನೆ. ಅದನ್ನೋದಿದರೆ ಯಪ್ಪಾ, ವಿರಹಿಯ ದುಃಖವೊಂದು ಕಡೆಯಾದರೆ, ಕಲ್ಪನಾ ವಿಲಾಸಿಗಳಿಗೆ ಆ ಯಕ್ಷ ಮೋಡಗಳನ್ನು ಪುಸಲಾಯಿಸುವ ಪರಿ ನೋಡಿ ಸಖತ್ ಮಜಾ (ಅಪರಿಮಿತ ಆನಂದ) ಅನುಭವಿಸುವ ಅವಕಾಶ ಮತ್ತೊಂದು ಕಡೆ. ಅಂಥ ವಿರಹ ಕಾವ್ಯದಲ್ಲೂ ಕೂಡ ಕಾಳಿದಾಸ ತನ್ನ  TRADEMARK ಆದ  ಶೃಂಗಾರ ರಸ ಪ್ರಸವಿಸುವಂತೆ ಮಾಡುವುದನ್ನು ಮರೆತಿಲ್ಲ.

ಇನ್ನು ನಳ ದಮಯಂತಿ ನಿಮಗೆಲ್ಲ ತಿಳಿದಿದೆಯೆಂದು ಭಾವಿಸುವೆ. ಸುಧಾ ವಾರ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದೆ. ಎಲ್ಲರನ್ನೂ ಕುತೂಹಲದಲ್ಲಿಟ್ಟಿದೆ.

ಮತ್ತೊಮ್ಮೆ ಶ್ರೀನಿಧಿಯವರಿಗೆ ಮತ್ತು ವಿಜಯರವರಿಗೆ ಧನ್ಯವಾದಗಳು. ಹೀಗೆಯೇ ಕವನಗಳ ಜಲಧಾರೆ ಧುಮ್ಮುಕ್ಕಿ ಹರಿಯಲಿ.

ಮತ್ತೆ ವಿಶ್ಲೇಷಣೆಗೆ ಬರೋಣ. ನಿಮ್ಮ ಅನಿಸಿಕೆಗೆ ಧನ್ಯವಾದಗಳು. ಆದರೆ ಯಾವಾಗಲೂ ಕರ್ತೃವಿಗೇ ನಿಜವಾದ ಗೌರವ ಸಲ್ಲಬೇಕು. ಏಕೆಂದರೆ ಆತ ವಜ್ರವಿದ್ದ ಹಾಗೆ. ಯಾಕೆ ನಾನು ಪ್ರತಿಕ್ರಿಯೆ ವ್ಯಕ್ತಪಡಿಸಿದೆಯೆಂದರೆ, ನನಗೆ ಸದಾ ಒಂದು ಕುತೂಹಲ. ನಾನು ಓದಿ ಅರ್ಥ ಮಾಡಿಕೊಂಡ ಧಾಟಿಯಲ್ಲೇ ಕವಿ ಕವನ ರಚಿಸಿದ್ದಾನೋ ಅಥವಾ ಆತನ ಧ್ಯೇಯ ಬೇರಿಯಾಗಿತ್ತೋ ಎಂದು ತಿಳಿಯುವ ಹಂಬಲ. ಅದಕ್ಕಷ್ಟೆ ಹೊರತು ಬೇರೆ ಏನೂ ಇಲ್ಲ.

tvsrinivas41's picture
09
Jan
2006
8:18
ಕವನ ಚೆನ್ನಾಗಿದೆ ಸರ್. ದ್ವಂದ್ವವನ್ನು ಚೆನ್ನಾಗಿ ನಿರೂಪಿಸಿದ್ದೀರ. ಹಲ್ಲಿದ್ದವನಿಗೆ ಕಡಲೆ ಇಲ್ಲ ಕಡಲೆ ಇದ್ದವನಿಗೆ ಹಲ್ಲಿಲ್ಲ ಅನ್ನುವ ಮಾತಿಗೆ ತಕ್ಕನಾದ ಕವನ. ಇನ್ನೂ ಹೆಚ್ಚು ಹೆಚ್ಚು ಬರೆಯಿರಿ. ಮನದಣಿಯುವಷ್ಟು ಬರೆಯಿರಿ. ವಂದನೆಗಳೊಂದಿಗೆ --- ತವಿಶ್ರೀನಿವಾಸ http://asraya.net