ಬಾಬಿ ಜಿಂದಾಲ್, ಭಾರತೀಯ ಮೂಲದ ಪ್ರಪ್ರಥಮ ಗವರ್ನರ್- ಅಮೆರಿಕದ ಲ್ಯೂಸಿಯಾನದಲ್ಲಿ !

ಪೀಯೂಶ್ ಬಾಬಿ ಜಿಂದಾಲ್ , ಭಾರತೀಯ ಮೂಲದ ಅಮೆರಿಕನ್, " ಲ್ಯೂಸಿಯಾನ ರಾಜ್ಯ " ದ ಪ್ರಪ್ರಥಮ ಗವರ್ನರ್ ಆಗಿ ಆಯ್ಕೆಯಾಗಿರುವುದು, ಈಗಾಗಲೇ ಸುದ್ದಿಯಾಗಿರುವ ಸಂಗತಿ. ಇವರು ಮೂಲತಃ ಪಂಜಾಬಿನವರು. ಅಮೆರಿಕದ ಚರಿತ್ರೆಯಲ್ಲಿ, ೧೮೭೦ ರ ನಂತರ, ಲ್ಯೂಸಿಯಾನ ರಾಜ್ಯದಲ್ಲಿ ಒಬ್ಬ ಬಿಳಿಯೇತರ ವ್ಯಕ್ತಿ ಗವರ್ನರ್ , ಆಗಿರುವುದು ಇದೇ ಮೊದಲು. ಇನ್ನೊಬ್ಬ ಪಂಜಾಬಿ, ಶ್ರೀ. ದಲೀಪ್ ಸಿಂಗ್, ೧೯೫೬ ರಲ್ಲಿ ಕಾಂಗ್ರೆಸ್ ಟಿಕೆಟ್ , ನಿಂದ ಕ್ಯಾಲಿಫೋರ್ನಿಯ ದಲ್ಲಿ ಚುನಾಯಿತರಾಗಿದ್ದರು.
ಬ್ರೌನ್ ಯೂನಿವರ್ಸಿಟಿ, ಆಕ್ಸಫರ್ಡ್ ನಲ್ಲಿ ವಿದ್ಯಾಭ್ಯಾಸ ಮಾಡಿ, ಅತ್ಯಂತ ಪ್ರತಿಭಾನ್ವಿತ ಯುವಕರಲ್ಲೊಬ್ಬರೆಂದು ಹೆಸರು ಮಾಡಿರುವ ಬಾಬಿ ಜಿಂದಾಲ್, ಅಮೆರಿಕದ ರಾಜಕೀಯದಲ್ಲಿ ಪಾದಾರ್ಪಣೆ ಮಾಡಿ , ಅಲ್ಲಿನ ಭಾರತೀಯರಿಗೆ ಆತ್ಮವಿಶ್ವಾಸ, ಸ್ಥೈರ್ಯಗಳನ್ನು ಒದಗಿಸಿಕೊಟ್ಟಿದ್ದಾರೆ.
ಅವರಿಗೆ, ನಮ್ಮ " ಸಂಪದೀಯರೆಲ್ಲರ " ಪರವಾಗಿ ಅಭಿನಂದನೆಗಳು !
-ಕೃಪೆ- ಇಂಟರ್ನೆಟ್.

- Login or register to post comments
- 578 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Original
- Thumbnail






- ನಿರ್ವಾಹಕರ ಗಮನಕ್ಕೆ ತನ್ನಿ


RSS: